ವಿಷಯಕ್ಕೆ ಹೋಗು

ಐಕ್ಯಂಗೆ ಆತ್ಮನೆ ಅಂಗ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಐಕ್ಯಂಗೆ ಆತ್ಮನೆ ಅಂಗ
ಆ ಅಂಗಕ್ಕೆ ಸದ್ಭಾವವೇ ಹಸ್ತ; ಆ ಹಸ್ತಕ್ಕೆ ಮಹಾಸಾದಾಖ್ಯ
ಆ ಸಾದಾಖ್ಯಕ್ಕೆ ಚಿಚ್ಛಕ್ತಿ. ಆ ಶಕ್ತಿಗೆ ಮಹಾಲಿಂಗ
ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ; ಆ ಕಲೆಗೆ ಹೃದಯೇಂದ್ರಿಯವೆ ಮುಖ
ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು ರೂಪು ರುಚಿ ತೃಪ್ತಿಯನರಿದು ಸಮರಸಭಕ್ತಿಯಿಂದರ್ಪಿಸಿ
ಆ ಸುಪರಿಣಾಮಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ
ನಿಮ್ಮ ಲಿಂಗೈಕ್ಯನು.