Library-logo-blue-outline.png
View-refresh.svg
Transclusion_Status_Detection_Tool

ಏಳುಪೀಠದೊಳಗೆ ಸಾವಿರದೈವತ್ತೆರಡು ಮನೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಏಳುಪೀಠದೊಳಗೆ ಸಾವಿರದೈವತ್ತೆರಡು ಮನೆ ಮಾಡಿಪ್ಪುದ ಕಂಡೆನಯ್ಯ. ಒಂದೇ ಜ್ಯೋತಿ ಸಾವಿರದೈವತ್ತೆರಡು ಜ್ಯೋತಿಯ ಬೆಳಗುತ್ತಿದೆ ನೋಡಯ್ಯ. ಏಳುಪೀಠದೊಳಗೆ ಏಕಾಕಾರ ಅಖಂಡಪರಿಪೂರ್ಣವಾಗಿಪ್ಪುದಯ್ಯ. ಆ ಪರಿಪೂರ್ಣ ಪರಾಪರವೇ ತಾನೆಂದರಿದು ಸಮರಸವನೆಯ್ದಬಲ್ಲಾತನಲ್ಲದೆ ಶಿವೈಕ್ಯನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.