ಏಳುಕೋಟಿ ಬಳಲುವುದೇಕೋ ಮಹಾಮಂತ್ರಗಳ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಏಳುಕೋಟಿ ಮಹಾಮಂತ್ರಗಳ ಉಪಮಂತ್ರ ಕೋಟ್ಯಾನುಕೋಟಿಗಳ ಕಲಿತು ತೊಳಲಿ ಬಳಲುವುದೇಕೋ ? ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ ! ಸಕಲವೇದಂಗಳ ಮೂಲವಿದು
ಸಕಲಶಾಸ್ತ್ರಂಗಳ ಸಾರವಿದು
ಸಕಲಾಗಮಂಗಳ ಅರುಹಿದು
ಸಕಲಮಂತ್ರಂಗಳ ಮಾತೆಯಿದು. ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ !