ಐತಿಹಾಸಿಕ ಕಥಾವಳಿ

ವಿಕಿಸೋರ್ಸ್ದಿಂದ

ಐತಿಹಾಸಿಕ ಕಥಾವಳಿ  (1945) 
by ಪಂಜೆ ಮಂಗೇಶರಾವ್

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!


"Ithihasika Kathavali"
Kannada Nondetail for High Schools

ಐತಿಹಾಸಿಕ ಕಥಾವಳಿ

('ಸುವಾಸಿನಿ'ಯ ಸಂಗ್ರಹ)

ಲೇಖಕರು:
ಶ್ರೀಮಾನ್ ಪಂಜೆ ಮಂಗೇಶರಾವ್, ಬಿ. ಎ., ಎಲ್. ಟಿ.


By
Panje Mangesh Rau, B.A.,L.T.

1945


[ಮೂರನೆಯ ಮುದ್ರಣ]

PUBLISHERS:-
BALIGA & SONS.
Registered Publishers,
MANGALORE,

Price: 0-8-0]

[ಕ್ರಯ: ೦-೮-೦.

PRINTED AT TIL NAVABHARAT PRFSS
FOR
BASEL MISSION PRESS, MANGALORE, S K.

ಪ್ರಕಾಶಕರ ಮುನ್ನುಡಿ.[ಸಂಪಾದಿಸಿ]

ಸಣ್ಣ ಕಥೆಗಳ ಉದ್ಭವ ಮತ್ತು ಪ್ರಚಾರದ ಈ ಯುಗದಲ್ಲಿ, ಈಗ ಮೂವತ್ತು ವರ್ಷಗಳ ಹಿಂದೆ ಪ್ರಚುರವಾದ ಈ ಹಳೆಯ ಕಥೆಗಳನ್ನು ಪ್ರಕಟಟಿಸುವ ಅಗತ್ಯವೇನು? ಎಂಬ ವಿಚಾರವು ಕನ್ನಡಿಗರಲ್ಲಿ ಒರಬಹುದು ಹೊಸ ಗ್ರಂಥಗಳು ತಲೆಯೆತ್ತಿದರೂ ಪಂಪ, ರನ್ನನ ಕವಿತೆಗಳ ಮೇಣ ಅಭಿಮಾನವು ಕುಂದಿಹೋಗಿಲ್ಲ. ನೂತನ ಗ್ರಂಥಗಳ ವಾಚನದ ಅಭಿರುಚಿಯು ಹುಟ್ಟಿದೊಡನೆ, ಹೆಚ್ಚಿದೊಡನೆ, ಹಳೆಯ ಗ್ರಂಥಗಳಲ್ಲಿ ಏನಾದರೂ ಹುರುಳಿದೆಯೇ ಎಂದು ಪರಿಶೋಧನೆ ಮಾಡುವ ಕುತೂಹಲವು ಸಾಮಾನ್ಯವಾಗಿ ಸಾಹಿತಿಗಳಿಗೆ ಬರುತ್ತದೆ. ಹಾಗೆ ಈ ಸಣ್ಣ ಕಥೆಗಳು ವೆಂಕಟಾಚಾರ್ಯರ ಮತ್ತು ಗಳಗನಾಥರ ಕಾದಂಬರಿಗಳನ್ನು - ಉತ್ತಮ ಗ್ರಂಥಗಳನ್ನು - ಮೂಲೆಗೊತ್ತಿ, ಪತ್ರಿಕೆಗಳಲ್ಲಿಯೂ, ಗ್ರಂಥರೂಪವಾಗಿಯೂ ಲೆಕ್ಕವಿಲ್ಲದೆ ಹೊರಡುತ್ತಿರುವಾಗ, ಇಂಥ ಕಥೆಗಳಿಗೆ ಮೂಲ ಪುರುಷನು ಯಾರು? ಎಂಬ ತರ್ಕವು ತನ್ನಂತೆ ಬಂದೇ ಬರುವುದು. ಇಂಥ ವಿಚಾರದಲ್ಲಿ, ಪಶ್ಚಿಮ ಘಟ್ಟಗಳ ಅಡ್ಡಗೋಡೆಯ ಪೂರ್ವಕ್ಕಿರುವ ಕನ್ನಡ ಪ್ರದೇಶಗಳಲ್ಲಿ ಪರಿಶೋಧನೆ ಮಾಡಿದವರು ಇಂಥ ಕಥೆಗಳಿಗೆ ಶ್ರೀಮಾನ್ ಮಾಸ್ತಿ ವೆಂಕಟೇಶ ಐಯ್ಯಂಗಾರರೇ ಮೂಲ ಪುರುಷರ,, ಪಿತೃಸಮಾನರು ಎಂದು ಪರಿಗಣಿಸಿದ್ದಾರೆ. ಶ್ರೀಯುತರ ಮನೋರಂಜಕವಾದ ಕಥೆಗಳ ಮೇಲೆ ನನಗೆ ತುಂಬ ಅಭಿಮಾನವಿದೆ. ಆದರ ಗೌರವಗಳಿವೆ. ಆದರೆ ಅವರು ಇನ್ನೂ ವಿದ್ಯಾರ್ಥಿ ದಶೆಯಲ್ಲಿಯೇ ಇರುವಾಗ ನಮ್ಮ ಜಿಲ್ಲೆಯಲ್ಲಿ ಸಮಾರು ೩೪ ವರ್ಷಗಳ ಹಿಂದೆ ಶ್ರೀಮಾನ್ ಬಿ, ವಿಠ್ಠಲ ರಾವ್ (“ಕಂಠೀರವ ಸಂಪಾದಕ) ಇವರು ಮಾಲಕರಾಗಿಯೂ, ಶ್ರೀಮಾನ್ ಬೆನಗಲ್ ರಾಮರಾವ್, ಎಂ. ಎ., ಎಲ್. ಎಲ್. ಬಿ., ಮದ್ರಾಸ್ ಸರಕಾರದ ನಿವೃತ್ತ) ಟ್ರಾನ್ಸ್ಲೇಟರ್, ಇವರು ಸಂಪಾದಕರಾಗಿಯೂ ಹೊಡುತ್ತಿದ್ದ “ಸುವಾಸಿನಿ” ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಕಥಾ ಸ೦ಗ್ರಹವು, ಪಶ್ಚಿಮ ಘಟ್ಟಗಳ ಅಡ್ಡಗೋಡೆಯ ಹಿಂದೆ ಇದ್ದ ವರ ದೃಷ್ಟಿಗೆ ಬೀಳದಿದ್ದುದು ಆಶ್ಚರ್ಯವಲ್ಲ! ಆದರೂ ಈ ಕಥೆಗಳು ಈ ಶತಮಾನದ ಆದಿಯಲ್ಲಿಯೇ ಅಚ್ಚಾಗುತ್ತಿದ್ದ "ಸುವಾಸಿನಿ" ಮಾಸ ಪತ್ರಿಕೆಯಲ್ಲಿ ಬೆಳಕನ್ನು ಕಂಡುವು. ಕಾರಣಾಂತರದಿಂದ ಅವುಗಳ ಆಸ್ತಿಕ್ಯದ ಮರವೆಯಾಗಿದ್ದರೂ, ಶ್ರೀಮಾನ್ ಪಂಜೆ ಮಂಗೇಶರಾಯರ ಈ ಐತಿಹಾಸಿಕ ಕಥೆಗಳು ಕರ್ಣಾಟಕದ ಜನರಲ್ಲಿ ವಿಶೇಷವಾದ ಮನೋರಂಜನೆಯನ್ನು ಮಾಡಿವೆ. ಇವರ ಹಾಸ್ಯಗರ್ಭಿತವಾದ “ಭಾರತ ಶ್ರವಣ" “ನನ್ನ ಚಿಕ್ಕಪ್ಪ” “ನನ್ನ ಚಿಕ್ಕ ತಾಯಿ” “ನನ್ನ ಹೆಂಡತಿ" ಮುಂತಾದ ಹಲವು ಕಥೆಗಳ ವಾಚಕರಲ್ಲಿ ತುಂಬ ವಿನೋದವನ್ನು ಹುಟ್ಟಿಸುತ್ತಿದ್ದುವು. ಇವನ್ನೆಲ್ಲ ಗ್ರಂಥರೂಪವಾಗಿ, ಒಮ್ಮೆ ಪ್ರಕಟಿಸ ಬೇಕೆಂದು ಆಸೆಯು ನಮ್ಮಲ್ಲಿ ಎಂದೋ ಮೂಡಿತ್ತು. ಆದರೆ ವಿನಯಪರರಾದ ಶ್ರೀಮಾನ್ ಮಂಗೇಶರಾಯರು ಇದಕ್ಕೆಲ್ಲ ಸಮ್ಮತಿಸದೆ “ಬೇಡ ಬೇಡ”ವೆಂದೇ ನಮ್ಮ ಕೈತಡೆದರು. ಆದ್ದರಿಂದ ಈ ಮೊದಲೇ ಇದನ್ನು ಪ್ರಕಟಿಸಲಾಗಲಿಲ್ಲ. ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾಗಿ ಶ್ರೀಮಾನ್ ಪಂಜೆ ಮಂಗೇಶರಾಯರು ಆರಿಸಲ್ಪಟ್ಟ ಕಾಲದಲ್ಲಿಯಾದರೂ ಈ ಕಥೆಗಳನ್ನು ಪ್ರಕಟಿಸಬೇಕೆಂದು ನಮ್ಮಲ್ಲಿ ಇನ್ನೊಮ್ಮೆ ಉತ್ಸಾಹವು ತಲೆದೋರಿತು. ಆದರೆ 'ಸುವಾಸಿನಿ'ಯ ಹಳೆಯ ಸಂಚಿಕೆಗಳು ದೊರಕುವುದೇ ಕಷ್ಟವಾದುದರಿಂದ, ಇವನ್ನು ಪ್ರಕಟಿಸುವುದಕ್ಕೆ ಇಷ್ಟು ವಿಳಂಬವಾಯಿತು. ಆದರೆ ಈಗಲೂ ಇದನ್ನು ಪ್ರಕಟಿಸಲಿಕ್ಕೆ ಶ್ರೀ| ಮಂಗೇಶರಾಯರು ಒಪ್ಪಲಾರರು ಎಂಬ ಸಂದೇಹ ಬಂದುದರಿಂದ, ಅವರ ಅಪ್ಪಣೆ ಕೇಳದೆಯೇ ಪ್ರಕಟಿಸಿದ್ದಕ್ಕಾಗಿ ಅವರ ಕ್ಷಮಾಪಣೆಯನ್ನು ಬೇಡುತ್ತೇವೆ.

ಕನ್ನಡಿಗರ ಯಥೋಚಿತ ಪ್ರೋತ್ಸಾಹದೊಂದಿಗೆ, ಶ್ರೀಮಾನ್ ಪಂಜೆಯವರ “ಸುವಾಸಿನಿ”ಯ ಇತರ ಕಥೆಗಳನ್ನೂ ಪ್ರಕಟಿಸಬೇಕೆಂಬ ಉದ್ದೇಶವಿದೆ, ಕನ್ನಡಿಗರು ನೆರವಾಗಲಿ.

ಶ್ರೀ ಪಂಜೆ ಮಂಗೇಶರಾಯರ ಜೀವನಚರಿತ್ರೆ[ಸಂಪಾದಿಸಿ]

ಇವರು ಕ್ರಿ. ಶ. ೧೮೭೪ರಲ್ಲಿ ಬಂಟವಾಳದಲ್ಲಿ ಜನ್ಮವೆತ್ತಿದರು. ಇವರು ಬಹಳ ಬಡ ಕುಟುಂಬದಲ್ಲಿ ಹುಟ್ಟಿದುದರಿಂದ ಬಾಲ್ಯದಿಂದಲೂ ಇವರಿಗೆ ಬಡಪತ್ತಿನ ಕಷ್ಟ ಸಂಕಷ್ಟಗಳ ತುಂಬಾ ಪರಿಚಯವಿತ್ತು. ೫ ಜನ ಅಣ್ಣತಮ್ಮಂದಿರಲ್ಲಿ ಇವರು ಎರಡನೆಯವರಾದರೂ ಇವರ ಬಡ ತಂದೆಯ ಬೇಗನೆ ಮಡಿದುದರಿಂದ ಇವರು ಬಿ. ಎ. ಪಾಸು ಮಾಡುವ ಮೊದಲೆ ಕುಟುಂಬಸಂರಕ್ಷಣೆ ಮತ್ತು ತಮ್ಮಂದಿರ ವಿದ್ಯಾಭ್ಯಾಸದ ಭಾರವು ಇವರ ಮೇಲೆ ಬಿತ್ತು. ಇವರ ಹಿರಿಯಣ್ಣನು ಬಿ. ಎ. ಪಾಸು ಮಾಡಿದೊಡನೆ ದಕ್ಷಿಣ ಮಹಾರಾಷ್ಟ್ರದಲ್ಲಿ ಕಲೆಕ್ಟರ ಅಥವಾ ಡಿಪ್ಯುಟಿ ಕಮ್ಮಿಶನರ ಕಚೇರಿಯಲ್ಲಿ ಗುಮಾಸ್ತರಾದರು. ಇವರ ಕಡಿಮೆ ಸಂಬಳದಿಂದ ಕುಟುಂಬ ಸಂರಕ್ಷಣೆ ಸಾಧ್ಯವಾಗಲಿಲ್ಲ. ಶ್ರೀ! ಮಂಗೇಶರಾಯರು ಹೀಗಾಗಿ ಗಣಿತವನ್ನು ತೆಗೆದುಕೊಂಡು ಬಿ. ಎ. ಪರೀಕ್ಷೆಗೆ ಮದ್ರಾಸಿಗೆ ಹೋಗಲಾರದೆ ಚರಿತ್ರೆಯನ್ನು ಐಚ್ಛಿಕವಾಗಿ ತೆಗೆದುಕೊಂಡು ಮಂಗಳೂರಿನ ಸೈಂಟ್ ಎಲೊಸಿಯಸ್ ಕೊಲೇಜಿನಲ್ಲಿ ಇಂಗ್ಲೀಷ ಮತ್ತು ಕನ್ನಡ ಶಾಲೆಗಳಲ್ಲಿ ಪಾಸುಮಾಡಿ ಮಂಗಳೂರಿನ ಗವರ್ನಮೆಂಟ ಕೊಲೇಜಿನಲ್ಲಿ ಬರೆ ೨೦ ರೂಪಾಯಿ ಅಲಜಿನ ಮೇಲೆ ಕನ್ನಡ ಪಂಡಿತರಾಗಿ ಸೇರಿದರು. ಕುಟುಂಬದ ಉದರ ನಿರ್ವಾಣಕ್ಕೆ ಇವರು ವಿದ್ಯಾರ್ಥಿಗಳಿಗೆ ಗಣಿತ ಇತ್ಯಾದಿಗಳನ್ನು ಖಾಸಗಿ ಕಳಿಸತೊಡಗಿದರು. ಅವರ ಆಗಿನ ನೂತನ ರೀತಿಗಳನ್ನು ಈಗಲೂ ಅವರ ವಿದ್ಯಾರ್ಥಿಗಳು ಸ್ಮರಿಸುತ್ತಾರೆ. ಹೀಗಾಗಿ ಸಾಧಾರಣವಾಗಿ ದಿನಕ್ಕೆ ೧೬ ತಾಸುಗಳಷ್ಟು ಕಾಲ ದುಡಿಯಬೇಕಾಯಿತು. ಇವರು ಕನ್ನಡವನ್ನು ಕಲಿಸತೊಡಗಿದೊಡನೆ ಹಳೆ ರೀತಿಯಲ್ಲಿ ಕಾವ್ಯ ಓದುವ ಕ್ರಮವು ಬಿದ್ದು ಹೋಗಿ ರಾಗಯುಕ್ತವಾಗಿ ಓದಲು ಪ್ರಾರಂಭವಾಗಿ ಕನ್ನಡ ಕಲಿಯುವವರಿಗೆ ಹೊಸಹುರುಪು ಬಂತು. ಅವರು ವಿದ್ಯಾರ್ಥಿಯಾಗಿರುವಾಗಲೂ ನಿಕಟ ಕವಿತ್ವವನ್ನು ಕುಳಿತಲ್ಲೆ ಮಾಡುತ್ತಿದ್ದುದರಿಂದ ಯಾವ ಕೂಟದಲ್ಲಿಯೂ ಮನೋರಂಜನೆಯನ್ನು ಮಾಡುತಿದ್ದರು. ಈ ಕಾಲದಲ್ಲಿ ಕೊಂಕಣಿಯಿಂದ ಒಂದೆರಡು ನಾಟಕಗಳ ಹಾಡುಗಳೂ ಮನರಂಜನೆ ಮಾಡುವುದನ್ನು ನೋಡಿ ನೂತನ ಕವಿತ್ವವನ್ನು ಬರೆಯಬೇಕೆಂಬ ಕುತೂಹಲವು ಇವರಲ್ಲಿ ಉಂಟಾಯಿತು. ಇವರ ಮೆದುಳಿನ ಸಾಮರ್ಥ್ಯವು ಬಹಳ ಚೆನ್ನಾಗಿದ್ದುದರಿಂದ ಇವರಿಗೆ ಓದಿದ ಯಾವ ಭಾಗವೂ ಫಕ್ಕನೆ ಬಾಯಿಪಾಠವಾಗುತಿತ್ತು. ಹೀಗಾಗಿ ಇವರು ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ತೊರವೆಯ ರಾಮಾಯಣ ಇತ್ಯಾದಿಗಳನ್ನು ಓದಿ ಹಲವಂಶವನ್ನು ಬಾಯಿಪಾತವಾಗಿ ಹೇಳುತ್ತಿದ್ದರು. ಇದರೊಂದಿಗೆ ಹಳೆಗನ್ನಡದ ಅಭ್ಯಾಸವೂ ಇವರಿಗೆ ಚೆನ್ನಾಗಿ ಆಯಿತು. ಇವರು ೧೯೦೨ರಲ್ಲಿ ಬಿ. ಎ. ಪಾಸು ಸಂಪೂರ್ಣವಾಗಿ ಮಾಡಿ ಸೈದಾಪೇಟೆಯ ಟ್ರೈನಿಂಗ ಕೊಲೇಜಿನಲ್ಲಿ ಆರೇ ತಿಂಗಳು ವ್ಯಾಸಂಗ ಮಾಡಿ ಎಲ್. ಟಿ. ಪರೀಕ್ಷೆ ಯನ್ನು ೧೯೦೫ರಲ್ಲಿ ಮುಗಿಸಿದರು. ಗವರ್ನಮೆಂಟ ಕೊಲೇಜಿನಲ್ಲಿ ಕೆಲವು ತಿಂಗಳು ಅಧ್ಯಾಪಕರಿದ್ದಾಗಿಲೇ ಇವರಿಗೆ ಹೊಸತಾಗಿ ಏರ್ಪಟ್ಟ, ಮಂಗಳೂರು ರೇಂಜಿನ ಡೆಪ್ಯುಟಿ ಇನ್ಸ್ಪೆಕ್ಟರರಾಗಿ (ಆಗ ಸಬ್ ಅಸಿಸ್ಟಾಂಟ ಇನ್ಸ್ ಪೆಕ್ಟರರು) ನೇಮಕ ವಾಯಿತು. ಅವರ ಭಾಷಾನುಭವ, ಕ್ಷಣಜ್ಞಾನಗಳನ್ನು ಪರಿಶೀಲಿಸಿ ಮನಗಂಡ ಮಿ. ಪಿ. ಪಿ. ಬ್ರೆತ್‌ವೈಟ್ (ಶಾಲಾ ಇನ್ಸ್ ಪೆಕ್ಟರ)ರ ಸಹಾಯದಿಂದ ಇವರಿಗೆ, ಇ. ಮಾರ್ಸಡೆನರ ಪರಿಚಯವಾಯಿತು. ಇವರು ಬಾಸೆಲ್ ಮಿಶನಿಗೋಸ್ಕರ ಒಂದೆರಡು ರೀಡರುಗಳನ್ನು ತಯಾರಿಸಿದ್ದನ್ನು ಕಂಡು ನಾಡೆನರು ಇವರನ್ನು ತಮ್ಮ ಕೈ ಕೆಳಗೆ ಮೆಕಮಿಲ್ಲನ್ ಕಂಪೆನಿಯ ರೀಡರುಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸಿ ಆಗ ಇವರಿಗೆ ಹಳೆ ರೀಡರು, ಹಳೆ ಕಾವ್ಯ ಪುಂಜ ಇತ್ಯಾದಿಗಳಲ್ಲಿ ಇರುವ ಪದ್ಯಗಳು ಎಷ್ಟರ ಮಟ್ಟಿಗೆ ಚಿಕ್ಕ ಮಕ್ಕಳಿಗೆ ಉಕ್ಕಿನ ಕಡಲೆಗಳು ಆಗಿವೆ ಎಂಬ ಭಾವನೆಯು ಮೂಡಿತ್ತು. ಮೈಸೂರಿನ ಪದ್ಯಸಾರವೂ ಅವರಿಗೆ ರುಚಿಸಲಿಲ್ಲ; ಆಗ ಇವರೇ ಚಿಕ್ಕ ಕಾವ್ಯಗಳನ್ನು ಬರೆದು ಹಾಡುತಿದ್ದರು. ಅದಕ್ಕಿಂತ ಮೊದಲೇ 'ಸುವಾಸಿನಿ'ಯ ಪ್ರಮುಖ ಲೇಖಕರಾಗಿದ್ದ ಇವರ ಚಿಕ್ಕ ಹಾಡುಗಳೂ ಹಾಸ್ಯಮಯವಾದ ಚಿಕ್ಕ ಕಥೆ ಗಳೂ ( ನನ್ನ ಚಿಕ್ಕ ತಾಯಿ, ಚಿಕ್ಕಪ್ಪ, ಭಾರತ ಶ್ರವಣ ಇತ್ಯಾದಿ ಭಾರತ ಸ್ತ್ರೀರತ್ನಗಳನ್ನು ಕುರಿತು ಚಿಕ್ಕ ಕಾದಂಬರಿಗಳೂ ಹೊರಬಿದ್ದಿದ್ದುವು, (ದುರ್ಗಾವತಿ, ಶೈಲಿನಿ ಇತ್ಯಾದಿ). 'ಸುವಾಸಿಸಿ' ಬಿದ್ದು ಹೋದ ಅನಂತರ ಇವರ ಅನುಕರಣದಿಂದಲೇ ದಕ್ಷಿಣ ಮಹಾರಾಷ್ಟ್ರದಲ್ಲಿ ಚಿಕ್ಕದೊಂದು ಮಾಸಿಕ ವಹಿಯು ಹೊರಟಿತು. ಆದರೆ ಸಾಕಷ್ಟು ಪ್ರೋತ್ಸಾಹ ಸಿಗದೆ ಅದೂ ಬಿದ್ದು ಹೋಯಿತು. (ಶ್ರೀನಿವಾಸ'ರು ಇನ್ನೂ ವಿದ್ಯಾರ್ಥಿಗಳಾಗಿರುವಾಗಲೇ ಈ ಚಿಕ್ಕ ಕಥೆಗಳು ಹೊರಬಿದ್ದುದರಿಂದ ಶ್ರೀ ಮಂಗೇಶರಾಯರೇ ಇಂಥ ಸಾಹಿತ್ಯದ ಪಿತಾಮಹರೆಂದು ಹೇಳಬಹುದಾಗಿದೆ. ಆನಂತರ ಅವರು ಬರೆದ ಚಿಕ್ಕ ಕಾವ್ಯಗಳು 'ಕವಿಶಿಷ್ಯ' ಎಂಬ ಹೆಸರಿನಿಂದ ಬಾಸೆಲ ಮಿಷಿನರಿನವರ ಒಂದನೆ, ಎರಡನೆ, ಮೂರನೆ ಪದ್ಯ ಪುಸ್ತಕಗಳಲ್ಲಿ ಪ್ರಕಟವಾಗಿವೆ. ತಮ್ಮ ಕಾವ್ಯವನ್ನು ತಾವೇ ಶಾಲೆಗಳಲ್ಲಿ ಪ್ರಚಾರಮಾಡುವುದು ಶ್ರೀ ಮಂಗೇಶರಾಯರಿಗೆ ಅನುಚಿತವಾಗಿ ಕಂಡಿತು. ಹೀಗಾಗಿ ವ್ಯಾಪಾರದೃಷ್ಟಿಯಿಂದ ನೋಡಿದರೆ, ಅದರ ಅನಂತರ ಹೊರಟ ನೂರಾರು ಪದ್ಯಪುಸ್ತಕಗಳು ಪಠ್ಯಪುಸ್ತಕವಾಗಿ ಸಾವಿರಗಟ್ಟಳೆ ಯಿಂದ ಮಾರಾಟವಾಗಿದ್ದರೂ ಈ ಮೂರು ಪುಸ್ತಕಗಳ ಸ್ಥಾನದಲ್ಲಿ ಇದುವರೆಗೆ ನಿಲ್ಲಲಿಲ್ಲವಂಬುದು ಖಂಡಿತ. ಆ ಪದ್ಯಗಳ ಹುರುಳೇನೆಂದು ತಿಳಿಯದೆ “ಹಾವೊಳು ಹೂವೆ ಹೂವೊಳು ಹಾವೇ? ಏನು ಪದ್ಯಗಳಿವು” ಎಂದು ಹೊಟ್ಟೆ ಉರಿಯಿಂದ ಮೊಗೆ ಸುರುಳಿಮಾಡಿ ನಕ್ಕವರುಂಟು. ಅಂಥವರಿಗೆ ಮಕ್ಕಳ ಹೃದಯದ ಪರಿಚಯವೇ ಇಲ್ಲವೆಂಬುದೊಂದು ವಿಷಾದ. ಶ್ರೀ! ಮಂಗೇಶರಾಯರು ಮಹಾಕಾವ್ಯಗಳನ್ನು ಬರೆಯುವ ಹವ್ಯಾಸಕ್ಕೆ ಹೋಗಲಿಲ್ಲ. ಅದಕ್ಕೆ ಬೇಕಾದ ಪ್ರತಿಭೆಯು ಅವರಿಗಿದ್ದಿಲ್ಲವೆಂತಲ್ಲ. 'ಅದು ನಿಷ್ಕಾರಣವಾಗಿ ದುರ್ವಯ ಮಾಡುವ ಕಾಲ, ಅದನ್ನು ಸದುಪಯೋಗಪಡಿಸ ಬೇಕೆಂದು ಅವರ ಅಂಬೋಣ, ಕುಮಾರವ್ಯಾಸ ಭಾರತದಿಂದ ಅವರು ಹೆಕ್ಕಿದ ಕರ್ಣ ಚರಿತ', ಜೈಮಿನಿ ಭಾರತದಿಂದ ತೆಗೆದ ಚಂದ್ರಹಾಸನ ಕಥೆ' ಇವು ಈ ಎರಡು ಉದ್ಭಂಧಗಳ ಸವಿಯನ್ನು ಮಕ್ಕಳಿಗೆ ಹತ್ತಿಸಲಿಕ್ಕೆ ಅನುಕೂಲವಾಗಿವೆ. ಚಿಕ್ಕ ಮಕ್ಕಳಲ್ಲಿ ಯಾವ ಕಾವ್ಯವು ಮನೋರಂಜಕವಾಗುತ್ತದೆಂದು ಚೆನ್ನಾಗಿ ಶೋಧಿಸಿ ಸಾಹಸಮಾಡಿದವರಲ್ಲಿ ಅವರು ಅಗ್ರಗಣ್ಯರೆಂದು ಕಂಟಕವಾಗಿ ಹೇಳಿದರೆ ಯಾರೂ ಅಸೂಯೆಪಡಲು ಕಾರಣವಿಲ್ಲ. ಇಡೀ ಕರ್ಣಾಟಕದಲ್ಲಿ ಇವರು ಈ ವಿಷಯದಲ್ಲಿ ಅಪ್ರತಿಮರು, ಕನ್ನಡವು ಮಾತ್ರ ಭಾಷೆಯಲ್ಲದ ಈ ಜಿಲ್ಲೆಯಲ್ಲಿ ಕನ್ನಡದ ಮೇಲೆ ಅಭಿಮಾನ ಹುಟ್ಟಿಸಿ, ಹಳ್ಳಿ ಹಳ್ಳಿಗಳಲ್ಲಿ ಸರ್ಕೀಟು ಬೆಳೆಯಿಸುವಾಗ ಅಲ್ಲಲ್ಲಿ ಕನ್ನಡ ಓದಿದವರ ಪರಿಚಯ ಮಾಡಿಕೊಂಡು, ಅವರೊಡನೆ ಹಳೇ ಕಾವ್ಯಗಳ ನಿಜವಾದ ವೈಶಿಷ್ಟ್ಯವೇನು, ಈ ಕಾಲಕ್ಕೆ ತಕ್ಕ ಸಾಹಿತ್ಯವು ಹೇಗಿರಬೇಕು, ಸಾಯಬಾರದ ಸಾಹಿತ್ಯವೆಂದರೆ ಅದರ ಲಕ್ಷಣಗಳೇನಿರಬೇಕು ಎಂದು ನಿರ್ದಾಕ್ಷಿಣ್ಯದಿಂದ ಚರ್ಚಿಸುವ ಸಾಹಸ ಮಾಡಿದವರಲ್ಲಿ ಇವರೇ ಮೊದಲಿಗರೆಂದು ದಕ್ಷಿಣ ಕನ್ನಡದವರು ಇವರ ಉಪಕಾರ ಸ್ಮರಣೆ ಮಾಡಬೇಕಾಗಿದೆ. ಇವರು ಈ ಆಧುನಿಕ ಸಾಹಿತ್ಯವನ್ನು ಸಾಧ್ಯವಿದ್ದ ಮಟ್ಟಿಗೆ ಎತ್ತಿಹಿಡಿಯಬೇಕು ಎಂದು ಯತ್ನಿಸುವಾಗ, ಸಂಪ್ರದಾಯವಾದಿಗಳೂ ಪೂರ್ವ ಕವಿಗಳ ಮೇಲೆ ಆಂಧಭಕ್ತಿಯುಳ್ಳವರೂ ಇವರ ವಿಕಾಸವಾದವನ್ನು ಖಂಡಿಸಿ, ಇವರು ಅಧುನಿಕ ಗ್ರಂಥಗಳ ಆಂಧಭಕ್ತರು ಎಂದು ಭಾವಿಸುತ್ತಾರೆ. ಆದರೆ ಇವರಿಗೆ ಪ್ರಾಚೀನ ಕವಿಗಳ ಮೇಲೆ ಅಭಿಮಾನವೇನೂ ಕಡಿಮೆಯಿಲ್ಲ. ಎಲ್ಲಾ ಪ್ರಾಚೀನ ಕವಿಗಳು ವಂದ್ಯರು, ಎಲ್ಲಾ ಆಧುನಿಕ ಕವಿಗಳು ನಿಂದರು ಎಂಬ ಈ ತೀರ್ಮಾನಕ್ಕೆ ಮಾತ್ರ ಇವರು ಬಗ್ಗುವುದಿಲ್ಲ. ಸಾಹಿತ್ಯವು ಉಳಿಯಬೇಕಾದರೆ ಅದು ಬೆಳೆಯಬೇಕು; ಇದಕ್ಕೆ ತೀರಾ ಸಂಸ್ಕೃತದ ಬೆಂಬಲವೇ ಸಾಲದು, ಆಧುನಿಕ ಸಂಸ್ಕೃತಿಯ ಭಾಷೆಗಳ ವರ್ಚಸ್ಸು ಕನ್ನಡದ ಮೇಲೆ ಬಿಳಬೇಕು; ಇದು ಭಾವಿ ಬೆಳವಣಿಗೆಗೆ ನೈಸರ್ಗಿಕವಾದ ಮಾರ್ಗ ಎಂಬುದು ಇವರ ಪ್ರತಿಪಾದನೆ.

ಇವರ ಅಪ್ರತಿಮವಾದ ಶಿಕ್ಷಣ ಪರಿಚಯದ ಪರಿಣಾಮವಾಗಿ ಹುಟ್ಟಿದ ಮಕ್ಕಳ ಕಥೆಗಳು' ಮಾತೃಭಾಷೆ ಕನ್ನಡವಲ್ಲದ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದಕ್ಕೆ ಸುಗಮವಾದ ದಾರಿಯೆಂಬುದು ಸ್ವಯಂ ಸಿದ್ಧವಾಗಿದೆ.

ಹೀಗಾಗಿ ಉದ್ಮಂಥಗಳನ್ನು ಬರೆಯುವವರ, ಬರೆದವರ, ಸಾಲಿನಲ್ಲಿ ನಿಲ್ಲಲು ಯೋಗ್ಯತೆಯುಳ್ಳವರೆಂದು ಭಾವಿಸಲು ಇವರು ಎಡೆ ಕೊಡದಿದ್ದರೂ ನ್ಯಾಯವಾದ ಮತ್ತು ಸಕಾರಣವಾದ ಟೀಕೆ ಎಂದರೇನು, ಉತ್ತಮ ಕಾವ್ಯವೆಂದು ಯಾವುದನ್ನು ಎನ್ನಬೇಕು ಎಂಬುದನ್ನು ಸರಿಯಾಗಿ ಮಂದಟ್ಟು ಮಾಡಿಸಿ, ಉತ್ತಮ ಗ್ರಂಥಗಳು ಹುಟ್ಟುವುದಕ್ಕೆ ಸೂಲಗಿತ್ತಿಯ ಸ್ಥಾನದಲ್ಲಿದ್ದಾರೆಂದರೆ ಅವರ ಪರಿಚಯವಿದ್ದವರೆಲ್ಲರೂ ಒಪ್ಪಬೇಕಾಗಿದೆ. ಈ ರೀತಿಯ ಪ್ರಚಾರಕಾರ್ಯದ ದೆಸೆಯಿಂದ ಅವರ ಹೆಸರು ಅಖಿಲ ಕರ್ನಾಟಕದಲ್ಲಿ ಉಜ್ವಲವಾಗಿ ಬೆಳೆಗಿದೆ, ಅವರು ಆಜನ್ಮಭೋಧಕರು, ಯಾವುದೊಂದು ವಿಷಯವನ್ನೂ ಸುಲಭ ರೀತಿಯಲ್ಲಿ ಬೋಧಿಸುವುದಕ್ಕೆ ಯೋಗ್ಯತೆ ಯುಳ್ಳವರು. ಅವರ ಪ್ರಚಾರಕಾರ್ಯದ ಪರಿಣಾಮವು ಕನ್ನಡ ಸಾಹಿತ್ಯದ ಏಳ್ಗೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲುವುದೆಂಬದರಲ್ಲಿ ಸಂದೇಹವಿಲ್ಲ.

ಇವರ ವಿದ್ವತ್ತೆಯ ಪರಿಚಯ, ಇವರ ರಸಭರಿತವಾದ ಮತ್ತು ನಿನೋದಕರ ಸಂಭಾಷಣೆ ಇವುಗಳಿಂದ ಮೈಸೂರು, ದಕ್ಷಿಣ ಮಹಾರಾಷ್ಟ್ರಗಳಲ್ಲಿರುವ ಕನ್ನಡ ಸಾಹಿತಿಗಳ ಸ್ನೇಹವು ಅವರಿಗೆ ಆದದ್ದಲ್ಲದೆ, ಅವರ ಶಿಕ್ಷಣ ಸಾಮರ್ಥ್ಯವನ್ನು ಗೊತ್ತು ಹಚ್ಚಿದ ಧಾರವಾಡ ಜಿಲ್ಲೆಯ ಪಾಲಾ ಇನ್ಸ್‌ಪೆಕ್ಟರರಾಗಿದ್ದ ಮಿ. ವಕೀಲರ ಪ್ರಯತ್ನದಿಂದ ಜರುಗಿದ ಉಪಾಧ್ಯಾಯರ ಸಮ್ಮೇಲನದಲ್ಲಿ ಇಂಗ್ಲಿಷು, ಗಣಿತ, ಮುಂತಾದ ವಿಷಯಗಳಲ್ಲಿ ಮಾದರಿ ಪಾಠ ಶ್ರೀಯುತ ಪಂಜೆ ಮಂಗೇಶರಾಯರಿಂದ ಕೊಡಿಸಿ ಪ್ರಾಥಮಿಕ ಉಪಾಧ್ಯಾಯರಲ್ಲಿ ಹೊಸ ಹುರುಪು ಬರುವಂತೆ ಮಾಡಲಾಯಿತು.

ಹಾಗೆಯೆ, ಹಿಂದೆ ಎರಡು ಮೂರು ಸಲ ಬಂದ ಆಮಂತ್ರಣವನ್ನು ಶ್ರೀ ಮಂಗೇಶರಾಯರು ತಮ್ಮ ಸಭಾವಿಕವಾವ ವಿಷಯದಿಂದ ಅಂಗೀಕರಿಸದೆ ಇದ್ದರೂ ರಾಯಚೂರಿನಲ್ಲಿ ಜರುಗಿದ ಇಪ್ಪತ್ತನೆಯ ಕರ್ನಾಟಕ ಪರಿಷತ್ತಿನ ಅಧಿವೇಶನದಲ್ಲಿ ಹಲವು ಕನ್ನಡ ಸಾಹಿತಿಗಳ ಒತ್ತಾಯದಿಂದ ಅವರು ಅಧ್ಯಕ್ಷ ಸ್ಥಾನವನ್ನು ಅಂಗೀಕರಿಸಿದರು. ಮತ್ತು ಅಲ್ಲಿ ಅವರು ಕೊಟ್ಟ ಆಧ್ಯಕ್ಷ ಭಾಷಣವು ಕನ್ನಡ ಸಾಹಿತ್ಯದ ದಿಗ್ದರ್ಶನ ಮಾಡುವುದರಲ್ಲಿ ಅಪೂರ್ವವಾಗಿತ್ತು ಎಂದು ಕನ್ನಡಿಗರೆಲ್ಲರ ಅಭಿಪ್ರಾಯ.

ಇವರು ಮದ್ರಾಸು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಪ್ರಮುಖ ಮೆಂಬರರಾಗಿದ್ದು, ಪಠ್ಯಪುಸ್ತಕಗಳಲ್ಲಿ ಆಧುನಿಕ ಗ್ರಂಥಗಳಿಗೆ ನ್ಯಾಯವಾದ ಸ್ಥಾನ ಸಿಗುವಂತೆ ಸಾಹಸಮಾಡುತ್ತಿರುವರಲ್ಲದೆ, ಮೈಸೂರು ಯುನಿವರ್ಸಿಟಿಯವರು ಇತ್ತಲಾಗೆ ಮೈಸೂರು ಯುನಿವರ್ಸಿಟಿಯ ಕನ್ನಡ ಬೋರ್ಡಿನಲ್ಲಿ ಇವರಿಗೆ ಸ್ಥಾನ ಕೊಟ್ಟಿರುವರು. ಮತ್ತು ಕುಮಾರವ್ಯಾಸನ ಭಾರತವನ್ನು ಕಥಾಭಾಗವೂ ಕವಿಯ ಚಮತ್ಕೃತಿಯೂ ತೋರಿಬರುವಂತೆ ಸಂಕ್ಷೇಪಿಸಿ ಬರೆಯುವುದಕ್ಕೆ ಇವರನ್ನು ಎಡಿಟರರಾಗಿ ನಿಯಮಿಸಿದ್ದಾರೆ. ಅನಂತಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಇವರು ಪರ್ಯಟನ ಮಾಡುತ್ತಿರುವಾಗ ಇವರಿಂದ ಕನ್ನಡ ಸಾಹಿತ್ಯದ ವಿಚಾರಗಳನ್ನು ಕುರಿತು ಭಾಷಣಗಳನ್ನು ಕೊಡಿಸಿ ಕನ್ನಡಿಗರಲ್ಲಿ ಸಾಹಿತ್ಯಾಭಿಮಾನವು ಕಳೆಯೇರುವುದಕ್ಕೆ ಪ್ರಯತ್ನಿಸಿದ್ದಾರೆ.

ಈ ಸುಪ್ರಸಿದ್ಧ ಸಾಹಿತಿಗಳು ಈಗ ದಿವಂಗತರಾಗಿದ್ದಾರೆ.


ದುರ್ಗಾವತಿ.[ಸಂಪಾದಿಸಿ]

ಭರತಖಂಡದ ಪುರಾಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿಯ ಯುದ್ಧವನ್ನು ಪೂರಯಿಸಿದಳು. ಆಗರ್ಭಶ್ರೀಮಂತೆಯಾದ ಜನಕನಂದನೆಯು ಪತಿವಿಯೋಗಕ್ಕಿಂತಲೂ ಅರಣ್ಯವಾಸನೇ ಮಧುರವೆಂದು ಭಾವಿಸಿ, 14 ವರ್ಷಗಳ ವರೆಗೆ ಗಟ್ಟಬೆಟ್ಟಗಳಲ್ಲಿ ಅಲೆದಳು. ಭಾರತ ಇತಿಹಾಸ ಕಾಲದಲ್ಲಿಯೂ ಸಂಯೋಗೀತಾ, ಪದ್ಮಿನಿ, ಕರ್ಮದೇವಿ ಮೊದಲಾದ ಅಸಂಖ್ಯಾತ ರಜಪುತ್ರ ವೀರ ರಮಣಿಯರು ಧರ್ಮಾ೦ಧರಾದ ಮುಸಲ್ಮಾನರನ್ನು ಯುದ್ಧದಲ್ಲಿ ಪ್ರತಿಭಟಿಸಿ, ತಮ್ಮ ಪತಿಗಳ ಆಪತ್ತು ವಿಪತ್ತುಗಳನ್ನು ಪರಿಹರಿಸುವುದಕ್ಕೆ ರಣರಂಗದಲ್ಲಿ ರಕ್ತವನ್ನು ಬಸಿದರು. ಆದರೂ ಪಾಶ್ಚಾತ್ಯ ನಾಗರಿಕತೆಯನ್ನು ಹೊಂದಿ, ಸರ್ವ ವಿಷಯಗಳಲ್ಲೂ ಪಾಶ್ಚಾತರೇ ನಮಗೆ ಬುದ್ಧಿ ಕಲಿಸುವರೆಂದು ನಂಬುವವರ ಈ ಪುರಾಣಗಳು ಕಲ್ಪಿತಕಥೆಗಳೆ೦ದೂ, ಈ ಪ್ರಾಣಸಿದ್ಧ ಸ್ತ್ರೀಯರು ಕವಿಸೃಷ್ಟಿಗಳೆ೦ದೂ ಅಲ್ಲಗಳೆವರು. ಅಷ್ಟೇಕೆ? ಸ್ಪಷ್ಟಾಕ್ಷಕಗಳಿ೦ದ ಅ೦ಕಿತವಾದ ಜೀಜಾಬಾಯಿ, ಅಹಲ್ಯಾಬಾಯಿ ಮೊದಲಾದ ಭಾರತ ಯುವತಿಯರ ಪ್ರಭಾವವು ಚರಿತ್ರಕಾರನ ಅತಿಶಯೋಕ್ತಿ ಎಂದು ಅವರು ಅನುಮಾನಿಸುವರು. ಜನರ ಕಟ್ಟು ಕಥೆಗಳನ್ನಾಗಲಿ, ಕವಿಯ ಬಣ್ಣ ಮಾತುಗಳನ್ನಾಗಲಿ ನಂಬಬೇಕೆಂದು ನಾವು ಪ್ರತಿಪಾದಿಸುವುದಿಲ್ಲ. ಪುರಾಣೋಕ್ತವಾದ ವಿಷಯಗಳು ಸಟೆಯಾದರೂ ಸತ್ಯವಾದರೂ ದೋಷವಿಲ್ಲ. ಆದರೆ ಪುರಾಣ ಕಥನಗಳು ಸುಳ್ಳೆಂದು ಮೊದಲಿಂದ ಹಿಡಿದು ಹೋಗಿ, ಇದರಿಂದ ಭಾರತ ಇತಿಹಾಸದ ಸ್ಥಿತಿಗತಿಯನ್ನು ಪ್ರಮಾಣಿಸುವುದು ಯೋಗ್ಯವಲ್ಲ. ಪಾತಿವ್ರತ್ಯ, ಧರ್ಮಪರಾಯಣತೆ, ರಣೋತ್ಸಾಹ ಮೊದಲಾದ ಗುಣಗಳು

ಪುರಾಣ ಕಾಲದಲ್ಲಿ ಇಲ್ಲದೆ ಇರುತ್ತಿದ್ದರೆ, ಅವುಗಳು ಇತಿಹಾಸಕಾಲದಲ್ಲಿ ಉಜ್ವಲವಾಗಿ ಪ್ರತಿಬಿಂಬಿಸುವುದಿಲ್ಲ, ಭಾರತಭೂಮಿಯು ಮುಸಲ್ಮಾನರ ಕಠೋರ ಶಾಸನದಿಂದ ತಲ್ಲಣಿಸುತ್ತಿದ್ದಾಗ, ಈ ಗುಣಗಳು ಇನ್ನೂ ಪ್ರಭಾಮಯವಾಗಿ ಬೆಳಗಿದುವು.

ಪ್ರತಾಪಶಾಲಿಯಾದ ಅಕ್ಷರು ದೆಹಲಿಯ ಸಿಂಹಾಸನರೂಢನಾಗಿದ್ದನು. ಮೊಗಲ್ ಸಾಮ್ರಾಜ್ಯದ ಅರ್ಧ ಚಂದ್ರಾಂಕಿತವಾದ ಧ್ವಜವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ, ಸಿಂಧೂ ನದಿಯಿಂದ ಬಂಗಾಳೆಯ ವರೆಗೂ ನೆರಳು ಹಾಕುತಿತ್ತು. ಪೂರ್ವದ ಅಫಘಾನ್ ರಾಜರು ಬದ್ಧಹಸ್ತರಾಗಿ ದಿಲೀಶ್ವರನಿಗೆ ಕೈ ಮುಗಿದರು. ರಾಜಪುತ್ರರಲ್ಲಿ ಅನೇಕರು ಅವನ ದೊರ್ದಂಡ ಪ್ರತಾಪವನ್ನು ಸಹಿಸಲಾರದೆ, ಅವನ ಗದ್ದುಗೆಯ ನೆರಳಲ್ಲಿ ಮರೆಹೊಕ್ಕರು. ಅವರ ಅನೇಕ ದುರ್ಗಗಳು ಮೊಗಲರ ವಿಹಾರಸ್ಥಾನಗಳಾದುವು. ಪರಂತು ಗಡಾಮಂಡಲದ ರಾಣಿಯು ತನ್ನ ಕೊರಳನ್ನು ಆಕ್ಷನ ಪಾಶಕ್ಕೆ ಒಡ್ಡಲಿಲ್ಲ. ಚತುರೋಪಾಯ ಸಂಪನ್ನನಾದ ಆರು ಗಡಾಮಂಡಲದ ರಾಣಿಯಾದ ದುಗಾ೯ವತಿಯು ತನ್ನ ಅನುಚರಿಯಾಗುವಂತೆ, ಹಲವು ಉಪಾಯಗಳನ್ನು ಮಾಡಿದನು, ತೇಜಸ್ವಿನಿಯಾದ ದ.ರ್ಗವತಿಯ ವಿರ ಸಹಿಸದಿಂದ ಅವೆಲ್ಲವೂ ಬಯಲಾಗಿ ಹೋದುವು.

ದುರ್ಗಾವತಿಯು ಮಧ್ಯ ಹಿಂದುಸ್ಥಾನದ ಮಹೊಬಾ ಸಂಸ್ಥಾನದ ರಾಜನಾದ ಚಂರ್ದನ ಮಗಳು. ದುರ್ಗದ ಅಧಿದೇವತೆಯ ಸಾಮಾಂಕಿತದಿಂದ ಆನಳಿಗೆ ದುರ್ಗಾವತಿ ಎಂದು ಹೆಸರನ್ನಿಟ್ಟರು. ಕನ್ನಿಕೆಯ ಬುದ್ದಿ ಸಂಪನ್ನತೆಯನ್ನೂ ಸೌಂದರ್ಯವನ್ನೂ ನೋಡಿ ಆನಂದಪಡುತ್ತಲಿದ್ದ ಚಂದೇಲನು, ತನ್ನ ವಂಶಕ್ಕೆ ಅನುರೂಪನಾದ ಕುಲೀನ ರಾಜ ಪುತ್ರ ರಾಜನಿಗೆ ಅವಳನ್ನು ಕೊಡಬೇಕೆಂದು ಮನಸ್ಸು ಮಾಡಿದ್ದನು. ದುರ್ಗಾವತಿಯು ಗಡಾಮಂಡಲದ ಗೌಡರಾಜನಾದ ದಳಪತಿ ಶಹನ ಸಾಹಸ ಪರಾಕ್ರಮ ಮುಗ್ಧಳಾಗಿ, ತನ್ನ ತಂದೆಗೆ ತಿಳಿಯದಂತೆ ಆ ವೀರನನ್ನು ಹೃದಯದಲ್ಲಿ ವರಿಸಿದ್ದಳು, ದಳಪತಿಶಹನು ಮಹಾ ಯೋಧನು; ರಾಜಕಾರ್ಯಧುರಂಧರನು; ರಾಜಪುತ್ರ ರಮಣಿಯರ ಮಾನ ರಕ್ಷಕನು, ದುರ್ಗಾವತಿಯು ಅಂತರಂಗದಲ್ಲಿ ತನ್ನ ಪ್ರಣಯಚಿಹ್ನ ನಾದ ಹೊನ್ನಿನ ತೆಂಗಾಯಿಯನ್ನು ದಳಪತಿ ಶಹನಿಗೆ ಕಳುಸಿದಳು, ದಳಪತಿಶಹನು ಕನ್ನಿಕೆಯ ಪ್ರೇಮಪುರಸ್ಕಾರವನ್ನು ಅತ್ಯಂತ ಶ್ರದ್ದೆಯಿಂದ ಸ್ವೀಕರಿಸಿದನು. ಕ್ರಮೇಣ ದುರ್ಗಾವತಿಯ ಆಶೆಯು ಹೊರಬಿದ್ದಿತು. ದುರ್ಗಾವತಿಯ ತಂದೆಯು ಈ ಸಂಬಂಧವನ್ನು ಒಪ್ಪಲಿಲ್ಲ. ದಳಪತಿ ಶಹನು ಸಾಮಾನ್ಯ ರಾಜ ಪುತ್ರನೆಂದೂ, ಅವನ ರಾಜ್ಯವು ಬಲು ಚಿಕ್ಕದೆಂದೂ, ಅವನು ಅಳಿಯನಾದರೆ ತನ್ನ ಕುಲಗೌರವವು ಕಳಂಕಿತವಾಗುವುದೆಂದೂ ಭಾವಿಸಿ, ಒಂದು ಉಪಾಯವನ್ನು ಮಾಡಿದನು, ದಳಪತಿ ಶಹನು ಅರ್ಧ ಲಕ್ಷ ಸೈನ್ಯದೊಡನೆ ಸ್ವಯಂವರಕ್ಕೆ ಬರಬೇಕೆಂದು ಚಂದೇನು ಹೇಳಿ ಕಳುಹಿಸಿದನು. ಅಷ್ಟು ಸೈನ್ಯವನ್ನು ತನ್ನ ಚಿಕ್ಕ ಮಂಡಲದಲ್ಲಿ ಸಾಮಾನ್ಯ ರಾಜನಾದ ದಳ ಸತಿಶಕನು ಜತೆಗೊಳಿಸಲಾರನೆಂದು ಚಂದೇಲನು ಬಗೆದನು. ವೀರಭೂಮಿಯು ತುರುಕರ ಪಾಲಿಸಿದರೂ, ವೀರತ್ವವು ಈ ಭರತಭೂಮಿಯಿಂದ ಇನ್ನೂ ನಿರ್ನಾಮವಾಗಿರಲಿಲ್ಲ ಎಂದು ಚಂದೇಲನು ತಿಳಿದಿರಲಿಲ್ಲ, ಪ್ರಸಿದ್ಧ ವೀರಸಿದ್ದ ರಾಜಪುತ್ರರು ಉತ್ಸಾಹಿತರಾಗಿ ಅವನ ಪತಾಕೆಯ ಕೆಳಗೆ ಇನ್ನೂ ಒಟ್ಟು ಕೊಡುತ್ತಿದ್ದರೆಂದು ಚಂದೇಲನ ಮನಸ್ಸಿಗೆ ಹತ್ತಲಿಲ್ಲ. ಲಕ್ಷಾರ್ದ ಸೈನ್ಯವನ್ನು ಮೋಹರಿಸಲಾರದೆ ದಳಪತಿಶಹನು ತಾನೆ ಹಿಂದೆಗೆವನೆಂದು ಚಂದೇಲನು ನಂಬಿದನು.

ಸ್ವಯಂವರದ ಪ್ರಾಪ್ತವಾಯಿತು. ದುರ್ಗಾವತಿಯ ಸೌಂದರ್ಯ ಕೀರ್ತಿಯನ್ನು ಕೇಳಿ ಮೋಹಿತರಾದ ರಾಜಪುತ್ರರೆಲ್ಲರೂ ಮಂಟಪದಲ್ಲಿ ಬಂದು ನೆರೆದರು. ಆ ರಾಜಪುತ್ರರ ಮಂಡಲದಲ್ಲಿ ಗಢಾಮಂಡಲದ ನಾಯಕನು ಮಾತ್ರ ಇರಲಿಲ್ಲ. ಕನ್ನಿಕೆಯಾದ ದುರ್ಗಾವತಿಯು ಕೈಯಲ್ಲಿ ಪುಷ್ಪ ಮಾಲಿಕೆಯನ್ನು ಹಿಡಿದುಕೊಂಡು, ಸ್ವಯಂವರ ಮಂಟಪದಲ್ಲಿ ಮೆಲ್ಲನೆ ಕಾಲಿಟ್ಟಳು; ಮುಹೂರ್ತ ಮಾತ್ರ ನಿಂತುಕೊಂಡು, ತನ್ನ ಕಣ್ಣಿನ ಮಿಂಚನ್ನು ಸಭಾಮಂಡಲದಲ್ಲಿ ಬೀರಿದಳು. ಕೂಡಲೇ ಅವನತಮಸ್ತಕಳಾಗಿ ಪ್ರತಿಮೆಯಂತೆ ನಿಂತುಬಿಟ್ಟಳು. ದಳಪತಿ ಶಹನ ಉಜ್ವಲಮುಖವು ಅಲ್ಲಿ ತೋರಲಿಲ್ಲ. ಆಶಿಸುವಂತಹನನ್ನು ಆಯ್ದುಕೊಳ್ಳು ಎಂದು ಮುದಿಹೃದಯನಾದ ತಂದೆಯು ಅಪ್ಪಣೆ ಕೊಟ್ಟನು. ದುರ್ಗಾವತಿಯು ನಿರುತ್ತರಳಾದಳು, ತಿಳಿಯದಂತೆ ಜಗುಳಿ ಬಿದ್ದ ಅಶ್ರುಜಲವು ಹೂಮಾಲೆಯಲ್ಲಿ ಹಿಮಬಿಂದುವಿನಂತೆ ಮಾತ್ರವಿದ್ದು ತೊಲಗಿ, ಕರ್ಕಶವಾದ ಭೂಮಿಗೆ ಬಿದ್ದು ಆರಿಹೋಯಿತು. ಸ್ವಯಂವರದ ಮಂಗಲಮುಹೂರ್ತವು ತಪ್ಪಿ ಹೋಗುವುದೆಂದು ಚಂದೇಲನು 'ದುರ್ಗಾವತಿಯನ್ನು ತವಕಿಸಿದನು. ಅವಳ ಮುಕುಳಿತವಾದ ಮನಸ್ಸಿನಲ್ಲಿ ಆ ಮಾತು ಇಳಿಯಲಿಲ್ಲ. ಅವಳು ಅಧೋವದನಳಾಗಿ ಕಣ್ಣೆತ್ತದೆ ಮುಂದೆ ಮುಂದೆ ಹೆಜ್ಜೆಯನ್ನಿಟ್ಟಳು. ಅವಳ ಹೃದಯಕಮಲವನ್ನು ವಿಕಸಿಸುವ ಬಾಲಸರ್ಯನು ಇನ್ನೂ ಪೂರ್ವ ಶಿಖರವನ್ನು ಹತ್ತಿರಲಿಲ್ಲ. ದಳಪತಿ ಶಹನು ಸೈನ್ಯವನ್ನು ಸೇರಿಸಿ, ದುರ್ಗದ ಹಿಂದುಗಡೆಯಲ್ಲಿ ನಿಲ್ಲಿಸಿ, ವಿವಾಹಮಂಟಪವನ್ನು ಅಲಂಕರಿಸುವುದಕ್ಕೆ ಕಾಲವಿಳಂಬವಾಯಿತು. ಕನ್ನೆಯ ಈ ಅವಸ್ಥೆಯನ್ನು ನೋಡಿ ಆಮಂತ್ರಿತ ರಾಜಪುತ್ರರೆಲ್ಲರೂ ಆಶ್ಚರ್ಯಗೊಂಡರು. ಕೈಕಟ್ಟಿದ೦ತಾದ ಕನೈಯು ಏನು ಮಾಡ ಬೇಕೆಂಬುದು ಮುಂಗಾಣದೆ, ನೆಟ್ಟ ನೆ ಮಂಟಪದ ಬಹಿರ್ದ್ವಾರಕ್ಕೆ ಸರಿಯಾಗಿ ನಡೆದಳು. ಎರಡು ಕಡೆಗಳಲ್ಲಿ ಕುಳಿತುಕೊಂಡ ಅತಿಥಿಗಳೆಲ್ಲ ಕೊರಳುಗಳನ್ನು ನೀಡುತ್ತ ಹೊರಬಾಗಿಲಿನ ಕಡೆಗೆ ತಮ್ಮ ದೃಷ್ಟಿಯನ್ನು ಚಾಚಿದರು. ರಾಜಾಂಗಣದಲ್ಲಿ ಆನೆಯನ್ನು ಹತ್ತಿ ಒಬ್ಬ ಯೋಧನು ಬರುತ್ತಿದ್ದನು.ಅವರು ನೋಡುವಷ್ಟರಲ್ಲಿ ಯೋಧನು ಆನೆಯಿಂದ ಇಳಿದು ಮಂಟಪವನ್ನು ಪ್ರವೇಶಿಸಲಿಕ್ಕಿದ್ದನು. ದೂರದಿಂದ ಹಾರಿಬರುವ ಗಂಡು ಕಪೋತವನ್ನು ವಿರಹಿಣಿಯಾದ ಹೆಣ್ಣು ಕಪೋತನು ದೃಷ್ಟಿಸಿ, ಗರಿಗಳನ್ನು ಬಿಚ್ಚಿ, ಹಾರಿ ಹೋಗಿ ಅದರ ಬಳಿ ಸಂದು ಅದರ ರೆಕ್ಕೆಗಳಲ್ಲಿ ಒಗ್ಗೂಡುವಂತೆ, ತನ್ನ ಪ್ರಾಣವಲ್ಲಭನಾದ ದಳಪತಿ ಶಹನು ಸ್ವಯಂವರ ಮಂಟಪದಲ್ಲಿ ಪದಾರ್ಪಣ ಮಾಡುತ್ತಲೇ ಪುಳುಕಿತಳಾದ ದುರ್ಗಾವತಿಯು ಓಡಿಹೋಗಿ ಕುಸುಮಮಾಲೆಯನ್ನು ಅವನ ಕಂಠದಲ್ಲಿ ಇಟ್ಟು, ಅವನ ನಾನುಭಾಗವನ್ನು ಅವಲಂಬಿಸಿ ನಿಂತುಬಿಟ್ಟಳು. ಭಗ್ನ ಮನೋರಥನಾದ ಚಂದೇಲನು ತನ್ನ ಮಗಳ ನಡತೆಯನ್ನು ನೋಡಿ ಅವಾಕ್ಕಾದನು. ಮನ ಪೂರ್ವಕವಾಗಿ ಮಗಳನ್ನು ಅಳಿಯನಿಗೆ ಕೊಡುವುದಕ್ಕೆ ಅವರು ಸಮ್ಮತಿಸಲಿಲ್ಲ. ದುರ್ಗಾವತಿಯನ್ನು ಅಳಿಯನ ಕೈಗೆ ಖಡ್ಗ ಧಾರಾಪೂರ್ವಕವಾಗಿ ಕೊಡಬೇಕೆಂದು ನಿಶ್ಚಯಿಸಿದನು. ಕೂಡಲೇ ಇತ್ತಂಡಗಳ ಸೇನೆಗಳು ಸನ್ನದ್ಧವಾಗಿ ಬಂದುವು; ಸ್ವಯಂವರಮಂಟಪವು ಸಮರಭೂಮಿಯಾಯಿತು; ಅಳಿಯನಿಗೂ ಮಾವನಿಗೂ ಕಾಳಗವಾಯಿತು. ಚಂದೇಲನು ಸೋತುಹೋದನು, ವಿಜಯಿಯಾದ ದಳಪತಿ ಶಹನು ರಮಣೀರತ್ನವನ್ನು ಹಾರಿಸಿಕೊಂಡು ಹೋದನು.

ಆದರೆ ದುಗಾವತಿಯ ಸಹವಾಸಸುಖವನ್ನು ಚಿರಕಾಲ ನು ಭವಿಸುವುದನ್ನು ದಳಪತಿಶಹನ ಹಣೆಯಲ್ಲಿ ವಿಧಾತನು ಬರೆಯಲಿಲ್ಲ. ದುರ್ಗಾವತಿಯಲ್ಲಿ ಪುತ್ರೋತ್ಸವವಾದ ಸ್ವಲ್ಪ ಕಾಲದಲ್ಲಿಯೇ ಶಕನು ಕಾಲವಶನಾದನು. ಗಡಾಮಂಡಲದ ಮೇಲೆ ಸ್ವಲ್ಪ ಕಾಲದವರೆಗೆ ಅಂಧಕಾರವು ಅಚ್ಛಾದಿತವಾಯಿತು. ಗಡಾಮಂಡಲಕ್ಕೆ ಉಂಟಾದ ಈ ದುರ್ಗತಿಯನ್ನು ನೋಡಿ ಅಕ್ಷರು ಸಮಯವನ್ನು ಎದುನೋಡುತಿದ್ದನು. ಕೂಡಲೇ ದುರ್ಗಾವತಿಯು ತನಗೆ ಒದಗಿದ ಕಷ್ಟ ಸಂಕಷ್ಟವನ್ನು ಮರೆತು ಬಿಟ್ಟಳು; ಪತಿವಿಯೋಗದಿಂದ ಉಂಟಾದ ಕಣ್ಣೀರುಗಳನ್ನು ಕಣ್ಣುಗಳಿಂದ ಒರಸಿಬಿಟ್ಟಳು; ದುಃಖಸೂಚಕವಾದ ವಸನಗಳನ್ನು ತೆಗೆದಿಟ್ಟಳು. ಪ್ರಜಾಪರಿಪಾಲನದಲ್ಲಿಯ, ಸಂಸ್ಥಾನಾಭಿವೃದ್ಧಿಯಲ್ಲಿಯ, ಬಾಲಕನ ಅಭ್ಯುದಯದಲ್ಲಿಯೂ ತನ್ನ ಮನಸ್ಸನ್ನು ಊರಿದಳು. ಬಾಲಕನಾದ ವೀರನರೇಂದ್ರನು ಪ್ರಾಯಕ್ಕೆ ಬರುವ ವರೆಗೆ ಅಸಾಧಾರಣ ಸ್ತ್ರೀಯಾದ ದುರ್ಗಾವತಿಯು ರಾಜಕಾರ್ಯಸೂತ್ರಗಳನ್ನು ತನ್ನ ಕೈಯಲ್ಲೇ ಹಿಡಿದುಕೊಂಡಳು. ಅವಳ ಆಳಿಕೆಯಲ್ಲಿ ಮಾರ್ಗಗಳು ಸಂಸ್ಥಾನವನ್ನು ಸೀಳಿ ಹೋದುವು. ಅಲ್ಲಲ್ಲಿ ಪ್ರಯಾಣಸ್ಥರಿಗೆ ಅನುಕೂಲವಾದ ವಾಸಿಗಳೂ ಪ್ರಪಾಶಾಲೆಗಳೂ ತಲೆದೋರಿದುವು. ಕೆರೆ ಕಾಲುವೆಗಳು ವ್ಯವಸಾಯಕ್ಕೆ ಸಹಾಯಕವಾಗಿ ಹರಿದು ಹೋದುವು. ರಾಜ್ಯದ ಕಂದಾಯವು ಇಮ್ಮಡಿಯಾಯಿತು. ಗಡಾಮಂಡಲವು ಉನ್ನತಿಗೆ ಏರಿತು. ಪ್ರಜೆಗಳಿಗೆ ತಾಯಿಯಂತಿದ್ದ ದುರ್ಗಾವತಿಯ ಆಳಿಕೆಯಲ್ಲಿ ಸುಖವಂತರಾದ ಜನರೆಲ್ಲರು ತಮ್ಮ ಅಧಿಪತಿಯ ಅಕಾಲಿಕ ಮರಣದುಃಖವನ್ನು ಕ್ರಮೇಣ ಮರೆತುಬಿಟ್ಟರು. ಅವಿಚ್ಛಿನ್ನವಾದ ಸುಖವು ಐಹಿಕ ಮನುಷ್ಯನ ಪಾಲಿಗೆ ಬರುವುದಿಲ್ಲ. ದುರ್ಗಾವತಿಯ ರಾಜ್ಯ ರಕ್ಷಣ ಸುಖವನ್ನು ಅನುಭವಿಸುವ ಅದೃಷ್ಟವು ಪ್ರಜೆಗಳಿಗೆ ಇದ್ದಿಲ್ಲ. ಅವಳ ದೇಶೋನ್ನತಿಯ ಸಮಾಚಾರವನ್ನು ಕೇಳಿ ಅಸೂಯೆಗೊಂಡವರಲ್ಲಿ ಅನೇಕರು ಇದ್ದರು. ಇಂತಹವರಲ್ಲಿ ಅಸೂಫ್‌ಖಾನನು ಒಬ್ಬನು. ಅಸೂಫ್‌‌ಖಾನನು ಗಥಾಮಂಡಲದ ಬಳಿಯಲ್ಲಿರುವ ಮಾಳವ ದೇಶದ ಸುಭೇದಾರನಾಗಿದ್ದನು. ಸ್ತ್ರೀಪಾಲಿತವಾದ ಸಂಸ್ಥಾನವನ್ನು ಆಕ್ರಮಿಸುವುದಕ್ಕಾಗಿ ಇದೇ ಅವಕಾಶವೆಂದು ಅವನು ರಾಜಾಧಿರಾಜನಾದ ಅಕ್ಬರಿಗೆ ಬರೆದು ಕಳುಹಿಸಿದನು. ಅಕ್ಬರು ಪರರಾಜ್ಯ ಆಕಾಂಕ್ಷಿತನಾಗಿದ್ದರೂ ಶತ್ರುಗಳಲ್ಲಿ ಕೂಡ ಸದ್ಗುಣವನ್ನು ಪರಿಗ್ರಹಿಸಿ ಸನ್ಮಾನಿಸುತ್ತಿದ್ದನು. ಅಬಲೆಯಾದ ದುರ್ಗಾವತಿಯನ್ನೂ ಬಾಲಕನಾದ ವೀರನರೇಂದ್ರನನ್ನೂ ನೋಯಿಸುವುದು ಅಕ್ಬರಿನ ಆರ್ಯ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಗಢಾಮಂಡಲವು ರಕ್ತಪಾತವಿಲ್ಲದೆ ತನಗೆ ಶರಣು ಬರಬೇಕೆಂದು ತನ್ನ ಅಂತರ್ಯದಲ್ಲಿ ಆಶಿಸಿದ್ದನು. ಅಸೋಫಖಾನನು ಪುನಃ ಪುನಃ ಈ ವಿಷಯವನ್ನು ಅಕ್ಬರಿನ ಕಿವಿಗೆ ಒತ್ತಿ ಒತ್ತಿ, ಕೊನೆಗೆ ಗಢಾಮಂಡಲದ ಮೇಲೆ ದಳವನ್ನು ನಡೆಯಿಸಬಹುದೆಂದು ಅವನ ಅಪ್ಪಣೆಯನ್ನು ಹೊಂದಿದನು.

ಅಸೋಫ್ ಖಾನನು ಅಸಂಖ್ಯಾತ ಸೇನೆಯೊಡನೆ ಪುರದ್ವಾರದಲ್ಲಿ ಬಂದಿಳಿದನು. ನಗರದಲ್ಲಿ ಕೋಲಾಹಲವು ಎದ್ದಿತು. ಅರಮನೆಯಲ್ಲಿ ಎಲ್ಲರೂ ದಿಗಿಲು ಬಿದ್ದರು. ಕೂಡಲೇ ದುರ್ಗಾವತಿಯು ಅರಮನೆಯನ್ನು ಬಿಟ್ಟು ಕೆಳಕ್ಕೆ ಬಂದಳು. ಸಂಸ್ಥಾನದ ಮುಖ್ಯಾಧಿಕಾರಿಗಳನ್ನು ಕರೆಯಿಸಿ ದುರ್ಗಾವತಿಯು ಹೀಗೆಂದಳು:-- ನೀವು ಬುದ್ಧಿಸಂಪನ್ನರು; ರಣನೈಪುಣ್ಯಶೀಲರು. ನಾನು ಎಷ್ಟಾದರೂ ಹೆ೦ಗಸು; ಅರಮನೆಯನ್ನು ಬಿಟ್ಟವಳಲ್ಲ. ನಮ್ಮೆಲ್ಲರಿಗೆ ಬಂದೊದಗಿದ ಆಪತ್ತು ದುಸ್ಸಹವಾಗಿದೆ. ನಿರಪರಾಧಿಗಳಾದ ನಮ್ಮನ್ನು ಕೊಂದು, ನಮ್ಮ ಸದ್ಧರ್ಮವನ್ನು ಹಾಳು ಮಾಡಿ, ನಮ್ಮ ರಾಜ್ಯವನ್ನು ಆಕ್ರಮಿಸಬೇಕೆಂಬ ಈ ಮ್ಲೇಚ್ಛರ ನಡತೆಯು ನಿಮಗೆ ಯುಕ್ತ ತೋರುವುದೆ? ಇದಕ್ಕಿಂತಲೂ ದುಃಖಕರವಾದ ಸಂಗತಿಯುಂಟೆ? ಮನಸ್ವಿಯಾಗಿ ರಾಜ ಪುತ್ರರನ್ನು ಈ ಧರ್ಮಾಂಧರಾದ ಮುಸಲ್ಮಾನರು ಪೀಡಿಸುವುದೆಂದರೆ ನಮ್ಮಲ್ಲಿ ಸಹನಾಶಕ್ತಿಯಿಲ್ಲದೆ ಪೌರುಷವೇ ಇಲ್ಲದಂತಾಯಿತಲ್ಲಾ! ನನ್ನ ಪ್ರಜೆಗಳಿರ! ನನ್ನ ಬಂಧುಗಳಿದ! ನಾವು ಹೆಣ್ಣು ಕುರಿಗಳಂತೆ ಸುಮ್ಮನಿದ್ದರೆ ಪಲಾಯನಮಾಡುವ ಕತ್ತೆಕಿರುಬನು ಮೇಲೆ ಬೀಳಲು ಮುಂದೆ ಹೆಜ್ಜೆಯನ್ನಿಡುವುದು. ದೇಶವು ಶತ್ರುಗಳ ಪಾಲಾಗುವುದು. ನಿಮ್ಮ ಮಕ್ಕಳುವರಿಗಳು ಅವರ ದಾಸರಾಗುವರು; ನಿಮ್ಮ ಹೆಂಡತಿಯರು ತಂಗಿಯರು ಅವರ ಮನೆಯ ತೊತ್ತುಗಳಾಗುವರು. ಇದಕ್ಕಿಂತಲೂ ಹೀನವಾದ ಅಧೋಗತಿಯುಂಟೆ? ಯಾರು ನಮ್ಮ ಸನಾತನ ಧರ್ಮದ ವಿಗ್ರಹಗಳನ್ನು ಪದಹತಿಯಿಂದ ಚೂರ್ಣ ಮಾಡುವರೋ, ಯಾರು ನನ್ನ ಬೆನ್ನ ಮೇಲೆ ಕುಳಿತುಕೊಂಡು ನಿರಂಕುಶಂಗಿ ಇಲ್ಲಿ ಆಳುವರೋ, ಯಾರು ನಮ್ಮ ಕಳತ್ರಪುತ್ರಿಯರ ಪಾತಿವ್ರತ್ಯವನ್ನು ಸೂರೆಗೊಳ್ಳುವರೋ ಆ ಮುಸಲ್ಮಾನರು, ಆ ಮಲಿನ ಮ್ಲೇಚ್ಛರು, ಆ ಮತಾಂಧ ತುರಷ್ಕರು ನಮ್ಮ ಪುರದ್ವಾರದ ಬಳಿಯಲ್ಲಿ ಉಳಿದಿರುವರಂತೆ. ಭಾರತ ಭೂಮಿಯಲ್ಲಿ ಇನ್ನೂ ವೀರತ್ವವು ಇದ್ದರೆ ಅದು ಈಗ ಚಿಗುರಲಿ? ಬಾಪ್ಪಾರಾಯನ ಪವಿತ್ರ ರಕ್ತವು ನಿಮ್ಮ ಧಮನಿಯಲ್ಲಿ ಹರಿಯುವುದು ನಿಜವಾದರೆ ಅದರ ದೃಷ್ಟಾಂತವು ಈಗ ತೋರಲಿ! ನೀವು ವೀರಶಿರೋಮಣಿಗಳಾದ ರಾಜ ಪುತ್ರರ ಸಂತತಿಯವರಾಗಿದ್ದರೆ ಕತ್ತೆ ಕಿರುಬಗಳು ತಡೆಗಟ್ಟಿದ್ದ ಈ ಅನಾಥ ಗೋವನ್ನು ರಕ್ಷಿಸಿರಿ! ಗೋಹತ್ಯಕ್ಕೆ ಅವರು ಹೇಸುವವರಲ್ಲ. ಆದರೆ ಅವರು ನನ್ನ ಯರ್ಥಾದ ಸ್ಥಿತಿಯನ್ನು ಕಂಡು ಹಿಡಿಯಲಿಲ್ಲ. ಈ ಗೋವೇ ಅವರಿಗೆ ವ್ಯಾಪ್ತಿಯಾಗಿ ಪರಿಣಮಿಸುವುದೆಂದು ತಿಳಿದುಕೊಳ್ಳಿರಿ! ದುರ್ಗಾ ನಮ್ಮೆಲ್ಲರಿಗೆ ಸಹಾಯಕಳಾಗು! ದುರ್ಗಾ! ನಮ್ಮ ಶತ್ರುಗಳನ್ನು ಹಾರಿಸಿಬಿಡುವುದಕ್ಕೆ ನಮ್ಮ ಹೃದಯದಲ್ಲಿ ಉತ್ಕಟಶಕ್ತಿಯನ್ನು ತುಂಬಿಸು!' ದುರ್ಗಾವತಿಯು ಈ ಉತ್ತೇಜಿತ ವಾಕ್ಕುಗಳನ್ನು ಕೇಳಿ ನಗರದ ರಾಜಪುತ್ರರೆಲ್ಲರು ರಕ್ತವರ್ಣ ವಸನವನ್ನು ಉಟ್ಟುಕೊಂಡು ಯುದ್ಧಕ್ಕೆ ಸಿದ್ಧರಾಗಿ ಬಂದರು. ಎಂಟು ಸಾವಿರ ಸವಾರರೂ ಎಂಟು ಸಾವಿರ ಸೈನಿಕರೂ ಸ್ವದೇಶವನ್ನು ರಕ್ಷಿಸುವುದಕ್ಕೆ ಮುಂದಾದರು. ಈ ಸೈನ್ಯಕ್ಕೆ ದುರ್ಗಾವತಿ ತಾನೇ ಅಗ್ರೇಸರಳಾದಳು, ಲೋಹಕವಚವನ್ನು ತೊಟ್ಟು ಕೊಂಡು ಶಸ್ತ್ರಧಾರಿಣಿಯಾಗಿ, ದುರ್ಗಾವತಿಯು ಕುದುರೆಯನ್ನು ಹತ್ತಿ ಸೈನ್ಯವನ್ನು ನಡೆಯಿಸಿದಳು. ಯುದ್ಧವು ಪ್ರಾರಂಭ ವಾಯಿತು. ದುರ್ಗಾವತಿಯು ಪ್ರಾಣದ ಮೇಲೆ ಆಕೆಯನ್ನಿಡದೆ, ಶತ್ರು ಸೈನ್ಯವನ್ನು ಭೇದಿಸಿಕೊಂಡು ಹೋದಳು. ಅವಳ ಭಲ್ಲೆಯ ಪೆಟ್ಟಿಗೆ ಶತ್ರುಗಳು ಚೂರ್ಣವಾಗಿ ಹೋದರು. ಹಿಂದಿರುಗುವಾಗ ದುರ್ಗಾವತಿಯು ಶತ್ರುವಿನ ವ್ಯೂಹದಲ್ಲಿ ಸಿಕ್ಕಿ ಬಿದ್ದಳು. ಅವಳ ಭುಜದಿಂದ ರಕ್ತಪ್ರವಾಹವು ಹರಿಯುತ್ತಿತ್ತು, ಅವಳನ್ನು ರಕ್ಷಿಸುವುದಕ್ಕೆ ರಾಜಪುತ್ರರು ತಂಡತಂಡವಾಗಿ ಹೋಗಿ ರಣರಂಗದಲ್ಲಿ ಮಲಗಿದರು. ಕೊನೆಗೆ ರಣಮತ್ತೆಯಾದ ಸಾಕ್ಷಾತ್ “ದುರ್ಗಾವತಿ”ಯನ್ನು ರಾಜಪುತ್ರರ ಪಾಳೆಯಕ್ಕೆ ಸುರಕ್ಷಿತವಾಗಿ ತಂದರು. ದೂರದಿಂದ ಇದನ್ನೆಲ್ಲಾ ನೋಡುತ್ತಿದ್ದ ಅಸೋಫ್ ಖಾನನು ಆಶ್ಚರ್ಯದಿಂದ ಭ್ರಾಂತಿಗೊಂಡನು. ಈ ಭ್ರಾಂತಿಯ ಪಲಾಯನವಾಗಿ ಪರಿಣಮಿಸಿತು. ಹತಾಶನಾದ ಅಸೋಫ್ ಖಾನನು ಅಳಿದುಳಿದ ಸೇನೆಯನ್ನು ಕೂಡಿಸಿ ಅಪಮಾನವನ್ನೂ ಜೀವವನ್ನೂ ಕಟ್ಟಿ ಕೊಂಡು, ಮಾಳವ ದೇಶಕ್ಕೆ ಜಾರಿಬಿಟ್ಟನು.

ನೀಚನಾದ ಅಸೋಫಖಾನನು ಈ ಅಪಜಯದಿಂದಲೂ ಅಪಮಾನದಿಂದಲೂ ಇನ್ನೂ ಕೆರಳಿದಂತಾದನು. ಗಢಾಮಂಡಲವನ್ನು ಭೂಸನಮಾಡಬೇಕೆಂದು ಅವನು 18 ತಿಂಗಳುಗಳ ಮೇಲೆ ಮಹಾ ಸೈನ್ಯವನ್ನು ಜೋಡಿಸಿ ಕೊಂಡು ಬಂದನು. ಆದರೂ ಗಡಾಮಂಡಲಕ್ಕೆ ರಕ್ಷಕರು ಇಲ್ಲದೆ ಇರಲಿಲ್ಲ. ಈ ಸಲವೂ ಆಸೀಫ್ ಖಾನನು ಅಪಜಯವನ್ನು ತಾಳಲಾರದೆ ಓಡಿ ಹೋದನು. ಯುದ್ದದ ಮುಖಾಂತರವಾಗಿ ತನ್ನ ಮನೋರಥವು ಸಿದ್ಧಿಸದೆ ಇದ್ದುದರಿಂದ, ಆಧಮಾಧವನಾದ ಆಸೀಫ್ ಖಾನನು ಕಸಟೋಪಾಯಗಳನ್ನು ಮಾಡುವುದಕ್ಕೆ ಕೈ ಚಾಚಿದನು. ದುರ್ಗಾವತಿಯ ರಾಜ್ಯಾಧಿಕಾರದಲ್ಲಿ ಪ್ರಮುಖರಾದ ಸರದಾರಲ್ಲಿ ಭೇದವುಂಟಾಗುವಂತೆ ಅವಳ ಆಪ್ತರು ಅವಳಿಂದ ಸಡಿಲಿಹೋಗುವಂತೆಯೂ ಗೂಢಚಾರದಿಂದ ಒಳಸಂಚು ನಡೆಯಿಸಿದನು. ಈ ಕುಹಕದಿಂದ ರಾಜ್ಯದಲ್ಲಿ ಅನೇಕ ಅನಿಷ್ಟಗಳು ಮೊಳೆತುವು. ದುರ್ಗಾವತಿಯು ಈಗ ಯಥಾರ್ಥವಾಗಿ ಅಬಲೆಯಾದಳು. ಆದರೂ ತನ್ನ ದೇಹದಲ್ಲಿ ಪ್ರಾಣವಾಯುವು ಸಂಚರಿಸುವ ವೆರೆಗೆ ಮೊಗಲರು ತನ್ನ ರಾಜ್ಯದಲ್ಲಿ ಕಾಲಿಡದ ಹಾಗೆ ಮಾಡುವೆನೆಂದು ವೀರರಾಜ್ಞಿಯು ಶಪಥ ಕಟ್ಟಿದಳು. ಅಷ್ಟರಲ್ಲಿ ಅಸೋಫ್‌ಖಾನನು ಮೂರನೆಯ ಸಲ ದಂಡಿನೊಡನೆ ಬಂದನು. ದುರ್ಗಾವತಿ ಇದ್ದಷ್ಟು ಸೇನೆಯನ್ನು ಒತ್ತರಿಸಿಕೊಂಡು ಮುಂದರಿಸಿದಳು. ಈ ಕಾಲದಲ್ಲಿ ಅವಳ ಹದಿನಾಲ್ಕು ವರ್ಷ ವಯಸ್ಸಿನ ಬಾಲಕನ್ನು ಆಯುಧ ಪಾಣೆಯಾಗಿ ರಣಸನ್ನದ್ಧನಾದನು. ಯುದ್ಧವು ಘೋರವಾಗಿ ನಡೆಯಿತು. ವೀರೇಂದ್ರನು ಉನ್ಮತ್ತನಂತೆ ಶತ್ರುಗಳ ಮೇಲೆ ಬಿದ್ದು ಕಾಳಗವಾಡಿದನು. ಕೊನೆಗೆ ಗಾಯಗೊಂಡು ಖಡ್ಗ ಹಸ್ತನಾಗಿ ರಣರಂಗದಲ್ಲಿ ಮಲಗಿದನು; ಮಲಗಿದವನ, ಮತ್ತೇಳಲಿಲ್ಲ. ಮರಿಯನ್ನು ಕಳೆದ ವ್ಯಾಘಿಯಂತೆ ದುರ್ಗಾವತಿ ಆವೇಶಗೊಂಡು ಶತ್ರುಗಳ ಮೇಲೆ ಬೀಳಲು ಹೊರಟಳು. “ಮರಣಕರವಾದ ಏಟನ್ನು ಹೊಂದಿದ ಬಾಲಕನನ್ನು ಕರೆದುಕೊಂಡು ಸ್ವಾಮಿನಿ ಶಿಬಿರಕ್ಕೆ ತೆರಳಬಾರದೆ? ನಮ್ಮಂತಹ ವೀರರಿರಲು ಯುದ್ಧದ ಗೊಡವೆ ತಮಗೇಕೆ?” ಎಂದು ರಣರಂಗದಲ್ಲಿ ಸ್ವಾಮಿಭಕ್ತನಾದ ರಾಜ ಪುತ್ರನೊಬ್ಬನು ಕೇಳಿದನು. ಅದಕ್ಕೆ ದುರ್ಗಾವತಿಯು ಗಂಭೀರಸ್ವರದಿಂದ “ನಾನು ಹಿಂತಿರುಗುವೆನೆಂಬ ಸುದ್ದಿ ತಿಳಿದರೆ, ಸೈನ್ಯವೆಲ್ಲವೂ ಹಿಮ್ಮೆಟ್ಟುವುದು, ವೀರಕುಮಾರನು ರಣರಂಗದಲ್ಲಿ ಮಡಿದು ಕ್ಷತ್ರಿಯ ಸ್ವರ್ಗವನ್ನು ಏರಿದನೆಂದರೆ ನನಗೆ ಸಂತೋಷವಲ್ಲವೇ? ಯುದ್ಧ ತೀರಿದೊಡನೆಯೇ ನನ್ನ ಪ್ರಿಯ ಪುತ್ರನನ್ನು ಪರಲೋಕದಲ್ಲಿ ನಾನು ಸೇರಬೇಕೆಂದಿರುವೆನು” ಎಂದು ಹೇಳಿದಳು. ದುರ್ಗಾವತಿ! ನೀನು ಧನೈ ! ನೀನು ಯುದ್ಧದಲ್ಲಿ ಸೋತರೂ ಇನ್ನು ಗೆದ್ದೆ! ಶತ್ರುಗಳ ಪರಂಪರೆಯ ಸಾಲುಗಳಿಂದ ದುರ್ಗಾವತಿಯ ಸೇನೆ ಪುಡಿಪುಡಿಯಾಯಿತು. ಒಂದು ಬಾಣವು ಅವಳ ಕಣ್ಣನ್ನು ಚುಚ್ಚಿತ; ಮತ್ತೊಂದು ಬಾಣವು ಅವಳ ಎದೆಯನ್ನು ನಾಟಿತು, ಬಾಣಗಳನ್ನು ಕಿತ್ತು ತೆಗೆದರೂ ಅವಳು ರಕ್ತಸ್ರಾವದಿಂದ ಮೂರ್ಛೆ ಹೋಗಿ, ವಾಹನದ ಮೇಲೆ ಒರಗಿದಳು. ಅವಳು ಕುಳಿತಿದ್ದ ಆನೆಯನ್ನು ಯೋಧನೊಬ್ಬನು ಶಿಬಿರಕ್ಕೆ ಹಿಂತಿರುಗಿಸಲಿಕ್ಕೆ ಪ್ರಯತ್ನಿಸಿದನು. ಕೂಡಲೇ ಧೀರ ಯುವತಿಯ ಮೂರ್ಛಿ ತಿಳಿದು ಎದ್ದು, ಮುಗುಳಗು ನಗಾಡಿದಳು. “ನನ್ನನ್ನು ಬದುಕಿಸಲು ಎಣಿಸುವೆಯಾ? ನನ್ನನ್ನು ಶಿಬಿರಕ್ಕೆ ಒಯ್ದರೆ ನನಗೆ ಮುಂದಿನ ಮರಣವನ್ನು ತಪ್ಪಿಸಬಹುದೇ? ಅದರ ಬದ ಲಾಗಿ ಕೈಯಲ್ಲಿದ್ದ ಶಸ್ತ್ರದಿಂದ ನನ್ನ ಪ್ರಾಣವನ್ನು ದೇಹದಿಂದ ಉಗಿದು ಬಿಡು ಎಂದು ಅಪ್ಪು ಟಸ್ವರದಿಂದ ಹೇಳಿದಳು. ಇಂತಹ ಜನನಿಯನ್ನು ಕೊಲ್ಲಲು ಯಾರು ತಾನೆ ಕೈಮಾಡುವರು? ಸುತ್ತಲಿರುವವರೆಲ್ಲರೂ ಮರುಗಿದರು. ಕೂಡಲೇ ದುರ್ಗಾವತಿಯು ನಗಾಡುತ್ತ ತನ್ನ ಖಡ್ಗಕ್ಕೆ ತನ್ನ ಉದರವನ್ನು ಒರೆಯಾಗಿ ಮಾಡಿಬಿಟ್ಟಳು. ಯುದ್ಧವು ಸಮಾಪ್ತವಾಯಿತು. ಯುದ್ಧದ ನಾಯಕಿಯೇ ರಣತಲದಲ್ಲಿ ಒರಗಿದ ಬಳಿಕ ಯುದ್ಧವನ್ನು ನಡೆಯಿಸುವವರು ಯಾರು? ರಾಜ್ಯವು ಅಸೋಫ್‌ಖಾನನ ವಶವಾಯಿತು. ಆದರೆ ಕ್ಷಾತ್ರಧರ್ಮಪರಾಯಣೆಯಾದ ಆ ವೀರಶಿರೋಮಣಿಯ ಪವಿತ್ರ ದೇಹವು ಶತ್ರುಗಳ ಅಪವಿತ್ರ ಹಸ್ತದಿಂದ ಮಲಿನವಾಗಲಿಲ್ಲ. ಅನುಚರರಲ್ಲಿ ಕೆಲವರು ಕೂಡಲೇ ಅಗ್ನಿ ಕುಂಡವನ್ನು ಬೆಳಗಿಸಿ, ಶಾಸ್ಪೋಕ್ತ ವಿಧಿಯಿಂದ ದುರ್ಗಾವತಿಯ ಸಂಸ್ಕಾರಗಳನ್ನು ನಡೆಯಿಸಿದರು,

ದುರ್ಗಾವತಿಯು ಈ ನಶ್ವರ ಶರೀರವನ್ನು ಬಿಟ್ಟು ಅವಿನಶ್ವರ ಕೀರ್ತಿಯನ್ನು ಪಡೆದಳು. ಈ ನೀರಯುವತಿಯನ್ನು ಕುರಿತು ಕರ್ನಲ್‌ಸ್ಲಿಮೆನ್ ಸಾಹೇಬರು ಹೀಗೆ ಬರೆದಿರುವರು:- “ರಣಶೂರ ರಾಣಿಯಾದ ದುರ್ಗಾವತಿಯ ಸ್ಮಾರಕವು ಅದೇ ಪರ್ವತ ಪ್ರದೇಶಮಧ್ಯದಲ್ಲಿ ಕಟ್ಟಲ್ಪಟ್ವಿದೆ. ಅಲ್ಲಿ ಎರಡು ಪಾಷಾಣಸ್ತಂಭಗಳು ನೆಟ್ಟಗೆ ನಿಲ್ಲಿಸಿದ್ದು, ಅವುಗಳು ಆ ಯುದ್ಧಭೂಮಿಯ ಪ್ರೇಕ್ಷಕರ ಮನಸ್ಸಿನಲ್ಲಿ ಮೂರ್ತಿವಂತವಾದ ದೃಶ್ಯವನ್ನು ಉತ್ಪನ್ನ ಮಾಡುವುವು. ಈ ಗಿರಿಶಿಖರದಲ್ಲಿ ರಾತ್ರಿ ಸಮಯದಲ್ಲಿ ಅತಿ ಭಯಂಕರವಾದ ರಣಘೋಷವು ಆಗುತ್ತದೆಂದು ಹೇಳುವರು. ಈ ನಿರ್ಜನವಾದ ಮತ್ತು ರಮಣೀಯವಾದ ಪ್ರದೇಶ ಮಧ್ಯದಲ್ಲಿ ಹೋಗುವ ಪ್ರವಾಸಿಜನರು ಅತ್ಯಾನಂದದಿಂದ ಈ ಸ್ಥಳದಲ್ಲಿ ನಡೆಯುವರು. ರಾಣಿಯ ಸಮಾಧಿಯ ದರ್ಶನವನ್ನು ಪ್ರೇಮಪೂರ್ವಕವಾಗಿ ಸ್ವೀಕರಿಸುವರು; ಅವಳ ಪರಾಕ್ರಮ ಗುಣಗಳಿಂದ ಬೆರಗಾಗಿ ಸ್ವಾನಂದಚಿತ್ತದಿಂದ ಅವಳನ್ನು ಪೂಜಿಸುವರು. ಈ ಪ್ರದೇಶಮಧ್ಯದಲ್ಲಿ ಹೊಳೆಹೊಳೆವ ಕಂಚಿನ ತುಂಡುಗಳು ಹೇರಳವಾಗಿ ಸಿಕ್ಕುತ್ತವೆ. ಅವನ್ನು ತೆಗೆದುಕೊಂಡು ಆ ಜನರು ಅಲ್ಲಿ ಸಮರ್ಪಿಸುವರು. ತಮ್ಮ ಪ್ರಜಾಭಕ್ತಿಗನುಸಾರವಾಗಿ ನಾನು ಅದನ್ನು ನೋಡುತ್ತಲೇ ಮಹಾರಾಣಿ ದುರ್ಗಾವತಿಯ ದಿವ್ಯಗುಣದ ಅಭಿನಂದನಾರ್ಥವಾಗಿ ಒ೦ದು ತುಂಡನ್ನು ಅರ್ಸಣ ಮಾಡಿದನು." ಆಲೌಕಿಕ ಸೌಂದರ್ಯವನ್ನು ಯಾರು ತಾನೇ ಪೂಜಿಸದೇ ಇರುವರು?


ವೀರಮತಿ.

ಮಧ್ಯಾಹ್ನ ಸೂರ್ಯನು ಆಕಾಶವಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲ್ಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ ಬೆನ್ನ ಮೇಲಿನ ನೊಳಗಳನ್ನು ಝಾಡಿಸುತ್ತಿದ್ದುವು. ಹಕ್ಕಿಗಳು ಮರದ ಎಲೆಗಳಲ್ಲಿ ಹುದುಗಿಕೊಂಡು, ಸುಖವಾಗಿ ನಿದ್ದೆ ಹೋಗುತ್ತಿದ್ದುವು. ಕಾಗೆಯು ಅತ್ತಿತ್ತ ಅರಚುತ್ತ ಮರದಿಂದ ಮರಕ್ಕೆ ಹಾರುತ್ತಲಿತ್ತು. ಗಿಡುಗನು ಗಗನಮಧ್ಯದಲ್ಲಿ ಮಂಡಳಿಸಿ, ನೆಲದ ಮೇಲೆ ಸುಳಿಯುವ ಕೊಳ್ಳೆಯನ್ನು ತೀಕ್ಷ್ಣದೃಷ್ಟಿಯಿಂದ ನೋಡಿ, ಫಕ್ಕನೆ ಕೆಳಕ್ಕೆ ಹಾರಿಬಂದು, ಹತಾಶನಾಗಿ ಸಮೀಪದಲ್ಲಿದ್ದ ಉನ್ನತವಾದ ಮಂದಿರದ ಸೂರುಗಳಲ್ಲಿ ಕುಳಿತುಕೊಳ್ಳುತಿತ್ತು. ದೇವಗಿರಿಯ ಅರ ಮನೆಯ ಬಳಿಯಲ್ಲಿ ಕಾವಲುಗಾರರು ಬಹಳ ಎಚ್ಚರಿಕೆಯಿಂದ ಸಹರೇ ಮಾಡುತ್ತಿದ್ದರು. ಅರಮನೆಯಲ್ಲಿ ಜನರು ಕಾರ್ಯಗೌರವದಿಂದ ಹೋಗುತ್ತ ಬರುತ್ತ, ಅಲ್ಲಲ್ಲಿ ಗುಂಪು ಕೂಡಿ ನಿಂತು, ತನ್ನೊಳಗೆನೇ ಏನನ್ನೋ ವಿಚಾರ ಮಾಡುತ್ತಿದ್ದರು. ರಾಜಮಂದಿರದ ಕಿರುಬಾಗಿಲನಿಂದ ಒಂದು ಪಲ್ಲಕಿಯು ಹೊರಕ್ಕೆ ಬಂದಿತು. ಪ್ರಜೆಗಳೆಲ್ಲರು ವಿಶೇಷವಾದ ಕಾರ್ಯದಲ್ಲಿ ಮಗ್ನರಾದುದರಿಂದ, ಪಲ್ಲಕ್ಕಿಯನ್ನು ಯಾರೂ ಲಕ್ಷಿಸಲಿಲ್ಲ. ಅಂದಣವು ತಪ್ತವಾದ ರಾಜಮಾರ್ಗವನ್ನು ಬಿಟ್ಟು, ನಿರ್ಜನವಾದ ಶೀತಲವಾದ ರಹಸ್ಯಮಾರ್ಗವನ್ನು ಹಿಡಿದುಕೊಂಡು ಹೋಯಿತು. ಪಲ್ಲಕ್ಕಿಯು ಕೋಟೆಯನ್ನು ಸಮೀಪಿಸುತ್ತಲೇ ಪಹರೆಯವನು ಅದನ್ನು ನೋಡಿ, ಖಡ್ಗವನ್ನು ಎತ್ತಿ ಹಿಡಿದು, ಅದನ್ನು ಅಡ್ಡಿಮಾಡದೆ ಹೊರಕ್ಕೆ ಬಿಟ್ಟನು. ಅಂದಣವು ದೇವಗಿರಿಯ ಕೋಟೆಯನ್ನು ಅತಿಕ್ರಮಿಸಿ, ಅದರ ಬಹಿರ್ಭಾಗದಲ್ಲಿದ್ದ ಅರಣ್ಯವನ್ನು ಸೇರಿತು. ಕೊನೆಗೆ ವಿಜನವಾದ ಭೀಕರವಾದ ಅರಣ್ಯ ಮಧ್ಯದಲ್ಲಿದ್ದ ಕಾಳಿಕಾ ದೇವಸ್ಥಾನದ ಬಳಿಯಲ್ಲಿ ಆಳುಗಳು ಪಲ್ಲಕ್ಕಿಯನ್ನು ಇಟ್ಟು ಹೋದರು. ಕೂಡಲೇ ರಮಣಿಯರಿಬ್ಬರು ಅಂದಣದಿಂದ ಕೆಳಕ್ಕೆ ಇಳಿದು, ಕಾಲ್ನಡೆಯಾಗಿ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಸಿದ್ಧರಾಗಿ, ತಮ್ಮ ವಸ್ತ್ರಾಲಂಕಾರಗಳನ್ನು ಸರಿಗೊಳಿಸುವುದಕ್ಕೆ ಒಂದು ಮುಹೂರ್ತ ಅಲ್ಲಿಯೇ ತಡೆದರು.
ಇಬ್ಬರೂ ಸಮವಯಸ್ಯೆಯರು. ಇಬ್ಬರೂ ಅಸಮಾನ ಸೌಂದರ್ಯ ಶಾಲಿನಿಯರಾಗಿದ್ದರೂ, ಒಬ್ಬಳ ರೂಪಲಾವಣ್ಯಗಳು ಮತ್ತೊಬ್ಬಳ ಅಂದ ಚೆಂದವನ್ನು ಅತಿಕ್ರಮಿಸಿದ್ದುವು. ಭಾರತೇಯ ಕವಿಗಳು ಸ್ತ್ರೀಯನ್ನು 'ಚಂದ್ರಮುಖಿ' 'ಕಮಲವದನೆ' ಎಂದು ವರ್ಣಿಸಿರುವರು. ಈ ಯುವತಿಯು ಈ ಅಭಿದಾನಕ್ಕೆ ಪಾತ್ರಳಾಗಿರಲಿಲ್ಲ. ಏಕೆಂದರೆ ಇವಳ ಮುಖಮಂಡಲವು ನೈಸರ್ಗಿಕ ಚ೦ದ್ರನಂತಾಗಲೀ ಕಮಲದಂತಾಗಲಿ ಶೋಭಿಸಿರಲಿಲ್ಲ. ವರ್ತುಲವಾದ ಪೂರ್ಣಚಂದ್ರನು ಸ್ವಲ್ಪ ದೀರ್ಘಕಾರವನ್ನು ಧರಿಸಿದರೆ ಎಷ್ಟು ಮಧುರನಾಗಿ ಶೋಭಿಸಬಹುದೋ, ಅಥವಾ ದೀರ್ಘವಾದ ಕಮಲಪತ್ರವು ಸ್ವಲ್ಪ ವೃತ್ತಾಕೃತಿಯನ್ನು ವಹಿಸಿದರೆ ಎಷ್ಟು ರಮ್ಯವಾಗಿ ಉಜ್ವಲಿಸುವುದೋ ಅಷ್ಟೇ ಸೌ೦ದರ್ಯಮಯವಾಗಿ ಆ ರಮಣಿಯ ಮುಖಮಂಡಲವು ರಂಜಿಸುತ್ತಿತ್ತು. ನಯನೇಂದ್ರಿಯಗಳು ಹರಿಣಲೋಚನದಂತೆ ಕಂಪಿಸುತ್ತಲಿದ್ದುವು. ಈ ಕಂಪನವು ಅವುಗಳಲ್ಲಿ ಪ್ರವಹಿಸುತ್ತಲಿದ್ದ ಪ್ರೇಮರಸದಿಂದ ಸರಿಯಾಗಿ ವ್ಯಕ್ತವಾಗುತ್ತಿರಲಿಲ್ಲ. ಅದೂ ಅಲ್ಲದೆ ಮುಖದ ಮೇಲೆ ಕ್ಷಾತ್ರತೇಜಸ್ಸು ಸಂಪೂರ್ಣವಾಗಿ ಪ್ರತಿಫಲಿಸುತ್ತಿದ್ದುದರಿಂದ, ಭಯದಿಂದ ಉಂಟಾದ ಕಂಪನವು ಎಲ್ಲಿಯೋ ಅದೃಶ್ಯವಾಗಿತ್ತು. ಸೂರ್ಯನ ಉಷ್ಣದಿಂದಲೊ ಅಥವಾ ಮಾರ್ಗದ ಆಯಾಸದಿಂದಲೂ ಪ್ರಾಪ್ತವಾದ ಸ್ವೇದಬಿಂದುಗಳನ್ನು ಧರಿಸಿದ ಆ ಮುಖವು ಹಿಮಜಲದಿಂದ ಮ್ಲಾನವಾದ ಹೇಮಂತಋತುವಿನ ಕಮಲದಂತೆ ಕನಿಕರವನ್ನು ಉಂಟುಮಾಡುತ್ತಲಿತ್ತು. ಮಸ್ತಕದ ಹಿಂದು ಗಡೆಯಲ್ಲಿದ್ದ ವೇಣಿಯು ಶಿರವನ್ನು ಏರಿದ ಚೀನಾಂಬರದಿಂದ ಆಚ್ಛಾದಿತವಾಗಿದ್ದುದರಿಂದ, ಅವಳ ಸೃಷ್ಟದಲ್ಲಿಯೇ ಸ್ವತಂತ್ರವಾಗಿ ಕ್ರೀಡಿಸುತ್ತಲಿತ್ತು. ಹಸುರು ರೇಶ್ಮೆಯ ಸೆರಗನ್ನು ದಕ್ಷಿಣ ಬಾಹುವಿನ ಕೆಳಗಡೆಯಿಂದ ಸೆಳೆದುಕೊಂಡು, ಉಡಿಯಲ್ಲಿ ಬಿಗಿದುದರಿಂದ ವಕ್ಷೋರಂಗವು ಇನ್ನೂ ಉನ್ನತವಾಗಿಯೂ ಉಜ್ವಲವಾಗಿಯೂ ತೋರುತ್ತಲಿತ್ತು. ಮನ್ಮಥವೈಜಯಂತಿಯಂತೆ ವಾಯುವಿನಲ್ಲಿ ಮೆಲ್ಲಮೆಲ್ಲನೆ ತೇಲುತ್ತಿರುವ ಹಸುರಾದ ದುಕೂಲವು ಅವಳ ಅಂಗಕಾಂತಿಯನ್ನು ಸಂಪೂರ್ಣವಾಗಿ ಮುಚ್ಚಿದರೂ, ಅಂಗ ಛಾಯೆಯು ವಸ್ತ್ರದ ಹಿಂದುಗಡೆಯಿ೦ದ ನೋಟಕರ ಮನಸ್ಸನ್ನು ಆಕರ್ಷಿಸುವಂತಿತ್ತು. ದೇಹವರ್ಣವು ಹರಿದ್ರ; ಸ್ವಲ್ಪ ಹಳದಿ; ಸುವರ್ಣಕಮಲದಂತೆ ಹರಿದ್ರವಾಗಿರಲಿಲ್ಲ; ಹೊಂಗೇದಗೆಯಂತೆ ಹಳದಿಯಾಗಿರಲಿಲ್ಲ. ಹಿಮದಿಂದ ಆರ್ದ್ರವಾದ ಸುವರ್ಣಕಮಲವು ಹರಿತಪತ್ರದ ಛಾಯೆಯಿಂದ ಯಾವ ಕಾಂತಿಯನ್ನು ಧರಿಸುವುದೋ, ಚಂದ್ರಕಾಂತಿಯಿಂದ ನನೆದ ಹೊಂಗೇದಗೆಯು ಹಸುರೆಲೆಯ ಮರೆಯಲ್ಲಿ ಯಾವ ಬಣ್ಣದಿಂದ ಶೋಭಿಸುವುದೋ, ಆ ಕಾಂತಿಯೂ ಆ ವರ್ಣವೂ ಈ ಯುವತಿಯ ಪ್ರಫುಲ್ಲಿತ ದೇಹದಲ್ಲಿ ಸಮ್ಮಿಳಿತವಾಗಿದ್ದುವು.

ರಮಣಿಯರಿಬ್ಬರು ದೇವಸ್ಥಾನವನ್ನು ಪ್ರವೇಶಿಸಿದರು, ಕಾಳಿಕಾ ಮೂರ್ತಿಯ ಸಮ್ಮುಖದಲ್ಲಿ ಬದ್ಧಹಸ್ತದಿಂದ ಇಬ್ಬರೂ ಕಣ್ಮುಚ್ಚಿ ನಿಮಿಷ ಮಾತ್ರ ನಿಂತರು. ಬಳಿಕ ಕರಾಳವಾದ ಚಂಡಿಕಾ ವಿಗ್ರಹವನ್ನು ಬಲವಂದು ದೇವಿಯ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿದರು. ಪುನಃ ಎದ್ದು ನಿಂತು “ತಾಯೇ! ಚಂಡಿಕೇ! ನಮಗೆ ಬಂದಿದ್ದ ಆಪತ್ತನ್ನು ಪರಿಹರಿಸು! ಯುದ್ಧದಲ್ಲಿ ನಮ್ಮ ಪತಿಗಳಿಗೆ ಸಹಾಯಕಳಾಗು! ಅವರ ಹಸ್ತದಿಂದಲೇ ನಮ್ಮ ವೈರಿಗಳನ್ನು ಸಂಹರಿಸು!” ಎಂದು ಪ್ರಾರ್ಥಿಸಿದರು. ಪುನಃ ದೇವಗಿರಿ ದುರ್ಗದ ಅಧಿಷ್ಟಾತ್ರಿಯಾದ ದುರ್ಗಾಂಬಿಕೆಯನ್ನು ಪ್ರದಕ್ಷಿಣೆ ಮಾಡಿ, ಇಬ್ಬರೂ ಪಲ್ಲಕ್ಕಿಯನ್ನು ಹತ್ತು ವಷ್ಟರಲ್ಲಿ ಕುದುರೆಯ ಖುರಪುಟ ಧ್ವನಿಯು ಕೇಳಿಸಿದುದರಿಂದ, ಇಬ್ಬರೂ ಸ್ವಲ್ಪ ಸಂಭ್ರಾಂತರಾದಂತೆ ಅಲ್ಲಿಯೇ ತಡೆದರು. ಕೂಡಲೇ ಒಬ್ಬ ಆಶ್ವಾರೋಹಿಯು ಕುದುರೆಯಿಂದ ದುಮಿಕಿ, ಯುವತಿಯರ ಸವಿಾಪಕ್ಕೆ ಬರುತ್ತಿದ್ದನು. ಯುವತಿಯರು ಇವನನ್ನು ದೃಷ್ಟಿಸುತ್ತಲೇ ಆನಂದದಿಂದಲೂ ಆಶ್ಚರ್ಯದಿಂದಲೂ ಚಕಿತರಾಗಿಹೋದರು.

ಯುವಕ- “ವೀರಮತಿ! ನೀನು ಗೌರಿಯೊಡನೆ ಇಲ್ಲಿ ಏಕೆ ಬಂದಿ?”

ವೀರಮತಿಯು ಯುವಕನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, “ನಾವು ಇಲ್ಲಿ ಬಂದೆವೆಂದು ನಿನಗೆ ಹೇಗೆ ತಾನೇ ತಿಳಿಯಿತು?” ಎಂದು ಪ್ರಶ್ನಿಸಿದಳು.

ಯುವಕ:-"ರಾಜಮಂದಿರದಲ್ಲಿ ನೀವು ಇಲ್ಲದೆ ಇದ್ದುದನ್ನು ನೋಡಿ, ನಾನು ಕಾತರದಿಂದ ನಿಮ್ಮನ್ನು ಹುಡುಕಿ ಬಂದನು. ಕೋಟೆಯ ಪಹರೇಯವರು ನೀವು ಕಾಳಿಕಾ ಪೂಜೆಗೆ ಹೋಗಿರುವಿರಿ ಎಂದು ಹೇಳಿದನು. ನೀವು ಇಲ್ಲಿ ಏಕೆ ಬಂದಿರಿ?"
ವೀರಮತಿ:- “ಏಕೆಂದು ಇನ್ನೂ ತಿಳಿಯಲಿಲ್ಲವೇ?. ಮುಂದಿನ ಆಪತ್ತನ್ನು ಪರಿಹರಿಸುವಂತೆ ದೇವಿಯನ್ನು ಬೇಡುವುದಕ್ಕೆ -

ಯುವಕ:- “ ಅದಕ್ಕೋಸ್ಕರ ನೀವು ಇಷ್ಟು ದೂರ ಬರಬೇಕಿತ್ತೇ? ಶತ್ರುವಿನ ಪಾಳಯದವರು ನಿಮ್ಮನ್ನು ಇಲ್ಲಿ ಎಲ್ಲಾದರೂ ನೋಡಿದರೆ ನಿಮ್ಮ ಗತಿ ಏನಾಗುವುದು?”

ಈ ಮಾತನ್ನು ಕೇಳುತ್ತಲೇ ವೀರಮತಿಯ ಮುಖದಲ್ಲಿ ಒಂದು ಪ್ರಕಾರವಾದ ತೇಜಸ್ಸು ಹೊಳೆಯಿತು. ಕೂಡಲೇ ತನ್ನ ಕಟಭಾಗದಲ್ಲಿ ಅಡಗಿಸಿಟ್ಟ ಭರ್ಚಿಯನ್ನು ಇಚೆಗೆ ಸೆಳೆದುಕೊಂಡು, ನೋಡಿದೆಯೇ ಇದನ್ನು? ಇದರ ಸಹಾಯದಿಂದಲೇ ನಾನು ದಾರಿಯನ್ನು ಬಿಡಿಸಿಕೊಂಡು, ಅರಮನೆಗೆ ಹಿಂದೆರಳುತ್ತಿದ್ದೆನು” ಎಂದು ವೀರಮತಿಯು ಉತ್ತರ ಕೊಟ್ಟಳು.

ಯುವಕ:- “ನೀನು ಕ್ಷತ್ರಿಯ ಕುಮಾರಿ ಎಂದು ಬಲ್ಲೆ. ನೀವೆಲ್ಲರು ನಮ್ಮ ಭುಜಗಳ ನೆರಳಿನಲ್ಲಿರುವಾಗ ಇಷ್ಟು ಆಯಾಸವೇಕೆ?”

ವೀರಮತಿ:- “ಯುದ್ಧ ಕಾಲದಲ್ಲಿ ಶೌರ್ಯವನ್ನು ತೋರಿಸುವುದು ಪುರುಷಕರ್ತವ್ಯ. ದೇವಪ್ರಾರ್ಥನೆಯನ್ನು ಮಾಡುವುದು ಸ್ತ್ರೀಕೃತ್ಯ. ಇಬ್ಬರ ಕಾರ್ಯಗಳೂ ಒಂದೇ ಫಲವನ್ನು ಕೊಡುವುವು.”

ಯುವಕನು ಮತ್ತೆ ಮಾತನಾಡಲಿಲ್ಲ. ಗೌರಿಯು ಈ ಸಂಭಾಷಣೆಯ ಕಾಲದಲ್ಲಿ ಸುಮ್ಮನಿದ್ದು ಕೊನೆಗೆ “ಸಖಿಯೆ! ವೀರಮತಿ! ನಾವು ಇನ್ನೂ ಇಲ್ಲಿ ತಳುವಿದರೆ, ತಂದೆಯು ನಮ್ಮ ಮೇಲೆ ಕೋಸಿಸದೆ ಇರಲಾರದು” ಎಂದಳು.

ಇಬ್ಬರೂ ಪಲ್ಲಕ್ಕಿಯನ್ನು ಹತ್ತಿ, ಯುವಕನನ್ನು ಕರೆದರು. ಯುವಕನು “ನಾನು ಇದೇ ಸಂದರ್ಭದಲ್ಲಿ ಶತ್ರುವಿನ ಸೇನೆಯ ಏಸ್ತಾರವನ್ನೂ ರಚನೆಯನ್ನೂ ಹೊಂಚ ನೋಡಿ ಬರುವೆನು, ನೀವು ಬೇಗನೆ ಮುಂದು ಹೋಗಿರಿ” ಎಂದು ಹೇಳಿ ಕೋಟೆಯ ವರೆಗೆ ಅವರಿಬ್ಬರ ಮೈಗಾವಲಾಗಿ ಬಂದು, ಅಲ್ಲಿಯೇ ಹಿಂದುಳಿದನು.

ಕಥಾಸೂತ್ರವನ್ನು ಪಾಠಕಮಹಾಶಯರು ಸರಿಯಾಗಿ ಹಿಡಿಯುವಂತೆ ಇಲ್ಲಿ ಕೆಲವು ಪ್ರಸ್ತಾಪಗಳನ್ನು ಹೇಳಬೇಕಾಗುವುದು. ಕ್ರಿ. ಶಕೆಯ ೧೩ನೆಯ ಶತಮಾನದ ಆದಿಯ ವರೆಗೆ ದಕ್ಷಿಣ ಹಿಂದುಸ್ಥಾನದ ಮೇಲೆ ಮುಸಲ್ಮಾನರ ದೃಷ್ಟಿಯು ಬಿದ್ದಿರಲಿಲ್ಲ. ಪಠಾನ ಸುಲ್ತಾನರು ಉತ್ತರ ಹಿಂದುಸ್ಥಾನದಲ್ಲೇ ಸರ್ವಶಕ್ತರಾಗಿದ್ದರಲ್ಲದೆ, ದಕ್ಖಣದಲ್ಲಿನ ಚಿಕ್ಕ ದೊಡ್ಡ ರಾಜ್ಯಗಳು ಸ್ವಾತಂತ್ರ್ಯಸುಖವನ್ನು ಅನುಭವಿಸುತ್ತಲಿದ್ದುವು. ಸ್ವತಂತ್ರ ರಾಜ್ಯಗಳಲ್ಲಿ ಭಾವಿ ಮಹಾರಾಷ್ಟಸಾಮ್ರಾಜ್ಯದ ಅಂಕುರ ಸ್ವರೂಪವಾದ ಚಿಕ್ಕದೊಂದು ರಾಜ್ಯವಿತ್ತು. ದೇವಗಿರಿ ಎಂಬುದು ಇದರ ರಾಜಧಾನಿಯಾಗಿತ್ತು; ರಾಮದೇವ ಎಂಬವನು ರಾಜನಾಗಿದ್ದನು. ಈ ಮರಾಟಿ ರಾಜ್ಯವನ್ನು ಕುರಿತು ಜೀಯೂದ್ದೀನ್ ಬಾರ್ನಿ ಎಂಬ ತುರುಷ್ಕ ಇತಿಹಾಸಕಾರನು ಹೀಗೆಂದು ಬರೆದಿರುವನು- “ಈ ಮೊದಲು ಇಲ್ಲಿನ ಜನರು ಮುಸಲ್ಮಾನರನ್ನು ಕುರಿತು ಕೇಳಿರಲಿಲ್ಲ. ಮುಸಲ್ಮಾನ್ ಸೈನ್ಯವು ಇದಕ್ಕಿಂತ ಮೊದಲು ಮಹಾರಾಷ್ಟ್ರ ರಾಜ್ಯದಲ್ಲಿ ಪದಾರ್ಪಣ ಮಾಡಿರಲಿಲ್ಲ. ದೇವಗಿರಿ ನಗರವು ಚಿನ್ನ ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳಿಗೆ ಅವರು ಮನೆಯಾಗಿತ್ತು. ಈ ವರ್ಣನೆಯು ಆ ರಾಜ್ಯಕ್ಕೆ ಮಾತ್ರವೇ ಸಲ್ಲುತ್ತಿರಲಿಲ್ಲ. ವಿದೇಶಿಯರು ಭಾರತಭೂಮಿಯಲ್ಲಿ ಕಾಲಿಡುವ ಮೊದಲು ಹಿಂದುಸ್ಥಾನದ ಸ್ಥಿತಿಯನ್ನು ಪ್ರತಿ ಒಬ್ಬ ಇತಿಹಾಸಕಾರನು ಇಂತಹ ಮಾತುಗಳಲ್ಲಿಯೇ ವರ್ಣಿಸಿರುವನು. ಈ ಧನವೇ ವಿದೇಶಿಯರ ಮತ್ಸರದೃಷ್ಟಿಗೆ ಬಿದ್ದುದರಿ೦ದ, ದಿಲ್ಲಿಯ ಅಂದಿನ ಚಕ್ರವರ್ತಿಯಾದ ಜಲಾಲ್ ವುದ್ದೀನ್ ಖಿಲ್ಜಿಯ ಅಳಿಯನಾದ ಅಲ್ಲಾವುದ್ದೀನ್ ಖಿಲ್ಜಿಯು ಮಹಾ ಸೈನ್ಯದೊಡನೆ ಕ್ರಿ. ಶಕೆಯ ೧೨೯೪ರಲ್ಲಿ ದಖ್ಖಣಕ್ಕೆ ದಂಡೆತ್ತಿ ಹೋದನು. ಅಲ್ಲಾವುದ್ದೀನನು ಮಹಾಸೈನ್ಯದೊಡನೆ ದೇವಗಿರಿಯನ್ನು ಎರಡು ಸಲ ಮುತ್ತಿಗೆ ಹಾಕಿ ಹತಾಶನಾಗಿ, ಮೂರನೆಯ ಸಲ ಅದರ ಕೋಟೆಯ ಬಾಗಿಲಲ್ಲಿ ಕುಳಿತುಕೊಂಡಿದ್ದು, ಪ್ರಕೃತದಲ್ಲಿ ಜಾರುವಂತಿದ್ದನು.

ರಾಮದೇವ ರಾಜನಿಗೆ ಬಲಗೈ ಯಂತಿದ್ದು ಯುದ್ಧದಲ್ಲಿಯೂ ರಾಜ್ಯ ವಿಸ್ತರಣದಲ್ಲಿಯೂ ಅವನಿಗೆ ಸಹಾಯ ಮಾಡಿದ್ದ ಸರದಾರನೊಬ್ಬನು ಈ ಮುತ್ತಿಗೆಯ ಕಾಲದಲ್ಲಿ ಮಡಿದು ಹೋದನು. ಈ ಸರದಾರನು ತನ್ನ ಪುತ್ರೀರತ್ನ ವಾದ ವೀರಮತಿಯ ವಿವಾಹಕ್ಕೆ ಎಲ್ಲವನ್ನು ಸಿದ್ಧಪಡಿಸಿದ್ದನು. ವೀರಮತಿಯು ಕಾಳಿಕಾದೇವಸ್ಥಾನದ ಬಳಿಯಲ್ಲಿ ಯಾರೊಡನೆ ಮಾತನಾಡಿದಳೊ ಆ ಯುವಕನು ತನ್ನ ಪ್ರಾಣೇಶ್ವರನೆಂದು ಆರಿಸಲ್ಪಟ್ಟಿದ್ದನು. ಕೃಷ್ಣರಾಜನು ತನ್ನ ಅಳಿಯನಾಗುವುದು ವೀರಮತಿಯ ತಂದೆಗೆ ಏನು ಕಾರಣದಿಂದಲೋ ಮೊದಲು ಯೋಗ್ಯವಾಗಿ ತೋರಲಿಲ್ಲ. ಕೊನೆಗೆ ಮಗಳ ನಿರ್ಬಂಧದಿಂದ ಅವನು ಸಮ್ಮತಿ ಕೊಟ್ಟನು. ಆದರೆ ಪ್ರಕೃತದ ಅವನ ಆಕಾಲಿಕ ಮರಣದಿಂದ ವೀರಮತಿಯ ಲಗ್ನಕ್ಕೆ ವಿಘ್ನ ಬಂದಿತು. ಈಗ ವೀರಮತಿಯು ತಂದೆಯ ಮರಣಕ್ಕೆ ಪ್ರತಿಕಾರವನ್ನು ಮಾಡಿದ ಹೊರತು, ಲಗ್ನ ಮಂಟಪವನ್ನು ಸೇರುವುದಿಲ್ಲ ಎಂದು ನಿಶ್ಚಯ ಮಾಡಿದಳು. ಅದಕ್ಕೋಸ್ಕರವೇ ಅವಳು ಅರಸನ ಮಗಳಾದ ಗೌರಿಯೊಡನೆ ಕಾಳಿಕಾಪೂಜೆಗೆ ಹೋಗಿದ್ದಳೆಂದು ಪಾಠಕ ಮಹಾಶಯರು ಈಗ ತಾನೇ ತಿಳಿಯಬಹುದು.

“ಭಾರತಭೂಮಿಯ ಸೌಭಾಗ್ಯ ಭಂಡಾರವನ್ನು ಸೂರೆಗೊಂಡು, ತಮ್ಮ ವಂಶಸ್ಥರ ನಾಮವನ್ನೂ ತಮ್ಮ ಹೆಸರನ್ನೂ ಇತಿಹಾಸಪುಟದಲ್ಲಿ ಕಂಳಂಕಿತವಾಗಿ ಮಾಡಿದ ಮುಸಲ್ಮಾನರಲ್ಲಿ ಘಜಿಮಹಮ್ಮದ್, ಅಲ್ಲಾವುದ್ದೀನ್ ಖಿಲ್ಜಿ, ತೇಮೂರಲೇನ್ ಈ ಮೂವರಿಗಿಂತಲೂ ಅಧಮರು ಯಾರೂ ಇಲ್ಲ” ಎಂದು ಒಬ್ಬ ಬಂಗಾಳೆಯ ಚರಿತ್ರಕಾರನು ಹೇಳುವನು. ಈ ಮೂವರು ತಾವು ಕಾಲಿಟ್ಟ ಭೂಮಿಯಲ್ಲಿ ಆರ್ಯಧರ್ಮಾವಲಂಬಿಗಳಾದ ಆಬಾಲ ವೃದ್ಧರನ್ನು ಕೊಂದು, ಪವಿತ್ರವಾದ ದೇವಸ್ಥಾನಗಳ ಮು೦ದುಗಡೆಯಲ್ಲಿ ಪಶುರಕ್ತವನ್ನು ಬಸಿದು, ಆರಾಧಿತವಾದ ವಿಗ್ರಹಗಳನ್ನು ಮಸೀದಿಯ ಸೋಪಾನಗಳಿಗಾಗಿ ಹಾಸಿ, ನಂದನವನದಂತೆ ಇದ್ದ ಪ್ರದೇಶಗಳನ್ನು ಶ್ಮಶಾನದಂತೆ ಮಾಡಿ, ಹೊಟ್ಟೆಯೊಳಗಿದ್ದ ಹಾಲನ್ನು “ಒಂದೇ ಬಾರಿ ಸುರಿಗೊಂಬ” ತವಕದಿಂದ ಭಾರತಧೇನುವಿನ ಉದರವನ್ನು ಸೀಳಿಬಿಟ್ಟರು. ಇವರು ನಡೆದ ಮಾರ್ಗಗಳೆಲ್ಲಾ ಸಿಡಿಲು ಬಡಿದ ಬೆಟ್ಟ ದಾರಿಗಳಂತೆ ಆದುವು; ನುಗ್ಗಿದ ನಗರಗಳೆಲ್ಲಾ ಅಡವಿಯ ಗುಣಿಗಳಂತೆ ಆದುವು. ಇವರ “ದೀನ್! ದೀನ್ !” ಎಂಬ ರಣ ಕೋಲಾಹಲವನ್ನು ಕೇಳುತ್ತಲೇ ಹಳ್ಳಿ ಹಳ್ಳಿಗರು ತಾವು ತಿ೦ದುಳಿದ ಕೊಂಚ ಹಣವನ್ನು ಉಡಿಯಲ್ಲಿ ಕಟ್ಟಿಕೊಂಡು, ಹುಲಿ ಹಾವುಗಳಿದ್ದ ಅಡವಿಗಾದರೂ ಒಕ್ಕಲು ಹೋಗುತ್ತಿದ್ದರು. ರಾಜಯುವತಿಯರು ತಮ್ಮ ವೀರಪತಿಗಳನ್ನು ಇವರೊಡನೆ ಯುದ್ಧಕ್ಕೆ ಸಶಸ್ತ್ರರಾಗಿ ಕಳುಹಿಸಿ, ತಮ್ಮ ಪಾತಿವ್ರತ್ಯವನ್ನು ರಕ್ಷಿಸುವುದಕ್ಕೆ ನಗುನಗುತ್ತ ಚಿತಿಯನ್ನು ಏರುತ್ತಿದ್ದರು. ಇವರು ಮಾಡಿದ ಹಾಳು ಹಾವಳಿ ಎಷ್ಟೆಂದು “ತುರುಕರು ತುಳಿದಲ್ಲಿ ತರಕಾರಿ ಬೆಳೆಯದು” ಎಂಬ ಗಾದೆಯೇ ತೋರಿಸುವುದು. ಅದರೂ ಧರ್ಮಾಂಧರಾದ ಈ ಮೂವರಲ್ಲಿ ಇಷ್ಟೊಂದು ಪ್ರಭೇದವಿತ್ತು; ಅವರ ಕಾರ್ಯಗಳಲ್ಲಿ ಸಾಮ್ಯವಿದ್ದರೂ ಅವರ ಉದ್ದೇಶಗಳಲ್ಲಿ ಇಷ್ಟೊಂದು ತಾರತಮ್ಯವಿತ್ತು. ತೇಮೂರಲೇನನು ಅತ್ಯಂತ ಧನಾಪೇಕ್ಷೆಯುಳ್ಳವನು. ಆ ಆಸೆಯು ತೀರುವ ತನಕ ಅವನು ಹಸಿದ ಸಿಂಹ; ಹಸಿವು ಅಣಗುವುದಕ್ಕೆ ಕೈಗೆ ಸಿಕ್ಕಿದ ಕೊಳ್ಳೆಯನ್ನು ಹೊಡೆದುಬಿಡುತ್ತಲೇ ತೃಪ್ತಿಗೊಂಡು, ದೂರದ ಗವಿಗೆ ಹಿಂತಿರುಗಿದನು. ಘಜ್ನಿ ಮಹಮ್ಮದನು ಧನಾಪೇಕ್ಷೆಯೊಡನೆ ಧರ್ಮಾಂಧತೆಯನ್ನು ಬೆರಸಿದ್ದನು. ಹಿಂದೂ ಜನರ ಬೊಕ್ಕಸವನ್ನು ಬಿಚ್ಚಿ, ಅವರ ದ್ರವ್ಯಾಪಹಾರವನ್ನು ಮಾಡುವುದು ಮಾತ್ರವಲ್ಲ, ಅವರ ಆರ್ಯಧರ್ಮವನ್ನು ನಿರ್ಮೂಲಿಸಿ, ತನ್ನ ಮತವನ್ನು ಖಡ್ಡ ಮುಖದಿಂದ ಸ್ಥಾಪಿಸಬೇಕೆಂದು ಬದ್ಧ ಕಂಕಣನಾದನು. ಇದಕ್ಕೋಸ್ಕರವೇ ಈತನು ಹನ್ನೊಂದು ಸಲ ಹಿಂದುಸ್ಥಾನಕ್ಕೆ ದಂಡೆತ್ತಿ ಬಂದುದು ಸಾಲದೆ, ಕೊನೆಗೆ ಕ್ರಿ. ಶ. ೧೦೨೪ರಲ್ಲಿ ಗುಜರಾತಿನಲ್ಲಿದ್ದ ಸೋಮನಾಥ ದೇವಸ್ಥಾನವನ್ನು ಒಳನುಗ್ಗಿ, ವಿಗ್ರಹಗಳನ್ನು ಪುಡಿ ಪುಡಿಗೈದನು. ಆದರೂ 'ಪರದ್ರವ್ಯಾಪಹಾರಿ” “ಅನ್ಯಮತಭಂಜಕ' ಎಂಬ (ಮಹಾ+ಅಯೋಗ್ಯ?) ಬಿರುದುಗಳನ್ನು ತಾಳಿದಬಳಿಕ ತನ್ನ ದೇಶಕ್ಕೆನೇ ಹಿಂತೆರಳಿದನು. ಅಲ್ಲಾವುದ್ದೀನನಾದರೊ, ತನ್ನ ಹಾಳು ಜೀವಕಾಲದಲ್ಲಿ ಮೂರು ಉದ್ದೇಶಗಳನ್ನು ಕೊನೆಗಾಣಿಸುವುದಕ್ಕೆ ಯತ್ನಿಸಿದನು. ತೇಮೂರಲೇನನ ಧನಾಪೇಕ್ಷೆಯೂ, ಮಹಮ್ಮದನ ಮತಾಭಿಮಾನವೂ, ಮಾತ್ರವಲ್ಲ, ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ರಾಜದಂಡವನ್ನು ಬೀಸಬೇಕೆಂಬ ರಾಜ್ಯಾಕಾಂಕ್ಷೆಯೂ ಈತನ ಹೃದಯದಲ್ಲಿ ಬೇರೂರಿದ್ದುವು. ಈ ಅಭಿಲಾಷೆಯು ಹುಟ್ಟು ಬಂಜೆಗೆ ಮಕ್ಕಳಾಗಬೇಕೆಂಬ ಆಸೆಯಾಗಿರಲಿಲ್ಲ. ಅಲ್ಲಾವುದ್ದೀನನು ಮಹಾವೀರನಾಗಿದ್ದನು ಎಂಬುದೇನೋ ನಿಜ; ಆದರೆ ಬಾಲ್ಯದಿಂದಲೂ ನ್ಯಾಯನೀತಿಗಳ ಚಿಂತೆಯನ್ನು ಇವನು ಕಟ್ಟಿಕೊಳ್ಳದೆ ಇದ್ದುದರಿಂದ, ಕೆಲವು ಕಾಲ ಮಾತ್ರವೇ ಬಳೆಯುತ್ತ ಹೋದನು. ಹೊಕ್ಕುಳಿನ ಪ್ರಯೋಜನವನ್ನು ಅರಿತ ಈ ಕೃತಘ್ನನು ಯಾವ ಸೋಪಾನಗಳನ್ನು ಹತ್ತಿ ಶಿಖರಕ್ಕೆ ಏರಿದನೋ, ಅವುಗಳನ್ನೇ ಧಿಕ್ಕಾರದೃಷ್ಟಿಯಿಂದ ಮೇಲೆ ನಿಂತು ನೋಡುತ್ತಿದ್ದನು. ಯಾವ ಮರದ ಕೊಂಬೆಯ ಮೇಲೆ ತನ್ನ ಕೈ ಕೊಡಲಿಯನ್ನು ತಿಕ್ಕಿ ಹರಿತವಾಗಿ ಮಾಡಿದನೊ, ಆ ವೃದ್ಧವೃಕ್ಷವನ್ನೇ ಕಡಿದುಹಾಲಿಕ್ಕೆ ಇವನು ಹೇಳಿಲ್ಲ. ತನ್ನನ್ನು ಉನ್ನತ ಪದವಿಯಲ್ಲಿಟ್ಟ ತನ್ನ ಮಾವನಾದ ಜಲಾಲುದ್ದೀನ್ ಖಿಲ್ಜಿಯನ್ನು ರಾಜಭಿಲಾಷೆಯಿಂದ ಸಂಹರಿಸುವುದಕ್ಕೆ ಯಾವನು ಹಿಂಜರಿಯಲಿಲ್ಲವೋ, ಸಿಂಹಾಸನವನ್ನು ಹತ್ತುವುದಕ್ಕೆ ಹೋಗಬೇಕಾದ ಮಾರ್ಗದಲ್ಲಿದ್ದ ತನ್ನ ಬಂಧುಬಾಂಧವರನ್ನೂ ಗುರುಹಿರಿಯರನ್ನೂ ನೆಲ್ಲು ಹುಲ್ಲಿನಂತೆ ಕೊಟ್ಟು ಬಿಟ್ಟು ಯಾವನು ಮುಂದೆ ಗದ್ದುಗೆಯನ್ನು ಏರಿದನೋ, ಆ ವಿಶ್ವಾಸಘಾತುಕನೇ, ಆ ಪರಮಪಾಪಿಯೇ ಆತುಲ ಸೈನಿಕರೊಡನೆ ದೇವಗಿರಿಯ ಮುತ್ತಿಗೆಯನ್ನು ತೆಗೆದು ಓಡುವಂತಿದ್ದನು.

ಈ ಸಂಕಷ್ಟಕರವಾದ ಸಮಯವನ್ನು ಹೇಗೆ ಇದಿರಿಸಬೇಕೆಂಬ ವಿಷಯದಲ್ಲಿ ರಾಮದೇವರಾಜನು ತನ್ನ ಸ್ನೇಹಿತ ಸರದಾರರ ಆಲೋಚನೆಯನ್ನು ವಿಚಾರಿಸಿದನು. ರಾಮದೇವನ ಅಳಿಯನಾದ ಹರಪಾಲದೇವನು ಕೋಟೆಯನ್ನು ದಾಟಿ ಯುದ್ಧ ಕೊಡುವುದು ನ್ಯಾಯವಲ್ಲವೆಂದು ಹೇಳಿದನು. ಮಾತು ರಾಜನಿಗೆ ಸಮ್ಮತಿಯಾಯಿತು. “ಅಲ್ಲಾವುದ್ದೀನನು ಎರಡು ಸಲ ಸೋತು ಹೋದನು. ಮೂರನೆಯ ಸಲ ಹಾಕಿದ ಮುತ್ತಿಗೆಯನ್ನು ತಾನೇ ತೆಗೆದು ಈಗ ಪಲಾಯನ ಮಾಡುತ್ತಲಿರುವನು. ತಾನಾಗಿ ಹೀಯಾಳಿಸಿ ಶತ್ರುವನ್ನು ಕೆರಳಿಸಿ, ಹೋಗುವ ಮಾರಿಯನ್ನು ಕರೆದು, ನಮ್ಮ ಸೈನ್ಯವನ್ನು ಆಪತ್ತಿಗೆ ಗುರಿಮಾಡುವುದು ಶ್ರೇಯಸ್ಕರವಲ್ಲ, ಇದಲ್ಲದೆ ಅಲ್ಲಾದ್ದೀನನು ಯಾವ ಕಾರಣದಿಂದ ಪಲಾಯನ ಮಾಡುತ್ತಿರುವನೆಂದು ತಿಳಿಯಬೇಕು, ಅಭೇದ್ಯವಾದ ಕೋಟೆಯೊಳಗೆ ಸುರಕ್ಷಿತವಾಗಿದ್ದ ನಮ್ಮನ್ನು ಹಾವಾಡಿಗನು ಕೊಳಲೂದಿ ಬಿಲದಿಂದ ಹಾವನ್ನು ಹೊರಡಿಸುವಂತೆ - ಅವನು ಸೆಳೆಯಬೇಕೆಂಬ ಉಪಾಯಮಾಡಿದ್ದರೆ, ನಮ್ಮ ಸೈನ್ಯವೆಲ್ಲಾ ನಿರರ್ಥಕವಾಗಿ ಶತ್ರು ಹಸ್ತದಿಂದ ಸಂಹಾರವಾಗಬಹುದು” ಎಂದು ರಾಮದೇವನ ಅಳಿಯನ ಅಭಿಪ್ರಾಯವನ್ನು ಬಲಗೊಳಿಸಿದನು. ಈ ಮಾತು ಕೃಷ್ಣರಾಜನಿಗೆ ಯಾವ ಕಾರಣದಿಂದಲೂ ಸಮ್ಮತವಾಗಲಿಲ್ಲ, ಅವನು ಯುದ್ಧ ಮಾಡಲೇಬೇಕೆಂದು ನಿಂತುಬಿಟ್ಟನು. “ಅಲ್ಲಾವುದ್ದೀನನು ಈಗ ಹಿಮ್ಮೆಟ್ಟಿದರೂ ಮತ್ತೆ ಮತ್ತೆ ಬಾರದೆ ಇರಲಾರನು. ಯಾರೂ ಬಾರದೆ ಹೋದರೂ, ನಮ್ಮ ಸೈನ್ಯವನ್ನು ನಾನೊಬ್ಬನೇ ಕೋಟೆಯ ಹೊರಕ್ಕೆ ಕೊಂಡುಹೋಗಿ, ಶತ್ರುವು ಯಾವ ಉಪಾಯದಿಂದಲಾದರೂ ನನಗೆ ತಲೆಬಾಗಿಸುವಂತೆ ಮಾಡಿ, ದೇವಗಿರಿರಾಜ್ಯವು ನನ್ನನ್ನು ಚಿರಕಾಲ ಸ್ಮರಿಸುವಂತೆ ಮಾಡುವೆನು” ಎಂದು ಕೃಷ್ಣರಾಜನು ಹೇಳಿದನು. ಈ ಅಭಿಪ್ರಾಯಗಳಲ್ಲಿ ಯಾವುದನ್ನು ಸ್ವೀಕರಿಸಬೇಕೆಂದು ತಿಳಿಯದೆ, ರಾಜನು ವೀರಮತಿಯ ಮುಖವನ್ನು ದೃಷ್ಟಿಸಿದನು. ಪ್ರಾಚೀನ ಕಾಲದಲ್ಲಿ ಭಾರತಸ್ತ್ರೀಯರ ಸ್ವಾತಂತ್ರ್ಯಕ್ಕೆ ಯಾವುದೊಂದು ನಿರ್ಬಂಧವಿಲ್ಲದೆ ಇದ್ದುದರಿಂದ, ವೀರರಮಣಿಯರು ಇಂತಹ ಸಂದರ್ಭಗಳಲ್ಲಿ ತಮ್ಮ ಆಲೋಚನೆಯಿಂದಲೂ, ಆಯುಧದಿಂದಲೂ ರಾಜ್ಯಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು. ಧಾಮದೇವನ ಸಾಕೂತದೃಷ್ಟಿಯಿಂದ ತನ್ನನ್ನು ನೋಡುತ್ತಲೇ ವೀರಮತಿಯು ಉತ್ಸಾಹಿತಳಾಗಿ ಹೀಗೆಂದಳು:- “ನನ್ನ ಪ್ರಾಣ ವಲ್ಲಭನ ಅಭಿಪ್ರಾಯವು ವಿದಿತವಾಗಿದೆ. ಅಲ್ಲಾವುದ್ದೀನನನ್ನು ಈಗ ಜಾರಬಿಟ್ಟರೆ, ರಕ್ತದ ರುಚಿಹತ್ತಿದ ಹುಲಿಯು ಮತ್ತೆ ಮತ್ತೆ ಗ್ರಾಮಗಳಿಗೆ ಬಂದು, ಹಳ್ಳಿಗರನ್ನು ಹೆದರಿಸುವಂತೆ; ಅವನು ಮರಳಿಮರಳಿ ಇಲ್ಲಿಗೆ ಬರುವನಲ್ಲವೆ? ಇದಲ್ಲದೆ ನನ್ನ ಜನ್ಮದಾತಾರನಾದ ತಂದೆಯು ಶತ್ರುವಿಂದ ರಣರಂಗದಲ್ಲಿ ಬಿದ್ದು ಹೋದನೆಂಬ ದುಃಖಾಗ್ನಿಯು ನನ್ನ ಹೃದಯವನ್ನು ಪದೇಪದೇ ದಹಿಸುತ್ತಿರುವುದು. ಶತ್ರುವಿನ ರಕ್ತ ಸೇಚನದಿಂದ ಈ ಅಗ್ನಿಯು ಶಾಂತವಾಗಬೇಕಾದುದರಿಂದ, ನನ್ನ ಪ್ರಾಣೇಶ್ವರನು ಸೈನ್ಯದ ವಿಶೇಷ ಭಾಗವನ್ನು ಈ ರಾತ್ರಿ ಕೋಟೆಯ ಹೊರಕ್ಕೆ ಕೊಂಡುಹೋಗುವಂತೆ ಆಪ್ಪಣೆ ಯಾಗಬೇಕೆಂದು ಪ್ರಾರ್ಥಿಸುವೆನು. ಇವನ ಸಹಾಯಕಳಾಗಿ ಹೋಗಲಿಕ್ಕೆ ನನಗೂ ಅಜ್ಞೆಯಾಗಬೇಕೆಂದು ವಿಜ್ಞಾಪಿಸುವೆನು.” ರಾಮ ದೇವನು ಮೊದಲಿನ ಎರಡು ಯುದ್ಧಗಳಲ್ಲಿಯೂ ಕೃಷ್ಣರಾಜನ ಸಾಹಸವನ್ನೂ ಚಾತುರ್ಯವನ್ನೂ ಕಣ್ಣಾರೆ ಕಂಡಿದ್ದುದರಿಂದ, ಕೃಷ್ಣರಾಜನು ಸೇನೆಯ ಹೆಚ್ಚಿನ ಭಾಗವನ್ನು ಆ ರಾತ್ರಿ ಹೊರಗೆ ಕೊಂಡುಹೋಗಿ ಯುದ್ಧ ಮಾಡುವುದಕ್ಕೆ ರಾಮವೇವನು ಸಮ್ಮತಿಸಿ, ತಾನು ಅವನೊಡನೆ ಹೊರಡಲಿಕ್ಕೆ ಸಿದ್ಧನಾದನು. ಆದರೆ ವೀರಮತಿಯು ಸೈನ್ಯದೊಡನೆ ಹೊರಕ್ಕೆ ಹೋಗುವುದು ಯೋಗ್ಯವಲ್ಲವೆಂದು ಬಹುಪಕ್ಷದವರ ಮತವಾಯಿತು.

ದೇವಗಿರಿ ದುರ್ಗವು ಪುರಾತನ ಕಾಲದಲ್ಲಿ ಮಹಾಪ್ರಖ್ಯಾತಿಗೊಂಡಿತು. ಕಡಲು ಮಟ್ಟಕ್ಕಿಂತ ೬೪೦ ಅಡಿ ಎತ್ತರಕ್ಕೆ ಏರಿದ ಏಕಾಕಿಯಾದ ಪರ್ವತದ ಮೇಲೆ ಅದು ಇದ್ದಿತ್ತು. ಈ ಪರ್ವತವು ಸೂಚ್ಯಾಕಾರವಾಗಿದ್ದು (cone-shaped) ಸುತ್ತಲೂ ಪ್ರಪಾತಮಯವಾದ ಬಂಡೆಗಳಿಂದ ಭದ್ರವಾಗಿತ್ತು ಲಂಬಾಯಮಾನವಾದ ಪ್ರಾಕಾರಗಳು, ಉನ್ನತವಾದ ತೆನೆಗಳು, ವಿಸ್ತಾರವಾದ ಪರಿಗೆಯು ಕೋಟೆಯನ್ನು ಬಲಪಡಿಸಿದ್ದುವು. ದೂರದೃಷ್ಟಿಗೆ ಈ ದುರ್ಗವು ಒಂದೇಯಾಗಿ ತೋರಿದ್ದರೂ, ಇದರಲ್ಲಿ ಒಂದರ ಳಗೊಂದಾಗಿ ಮೂರು ಕೋಟೆಗಳಿದ್ದುವು. ದುರ್ಗದ ಅಡಿಯಲ್ಲಿ ದೇವಗಿರಿ ನಗರವು ಹುದುಗಿಕೊಂಡು ಭದ್ರವಾಗಿತ್ತು. ಇಂತಹ ಕೋಟೆಯನ್ನು ಶತ್ರುವು ಮಹಾ ಸೈನ್ಯದೊಡನೆ ೧೦ ವರ್ಷಗಳ ವರೆಗೆ ಮುತ್ತಿದರೂ ರಾಮರಾಜನು ಸುಖವಾಗಿಯೂ ನಿರಾಂತಕವಾಗಿಯೂ ನಿದ್ದೆ ಹೋಗಬಹುದಿತ್ತು. ಮುಸಲ್ಮಾನರ ಸೇನಾ ಸಮುದ್ರವು ಉತ್ತರ ಹಿಂದುಸ್ಥಾನದ ಮೇರೆಯನ್ನು ಅತಿಕ್ರಮಿಸಿ, ಚಿರಕಾಲ ದೇವಗಿರಿಯ ಪ್ರಾಕಾರಗಳ ಮೇಲೆ ಬಂದು ಬಡಿದರೂ, ಅದರ ಸ್ವಾತಂತ್ರ್ಯವು ಮುಳುಗಿ ನಾಶವಾಗುತ್ತಿದ್ದಿಲ್ಲ. ವಿಧಾತೃನು ಮಾತ್ರ ಹಾಗೆ ಎಣಿಸಿರಲಿಲ್ಲ.

ಮಧ್ಯರಾತ್ರಿ ಅಷ್ಟಮಿಯ ಚಂದ್ರನು ದುಃಖದಿಂದ ಅಸ್ತಮಿಸುತ್ತಲಿದ್ದನು. ಅಂಧಕಾರವು ಮೆಲ್ಲಮೆಲ್ಲನೆ ದೇವಗಿರಿಯ ಹೊರವಳಯವನ್ನೆಲ್ಲಾ ಆಕ್ರಮಿಸಿಕೊಳ್ಳತೊಡಗಿತು. ದೇವಗಿರಿಯ ಪಾಳಯದಲ್ಲಿ ಶಾವಲುಗಾರರು ದೀವಟಿಗೆಗಳನ್ನು ಹಿಡಿದುಕೊಂಡು ಅತ್ತಿತ್ತ ತಿರುಗುತ್ತಿದ್ದರು. ವೀರರು ಶಸ್ತ್ರ ಕವಚಗಳನ್ನು ತೊಟ್ಟುಕೊಳ್ಳುವ ಝಣತ್ಕಾರ, ಯುದ್ಧಾಶ್ವಗಳ ಹೇಷಧ್ವನಿ, ಭಟರ ಕಲಕಲ - ಇವೆಲ್ಲಾ ನಿಶ್ಯಬ್ದವಾದ ರಾತ್ರಿಯ ಕರ್ಣವನ್ನು ಭೇದಿಸಿ ಹೋಗುವಂತಿದ್ದುವು. ರಾಮದೇವನು ತಾನೇ ಪಾಳಯದಲ್ಲಿ ಸಂಚರಿಸುತ್ತ, ಪಾತಃಕಾಲದ ಯುದ್ಧಕ್ಕೆ ಸೈನಿಕರಲ್ಲಿ ಭೀತರಾದವರನ್ನು ಉತ್ಸಾಹಗೊಳಿಸುವ ಶತ್ರುಚಲನೆಯನ್ನು ತಿಳಿಯುವುದಕ್ಕೆ ನೆಲಕ್ಕೆ ಒರಗಿ, ಕಿವಿ ಕೊಡುತಿದ್ದನು. ಅಲ್ಲಾವುದ್ದೀನನ ಪಾಳಯವು ದುರ್ಗದಿಂದ ೧೦ ಮೈಲು ದೂರವಿದ್ದುದರಿಂದ ಶತ್ರುಚಲನೆಗಳೇನೂ ತೋರುತ್ತಿರಲಿಲ್ಲ. ಕೃಷ್ಣರಾಜನು ತಾನೇ ಮುಂದು ಹೋಗಿ ಪರೀಕ್ಷಿಸುವೆನೆಂದು ಹೇಳಿ ಕೋಟೆಯ ಗೋಡೆಯನ್ನು ಹತ್ತಲು ಹೋದನು.

ಅಲ್ಲಾವುದ್ದೀನನ ಸೈನಿಕರೆಲ್ಲರು ಗಾಂಜಾವಿನ ಬಲದಿಂದ ಸುಖವಾಗಿ ನಿದ್ದೆ ಹೋಗುತ್ತಿದ್ದರು. ಅಲ್ಲಲ್ಲಿ ಒಬ್ಬಿಬ್ಬರು ಕಾವಲುಗಾರರು ಪಹರೇ ಮಾಡುತ್ತಿದ್ದರು. ಇಷ್ಟರಲ್ಲಿ ಅಲ್ಲಾವುದ್ದೀನನ ಪಾಳಯದಲ್ಲಿ ಒಂದು ದೀಪವನ್ನು ಯಾರೋ ಹಚ್ಚಿದರು. ಡೇರೆಯ ಒಳಗೆ ಒಬ್ಬ ಯುವಕನು ಏನನ್ನೂ ಆಲೋಚಿಸುತ್ತ ಕುಳಿತುಕೊಂಡಿದ್ದನು. ಬಳಿಕ ಹೊರಗೆ ಬಂದು ಯಾರನ್ನೋ ಹುಡುಕಿದಂತೆ ಅತ್ತಿತ್ತ ನೋಡಿಕೊಂಡು ನಿಂತನು. ಶೀತಲವಾದ ಗಾಳಿ ಬೀಸುತ್ತಿತ್ತು. ಆಕಾಶದಲ್ಲಿ “ಸಹಸ್ರ ರತ್ನಗಳು” ಮಿನುಗುತ್ತಿದ್ದುವು. ಯುವಕನು ಪುನಃ ಡೇರೆಯೊಳಗೆ ಹೋಗಿ ಕುಳಿತುಕೊಂಡನು. ಯುವಕನ ಹೆಸರು ಮಾಲಿಕ್ ನಾಯಬ್ ಕಾಫರ್. ಹಿಂದುಸ್ಥಾನದ ಇತಿಹಾಸದಲ್ಲಿ ಈ ಹೆಸರೇ ಮಾಲಿಕ್ ಕಾಫರ್ ಎಂದು ಸಂಕ್ಷೇಪವಾಗಿರುವುದು. ಈ ಮಾಲಿಕ್ ಕಾಫರನು ಮೊತ್ತಮೊದಲು ಅಲ್ಲಾವುದ್ದೀನನ ಗುಲಾಮನಾಗಿದ್ದು, ಅವನ ದಯೆಯಿಂದಲೇ ಸೈನ್ಯದಲ್ಲಿ ಉಚ್ಚ ಪದವಿಯನ್ನು ಪಡೆದಿದ್ದನು. ಮುಸಲ್ಮಾನರ ದುರ್ಗುಣಗಳೆಲ್ಲಾ ಇವನಲ್ಲಿ ಹಾಸು ಹೊಕ್ಕಾಗಿದ್ದುವು. ಅಲ್ಲಾವುದ್ದೀನನು ಈ ಪಾಪಿಯಲ್ಲಿ ಹೆಚ್ಚಾದ ವಿಶ್ವಾಸವಿಟ್ಟಿದ್ದನು; ಅವನನ್ನೇ ತನ್ನ ಸೇನಾಧಿಪತಿಯನ್ನಾಗಿ ಮಾಡಿದ್ದನು; ಅವನ ವಚನವನ್ನು ಕುರಾನಿನಂತೆ ಪಾಲಿಸುತ್ತಿದ್ದನು. ಅಲ್ಲಾವುದ್ದೀನನ್ನು ರಾಜ್ಯಾಭಿಲಾಷೆಯಿಂದ ಲೋಕಾಂತರಕ್ಕೆ ಕಳುಹಿಸಿದ ವಿಶ್ವಾಸಘಾತಕನು ಈತನೇ. ಮಾಲಿಕ್ ಕಾಫರನು ಹೊರಕ್ಕೆ ಬಂದು ಅಲ್ಲಲ್ಲಿ ವಿಹರಿಸುತ್ತಿದ್ದನು. ರಾತ್ರಿಯು ಮೆಲ್ಲಮೆಲ್ಲನೆ ಸರಿಯುತ್ತ ಬಂದಿತು. ಮುಸಲ್ಮಾನರ ಸೈನ್ಯದಲ್ಲಿ ಒಬ್ಬಿಬ್ಬರು ಎಚ್ಚರವಾಗುತ್ತಿದ್ದರು. ಮಾಲಿಕ್ ಕಾಫರನು ಡೇರೆಯ ಸಮೀಪದಲ್ಲಿದ್ದ ಮರದ ತೋಪಿನ ಬಳಿಯಲ್ಲಿ ಬಂದು ನಿಂತನು. ಅಷ್ಟರಲ್ಲಿ ಅವನ ಇದಿರಿಗೆ ಯಾರೋ ಒಬ್ಬನು ಕಾಲ್ನಡೆಯಾಗಿ ಬರುತ್ತಿದ್ದನು. ಮಾಲಿಕ್ ಕಾಫರನು ಆಗಂತುಕನನ್ನು *[೧] ನೋಡಿ ಸಲಾಂ ಮಾಡಿದನು.

ಮಾಲಿಕ್ ಕಾಫರನು ಆಗುಂತುಕನ ಬಳಿಗೆ ಬಂದು, “ನಿನ್ನೊಡನೆ ಮತ್ತಾರೂ ಬಂದಿದ್ದರೇ?” ಎಂದನು.

ಆಗಂತುಕನು ಸುತ್ತಲೂ ನೋಡುತ್ತ, “ಇಲ್ಲ. ನಾನು ಬಂದುದು ಯಾರೂ ತಿಳಿಯಲು ಕಾರಣವಿಲ್ಲ” ಎಂದನು.

ಮಾಲಿಕ್ ಕಾಫರ್:- “ನಿನ್ನ ಹಿಂದೆಯೇ ಏನೋ ದೂರದಲ್ಲಿ ನಿನ್ನ ನೆರಳಂತೆ ತೆವೀರಿತು. ಇಷ್ಟು ವಿಳಂಬವೇಕಾಯಿತು?”

ಆಗಂತುಕ:- “ಮಧ್ಯಾಹ್ನದಲ್ಲಿ ನಿನ್ನನ್ನು ನೋಡಿದ ಬಳಿಕ ಅರಮನೆಯ ಕಾರ್ಯಗೌರವದಿಂದ ತಳುವಿದೆನು.” ಮಾಲಿಕ್ ಕಾಫರ್:- “ನೀನು ಹಗಲು ನನಗೆ ಮಾತು ಕೊಟ್ಟಂತೆ. ದೇವಗಿರಿಯ ಸೈನ್ಯವನ್ನು ಹೊರಕ್ಕೆ ಇಳಿಸಿರುವೆಯ?”

ಎಲೆಯ ಮರಮರ ಶಬ್ದದಂತೆ ಹತ್ತಿರದಲ್ಲಿ ಕೇಳಿಸಿತು.

ಆಗಂತುಕ: - “ಕೊಟ್ಟ ಮಾತನ್ನು ಮರೆಯಲಾರೆನು, ಅರಮನೆಯನ್ನು ಕಾಯುವಷ್ಟು ಕೈ ತುಂಬಾ ಸೈನಿಕರನ್ನು ಹಿಂದೆ ಬಿಟ್ಟು, ಮಿಕ್ಕ ಸೈನ್ಯವನ್ನು ಹೊರಕ್ಕೆ ಹೊರಡಿಸಿರುವೆನು.”

ಮಾಲಿಕ್ ಕಾಫರ್:- “ಹಾಗಾದರೆ ನಮ್ಮ ಸೈನ್ಯವು ಒಳನುಗ್ಗುವುದಕ್ಕೆ ಇದೇ ಅವಕಾಶವಲ್ಲವೇ? ರಹಸ್ಯಮಾರ್ಗವು ಯಾವುದು?"

ಆಗಂತುಕ:- ಇದೇ ಸಮಯ ನಾನು ಈ ಮಧ್ಯಾಹ್ನದಲ್ಲಿ ನಿನ್ನೊಡನೆ ಯಾವ ಸ್ಥಳದಲ್ಲಿ ಸಂಭಾಷಣೆ ಮಾಡಿದೆನೋ ಆ ಸ್ಥಳದಿಂದ ಎಡಕ್ಕೆ ತಿರುಗಿದರೆ-

ಮಾಲಿಕ್ ಕಾಫರ್‌:- "ಎಡಕ್ಕೆ ತಿರುಗಿದರೆ ಹಾಳುಗುಡಿಯೊಂದು ತೋರುವುದು.”

ಆಗುಂತುಕ:- “ಸರಿ, ಆ ಕಾಳಿಕಾ ದೇವಸ್ಥಾನಕ್ಕೆ ಇದಿರಾದ ಹಾದಿಯನ್ನು ಹಿಡಿದುಹೋದರೆ, ಅರಮನೆಯ ಹಿಂದುಗಡೆಯಲ್ಲಿ ಇಳಿಯಬಹುದು.”

ಮಾಲಿಕ್ ಕಾಫರ್:-- "ಅಲ್ಲಿ ಸೈನ್ಯವೆಷ್ಟಿರುವುದು?”

ಅಷ್ಟರಲ್ಲಿ ಇಬ್ಬರೂ ಸುತ್ತು ಮುತ್ತಲು ನೋಡಿದರು. ಯಾರೊಬ್ಬರ ಸುಳಿವು ತೋರುತ್ತಿರಲಿಲ್ಲ. ಗಾಳಿಯ ಶಬ್ದವೆಂದು ಸುಮ್ಮನಾದರು. ಪುನಃ ಕಣ್ಣೆತ್ತಿ ನೋಡಿದರು. ವಾಯುವಿನ ಹಿತ್ತೊಲದಿಂದ ಉಂಟಾದ ಎಲೆಗಳ ಮರಮರ ಶಬ್ದದಲ್ಲಿ ಅವರಿಗೆ ಏನೊಂದೂ ಕೇಳಿಸಲಿಲ್ಲ.

ಆಗಂತುಕ:- “ ಅಲ್ಲಿ ಬೇಕೆಂತಲೇ ಮೂವರು ಸಿಪಾಯರನ್ನು ಇಟ್ಟಿರುವೆನು.”

ಮಾಲಿಕ್ ಕಾಫರ್:- “ಅಲ್ಲಾವುದ್ದೀನರು ನೀನು ಮಾಡಿದ ಉಪಕಾರವನ್ನು ಮರೆಯಲಾರರು. ಯಾವ ಉಪಾಯದಿಂದಲಾದರೂ ಕೋಟೆಯನ್ನು ಜಯಿಸಿದ ಹೊರತು, ತಾನು ಅನ್ನಾಹಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ನಿನ್ನೆಯಿಂದ ಹಟಹಿಡಿದಿರುವರು. ರಾಮದೇವನ ಸ್ಥಾನವನ್ನು ನೀನೇ ಅಲಂಕರಿಸುವೆ ಎಂದು ತಿಳಿ."
ಆಗಂತುಕ:- "ರಾಜನಾದ ಬಳಿಕ 'ನಾನು ವಿವಾಹವಾಗಬೇಕೆಂದು ಯೋಚಿಸಿರುವೆನು. ಅಲ್ಲಾವುದ್ದೀನನ ಸಮಕ್ಷಮದಲ್ಲಿಯೇ ನಾನು ವೀರಮತಿಯನ್ನು ವಿವಾಹವಾಗಬೇಕೆಂದು ನನ್ನ ಆಸೆ.”

ಆಗ ಗಾಳಿಯು ಪುನಃ “ಚಿ! ಚಿ!” ಎಂಬ ಸ್ವರದಿಂದ ಬೀಸಿತು. ಒಂದೊಂದು ಹಕ್ಕಿಯು ಮರದಲ್ಲಿ ಗೂಡಿನಿಂದ “ಧಿಕ್! ಧಿಕ್!” ಎಂದು ಆರಚಿತು. ಮಾಲಿಕ್ ಕಾಫರನು ಆಗಂತುಕನ ಹಸ್ತವನ್ನು ಹಿಡಿದುಕೊಂಡು, “ಕೃಷ್ಣರಾಜ್! ಇನ್ನು ಮುಂದೆ ನೀನೇ ದೇವಗಿರಿಯ ರಾಜನೆಂದು ತಿಳಿ. ನೀನು ಇಲ್ಲಿ ಡೇರೆಯಲ್ಲಿ ತಳುವಿದೆರೆ, ನಾನು ಅಲ್ಲಾವುದ್ದೀನರಿಗೆ ನಿನ್ನನು ಮನ್ನಣೆಗೊಳಿಸಬೇಕೆಂದು ಹೇಳುವೆನು. ವಿಳಂಬವಾದರೆ ಕಾರ್ಯವು ಕೆಟ್ಟು ಹೋಗುವುದು. ಕುದುರೆಯನ್ನು ಹತ್ತಿ ನಾನು ಕೋಟೆಯನ್ನು ಬೆಳಗಾಗುವಷ್ಟರಲ್ಲಿ ಒಳನುಗ್ಗಬೇಕು. ಇಕೋ ಕೋಳಿ ಕೂಗಿತು!” ಎಂದು ಹೇಳಿ ಕುದುರೆಯ ಮೇಲೆ ಹತ್ತಿ ಅದೃಶ್ಯನಾದನು.

ಆಗಂತುಕನು ಮನಸ್ಸಿನಲ್ಲಿ ಏನನ್ನೋ ಯೋಚಿಸುತ್ತ ಮಾಲಿಕ್ನು ಇದ್ದ ಡೇರೆಯ ಕಡೆಗೆ ಮೆಲ್ಲಮೆಲ್ಲನೆ ಕಾಲಿಡುತ್ತಲಿದ್ದನು. ಅಷ್ಟರಲ್ಲಿ "ಹಾ! ದುಷ್ಟಾ” ಎಂಬೊಂದು ಸ್ತ್ರೀ ಧ್ವನಿಯು ಅವನ ಕಿವಿಯನ್ನೂ ಎದೆಯನ್ನೂ ಸೀಳಿಕೊಂಡು ಹೋಯಿತು. ಆಗಂತುಕನು ಪುನಃ ತಿರುಗಿದನು. ಕಣ್ಣು ಮುಚ್ಚುವಷ್ಟರಲ್ಲಿ ಮುಸುಕಿಟ್ಟು, ಒಂದು ವ್ಯಕ್ತಿಯು ಅವನ ಸಮ್ಮುಖಕ್ಕೆ ಹಾರಿಬಂದಿತು. ಆಗಂತುಕನು ತನ್ನ ಕಟಿಯಲ್ಲಿದ್ದ ಕಠಾರಿಯನ್ನು ಈಚೆಗೆ ಸೆಳೆಯುವಷ್ಟರಲ್ಲಿ ವ್ಯಕ್ತಿಯ ಕೈಯಲ್ಲಿದ್ದ ಭರ್ಚಿಯು ಅವನ ಹೊಟ್ಟೆಯನ್ನು ಹಾಯ್ದುಕೊಂಡು ಅವನ ಸೊಂಟದ ಕಠಾರಿಯನ್ನು ಝಣಕ್ಕರಿಸಿತು. ಆಗಂತುಕ ಘಾತವನ್ನು ತಡೆಯಲಾರದೆ, ನೆಲಕ್ಕೆ ಒರಗಿದನು.

ಕೃಷ್ಣರಾಜನು ಕರ್ಕಶವಾದ ಭೂಮಿಯ ಮೇಲೆ ಬಿದ್ದು ಬಿಟ್ಟನು. ಅವನ ದೇಹದ ರಕ್ತದಿಂದ ನೆಲವೇ ಹರಿದುಹೋಗುವಂತಿತ್ತು. ಕೃಷ್ಣರಾಜನ ಪ್ರಾಣವು ಮೆಲ್ಲಮೆಲ್ಲನೆ ದೇಹವನ್ನು ಬಿಟ್ಟು ಹೋಗುತ್ತಿತ್ತು. ಅವನು ಅಸ್ಫುಟ ಸ್ವರದಿಂದ, "ಪ್ರಿಯೇ! ನನ್ನ ಹತ್ಯವನ್ನು ಮಾಡುವುದಕ್ಕೆಂದು ಇಲ್ಲಿಗೆ ಬಂದೆಯೇ?” ಎಂದು ಕೇಳಿದನು.

ವೀರಮತಿಯು ಉದ್ರೇಕಿತಳಾಗಿ "ಯಾವನು ಜನ್ಮಭೂಮಿಯ ಹತ್ಯವನ್ನು ಮಾಡುವನೋ ಅವನು ನಿನ್ನ ಗತಿಗೆ ಹೋಗಲಿ” ಎಂದಳು
ಕೃಷ್ಣರಾಜ- “ಸಖಿ! ವೀರಮತಿ! ನನ್ನನ್ನು! ನೀನು ಪ್ರೀತಿಸಲಿಲ್ಲವೇ?”

ವೀರಮತಿಯ ಉತ್ಸಾಹಿತವಾದ ಹೃದಯವು ಈ ಪ್ರಣಯಪ್ರಸ್ತಾಪದಿಂದ ಫಕ್ಕನೆ ಪರಿವರ್ತಿತವಾಯಿತು. ಕೃಷ್ಣರಾಜನ ಮಾಲಿಕ್ಕಾಫರರ ಗುಪ್ತ ಸಂಭಾಷಣದಿಂದ ಉದ್ರೇಕಿತವಾದ ಅವಳ ಸ್ವದೇಶಾನುರಾಗವು ಸರ್ವ ದೇಹವನ್ನು ಆವರಿಸಿಕೊಂಡು ಅವಳ ಹಸ್ತದಿಂದ ಈ ಘೋರಕೃತ್ಯವನ್ನು ಹೇಗೆ ನಡೆಯಿಸಿತೋ, ಹಾಗೆಯೇ ಆ ಮನೋಭಾವವು ಶಾಂತವಾಗುತ್ತಲೇ ಪ್ರಾಣವಲ್ಲಭನ ಅಂತಿಮ ದರ್ಶನದಿಂದ ಅವಳ ಮನಸ್ಸನ್ನು ಆಕ್ರಮಿಸಿ, ತಾನೇ ತಾನಾಗಿ ನಿಂತ ಪ್ರಣಯವು ಅವಳನ್ನು ದುಃಖಕ್ಕೆ ಗುರಿಮಾಡಿತು. ಕೃಷ್ಣ ರಾಜನು ಉಜ್ವಲ ಮುಖದಿಂದ “ಪ್ರಾಣೇಶ್ವರೀ! ರಾಜ್ಯ—— ಬೇಡ—— ನಿನ್ನ—— ಚುಂ——ಬ——ನ——ನಾನು——ಸಾ——ಯು” ಎಂದನು. ಅವನ ಕಡೆಯ ಮಾತುಗಳು ನಾಲಗೆಯಲ್ಲೇ ಉಳಿದುಹೋದುವು.

ವೀರಮತಿಯು ಆ ಮೃತದೇಹವನ್ನು ಚುಂಬಿಸಿದಳು; ಮತ್ತೊಮ್ಮೆ ಚುಂಬಿಸಿದಳು; ಪುನಃ ಚುಂಬಿಸಿದಳು. ಅಯ್ಯೋ! ವಿಧಾತೃನು ಈ ಸುಂದರವಾದ ದೇಹದಲ್ಲಿ ಕಪಟವನ್ನು ಏಕೆ ಅಡಗಿಸಿಟ್ಟನು? ಮಧುರ ಪುಷ್ಪದಲ್ಲಿ ಕ್ರಿಮಿ ಇರುವುದೆಂದು ಹೇಳುವರಲ್ಲವೆ? ಆದಕಾರಣದಿಂದಲೇ ಅದು ಸುಂದರ ಪುಷ್ಪವೆನಿಸುವುದೇ? ಪ್ರಿಯನೇ! ನಿನ್ನ ದೇಹವು ಚಂದ್ರನಂತೆ ಶೀತಲವಾಯಿ ತಲ್ಲಾ ! ಚಂದ್ರನ ಕಳಂಕು ಗೋಚರವಾಗಿದೆ. ನಿನ್ನ ಕಳಂಕವನ್ನು ನೀನು ಮರೆಗೊಳಿಸಿ, ನನಗೆ ಈ ದುರ್ಗತಿಯನ್ನು ತಂದುಬಿಟ್ಟಿಯಲ್ಲ! ನಿನ್ನ ಸ್ಥಿತಿಯನ್ನು ನೋಡಲಾರದೆ “ಆಕಾಶದೀಪಗಳು” ಕಣ್ಮುಚ್ಚಿದುವು. ನನ್ನ ಕೈ ದೀಪವೇ! ನಿನ್ನ ಜೀವಜ್ಯೋತಿಯನ್ನು ನಾನು ನಂದಿಸಿದೆನಲ್ಲಾ! ಮರಳಿ ಇದನ್ನು ಹಚ್ಚುವುದಕ್ಕೆ ನಾನು ಬಲ್ಲೆನೆ? ಮುಸಲ್ಮಾನರಿಗೆ ಸಿಕ್ಕಿದರೇನು? ಸರಿ! ಇನ್ನು ವಿಳಂಬ ಮಾಡಲಾರೆನು. ನಿನ್ನನ್ನು ನಾನು ಬಿಟ್ಟಿರಲಾರೆನು. ಸರಿ! ಸರಿ! ಮುಸಲ್ಮಾನರು ಕೋಟೆ ನುಗ್ಗಿದರು!” ಹೀಗೆಂದು ಪ್ರಲಾಪಿಸುತ್ತಾ ವೀರಮತಿಯು ಪುನಃ “ನನ್ನ ಪ್ರಾಣವಲ್ಲಭನೇ! ಈ ಕಾಠಾರಿಯು ನಿನ್ನನ್ನು ಎಷ್ಟು ತಿವಿಯಿತೋ ನಾನು ಇದನ್ನು ನೋಡುವೆನು” ಎಂದು ಹೇಳಿ ಕಠಾರಿಯನ್ನು ಮೃತದೇಹದಿಂದ ಈಚೆಗೆ ಸೆಳೆದಳು. “ಶರಪುಷ್ಪವೇ! ನಿನ್ನನ್ನು ಇನ್ನೊಮ್ಮೆ ಆಘ್ರಾಣಿಸುವೆನು” ಎಂದು ಹೇಳಿ ಪುನಃ ಪುನಃ ಚುಂಬಿಸಿ “ಕೃಷ್ಣ ! ಕೃಷ್ಣ! ಕೃಷ್ಣ!” ಎಂದು ಉಚ್ಚರಿಸುತ್ತ, ಕಠಾರಿಯ ಹತಿಯಿಂದ ಆಹತಳಾಗಿ ಕೃಷ್ಣರಾಜನ ದೇಹದ ಮೇಲೆ ಬಿದ್ದು ಪ್ರಾಣವನ್ನು ತೊರೆದಳು.

*****

ಇಲ್ಲಿ ಇನ್ನೂ ಹೇಳುವುದೇನೂ ಉಳಿಯಲಿಲ್ಲ. ಅಲ್ಲಾವುದ್ದೀನನು ಮಾಲಿಕ್ ಕಾಫರನ ಮುಖಾಂತರವಾಗಿ ಮಾಡಿದ ಭೇದೋಪಾಯವು ಫಲಿಸಿತು. ದೇವಗಿರಿಯ ದುರ್ಗವು ಅಲ್ಲಾವುದ್ದೀನನ ವಶವಾಯಿತು. ಮಿಕ್ಕ ಅಂಶವೆಲ್ಲಾ ಹಿಂದೂಸ್ಥಾನದ ಇತಿಹಾಸದಲ್ಲಿ ವಿಸ್ತರಿತವಾಗಿದೆ.


ಶೈಲಿನಿ.

ಚಂದ್ರನು ಗಗನಾಂಗಣದಲ್ಲಿ ಮೆಲ್ಲಮೆಲ್ಲನೆ ಸಂಚರಿಸುತ್ತಿದ್ದನು; ಒಮ್ಮೆ ಸಾಂದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸಂಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ ಕೋಟೆಯ ಹಾಳುಕೊಂಪೆಯ ಮೇಲೆ ಬಿದ್ದು ನಗುತ್ತಲಿತ್ತು; ನವೀನ ದುರ್ಗದ ಪ್ರಾಕಾರಗಳು ಶ್ವೇತಶಿಲೆಯಿಂದ ನಿರ್ಮಿತವಾದಂತೆ ಕಂಗೊಳಿಸುತ್ತಲಿದ್ದುವು. ನಗರೋಪ ಕಂಠದಲ್ಲಿದ್ದ ರಾಜಪುತ್ರರ ಮಂದಿರಗಳೂ ಮನಸಬ್ದಾರರ ಮಹಲುಗಳೂ ಇನ್ನು ಶುಭ್ರವಾಗಿ ರಂಜಿಸುತ್ತಲಿದ್ದುವು. ಸಮೀಪದಲ್ಲಿ ಯಮುನಾನದಿಯು ಮಂಜುಘೋಷಿಣಿಯಾಗಿ ಪ್ರವಹಿಸುತಲಿತ್ತು. ತರಂಗಹಿಲ್ಲೋಲದಿಂದ ನದಿಯಲ್ಲಿ ಚಂದ್ರನು ಸಹಸ್ರಬಿಂಬವಾಗಿ ಬೆಳಗುತ್ತಿದ್ದನು. ಒಂದೆರಡು ದೋಣಿಗಳು ನದಿಯ ಮೇಲೆ ಕ್ರೀಡಿಸುತ್ತಲಿದ್ದುವು. ನದಿಯ ದಡದಲ್ಲಿ ಮನುಷ್ಯ ಸಂಚಾರವಿರಲಿಲ್ಲ. ತರುಣನೊಬ್ಬನು ನದಿಯ ತೀರವನ್ನು ಬಿಟ್ಟು ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲಮೆಲ್ಲನೆ ಕಾಲಿಡುತ್ತ, ಒಮ್ಮೆ ಬೇಗಬೇಗನೆ ನಡೆಯುತ್ತಿದ್ದನು. ಮಂದವಾದ ಯಮುನಾಜಲದಲ್ಲಿ ಪ್ರತಿಬಿಂಬಿತವಾದ ಚಂದ್ರನ ಸೌಂದರ್ಯವನ್ನು ವಿನಂದಿಸುವುದಕ್ಕೆ ನಿಲ್ಲದೆ, ಯುವಕನು ರಾಜಮಾರ್ಗವಾಗಿ ಹೋಗುತ್ತಿದ್ದನು. ಅಲ್ಲಲ್ಲಿ ಮನೆಗಳ ಮಹಡಿಗಳನ್ನು ನೋಡುತ್ತ ಮುಂದರಿಸುತ್ತಿದ್ದನು. ತರುಣನು ಯಾರೆಂದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆಕಾರದಲ್ಲಿ ಕುಳ್ಳನು, ಆಜಾನುಬಾಹುವು; ದೇಹದಲ್ಲಿ ಬಲಾಢ್ಯಾನು; ದೃಢಕಾಯನು; ಅವನ ನಡಿಗೆಯು ರಾಜಗಮನದಂತಿರಲಿಲ್ಲ. ಹೆಜ್ಜೆಯನ್ನು ದೂರವಿಡುತ್ತ ಯುವಕನು ರಾಜಮಾರ್ಗದ ಕೊನೆಯ ತನಕ ಏಕಾಕಿಯಾಗಿ ಹೋದನು. ಹಠಾತ್ತಾಗಿ ಒಂದು ನಿಮಿಷ ಮಾರ್ಗದ ಮೇಲೆ ತಳುವಿದನು. ಚಂದ್ರನು ಅಸ್ತಮಿಸುವಂತಿದ್ದವು. ಎಲ್ಲಿಂದಲೋ ಮಧುರವಾದ ಸ್ವರವು ವಾಯು ತರಂಗಗಳಲ್ಲಿ ತೇಲಿ ಬರುತ್ತಲಿತ್ತು. ಸ್ವರವು ಎಲ್ಲಿಂದ ಬರುವುದೆಂದು ನೋಡುವುದಕ್ಕೆ ತರುಣನು ಕುತೂಹಲಚಿತ್ತನಾಗಿ ಹಿಂದುಮುಂದು ನೋಡಿದನು. ಒಡನೆ ಒಂದು ಮಂದಿರದ ಉಪ್ಪರಿಗೆಯಿಂದ ಸ್ವರವು ಬೀಸುತ್ತಿರುವುದೆಂದು ಬೋಧೆಯಾಗಿ, ಯುವಾನನು ಮಂದಿರದ ಕೆಳಗೆ ಬಂದು ನಿಂತನು. ಹೃದಯಂಗಮವಾದ ಗೀತಸ್ವರವು ಫಕ್ಕನೆ ಸ್ತಬ್ದವಾಯಿತು. ಅಧ್ವಗನು ಮಾರ್ಗದ ಮೇಲೆ ನಿಲ್ಲುವುದು ಸರಿಯಲ್ಲವೆಂದು ಬಗೆದು ಮಹಲಿನ ಬಲಗಡೆಯಲ್ಲಿ ಬೆಳೆದಿದ್ದ ಮರದ ಹಿ೦ದುಗಡೆಯಲ್ಲಿ ಸರಿದು ನಿಂತನು. ಮರದ ಟೊಂಗೆಯೊಂದು ಉಪ್ಪರಿಗೆಯ ಗೋಡೆಯವರೆಗೆ ವಿಸ್ತರಿಸಿತ್ತು. ಹಾಡು ಉಪ್ಪರಿಗೆಯಿಂದ ಪುನಃ ಕೇಳಿಸಿತು.

                  ಇಚ್ಛಿತ ವರನನು | ತುಚ್ಛೀಕರಿಸುತ
                  ಮ್ಲೇಚ್ಛನ ವರಿಸೆಂದು | ಉಚ್ಚರಿಪನೆ ತಂದೆ.||

ಯುವಾಪುರುಷನು ಕ್ಷುಧಿತನಯನನಾಗಿ ಕಾಲಬೆರಳ ಮೇಲೆ ನಿಂತು ತನ್ನ ಕೊರಳನ್ನು ಇಲ್ಲಿ ನೋಡಿದನು. ಯಾರ ಮುಖವೂ ಅವನ ದೃಷ್ಟಿ ಪಥದಲ್ಲಿ ತೋರಲಿಲ್ಲವೆಂದು ಚಿಂತಿಸಿ, ಯುವಕನು ಪಕ್ಕದಲ್ಲಿದ್ದ ಮರವನ್ನು ಹತ್ತಿದನು. ಗೀತದ ಮುಂದಿನ ಮಾತುಗಳು ಸರಿಯಾಗಿ ಕೇಳಿಸುತ್ತಲಿದ್ದುವು.

                  ಎಲ್ಲವ ತೊರೆವೆನು | ನಲ್ಲನ ಸೇರ್ವೆನು
                  ಕಲ್ಲಿನ ಕಾಡೊಳು । ನಿಲ್ಲದ ಪೋಗುವೆ. ||

ಯುವಕನು ಟೊಂಗೆಯನ್ನು ಹತ್ತಿ, ತೆರೆದಿದ್ದ ಕಿಟಕಿಯ ಇದಿರಾಗಿ ತನ್ನ ಮುಖವನ್ನು ಇಟ್ಟು ಇಣಿಕಿ ನೋಡಿದನು, ಉಪ್ಪರಿಗೆಯ ಕೊಟ್ಟಡಿಯಲ್ಲಿ ದೀಪವೊಂದು ಉರಿಯುತ್ತಲಿತ್ತು. ಅದರ ಬಳಿಯಲ್ಲಿ ಮತ್ತೊಂದು ದೀಪವು ಪ್ರಜ್ವಲಿಸುತ್ತಿತ್ತು. ಅನಂಗರಂಗಮಯವಾದ ಅ೦ಗನಾರತ್ನ ಪ್ರದೀಪ. ಯುವಕನು ಸದ್ದಾಗದಂತೆ ಮರದ ರೆಂಬೆಯಲ್ಲಿ ಅವಿತುಕೊಂಡು ಕಣ್ಣಿಟ್ಟು ನೋಡಿದನು. ರಮಣಿಯ ಹಾಡು ಅಂತು. ಕಾಮಿನಿಯು ಚಿಂತಾಕುಲಿತಳಾದಂತೆ ಪರ್ಯಂಕದ ಮೇಲೆ ಒರಗಿದ್ದಳು. ಅವಳ ಅವಕುಂಠರಹಿತವಾದ ಮುಖವು ಬಿಳ್ಪೇರಿ ಹೋಗಿತ್ತು. ನನೆದ ಕನ್ನಡಿಯಂತೆ ತೋರುವ ಕಪೋಲವೊಂದು ಕೈದಳವನ್ನು ಆಧರಿಸಿತ್ತು. ಸ್ವಪ್ನ ಸಾಮ್ರಾಜ್ಯದ ಸುಖವನ್ನು ಅನುಭವಿಸುವಂತೆ ಅಧರಗಳಲ್ಲಿ ಮಂದಸ್ಮಿತವು ಅಡಗಿತ್ತು, ಹೊಳೆ ಹೊಳೆವ ಸೀರೆಯ ಅಂಚಲವು ವಕ್ಷೋಭಾಗದಿಂದ ಮೆಲ್ಲಮೆಲ್ಲನೆ ಓಸರಿಸುತ್ತಲಿತ್ತು. ಅವಳ ಆರ್ಧೋನ್ಮೀಲಿತವಾದ ನಯನಗಳ ಕಾಂತಿಯನ್ನು ಕಳುವುದಕ್ಕೆ ದೀಪದ ಕುಡಿಯು ಸಡಗರಿಸುತ್ತಲಿತ್ತು. ದೀಪದ ಅಡಿಯಲ್ಲಿ ಪುಸ್ತಕವೊಂದು ಅರೆತೆರೆದಿತ್ತು. ರಮಣಿಯ ರೂಪಲಾವಣ್ಯಗಳೇನೂ ಅಷ್ಟು ಅಸಾಧಾರಣವಾಗಿರಲಿಲ್ಲ. ಆದರೆ ಅವಳ ಮುಖದಲ್ಲಿಯೂ ಮೈಯಲ್ಲಿಯೂ ಒಂದು ಪ್ರಾಕಾರವಾದ ಚಿತ್ತಾಕರ್ಷಕವಾದ ಸೌಂದರ್ಯವು ಕವಿದಿತ್ತು. ಇವಳಿಗಿಂತಲೂ ರೂಪವತಿಯವರಾದ ಸ್ತ್ರೀಯರು ಎಷ್ಟೋ ನೋಡಸಿಕ್ಕುವರು. ಈ ಮುಖದಲ್ಲಿದ್ದ ಮಾಧುರ್ಯವೂ ಮೋಹನಶಕ್ತಿಯೂ ನೋಡ ಸಿಕ್ಕದು. ಪ್ರಥಮದೃಷ್ಟಿಗೆ ಅವಳ ಮುಖವು ಮನಸ್ಸಿನಲ್ಲಿ ಕನಿಕರವನ್ನೂ ದುಃಖವನ್ನೂ ಉಂಟುಮಾಡುವುದು. ಮುಖವನ್ನು ದರ್ಶಿಸಿದಷ್ಟಕ್ಕೆ ಅಂತರ್ಯದಲ್ಲಿದ್ದ ಕೋಮಲಭಾವವು ಪರಿಸ್ಫುಟವಾಗಿ ನೋಟಕನ ಕಣ್ಮನವನ್ನು ಸೆಳೆದುಬಿಡುವುದು ಎಷ್ಟು ನೋಡಿದರೂ ಮನಸ್ಸು ತೃಪ್ತಿಗೊಳ್ಳದು, ಶಾಂತವಾಗದು. ಅವಳ ಪ್ರಥಮದರ್ಶನದಿಂದ ನೊಟಕನ ಮನಸ್ಸಿನಲ್ಲಿ ಉಂಟಾಗುವ ಸಂತೋಷವು ಪರಕ್ಷಣದಲ್ಲಿಯೇ ಅಲ್ಲಲ್ಲಿ ತೋರಿತೋರದ ವ್ಯಸನಬಿ೦ದುಗಳಿಂದ ಹೆಪ್ಪುಗಟ್ಟಿ ಹೋಗುಲಿತ್ತು. ವೈಶಾಖ ಸೂರ್ಯನ ಆತಪದಿಂದ ಕಂದಿದ ಕುಂದಿದ ಕೋಮಲವಾದ ಬಳ್ಳಿಯೂ ದವಾನಲದ ಉಷ್ಣ ಸ್ಪರ್ಶದಿಂದ ಬಾಡಿ ಬಸವಳಿದ ಕರ್ಣಿಕಾರ ಪುಷ್ಪವೂ ಯಾವ ಪ್ರಕಾರದಲ್ಲಿ ವಿಷಾದ ವಿನೋದಗಳನ್ನು ಮನಸ್ಸಿನಲ್ಲಿ ಒಂದೇ ಸಲ ಉಂಟುಮಾಡುವುವೋ ಆ ಭಾವವನ್ನೇ ಈ ಸುಂದರಿಯ ದರ್ಶನವು ಪ್ರೇಕ್ಷಕರ ಹೃದಯದಲ್ಲಿ ಉಂಟುಮಾಡುತ್ತಲಿತ್ತು.

ಯುವಕನು ದೀಪದ ಜ್ಯೋತಿಯಿಂದ ಇನ್ನೂ ಉಜ್ವಲವಾಗಿ ತೋರುವ ಮುಖವನ್ನು ಸ್ವಲ್ಪ ಹೊತ್ತು ದೃಷ್ಟಿಸುತ್ತ ತನ್ನ ತುಟಿಯೊಳಗೆನೇ ಏನನ್ನೋ ಅನ್ನುತ್ತಿದ್ದನು. ಫಕ್ಕ “ಶೈಲಿನಿ” ಎಂಬ ಮಾತು ಅವನ ಬಾಯಿಂದ ಎಚ್ಚರವಿಲ್ಲದೆ ಕೆಳಕ್ಕೆ ಬಿದ್ದಿತು. ನಿಶ್ಯಬ್ದವಾದ ಕೊಟ್ಟಡಿಯೊಳಗೆ ಶೈಲಿನಿ ಎಂಬ ಪದವು ಪ್ರತಿಧ್ವನಿತವಾಯಿತು. ವೃಕ್ಷಾರೋಹಿಯು ಏನೆಂದನೆಂದು ಅರಿಯದೆ ಅಳುಕಿದನು. ಪುನಃ ಯುವಾಪುರಷನು “ಶೈಲಿನಿ!” ಎಂದು ಕೂಗಿ ಕರೆದನು. ಒಡನೆ ರಮಣಿಯು ಎಚ್ಚರವಾದಂತೆ ಕಣ್ಣೊರಸಿ, ತನ್ನನ್ನು ಯಾರೋ ಕೂಗಿ ಕರೆಯುವರೆಂದು ಎಂದು ಎಣಿಸಿ ಸುತ್ತಲೂ ನೋಡಿದಳು. ಕಿಟಕಿಯ ಕಡೆಯಿಂದ ಶೈಲಿನಿ ಎಂಬ ಸ್ವರವು ಮತ್ತೊಮ್ಮೆ ಕೇಳಿಸಿತು. ಯುವತಿಯು ಸಂತೋಷಚಿತ್ತಳಾಗಿ ತನ್ನ ಸೀರೆಯ ಸೆರಗನ್ನು ಸರಿಗೊಳಿಸುತ್ತ, ಗವಾಕ್ಷದ ಕಡೆಗೆ ಹೆಜ್ಜೆಯನ್ನಿಟ್ಟಳು. ನಿದ್ರಾಭಂಗದಿಂದಲೊ ಭಯದಿಂದಲೋ ಆಯಾಸದಿಂದಲೊ ತರುಣಿಯ ಕಾಲು ತಡವರಿಸುತ್ತಲಿತ್ತು. ಅವಳು ತನ್ನ ಇದಿರಾಗಿ ಬರುವುದನ್ನು ನೋಡಿ ವೃಕ್ಷಾರೋಹಿಯು “ಶೈಲಿನಿ”! ದಾರಿಗನೊಬ್ಬನು ಇರುಳೆಲ್ಲಾ -

ಶೈಲಿನಿಯು ಕೈಸನ್ನೆ ಮಾಡುವುದನ್ನು ನೋಡಿ ಯುವಕನ ಮಾತು ಮುಂದುವರಿಸಲಿಲ್ಲ. ಅವಳು ಗವಾಕ್ಷದ ಬಳಿಗೆ ಬಂದು ಮುಖವನ್ನು ಹೊರ ಚಾಚಿ “ನೀನು ಇಷ್ಟು ಸಾಹಸವನ್ನು ಏಕೆ ಮಾಡಿದೆ?” ಎಂದು ಕೇಳಿದಳು.

ಯುವಕ:– “ನಿನಗೋಸ್ಕರ.”

ಶೈಲಿನಿ:- “ನನಗೋಸ್ಕರ ನೀನು ಅಪಾಯಕ್ಕೆ ಗುರಿಯಾಗಬೇಕೆಂದು ನಾನು ಬಯಸುವುದಿಲ್ಲ.”

ಯುವಕ:- “ಅಪಾಯಕ್ಕೆ ಈ ಮರಾಟನು ಹೆದರುವನೇ? ನನಗೆ ಅಪಾಯ ಬರುವುದು ಯಾರಿಂದ? ನಿನ್ನ ತಂದೆಯಿಂದಲೇ?”

ಶೈಲಿನಿಯು ಮನಗುಂದಿದವಳಾಗಿ, “ಅಪಾಯವು ಯಾರಿಂದಲಾದರೂ ಬರಬಹುದು. ನಿಶೆಯಲ್ಲಿ ಈ ಎತ್ತರವಾದ ಮರವನ್ನು ನೀನು ಹೇಗೆ ಹತ್ತಿದೆ?”

ಯುವಕ:- “ಕಾಮದೇವನೇ ನನ್ನ ಬೆಂಬಲಕ್ಕೆ ಇದ್ದನು. ಅಂದು ನೀನು ಪ್ರತಾಪಗಡದಲ್ಲಿ ಅರಮನೆಯ ಗೋಡೆಯನ್ನು ಹೇಗೆ ಏರಿ ಬಂದೆ?”

ಶೈಲಿನಿಯು ಒಮ್ಮೆ ಮಾತನಾಡಲಿಲ್ಲ. ಬಳಿಕ “ಅದು ಹೋಗಲಿ, ಈಗ ನೀನು ಬಂದುದು ಅನುಚಿತವಾಯಿತು” ಎಂದಳು.
ಯುವಕ:- “ಹೇಗೆ ಅನುಚಿತವಾಯಿತು?”

ಶೈಲಿನಿ:- “ನನ್ನ ತಂದೆಯು ನನ್ನೊಡನೆ ಮಾತನಾಡುವುದಕ್ಕೆ ಈಗಲೇ ಇಲ್ಲಿಗೆ ಬರುತ್ತಿರುವನು. ನಿನ್ನನ್ನು ನೋಡಿಬಿಟ್ಟರೆ, ನಮ್ಮ ಅವಸ್ಥೆ ಏನಾಗುವುದೋ ಎಂದು ಭಯವಾಗುತ್ತಿದೆ.”

ಯುವಕ:- "ರಜಪೂತ ಸ್ತ್ರೀಯು ಮರಣಕ್ಕೆ ಭೀತಳಾಗುವಳೇ? ಸಖೀ! ಶೈಲಿನಿ! ನಾನು ಮರಣಕ್ಕೆ ಸಿದ್ಧನಾಗಿರುವೆನು, ಆದರೆ ಸಾಯುವ ಮೊದಲು ನಿನ್ನೊಡನೆ ಎರಡು ಮಾತುಗಳನ್ನು ಕೇಳಬೇಕೆಂದಿರುವೆನು.”

ಯುವಕನು ಕಾಂಕ್ಷಿತಸ್ವರವನ್ನು ಕೇಳಿ ಶೈಲಿನಿಯು ಏನೋ ಯೋಚಿಸುತ್ತ ನಿಂತುಬಿಟ್ಟಳು. ತಂದೆಯು ತನ್ನನ್ನು ನೋಡಲು ಬರುವ ಸಮಯವು ಸಮೀಪಿಸಿತೆಂದು ತಿಳಿದು ಕಾತರಳಾದಳು. ಯುವಕನೊಡನೆ ಪ್ರಣಯ ಸಲ್ಲಾಪಕ್ಕೆ ಸಮಯವು ಅನುಚಿತವಾಯಿತೆಂದು ಕಾತರಳಾದಳು. ತಂದೆಯು ಇದುವರೆಗೆ ತನ್ನನ್ನು ನೋಡಲು ಬಾರದೆ ಇದ್ದುದರಿಂದ, ಇನ್ನೂ ಮೇಲೆ ಬರಲಾರನೆಂದು ಒಮ್ಮೆ ನಿಶ್ಚೈಸಿ ಶೈಲಿನಿಯು ಯುವಕನನ್ನು ಒಳಕ್ಕೆ ಬರುವಂತೆ ಕೈ ಸನ್ನೆ ಮಾಡಿದಳು. ಒಡನೆ ಶಿರೀಶಪುಷ್ಪ ಸದೃಶವಾದ ತನ್ನ ಹಸ್ತವನ್ನು ಹೋರನೀಡಿದಳು. ಯುವಕನು ಪಾಣಿಗ್ರಹಣ ಮಾಡಿ ಕೃತಕೃತ್ಯನಾದನು.

ಯುವಕನು ಶೈಲಿನಿಯ ಕೈಯನ್ನು ಬಿಗಿಹಿಡಿದು “ಪ್ರಿಯೆ ! ನನ್ನನ್ನು ಪ್ರೀತಿಸುವೆಯಾ?” ಎಂದು ಕೇಳಿದನು.

ಶೈಲಿನಿಯು ಎಲ್ಲಿಯೋ ಕಿವಿಗೊಟ್ಟ೦ತೆ ನೋಡುತ್ತ ಅಪ್ರತಿಭಳಾಗಿ ನಿಂತುಬಿಟ್ಟಳು.

ಯುವಕ:- “ಶೈಲಿನಿ! ನಿನ್ನ ಇಚ್ಛಿತ ವರನು ಯಾರು? ನಿನ್ನ ತ೦ದೆಯು ಯಾರನ್ನು ತುಚ್ಛೀಕರಿಸುವನು? ನನ್ನನ್ನೇ ?”

ಶೈಲಿನಿಯು ಏನು ಹೇಳಬೇಕೆಂದು ತಿಳಿಯಲಾರದೆ ಹೋದಳು. ಕೂಡಲೇ “ಶೈಲಿ! ಶೈಲಿ!” ಎಂದು ಕೆಳಗಿನಿಂದ ಯಾರೋ ಕೂಗಿ ಕರೆಯುವುದು ಕೇಳಿಸಿತು. ಶೈಲಿನಿಯು ಯುವಕನು ಕರಪಾಶದಿಂದ ಸಡಿಲಿಸುವುದಕ್ಕೆ ತವಕಗೊಂಡು, ಕೈಯನ್ನು ಹಿಂದೆ ಸೆಳೆದುಬಿಟ್ಟಳು. “ನನ್ನ ತಂದೆಯು ಈಗಲೇ ಮೇಲೆ ಬರುವನು. ಇನ್ನು ನಿಲ್ಲಬೇಡ” ಎಂದಳು. ಯುವಕನು “ತಂದೆ ಹೀಗಿಸುವುದು ನನ್ನನ್ನೇ?” ಎಂದು ಪುನಃ ಕೇಳಿದನು.
ಮಹಡಿಯ ಮೆಟ್ಟಿಲು ಹತ್ತಿ ಯಾರೋ ಬರುವ ಸದ್ದು ಕೇಳಿಸಿತು. ಶೈಲಿನಿಯು ಯುವಕನೊಡ ಮೆಲ್ಲನೆ ಏನನ್ನೂ ಹೇಳಿಬಿಟ್ಟಳು, “ನವಮಿ.. ರಾತ್ರಿ..... ಶಿಬಿರದ..... ಬಳಿಯಲ್ಲಿ” ಎಂಬ ಮೊದಲಿನ ಶಬ್ದಗಳು ಮಾತ್ರ ಯುವಕನ ಕಿವಿಯಲ್ಲಿ ಇಳಿದುವು. ಯುವಕನು ಮನಸ್ಸಿನಲ್ಲಿ ಸಂಪೂರ್ಣವಾದ ಅರ್ಥವನ್ನು ಮಾಡಿ, ವೃಕ್ಷದಿಂದ ಕೆಳಕ್ಕೆ ಇಳಿಯಲು ಸಿದ್ಧನಾದನು. ಪುನಃ ಶೈಲಿಸಿಯ ಪ್ರಫುಲ್ಲಿತವಾದ ಮುಖಸಂದರ್ಶನವನ್ನು ಮಾಡಲೆಳಸಿ, “ನನ್ನನ್ನೇ” ಎಂದು ಒತ್ತಿ ಹೇಳಿದನು.

ಶೈಲಿನಿಯು ಮನಸ್ಸಿನಲ್ಲಿಯೇ “ವರಿಸುವೆನು” ಎಂದು ಅಂದುಕೊಂಡಳು. ತತ್‌ಕ್ಷಣದಲ್ಲಿ ಉಪ್ಪರಿಗೆಯ ಬಾಗಿಲನ್ನು ತೆರೆದು ಯಾರೋ ಒಬ್ಬನು ಒಳಕ್ಕೆ ಬಂದನು. ಬಂದವನು ಶೈಲಿನಿಯ ತಂದೆ; ರಾಠೋರ್ ಸಂಸ್ಥಾನದ ರಾಜನಾದ ರಾಜಸಿಂಹನು.

ಈ ಕಥಾ ಕಾಲದಲ್ಲಿ ಅವರಂಗಜೇಬನು ಢಿಲ್ಲಿಯ ಸಮ್ರಾಟನಾಗಿದ್ದನು. "ಅವರಂಗಜೇಬನ ಕಠೋರ ಶಾಸನದಿಂದ ಭಾರತವರ್ಷದಲ್ಲಿ ಸರ್ವತ್ರ ಭೀತಿಯೂ ಆತಂಕವೂ ಪಸರಿಸಿದ್ದುವು.” ಅವನ ಕ್ರೂರವಾದ ಅಧಿಕಾರ ಜಂಝೂನಿಲನಿಂದ ಪ್ರಚಲಿತವಾದ ಭಾರತಸಾಗರದ ಜಲದಲ್ಲಿ ರಾಜಪುತ್ರರ ಸ್ವಾತಂತ್ರ್ಯವು ಮುಳುಗಿ ಹೋಗುತ್ತಲಿತ್ತು. ಸ್ವಾಧೀನತೆಯ ಪ್ರಧಾನಭಕ್ತನಾದ, ಅಂಬರಸಂಸ್ಥಾನದ ಅಧಿಪತಿಯಾದ ಜಯಸಿಂಹನು ಇಲ್ಲಿಯ ಸಿಂಹಾಸನದ ಬಳಿಯಲ್ಲಿ ಬದ್ಧಹಸ್ತನಾಗಿ ನಿಲ್ಲಲು ಒಡಂಬಟ್ಟನು! ಮಾರವಾಡದ ಯಶವಂತಸಿಂಹನಿಗೂ ರಾಠೋರದ ರಾಜಸಿಂಹನಿಗೂ ಭೇದವನ್ನು ತಂದಿಕ್ಕಿ, ಇಬ್ಬರನ್ನೂ ಅವರಂಗಜೇಬನು ತನ್ನ ಸಿಂಹಾಸನಕ್ಕೆ ಅಲಂಕಾರಕಲಶಗಳನ್ನಾಗಿ ಮಾಡಿದನು. ಉತ್ತರ ಹಿಂದುಸ್ಥಾನದಲ್ಲಿ ಸಿಕ್ ಜನರು ತಮ್ಮನ್ನು ಬಂಧಿಸಿದ ಶೃಂಖಲಗಳನ್ನು ಕಳಚುವುದಕ್ಕೆ ಹುರಿದುಂಬಿ ಒಟ್ಟುಗೂಡುತ್ತಲಿದ್ದರು. ದಖ್ಖಣದಲ್ಲಿ ಸ್ವತಂತ್ರವಾಗಿದ್ದ ಗೊಲ್ಕೊಂಡ ಮತ್ತು ಬಿಜಾಪುರ ಸಂಸ್ಥಾನಗಳು ಕ್ಷೀಣವಾಗಿ ಅಸ್ತಮಿಸುವಂತಿದ್ದುವು. ಲೋಕೈಕವೀರನಾದ ಶಿವಾಜಿಯು, ಮಹಾರಾಷ್ಟ್ರ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಹಿಂದುಗಳನ್ನು ಏಕತ್ರವಾಗಿ ಮಾಡಲು ಪ್ರಯತ್ನಿಸುತ್ತಿದ್ದನು. ಅವನ ಪ್ರಯತ್ನಗಳಿಂದ ಮೊಗಲ ಸಾಮ್ರಾಜ್ಯದ ಕೀಲು ಸಡಿಲಾಗುತ್ತಾ ಬಂದಿತು. ಭೂಕಂಪನದಿಂದ ಸಂಕ್ಷೋಭಿತವಾದ ಸಮುದ್ರದ ಅಂತಸ್ಥಲದಿಂದ ನವೀನ ದ್ವೀಪಗಳ ಶಿರ್ಷೋದಯವಾಗುವಂತೆ, ಶಿವಾಜಿಯ ದೋರ್ದಂಡಪ್ರತಾಪದಿಂದ ಪ್ರಾಚೀನ ಹಿಂದೂರಾಜ್ಯಗಳ ಭಗ್ನಾವಶೇಷದ ಮೇಲಿಂದ ಮಹಾರಾಷ್ಟ್ರ ರಾಜ್ಯವು ತಲೆಯೆತ್ತುತ್ತಿಲಿತ್ತು. ಶೈಶವದಲ್ಲಿಯೇ ಅದರ ಗೋಣು ಮುರಿದು ಬಿಡುವುದಕ್ಕೆ ಅವರಂಗಜೀಬನು ಪೇಚಾಡಿದನು. ಅವರಂಗಜೀಬನ ಪೇಚಾಟವು ಬಯಲಾಯಿತು. ಆಪತ್ತು ವಿಪತ್ತುಗಳೆ ಶಿವಾಜಿಯ ಸಾಹಸರ್ಯಗಳಿಗೆ ಸಾಣೆಯ ಕಲ್ಲಾದುವು. ಕಷ್ಟ ಸಂಕಷ್ಟಗಳು ತಗಲಿದಷ್ಟಕ್ಕೆ ಮಹಾರಾಷ್ಟ್ರ ರಾಜ್ಯವು ಬಲವಾಗುತ್ತ, ಭೇರೂರುತ್ತ ಹೋಯಿತು. ಶಿವಾಜಿಯು ಮಕ್ಕಾವಿಗೆ ಹೋಗುವ ಮುಸಲ್ಮಾನ ಯಾತ್ರಿಕರನ್ನು ಸೂರೆಗೊಂಡನು. ಉರಿಯುವ ಗಡ್ಡದ ಇದಿರಿಗೆ ಹುಕ್ಕ ಹಿಡಿದಂತಾಯಿತು. ಕೋಪಾಕುಲಿತನಾದ ಅವರಂಗಜೀಬನು “ಪರ್ವತಮೂಷಕ"ವನ್ನು ಹಿಡಿಯುವುದಕ್ಕೆ ಮಹಾಸೇನೆಯೊಡನೆ ಜಯಸಿಂಹನನ್ನೂ ದಿಲೇರಿಖಾನನನ್ನೂ ದಕ್ಷಿಣ ಹಿಂದುಸ್ಥಾನಕ್ಕೆ ಕಳುಹಿಸಿದನು. ಪುರಂದರ ದುರ್ಗದಲ್ಲಿ ಮರಾಟರಿಗೂ ಮೊಗಲರಿಗೂ ಘೋರ ಯುದ್ಧ ನಡೆಯಿತು. ದೀರ್ಘದರ್ಶಿಯಾದ ಶಿವಾಜಿಯು ಏನೋ ಒಂದು ವಿಶೇಷ ಕಾರಣದಿಂದ ಮೊಗಲ್ ಸಮ್ರಾಟನೊಡನೆ ಸಂಧಿ ಮಾಡಿಕೊಳ್ಳುವುದು ಕ್ಷೇಮಕರವೆಂದು ಎಣಿಸಿ, ಜಯಸಿಂಹನಿಗೆ ಶರಣಾಗತನಾದನು. ಈ ಸಂಧಿಯ ಪ್ರಕಾರ ಅವರಂಗಜೀಬನು ಶಿವಾಜಿಗೆ ಡಿಲ್ಲಿಗೆ ಬರಬೇಕಾಗಿ ಆಹ್ವಾನ ಪತ್ರವನ್ನು ಬರೆದನು. ಶಿವಾಜಿಯು ತನ್ನ ಆಪ್ತರನ್ನೂ ಅಧಿಕಾರಿಗಳನ್ನೂ ೧,೦೦೦ ಮಂದಿ ಮಾವಳಿಗಳನ್ನೂ ೩,೦೦೦ ಮಂದಿ ರಾವುತರನ್ನೂ ಕೂಡಿಕೊಂಡು ತನ್ನ ಜ್ಯೇಷ್ಠ ಪುತ್ರನಾದ ಶಂಭಾಜಿಯೊಡನೆ ಮಹಾಸಂಭ್ರಮದಿಂದ ಢಿಲ್ಲಿಗೆ ಬಂದಿಳಿದಿದ್ದನು.

ಶಿವಾಜಿಯನ್ನು ಇದಿರುಗೊಳ್ಳುವುದಕ್ಕೆ ಅವರಂಗಜೀಬನು ಸ್ವತಃ ಹೋಗಲಿಲ್ಲ. ಅವನು ಜಯಸಿಂಹನ ಮಗನಾದ ರಾಮಸಿಂಹನನ್ನು ಕಳುಹಿಸಿದನೆಂದು ಇತಿಹಾಸವು ಹೇಳುವುದು. ಇದು ನಮಗೆ ತಪ್ಪಾಗಿ ತೋರುವುದು. ಸಂಶಯಾತ್ಮಕನಾದ ಅವರಂಗಜೀಬನು ಮಹಾಯೋಧನಾದ ಜಯಸಿಂಹನು ತನ್ನ ಸಿಂಹಾಸನದ ಬಳಿಯಲ್ಲಿರುವುದು ಲೇಸಲ್ಲವೆಂದು ತಿಳಿದು, ಅವನನ್ನು ದಖ್ಖಣಕ್ಕೆ ಕಳುಹಿಸಿದ್ದನು; ಮತ್ತು ಜಯಸಿಂಹನು ತನ್ನ ಮೇಲೆ ಹಠಾತ್ತಾಗಿ ಬೀಳದಂತೆ ಅವನ ಮಗನಾದ ರಾಮಸಿಂಹನನ್ನು ಬಂಧಿಯಾಗಿ ಇಟ್ಟಿದ್ದನು. ಇಂತಹನನ್ನು ತನ್ನ ಪ್ರತಿದ್ವಂದ್ವಿಯಾದ ಶಿವಾಜಿಯೊಡನೆ ಒಳಸಂಚು ನಡೆಯಿಸುವುದು ಸಂಭವನೀಯವೆಂದು ತಿಳಿದು, ಸಮ್ರಾಟನು ಅವನ ಕೈಗೆ ವಿಶೇಷ ಅಧಿಕಾರವನ್ನು ಹಚ್ಚುತ್ತಿರಲಿಲ್ಲ; ಮಾತ್ರವಲ್ಲ, ರಾಠೋರ್ ಸಂಸ್ಥಾನಾಧಿಪತಿಯಾದ ರಾಜಸಿಂಹನು ಇಂತಹ ಕಾರ್ಯಗಳಲ್ಲಿ ತನಗೆ ಅನುಕೂಲವೆಂದು ಸಮ್ರಾಟನು ತಿಳಿಯಲು ಅನೇಕ ಕಾರಣಗಳಿದ್ದುವು. ಹಾಗೂ ರಾಜಸಿಂಹನು ತನಗೆ ಅವರಂಗಜೀಬನೇ ಆಶ್ರಯದಾತಾರನೆಂದು ನಂಬಿ, ಅವನ ಮೇಲೆ ಶೃದ್ಧಾಭಕ್ತಿಗಳನ್ನಿಟ್ಟಿದ್ದನು. ಹೆಚ್ಚೇಕೆ? ರಾಜಸಿಂಹನು ತನ್ನ ಮಗಳಾದ ಶೈಲಿನಿಯನ್ನು ಕಾರಣಾಂತರಗಳಿಂದ ಸಮ್ರಾಟನ ಶ್ರೀಮಂತ ಪುತ್ರನಾದ ಮು- ಆಜಮ್ ನಿಗೆ (ಭಾವೀ ಶಹ ಆಲಮ್) ಕೊಡಲು ಉದ್ಯುಕ್ತನಾಗಿದ್ದನು. ಶಿವಾಜಿಯು, ತನ್ನನ್ನು ಇದಿರುಗೊಳ್ಳುವುದಕ್ಕೆ ಸಮ್ರಾಟನು ತಾನೇ ಬಾರದೆ ತೋರಿಸಿದ ಅನಾದರವನ್ನು ನೋಡದೆ ಹೋಗಲಿಲ್ಲ. ಅನಾದರಭಾವಕ್ಕೆ ಪ್ರತಿಕಾರಮಾಡಲು ಅದು ಸಮಯವಲ್ಲವೆಂಬುದನ್ನೂ ಆತನು ಮರೆತಿರಲಿಲ್ಲ.

ಶಿವಾಜಿಯು ಅವರಂಗಜೀಬನ ಸಂದರ್ಶನಕ್ಕೆ ಹೋಗಲು ನಿಶ್ಚಯಿಸಿದ ಮೊದಲಿನ ದಿವಸದ ರಾತ್ರಿಯಲ್ಲಿ ಪೂರ್ವೋಕ್ತ ಸಲ್ಲಾಪವು ನಡೆಯಿತು. ರಾಜಸಿಂಹನು ಮಹಡಿಯ ಮೆಟ್ಟನ್ನು ಹತ್ತಿ ಶೈಲಿನಿಯ ಕೊಟ್ಟಡಿಯನ್ನು ಪ್ರವೇಶಿಸಿದನು. ರಾಜಸಿಂಹನು ಪಕ್ಕದಲ್ಲಿದ್ದ ಆಸನವನ್ನು ತೆಗೆದುಕೊಂಡನು. ಶೈಲಿನಿಯು ತಂದೆಯ ಸಮ್ಮುಖದಲ್ಲಿ ವಿನೀತಭಾವದಿಂದ ನಿಂತಳು. ಸ್ವಲ್ಪ ಹೊತ್ತು ಇಬ್ಬರೂ ಮಾತೆತ್ತಲಿಲ್ಲ. ಸಿಂಹನು ಎತ್ತಿದ ಹುಬ್ಬುಗಳಿಂದ "ಮಗು! ಶೈಲಿ! ರಾಜಕಾರ್ಯದಿಂದ ನಿನ್ನೊಡನೆ ಹಲವು ದಿನಗಳಿಂದ ಮಾತನಾಡಲು ಬಿಡುವಾಗಲಿಲ್ಲ. ಪಿತೃ ಭಕ್ತಿಯು ನಿನ್ನ ಹೃದಯದಲ್ಲಿ ಇರುವುದಾದರೆ, ಎರಡು ಬುದ್ಧಿವಾದಗಳನ್ನು ಹೇಳಬೇಕೆಂದಿರುವೆನು” ಎಂದನು.

ಶೈಲಿನಿ:- “ಅಪ್ಪಾ! ಮಗಳು ತಂದೆಯ ಮಾತನ್ನು ಸಲ್ಲಿಸಬೇಕಾದಲ್ಲಿ ನಾನು ನಿನ್ನ ಅನುಜ್ಞೆಯನ್ನು ಮನ್ನಿಸದೆ ಇರಲಾರೆನು.”

ರಾಜಸಿಂಹನು ಮೆಲ್ಲನೆ ನಗುತ್ತ, “ಪುಟ್ಟಮ್ಮಣ್ಣಿ! ನಾನು ಮುದುಕನಾದೆನು, ನನಗೆ ೬೫ ವರ್ಷ ತುಂಬಿತು. ಇನ್ನು ಹೆಚ್ಚು ಕಾಲ ಬದುಕಲಾರೆನು. ಪ್ರಬುದ್ಧಳಾದ ನೀನು ಸುಖವಂತಳಾಗಿದ್ದರೆ ನನ್ನ ಮುಪ್ಪನ್ನು ನಿಶ್ಚಿಂತೆಯಿಂದ ಕಳೆಯುವೆನು.”

ಶೈಲಿನಿ:- ಮುಪ್ಪಿನಲ್ಲಿ ನಿನಗೆ ಯಾವುದೊಂದೂ ಚಿಂತೆ ಬಾರದೆ ಇರಲಿ ಎಂದು ನಾನು ದೇವರೊಡನೆ ಪ್ರಾರ್ಥಿಸುವೆನು. ನಿನ್ನ ವೃದ್ಧಾಪ್ಯವು ಸಂತೋಷಮಯವಾಗುವಂತೆ ಆತನು ಕರುಣಿಸಲಿ!”

ರಾಜಸಿಂಹ:- ನೀನು ಮೊಗಲ್ ಸಾಮ್ರಾಜ್ಯದ ರಾಣಿಯಾಗುವುದರಿಂದ ಉಂಟಾಗುವಷ್ಟು ಸಂತೋಷವನ್ನು ನನಗೆ ವೃದ್ಧಾಪ್ಯದಲ್ಲಿ ಮತ್ತಾವುದೂ ಕೊಡಲಾರದು.”

ಶೈಲಿನಿ:- ಅಪ್ಪಾ! ನನಗೆ ರಾಣಿಯಾಗುವಷ್ಟು ಬೇಸರವು ಬೇರೊಂದಿಲ್ಲವೆಂದು ನಾನು ಮೊದಲೇ ನಿನಗೆ ತಿಳಿಸಿರುವೆನಷ್ಟೆ.”

ರಾಜಸಿಂಹ:- ನೀನು ಅಂದು ವಿಚಾರಮಾಡಿರಲಿಲ್ಲ, ನೀನು ವಿಚಾರ ಮಾಡಬೇಕೆಂದು ಸಾಕಷ್ಟು ಅವಕಾಶಕೊಟ್ಟೆನು.”

ಶೈಲಿನಿ:- “ವಿಚಾರ ಮಾಡಿದಷ್ಟಕ್ಕೆ ರಾಜಪತ್ನಿ ಯಾಗುವುದಕ್ಕಿಂತಲೂ ಬಡವನ ತೊತ್ತಾಗುವುದು ಲೇಸೆಂದು ದೃಢವಾಗುವುದು.”

ರಾಜಸಂಹನು ಸ್ವಲ್ಪ ಬೆಚ್ಚನಾಗಿ “ಶೈಲಿನಿ! ಸಾಮ್ರಾಜ್ಯದ ಚಕ್ರವರ್ತಿನಿ ಎನ್ನಿಸಿಕೊಳ್ಳುವುದಕ್ಕಿಂತಲೂ ಅಧಿಕವಾದ ಶ್ರೇಯಸ್ಸು ನಿನಗೆ ಮತ್ತೊಂದಿರುವದೇ? ಚಕ್ರವರ್ತಿಯ ಮಾವನೆನ್ನಿಸಿಕೊಳ್ಳುವುದಕ್ಕಿಂತಲೂ, ವಿಶೇಷವಾದ ಬಹುಮಾನವು ನನಗೆ ಬೇರೊಂದುಂಟೆ? ರಾಜಕುಲದವರೆಂದು ಹೇಳಿಸಿಕೊಳ್ಳುವುದಕ್ಕಿಂತಲೂ ಅಧಿಕ ತರವಾದ ಕೀರ್ತಿಯೂ ಗೌರವವೂ ನಮ್ಮ ವಂಶಕ್ಕೆ ಯಾವುವು? ನೀನು ಆಡಿದ್ದೇ ನ್ಯಾಯ; ನೀನು ಮಾಡಿದ್ದೇ ಧರ್ಮ. ಹೀಗಿರಲು ಸಾಮಾನ್ಯ ಪುರುಷರಿಗೆ ನಿನ್ನ ಕೈಕೊಟ್ಟು ನಮ್ಮ ಕುಲಕ್ಕೆ ಕಳಂಕವನ್ನು ತಂದಿಕ್ಕ ಬೇಡ, ಕಂಡೆಯಾ?” ಎಂದನು.

ಶೈಲಿನಿಯು ಉದ್ರೇಕದಿಂದ “ಅಪ್ಪಾ! ನೀನೆನ್ನುವ ದುರ್ಗತಿಗೆ ಈ ದೇಹವು ಇಳಿಯುವ ಮೊದಲೇ ಅದರಿಂದ ಪ್ರಾಣವು ಹಾರಿಹೋಗಲಿ! ಅಕ್ಬರನಿಗೆ ಹೆಣ್ಣು ಕೊಟ್ಟ ರಾಜಪುತ್ರರಿಗೆ ಯಾವ ಗೌರವವು ಹೆಚ್ಚಿತು? ರಾಜಾಮಾನಸಿಂಹನ ಮಗಳು ಕೇಳಿಮನ ಪತ್ನಿಯಾಗಿ ಯಾವ ಪ್ರಖ್ಯಾತಿಯನ್ನು ಹೊಂದಿದಳು? ಪ್ರಕೃತದಲ್ಲಿ ಅವರಂಗಜೀಬನ ಪತ್ನಿಯಾದ ಉದಿಪುರಿಯು ಹಗಲಿರುಳು ಕಣ್ಣೀರು ಮಿಡಿಯುವಳೇಕೆ? ಅವರಂಗಜೀಬನ ಚಿನ್ನದ ಕೊಳಕ್ಕೆ ಕೈಯೊಡ್ಡಿದ ನಮ್ಮ ಕುಲಕ್ಕೆ ಯಾವ ಯಶಸ್ಸು ಬಂದಿತು? ಆಪ್ಪಾ? ನಾನು ಯಥಾರ್ಥವಾಗಿ ಹೇಳುವೆನು, ನಾನು ಬಡ ಒಕ್ಕಲಿಗನ ಮನೆಯಲ್ಲಿ ಹುಟ್ಟಬಾರದಿತ್ತೇ? ನನಗೆ ಬೇಕಾದವನನ್ನು ವರಿಸಿ ಸುಖವಾಗುತ್ತಿದ್ದೆನು. ನಿನ್ನ ಉದರದಲ್ಲಿ ಜನಿಸಿ ಕಾಗೆಯನ್ನು ವರಿಸಬೇಕೇ?” ಎಂದಳು.

ರಾಜಸಿಂಹನು ಅಡಗಿಸಿದ ಸಿಟ್ಟಿಂದ “ಮುಅಜಮನಿಗಿಂತಲೂ ನಿನಗೆ ಯೋಗ್ಯನಾದ ವರನು ಮತ್ತೊಬ್ಬನಿಲ್ಲ. ಅವನ ಪಾಣಿಗ್ರಹಣವೇ ನಮ್ಮ ವಂಶೋದ್ಧರಣ. ಮಗು! ಕಂಡವರನ್ನು ಕೈ ಹಿಡಿದು ಕುಲವನ್ನು ಕಳಂಕಿಸಬೇಡ” ಎಂದು ಬಿರುಗಣ್ಣಿಂದ ನೋಡಿದನು.

ಶೈಲಿನಿಯು ಧೈರ್ಯಗೊಂಡು “ಅಪ್ಪಾ! ನಿನ್ನೊಡನೆ ಬಾಯಿಬಿಟ್ಟು ಹೇಳಿದರೆ, ಲಜ್ಜಾಹೀನಳೆಂದು ನೀನು ಭಾವಿಸುವುದಿಲ್ಲವಾದರೆ ನಾನು ಖಂಡಿತವಾಗಿ ಹೇಳುವೆನು; ಹಿಂದೂ ರಾಜಾಧಿರಾಜರನ್ನು ಬಿಟ್ಟು, ನಮ್ಮ ಸಂಸ್ಥಾನದ ಸ್ವಾತಂತ್ರ್ಯವನ್ನು ಮೊಗಲರಿಗೆ ಎಂದು ಬಲಿಕೊಟ್ಟೆವೋ ಆಗಲೇ ನಮ್ಮ ಕುಲವು ಕಳಂಕಿತವಾಗಿದೆ” ಎಂದಳು.

ರಾಜಸಿಂಹನು ಕೋಪವನ್ನು ತಡೆಯಲಾರದೆ ಎದ್ದು ನಿಂತನು; ಮಗಳ ಮಾರ್ನುಡಿಗೆ ಉತ್ತರಕೊಡಲಾರದೆ ನೀರವನಾದನು. ಒಂದು ನಿಮಿಷದ ಮೇಲೆ ಹಿಂದೂ ರಾಜಾಧಿರಾಜನು ಯಾರೆಂದು ಮಗಳೊಡನೆ ಗರ್ಜಿಸಿ ಕೇಳಿದನು. ಶೈಲಿನಿಯು ಮಂದಸ್ವರದಿಂದ, ಭವಾನಿಭಕ್ತನಾದ - ರಾಮದಾಸ ಶಿಷ್ಯನಾದ ಶಿವಾಜಿಯನ್ನು ಮುಕ್ತಕಂಠದಿಂದ ಹೊಗಳಿದಳು. ಶಿವಾಜಿಯು ವಿಶ್ವಾಸಘಾತುಕನಾದ, ಧರ್ಮದ್ರೋಹಿಯಾದ, ತುಂಡು ಪಾಳೆಯಗಾರನೆಂದು ತಂದೆಯು ತರ್ಕಿಸಿದನು. ಶೈಲಿನಿಯು ಅಲ್ಲಿಯೂ ಬಿಡದೆ, ಕುಲಸಂಹಾರಕನಾದ ಪಾಷಂಡನಾದ ಅವರಂಗಜೀಬನು ಹಿಂದುಗಳ ಅರಸನಲ್ಲವೆಂದೂ, ಶಿವಾಜಿಯೇ ಭಾರತವರ್ಷದ ಮಹಾರಾಜನೆಂದೂ ಬಿಗಿಹಿಡಿದು ಸಕಾರಣವಾಗಿ ತೋರಿಸಿದಳು. ಮಗಳ ಮಾತುಗಳಿಗೆ ಮರುಮಾತನಾಡದೆ ರಾಜಸಿಂಹನು ಕೆಳಕ್ಕೆ ಇಳಿದನು. ಇಳಿದು ಹೋಗುವಾಗ, ಮರಾಟನ ಮೂರ್ತಿಯು ಶೈಲಿನಿಯ ಹೃದಯಮಂದಿರದಲ್ಲಿ ಪ್ರತಿಷ್ಠಿತವಾಗಿರುವುದೆಂದು ನಿಶ್ಚಯಮಾಡಿಕೊಂಡು ಹೋದನು. ಕೋಪಾನಲದಿಂದ ದಗ್ಧವಾದ ಅವನ ಮನಸ್ಸು ಶೈಲಿನಿಯ “ಇಚ್ಛಿತ ವರ"ನನ್ನು ಸರಿಯಾಗಿ ಕಂಡುಹಿಡಿಯಲಾರದೆ ಹೋಯಿತು.

ಕಿ. ಶಕೆಯ ೧೬೬೬ನೆಯ ವರ್ಷದ ಡಿಲ್ಲಿಯು ಪ್ರಾಚೀನ ಹಿಂದೂ ರಾಜರ ಡಿಲ್ಲಿಯಾಗಿರಲಿಲ್ಲ. ಅದರ ಹೆಸರು ಬೇರೆಯಾದಂತೆ, ಅದರ ಪೂರ್ವ ಸ್ಥಿತಿಯು ಪರಿವರ್ತಿತವಾಗಿತ್ತು. ಅದು ಶಹಜಹಾನ್ಬಾದ್ ಎಂದು ಪ್ರಖ್ಯಾತಿಗೊಂಡಿತ್ತು. ಮೊಗಲ್ ಚಕ್ರೇಶ್ವರನಾದ ಶಹಾಜಹಾನನು ಪ್ರಾಚೀನ ಡಿಲ್ಲಿಯನ್ನು ಕೆಡವಿ, ತನ್ನ ಹೆಸರಿನ ಮಹಾನಗರವನ್ನು ಯಮುನಾ ನದಿಯ ತೀರದಲ್ಲಿ ಕಟ್ಟಿಸಿದನು. ಕಟ್ಟುವುದಕ್ಕೆ ೯ ವರ್ಷ ಹಿಡಿಯಿತು; ೬೦ ಲಕ್ಷ ರೂಪಾಯಿ ತಗಲಿತು. ನಗರದ ಸುತ್ತಲು ಸಾ೦ದ್ರವಾದ ತರುವನಗಳು; ಅಲ್ಲಲ್ಲಿ ಶಾಲಿ ಸಮೃದ್ಧವಾದ ಹೊಲಗದ್ದೆಗಳು. ಕಲ್ಲಿನ ಪ್ರಾಕಾರವೊಂದು ನಗರವನ್ನು ವೇಷ್ಟಿಸಿತ್ತು- ೭ ಮೈಲು ಸುತ್ತಳತೆಯ ಭದ್ರವಾದ ಮಂಡಲಾಕಾರವಾದ ಪ್ರಕಾರ. ಪಾಕಾರದ ಹೊರಗಡೆಯಲ್ಲಿ ಇಕ್ಕಟ್ಟಾದ ಬೀದಿಗಳು ನೆಲವನ್ನು ಸೀಳಿ ಹೋಗಿದ್ದವು. ಇವುಗಳ ಇಕ್ಕಡೆಗಳಲ್ಲಿ ಮನಸಬ್ಧಾರರ ಮಂದಿರಗಳು, ಉಮ್ರಾಗಳ ಮಹಡಿಗಳು; ರಾಜಾನುಚರರ ಗೃಹಗಳು. ಸ್ವಲ್ಪ ದೂರದಲ್ಲಿ ರಾಜಭಟರ ಗೂಡಾರಗಳು; ಮುಂದೆ ಮುಂದೆ ವರ್ತಕರ ಅಂಗಡಿಗಳು, ವಾಣಿಜ್ಯ ಶಾಲೆಗಳು; ಅಲ್ಲಲ್ಲಿ ಬಡಬಗ್ಗರ ಹುಲ್ಲು ಗುಡಿಸಲುಗಳು. ಇವುಗಳನ್ನು ಬಿಟ್ಟು ಮಹಾರಾಷ್ಟ್ರ ಶಿಬಿರವು ಪ್ರತ್ಯೇಕವಾದ ಒಂದು ಸ್ಥಳದಲ್ಲಿ ಇಳಿದಿತ್ತು.

ಹಿಂದೆ ಹೇಳಿದ ಘಟನಾವಳಿಯು ನಡೆದ ಮರುದಿನ ಶಿವಾಜಿಯು ಅವರಂಗಜೀಬನ ಸಂದರ್ಶನಕ್ಕೆ ಹೋಗಲು ಸಿದ್ಧನಾಗಿದ್ದನು. ರಾಜಸಿಂಹನು ಬಾದಶಹನ ಆಜ್ಞಾನುಸಾರವಾಗಿ ಶಿವಾಜಿಯನ್ನೂ ಅವನ ಪರಿ ಜನರನ್ನೂ ಕರೆದುಕೊಂಡು ಹೋಗುವುದಕ್ಕೆ ಮಹಾಸಂಭ್ರಮದೊಡನೆ ಸನ್ನದ್ಧನಾಗಿ ಬಂದನು. ಬಾದಶಹನ ಶ್ರೀಮಂತಪುತ್ರನಾದ ಮುಅಜಮನೂ ರಾಜಸಿಂಹನೊಡನೆ ಬಂದಿದ್ದನು. ರಾಜಸಿಂಹನು ಶಿಬಿರವನ್ನು ಪ್ರವೇಶಿಸಿದನು. ಶಿವಾಜಿಯು ಒಳಕ್ಕೆ ಹೋಗಿ ತನ್ನ 'ಗರ್ಭಧಾರಿಣಿಯಾದ ಜೀಜಾಬಾಯಿಯನ್ನೂ ದೀಕ್ಷಾ ಗುರುವಾದ ರಾಮದಾಸನನ್ನೂ' ಸ್ಮರಿಸಿ ಹೊರಕ್ಕೆ ಬಂದು ಎಲ್ಲರ ಮಾನಮರ್ಯಾದೆಗಳನ್ನು ಸ್ವೀಕರಿಸಿದನು. ಈಗಲೂ ಅವರಂಗಜೀಬನು ಬರಲಿಲ್ಲವೆಂದು ಮನಸ್ಸಿನಲ್ಲಿ ಸ್ವಲ್ಪ ಕುದಿದನು. ಶಿವಾಜಿಯೂ ರಾಜಸಿಂಹನೂ ಆಲಿಂಗನ ಮಾಡಿಕೊಂಡರು. ಆಲಿಂಗನ ಕಾಲದಲ್ಲಿ ರಾಜಸಿಂಹನ ಮುಖವು ಸ್ವಲ್ಪ ಭೀತಿವ್ಯಂಜಕವಾಗಿತ್ತು. ಶಿವಾಜಿಯು ರೇಷ್ಮೆಯ ಪಾಗುವನ್ನು ತಲೆಗೆ ಸುತ್ತಿಕೊಂಡು, ಅವರಂಗಜೀಬನು ಉಚಿತವಾಗಿ ಕಳುಹಿಸಿದ ಅಮೂಲ್ಯವಾದ “ಖಿಲಾತನ್ನು" ತೊಟ್ಟುಕೊಂಡು, ತನ್ನ ಸಹವಾಸಿಯಾದ ಭವಾನಿ ಎಂಬ ಕತ್ತಿಯನ್ನು ಸೊಂಟದಲ್ಲಿ ಬಿಗಿದುಕೊಂಡು, ತನ್ನ ಎಂಟು ವರ್ಷದ ಸಂಭಾಜಿಯೊಡನೆ ರಾಜಗಜವನ್ನೇರಿ ಹೊರಟನು; ಅಂಗರಕ್ಷೆ ಯವರು ಬಳಿ ಸಂದರು. ಆಪ್ತರೂ ಅನುಚರರೂ ಪಲ್ಲಕ್ಕಿಗಳನ್ನು ಹತ್ತಿದರು. ವಾದ್ಯಗಳ ನಿಸ್ವನ, ಜನಸ್ತೋಮದ ಚೀತ್ಕಾರ, ಅಶ್ವಗಳ ಹೇಷಧ್ವನಿ, ಮೊದಲಾದ ವಿವಿಧ ಕೋಹಲದಲ್ಲಿ ಶಿವಾಜಿಯು ತನ್ನ ಪ್ರಸ್ತಾನದ ಗೌರವಾರ್ಥವಾದ ತೋಪುಗಳ ಗುಡುಗನ್ನು ಕೇಳಲಿಲ್ಲ. ಶಿವಾಜಿಯು ಮನಸ್ಸಿನ ಖಿನ್ನತೆಯನ್ನು ಮುಖದಲ್ಲಿ ತೋರ್ಪಡಿಸದೆ, ಡಿಲ್ಲಿಯ ಪ್ರಾಚೀನ ವೈಭವವನ್ನು ಎಣಿಸುತ್ತ, ಗಜರೋಹಿಯಾಗಿ ಹೋದನು. ಜನಸಂದೋಹವು ನಗರದ ಹೆಬ್ಬಾಗಿಲನ್ನು ದಾಟಿ ಹೋಯಿತು. ಪ್ರಸ್ತರ ನಿರ್ಮಿತವಾದ, ಗಗನ ಚುಂಬಿಯಾದ, ನೂರಾರು ಮಿನಾರುಗಳು ಬುರುಜುಗಳು ಪ್ರಕಾಶವಾದುವು. ಲೋಕೋನ್ನತವಾದ ಕುತಬ್ಮಿನಾರಿನ ಶಿರಸ್ಸು ಸಮೀಪಸ್ಥವಾದಂತೆ ತೋರಿತು, ಜನಸಂದೋಹವು ಜುಮ್ಮಾಮಶೀದಿಯ ಬಳಿಯಿಂದ ಹರಿಯುತ್ತ ಮುಂದರಿಸಿತು. ಈ ಲೋಕೋತ್ತರನಾದ ಮಹಾರಾಷ್ಟ್ರ ವೀರನನ್ನು ನೋಡುವುದಕ್ಕೆ ಹಿಂದುಸ್ಥಾನದ ಜನರೆಲ್ಲರು ಅಸಂಖ್ಯಾತರಾಗಿ ನಗರದ್ವಾರವನ್ನು ಹಿಡಿದು, ಎರಡು ಬೀದಿಗಳಲ್ಲಿಯೂ ಸಂದಣಿಸಿದ್ದರು. ಆನೆಯು ರಾಜಮಂದಿರದ ಮುಂದುಗಡೆಯ ಚಾಂದಣಿ ಚೌಕಕ್ಕೆ ಬರುತ್ತಲೇ ಜನರ ನುಗ್ಗಾಟವು ಅಧಿಕವಾಯಿತು. ಚೌಕದಲ್ಲಿ ಪಹರೇ ಮಾಡುತ್ತಲಿದ್ದ ರಜಪೂತರು ಕುದುರೆಗಳನ್ನು ಹತ್ತಿ ಸಾಲಾಗಿ ನಿಂತುಬಿಟ್ಟರು. ಜ್ಯೋತಿಷ್ಯರು ತಮ್ಮ ಚಿತ್ರಾಸನಗಳನ್ನು ಬಿಟ್ಟು, ಗಜಾರೋಹಿಯಾದ ಶಿವಾಜಿಯನ್ನು ವಿಸ್ಮಿತ ದೃಷ್ಟಿಯಿಂದ ನೋಡುತ್ತಲಿದ್ಧರು. ವರ್ತಕರು, ವಾಣಿಜ್ಯರು, ವಿಪ್ರರು, ವೀಟಕಾಸ್ತ್ರೀಯರು, ವುಸ್ತಾದರು, ವೂಮ್ರಾಗಳು, ವೇಶ್ಯಾಸ್ತ್ರೀಯರು, ವೈದ್ಯರು, ವಂದಿಪುತ್ರರು, ವಸ್ತ್ರಕಾರರು ಮೊದಲಾದ ಸಕಲ ವರ್ಣಾಶ್ರಮದವರು ಚೌಕದಿಂದ ಕೆಳಕ್ಕೆ ಇಳಿದು ಜನ ಸಂದೋಹದೊಡನೆ ತೆರಳಿದರು. ಶಿವಾಜಿಯು ಅವರಂಗಜೀಬನ ರಾಜಮಂದಿರದ ಬಳಿಯಲ್ಲಿ ಬಂದು ಮುಟ್ಟಿದನು. ಜನಗಳ ನೂಕಾಟವು ಅಧಿಕವಾಯಿತು. ಇದರಿ೦ದಲೋ ಅಥವಾ ಇನ್ಯಾವ ಕಾರಣದಿಂದಲೂ ಶಿವಾಜಿಯ ಗಜವು ಸೊಕ್ಕೇರಿ ಜನಗಳನ್ನೆಲ್ಲಾ ಹಾನಿಮಾಡುವಂತಿತ್ತು. ಶಿವಾಜಿಯು ಗಜಯೋಧನಿಗೆ ತಕ್ಕುದಾದ ಚಾತುರ್ಯದಿಂದ ಅದನ್ನು ಸಮಾಧಾನಗೊಳಿಸಿ ಕೆಳಕ್ಕೆ ಇಳಿದನು. ಆದರೂ ಗೌರವಾರ್ಥದ ತೋಪುಗಳು ಹಾರಲಿಲ್ಲ. ಶಿವಾಜಿಯ ಮುಖವನ್ನೆತ್ತಿ ಮೇಲೆ ನೋಡಿದನು. ರಾಜದ್ವಾರದ ಬಳಿಯಲ್ಲಿ ಶಿಲಾಗಜಗಳ ಮೇಲೆ ಅಕ್ಬರನು ಇರಿಸಿದ ಪುತ್ತ ಮತ್ತು ಜಯಮಲ್ಲ ಎಂಬ ರಾಜಪುತ್ರವೀರರ ಪ್ರತಿಮೆಗಳನ್ನು ದೃಷ್ಟಿಸಿದನು. ಮನಸ್ಸಿನ ಖಿನ್ನತೆಯು ಇಮ್ಮಡಿಸಿದಂತಾಯಿತು. ಪ್ರತಿಮೆಗಳ ಮೇಲಿಂದ ದೃಷ್ಟಿಯನ್ನು ಹಿಂತೆಗೆಯಲಾರದೆ ಶಿವಾಜಿಯು ತಾನೂ ಪ್ರತಿಮೆಯಂತೆ ನಿಂತುದನ್ನು ಕಂಡು, ರಾಜಸಿಂಹನು ಮುಆಜಮ್ ನೊಡನೆ ಶಿವಾಜಿಯ ಬಳಿಗೆ ಬಂದನು.

ರಾಜಸಿಂಹ:- "ಮುಂದೆ ದಯಮಾಡಬೇಕು."

ಶಿವಾಜಿಯು ಉಚ್ಚಸ್ವರದಿಂದ “ಬಾದಶಹರು ಇನ್ನೂ ಬರಲಿಲ್ಲವೇಕೆ?” ಎಂದು ಕೇಳಿದನು.

ರಾಜಸಿಂಹನು “ಬಾದಶಹರ ಪಕ್ಷವಾಗಿ ಯುವರಾಜರು ಬಂದಿರುವರು” ಎಂದು ಹೇಳಿ ಮುಅಜಮನನ್ನು ತೋರಿಸಿ, ಕೈಕೊಟ್ಟು ಶಿವಾಜಿಯನ್ನು ಸನ್ಮಾನಪೂರ್ವಕವಾಗಿ ಚಾಂದಿ ರಸ್ತೆಗೆ (ಬೆಳ್ಳಿಯ ಬೀದಿಗೆ) ಕರೆದು ತಂದನು.

ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಜರತಾರಿನ ವಸ್ತ್ರ ಶಾಲೆಗಳು, ರೇಶ್ಮೆಬಟ್ಟೆಯ ಅಂಗಡಿಗಳು, ಆಯುಧಶಾಲೆಗಳು, ಮದ್ದುಗುಂಡನ್ನು ತಯಾರಿಸುವ ಆಲಯಗಳು ತೋರಿಬಂದುವು. ಶಿವಾಜಿಯು ಸಾದಚಾರಿಯಾಗಿ ಮುಂದು ಗಡೆಯಲ್ಲಿದ್ದ ರಾಜಾಂಗಣವನ್ನು ಸೇರಿದನು.
ಅವರಂಗಜೀಬನು “ಆಮ್ ಖಾಸ್‌ಖಾನೆ"ಯಲ್ಲಿ (ಆಸ್ಥಾನಮಂದಿರ) ಸಿ೦ಹಾಸನಾರೂಢನಾಗಿದ್ದನು. ತನ್ನ ವೈಭವದಿಂದಲೂ ಮಹತ್ವದಿಂದಲೂ ಶಿವಾಜಿಯನ್ನು ಬೆರಗುಗೊಳಿಸಬೇಕೆಂದು ಬಾದಶಹನ “ಆಮ್ ಖಾಸ್‌ಖಾನೆ"ಯನ್ನು ಈ ದಿನ ಪರಿಷ್ಕಾರಗೊಳಿಸಿದ್ದನು. ಮಂದಿರದ ಆಕಾರವು ಪರಿಪಾಟಯಾಗಿತ್ತು. ಸುತ್ತಲ್ಲೆಲ್ಲಾ ಧನುಸ್ಸಿನ ಆಕೃತಿಯ ಅಲಂಕೃತವಾದ ಕಮಾನುಗಳು; ರೇಶ್ಮೆಯಿಂದ ಹೊದಿಸಿದ್ದ ಅಂತಸ್ತು; ಇದಕ್ಕೆ ಆಧಾರವಾಗಿ ನಿಂತ ಚಿನ್ನದ ವರಕಿನ ಕಂಬಗಳು; ಈ ಸ್ತಂಭಗಳಲ್ಲಿ ಚಿತ್ರಿತವಾದ ಕೃತಿಮ ಪುಷ್ಪಗಳು, ಲತೆಗಳು, ನಿಕುಂಜಗಳು, ಮಂದಿರದ ಉಭಯ ಪಾರ್ಶ್ವಗಳಲ್ಲಿ ಒಂದರ ಮೇಲೆ ಒಂದಾಗಿ ಉನ್ನತವಾದ ಮೂರು ವೇದಿಕೆಗಳು; ಸುವರ್ಣಕೃತವಾದ, ರಜತಮಯವಾದ, ಚಂದ್ರಕಾಂತನಿರ್ಮಿತವಾದ ಮೂರು ವೇದಿಕೆಗಳು, ಮಾಂಡಲಿಕರೂ ರಾಜಕುಲದವರೂ ಎತ್ತರವಾದ ವೇದಿಕೆಯನ್ನು ಏರಿದ್ದರು. ಮಿಕ್ಕವರೆಲ್ಲರು ಉಳಿದ ಎರಡು ಜಗುಲಿಗಳ ಮೇಲೆ ಪದವಿಗೆ ಅನುಸಾರವಾಗಿ ಕುಳಿತಿದ್ದರು. ಮುಂದಿರದ ಒಂದು ಭಾಗದಲ್ಲಿ “ಜಾರೂಕಾ" ಎಂಬ ವಿಶಾಲವಾದ ಕಿಟಕಿ; ದ್ವಾರಗಳೆಲ್ಲಿದ, ಕಟಾಂಜನವಿಲ್ಲದ ಕಿಟಕಿ. ಇಲ್ಲಿಯೇ ಮೊಗಲ್ ಚಕ್ರವರ್ತಿಗಳು ದಿನಂಪ್ರತಿ ಒಂದು ಸಲ ಬಂದು, ಪ್ರಜೆಗಳಿಗೆ ದೃಶ್ಯರಾಗುತ್ತಿದ್ದರು. “ಜಾರೂಕ"ದ ಹಿಂದೆ ಸ್ವಯಂ ಬಾದಶಹನು ವಿರಾಜಮಾನನಾಗಿದ್ದನು. ಜಾತಿ ಸುವರ್ಣ ನಿರ್ಮಿತವಾದ, ಅಮೂಲ್ಯ ನವರತ್ನ ಪ್ರೋಕ್ಷಿತವಾದ, ದ್ವಾದಶಕಾಂಚನಸ್ತಂಭಾಕೃತವಾದ ಮಯೂರಾಸನವನ್ನು ಮೊಗಲ್ ಚಕ್ರೇಶ್ವರನು ಆರೋಹಿಸಿದ್ದನು. ಅವರಂಗಜೀಬನು ತನ್ನ ಜೀವ ಕಾಲದಲ್ಲಿ ಮಯೂರ ಪೀಠವನ್ನು ಏರಿದ್ದು ಈ ಸಲವೇ. " ಶಿವಾಜಿಯು ಮಾಯಾವಿ” ಎಂದೆಣಿಸಿ, ಲೋಹಕವಚನ್ನೂ ಅಸ್ತ್ರಶಸ್ತ್ರಗಳನ್ನೂ ಕೊಟ್ಟು, ಮೈಗಾವಲನ್ನಿಟ್ಟುಕೊಂಡು ಸಿಂಹಾಸನದಲ್ಲಿ ಅವನು ಕುಳಿತಿದ್ದನು.” ಜನಸ್ತೊಮದಲ್ಲಿ ಶಿವಾಜಿ ಯಾರೆಂದು ಅವರಂಗಜೀಬನು ತನ್ನವರೊಡನೆ ಕೇಳಿದನು. ಸಮೀಪದಲ್ಲಿದ್ದ ರಜಪೂತ ಮಾಂಡಲಿಕನೊಬ್ಬನು ಕೈಜೋಡಿಸಿ ನಿಂತು, ಪ್ರತಿಭಾಮಯವಾದ ಮುಖವುಳ್ಳವನಾಗಿಯೂ, ಶುಕನಾಸನಾಗಿಯೂ, ಸ್ವಲ್ಪ ನೀಲವರ್ಣನಾಗಿಯೂ, ಆಜಾನುಬಾಹುವಾಗಿಯೂ, ಕುಬ್ಜನಾಗಿಯೂ ಇದ್ದು, ಗಂಭೀರಗತಿಯಿಂದ ಬರುತ್ತಿದ್ದ ಶಿವಾಜಿಯನ್ನು ತೋರಿಸಿದನು. ಶಿವಾಜಿಯು ಆಸ್ಥಾನಮಂದಿರದಲ್ಲಿ ಪದಾರ್ಪಣ ಮಾಡಿದನು. ಒಮ್ಮೆ ತಟಸ್ಥನಾಗಿ ನಿಂತು “ಅಮ್ ಖಾಸ್ ಖಾನೆಯ” ಸೌಭಾಗ್ಯ ಸೌರಂಭವನ್ನು ನೋಡಿದನು; ನೋಡಿ ಸಾಮಾನ್ಯರಂತೆ ಶಿವಾಜಿಯು ಬೆರಗಾಗಲಿಲ್ಲ. ಮೊಗಲ್ ಮಹತ್ವವನ್ನು ಹಿಂದೂ ಅಲ್ಪತೆಯ ಮೇಲೆ ಒತ್ತಿಬಿಡಬೇಕೆಂದು ಅವರಂಗಜೇಬನು ಮನಸ್ವಿಯಾಗಿ ಇದನ್ನೆಲ್ಲಾ ಮಾಡಿರುವನು ಎಂದು ಶಿವಾಜಿಯು ಕೂಡಲೇ ತಿಳಿದುಬಿಟ್ಟನು. ಶಿವಾಜಿಯ ದೃಷ್ಟಿಗಳು ಸುವರ್ಣ ವೇದಿಕೆಯ ಮೇಲಿದ್ದ ರಜಪೂತರ ಕಡೆಗೆ ಚಲಿಸಿದುವು. ಅಷ್ಟರಲ್ಲಿ ರಾಜಸಿಂಹನು ಹತ್ತಿರಕ್ಕೆ ಬಂದು “ರಾಜರೇ! ಇಲ್ಲಿಂದ ಮುಂದರಿಸಬೇಕಾದರೆ ಬಾದಶಹರಿಗೆ ನೆಲವನ್ನು ಮುಟ್ಟಿ ಮೂರು ಸಲ ಸಲಾಂ ಮಾಡುವುದು ಪದ್ಧತಿಯಾಗಿದೆ. ಎಂದನು. ಶಿವಾಜಿಯು ತಿರುಗಿ ನೋಡಿದನು. ಬಳಿಕ ಉಚ್ಛಸ್ವರದಿಂದ “ಇಷ್ಟು ನಮ್ಮಿಂದಾಗಲಾರದು; ಈ ಜನ್ಮದಲ್ಲಿ ಯಾವ ಮುಸಲ್ಮಾನನಿಗೂ ಹೀಗೆ ನಮಸ್ಕಾರ ಮಾಡಿಲ್ಲ. ಮುಂದೆಯೂ ಮಾಡಲಾರೆವು” ಎಂದನು.

ರಾಜಸಿಂಹನು ವ್ಯಗ್ರನಾಗಿ ಕಳವಳದಿಂದ, “ಇದೊಂದು ಕಠಿನ ಸಮಸ್ಯೆಯಾಗಿದೆಯಲ್ಲ! ಸಮ್ರಾಜರು ಕೋಪಿಸಿಕೊಂಡರೆ, ಕಾರ್ಯವು ಕೆಡುವುದು' ಎಂದನು.

ಶಿವಾಜಿಯು ತನ್ನ ಎಡಕ್ಕೆ ಇದ್ದ ರಾಜಪುತ್ರರನ್ನು ನೋಡಿ “ಇವರೆಲ್ಲರು ಅದೇ ಪ್ರಕಾರವಾಗಿ ಮಾಡಿ, ತಮ್ಮ ಆಸನವನ್ನು ಏರಿದರೇ?” ಎಂದು ಕೇಳಿದನು.

ರಾಜಸಿಂಹನು ಬಾದಶಹನ ಕಡೆಗೆ ನೋಡುತ್ತ, ಶಿವಾಜಿಯೊಡನೆ, “ಹಾಗೆ ಮಾಡದೆ ಮುಂದರಿಸಕೂಡದು” ಎಂದನು. ಅವರಂಗಜೀಬನು ಪಕ್ಕದಲ್ಲಿದ್ದ ರಾಜಪುತ್ರರೊಡನೆ ಏನನ್ನೂ ಮಾತಾಡುತ್ತಿದ್ದನು.

ಶಿವಾಜಿಯು ಸ್ವಲ್ಪ ಹೊತ್ತು ಮನಸ್ಸಿನಲ್ಲಿಯೇ ಚಿ೦ತಿಸಿದನು. ರಾಜಸಿಂಹನೊಡನೆ “ಈ ಮಾತು ಮನ್ನಿಸಬೇಕಾಗುವುದು. ಇಲ್ಲವಾದರೆ ಕೆಲಸವು ಕೆಟ್ಟು ಹೋಗುವುದೆಂಬುದು ನಿಜ” ಎಂದನು.

ಶಿವಾಜಿಯು ಮುಂದೆ ಬಂದು ಮರು ಸಲ ಸಲಾಂ ಮಾಡಿದನು; ಆದರೆ ನೆಲವನ್ನು ಮುಟ್ಟಿ ಕೈಮುಗಿಯಲಿಲ್ಲ. ಅವರಂಗಜೀಬನು ಅದನ್ನು ಓರೆಗಣ್ಣಿನಿಂದ ನೋಡದೆ ಹೋಗಲಿಲ್ಲ. ರಾಜಸಿಂಹನು ತುಟಿಯೊಳಗೆ ನಗುವಂತಿದ್ದನು. ಶಿವಾಜಿಗೆ ಆಸನವನ್ನು ಮೊದಲೆ ಒದಗಿಸಿದ್ದರೂ ಭಾದಶಹನು ರಾಜಸಿಂಹನೊಡನೆ “ರಾಜರು ಕುಳಿತುಕೊಳ್ಳುವುದಕ್ಕೆ ಎಲ್ಲಿ ಆಸನವನ್ನು ಮಾಡಿರುವೆ?” ಎಂದು ಕೇಳಿದನು.

ರಾಜಸಿಂಹನು ಶಿವಾಜಿಗೆ ಕೈಕೊಟ್ಟು ಬಾದಶಹನ ಬಲಗಡೆಯಲ್ಲಿದ್ದ ಸುವರ್ಣ ವೇದಿಕೆಯ ಮೂಲೆಯಲ್ಲಿ ಕುಳ್ಳಿರಿಸಿದನು. ಶಿವಾಜಿಯು ಫಕ್ಕನೆ ಅಸನದಿಂದ ಕೆಳಕ್ಕೆ ದುಮುಕಿ, “ನಮ್ಮ ಬಲಗಡೆಯಲ್ಲಿ ಇರುವವರು ಯಾರು?” ಎಂದು ಗಂಭೀರಧ್ವನಿಯಿಂದ ಕೇಳಿದನು.

ಬಲಗಡೆಯಯಿದ್ದ ರಜಪೂತ ಸರದಾರರೂ ಉಮ್ರಾಗಳೂ ಸಂದಿಗ್ಧ ಮಾನಸರಾಗಿ ನೋಡಿದರು. ಆದರೂ ಬಾದಶಹನು ಶಾಂತಚಿತ್ತನಾಗಿ ನೋಡುತ್ತಿದ್ದನು.

ಶಿವಾಜಿಯ ಪ್ರಶ್ನೆಗೆ ಉತ್ತರವಾಗಿ ರಾಜಸಿಂಹನು ತಮ್ಮ ಬಲಗಡೆಯಲ್ಲಿದ್ದವರು “ಮಾರವಾಡ ಸಂಸ್ಥಾನಾಧಿಪರಾದ ಯಶವಂತ ಸಿ೦ಹರು.” ಎಂದು ಹುಸಿನಗುವಿನಿಂದ ಹೇಳಿದನು.

ಇದನ್ನು ಕೇಳಿದನೊ ಇಲ್ಲವೊ ಶಿವಾಜಿಯು ಕಿಡಿಕಿಡಿಯಾಗಿ ಉರಿದನು. ಅವಮಾನಶೂಲವನ್ನು ಮೈಯ್ಯೊಳಗೆ ತಿವಿದು ತಿರುಪಿದಂತೆ ಅವನು ಉದ್ರೇಕಿತನಾದನು. ಆದರೂ ಅವಮಾನ್ಯಜನ್ಯವಾದ ಕೋಪವನ್ನಾಗಲಿ ವ್ಯಧೆಯನ್ನಾಗಲಿ ಅವನು ತೊರಿಸಲಿಲ್ಲ. ಶಿವಾಜಿಯು ಗಂಭೀರ ಸ್ವರದಿಂದ ಯಶವಂತಸಿಂಹನ ಸಹಪಂಙ್ತಿಯಲ್ಲಿ ಕುಳಿತುಕೊಳ್ಳಲು ನಮ್ಮ ಯೋಗ್ಯತೆಯು ಎಂತಹದು? ಸ್ವದೇಶವತ್ಸಲರಾದ, ಸ್ವಾತಂತ್ರ್ಯಪರಾಯಣರಾದ, ಸ್ವಧರ್ಮ ರಕ್ಷಕರಾದವರು ಯಾರಾದರೂ ಈ ಆಸ್ಥಾನದಲ್ಲಿ ಇದ್ದರೆ, ಆ ಬಡಪಾಪಿಗಳೊಡನೆ ಕೈಕಟ್ಟಿ ನಿಲ್ಲಲು ಯೋಗ್ಯರಲ್ಲದೆ, ಮೊಗಲ್ ಸಂಸ್ಥಾನದ ಜಹಗೀರುದಾರರೆಂಬ ದೊಡ್ಡ ದೊಡ್ಡ ಬಿರುದನ್ನು ತಾಳಿರುವ ಮಹಾ ರಜಪೂತರ ಬಳಿ ಸೇರುವುದಕ್ಕೆ ನಮ್ಮಲ್ಲಿ ಯೋಗ್ಯತೆ ಉಂಟೇ? ಯಶವಂತಸಿಂಹ ಮೊದಲಾದವರೊಳಗೆ ನಾವು ಒಬ್ಬರೆಂದು ತಿಳಿದಿರಬಹುದು. ಬಾದಶಹರು ಎಲ್ಲರಿಗೂ ಮಾನಮರ್ಯಾದೆಗಳನ್ನು ಕೊಟ್ಟರು. ಪ್ರತಿಯಾಗಿ ಹಿಂದುಗಳು ತಮ್ಮ ರಾಜಮರ್ಯಾದೆಗಳನ್ನು ಬಾದಶಹರಿಗೆ ಬಿಟ್ಟುಕೊಟ್ಟರು. ಈ ಗೌರವವು ಚಿತ್ತೂರಿನ ರಾಣಾವಿಗೂ ಮಹಾರಾಷ್ಟ್ರದ ಶಿವಾಜಿಗೂ ಬರಲಿಲ್ಲ. ಅಂತಹ ಗೌರವದ ಅಪೇಕ್ಷೆ ಇದ್ದಲ್ಲಿ ನಾವು ಈ ಯಶವಂತಸಿಂಹ, ರಾಮಸಿಂಹ, ಮೊದಲಾದವರೊಡನೆ ಕುಳಿತುಕೊಳ್ಳುವೆವು ಅಲ್ಲದೆ, ಪ್ರಕೃತದಲ್ಲಿ ಅಂತಹ ಬಹುಮಾನವನ್ನು ಆಶಿಸುವುದಿಲ್ಲ" ಎಂದನು.

ಬಾದಶಹನ ಪಕ್ಕದಲ್ಲಿದ್ದ ರಜಪೂತರೆಲ್ಲರೂ ಅಧೋವದನರಾದರು. ರಾಜಸಿಂಹನು ಮಾತನಾಡಲಾರೆವೆ ಮೋರೆ ತಗ್ಗಿಸಿ ನಿಂತನು. ಬಾದಶಹನು ಶಿವಾಜಿ ಆಡಿದ ಭಾಷೆಯ ಜ್ಞಾನಶೂನ್ಯನಾದರೂ, ಸಂದರ್ಭಾನುಸಾರದಿ೦ದ ಅದರ ಅರ್ಥವನ್ನು ತಿಳಿದು ರಾಜಸಿಂಹನೊಡನ “ಇದೇನು ಸಂಗತಿ” ಎಂದು ಕೇಳಿದನು.

ರಾಜಸಿಂಹನ ನತಶಿರಸ್ಕನಾಗಿ “ವನಸಿ೦ಹವು ಬೋನಿನಲ್ಲಿ ಸಿಕ್ಕಿ ಕೊಂಡಿದೆ” ಎಂದನು.

ಅವರಂಗಜೀಬನು ನಗುತ್ತ, “ಅದಕ್ಕೋಸ್ಕರ ಬೊಬ್ಬಿಡುತ್ತಿದೆಯೇ? ವನ್ಯಸ್ಥಿತಿಯಲ್ಲಿದ್ದಾಗ ಮೃಗಗಳನ್ನು ನೋಡುವುದು ಸರಿಯಲ್ಲ” ಎಂದನು.

ರಾಜಸಿಂಹನು “ಮೃಗವನ್ನು ಈಗ ನಾನು ಏನು ಮಾಡಲಿ?” ಎಂದು ಮೆಲ್ಲನೆ ಕೇಳಿದನು.

ಅವರಂಗಜೀಬ:- “ಅದನ್ನು ಕೊಂಡುಹೋಗಿ ಶಾಂತವಾದ ಬಳಿಕ ಮರಳಿ ತರಬಹುದಷ್ಟೆ.”

ಈ ಸಂದರ್ಭದಲ್ಲಿ ಶಿವಾಜಿಯು ಅಲ್ಲಿ ನಿಲ್ಲಲಾರದೆ “ಆಮ್ ಖಾಸ್ ಖಾನೆಯಿಂದ ಹಿಂದೆರಳಿದ್ದನು. ಬಾದಶಹನಿಗೆ ನಮಸ್ಕಾರಮಾಡದೆ, ರಾಜಪುತ್ರರನ್ನು ಕಣ್ಣೆತ್ತಿ ನೋಡದೆ, ಅವನು ಹೋಗಿಬಿಟ್ಟನು. ಶಿವಾಜಿಯು ಅಕಸ್ಮಾತ್ತಾಗಿ ಅಲಕ್ಷವಾಗಿ ಅಸ್ಥಾನವನ್ನು ಬಿಟ್ಟು ಹೋದುದನ್ನು ನೋಡುತ್ತಲೇ, ಅವರಂಗಜೀಬನ ಕೋಪಕ್ಕೆ ಪಾರವಿರಲಿಲ್ಲ. ಆದರೂ ಸ್ಥಿರಚಿತ್ರನಾಗಿದ್ದು, ಮೌನವಾಗಿದ್ದು ತನ್ನ ಮುಖಮುದ್ರೆಯನ್ನು ಬೇರೆ ಮಾಡಲಿಲ್ಲ, ಶಿವಾಜಿಯು ಹೋದ ಬಳಿಕ ಅವನ ಪರಿಜನರು ಅವನ ಹಿಂದೆಯೇ ನಡೆದು ಬಿಟ್ಟರು. ಅವರಂಗಜೀಬನು ರಾಜಸಿಂಹನ್ನು ಕರೆದು, “ಹೋದವರು ಎಲ್ಲಿ ತಾನೇ ಇಳಿಯುವರು?” ಎಂದು ಕೇಳಿದನು.

ರಾಜಸಿಂಹ:- “ಖಾವಂದರ ಅಪ್ಪಣೆಯಂತೆ ಅವರಿಗೋಸ್ಕರ ಕೋಟೆಯ ಒಳಗೆ ಮೊದಲೇ ಸಜ್ಜುಗೊಳಿಸಿದ್ದ “ದಿಲ್ಖುಷ್” ಮಂದಿರದಲ್ಲಿ ಇಳಿಸುವೆನು.”

ಅವರಂಗಜೀಬನು “ಹಾಗಾದರೆ ನಡೆ! ನಡೆ! ವಿಳಂಬಿಸಬೇಡ! ಶಿವಾಜಿಯನ್ನು ಅಲ್ಲಿ ಇಳಿಸಿದ ಬಳಿಕ ನಮ್ಮನ್ನು ನೋಡಲು ನೀನು ಅರಮನೆಗೆ ಬರಬೇಕಾಗುವುದು. ರಾಜಕಾರ್ಯಗೌರವವು ಹೆಚ್ಚಿದೆ” ಎಂದು ಹೇಳಿ ಸುಮ್ಮನಾದನು.

ಶಿವಾಜಿಯು ಪೂರ್ವದ ಇಂದ್ರಪ್ರಸ್ತದ ಸೌಭಾಗ್ಯವನ್ನೆಲ್ಲಾ ನೋಡುತ್ತ ಆರ್ಯಪುತ್ರರ ಆಸ್ಥಾನದಲ್ಲಿ ಮೊಗಲರು ಸ್ಟೇಚ್ಛೆಯಿಂದ ರಾಜದಂಡವನ್ನು ಪರಿಪಾಲಿಸುವುದನ್ನು ಯೋಚಿಸುತ್ತ, ರಾಜಪುತ್ರರಿಗೂ ಹಿಂದುಗಳಿಗೂ ತಗಲಿದ ಹೀನಾವಸ್ಥೆಯನ್ನು ಕುರಿತು ದುಃಖಿಸುತ್ತ ಮೆಲ್ಲಮೆಲ್ಲನೆ ಹೋಗುತಿದ್ದನು. ರಾಜಸಿಂಹನು ತನ್ನ ಸಮೀಪಸ್ಥನಾದುದನ್ನು ನೋಡಿ ಶಿವಾಜಿಯು “ಬಾದಶಹನು ಎಂತಹನು? ನಮ್ಮನ್ನೂ ಯಶವಂತಸಿಂಹನನ್ನೂ ಒಂದು ಮಾಡಿದನಲ್ಲ!” ಎಂದು ಕೇಳಿದನು.

ರಾಮಸಿಂಹನು "ಅರಮನೆಯಲ್ಲಿದ್ದಾಗ ಅಲ್ಲಿನ ಪದ್ಧತಿಗನುಸಾರವಾಗಿ ನಡೆಯದೆ ಆಗಲಾರದು. ಅದು ಹೋಗಲಿ! ಈಗ ತಾವು ಸುರಕ್ಷಿತವಾಗಿ ತಮ್ಮ ಊರನ್ನು ಸೇರಿದರೆ ಸಾಕು! ನನ್ನ ಭಾರವನ್ನು ಇಳಿಸಿಕೊಂಡಂತಾಗುವುದು” ಎಂದು ದೈನ್ಯದಿಂದ ಬೇಡಿಕೊಂಡನು.

ಶಿವಾಜಿಯು ಈ ಮಾತಗಳ ಸೂಕ್ಷ್ಮಾರ್ಧವನ್ನು ಗ್ರಹಿಸಿಕೊಂಡು, ತನಗೋಸ್ಕರ ಅಣಿಮಾಡಿದ್ದ ಮಂದಿರವನ್ನು ಸೇರಿದನು. ಈ ರೀತಿಯಾಗಿ ಕ್ರಿ. ಶಕೆಯ೧೬೬೬ರಲ್ಲಿ ಶಿವಾಜಿಯು ಬಾದಶಹನಿಗೆ ಮೊತ್ತ ಮೊದಲು ಕೊಟ್ಟ ಸಂದರ್ಶನವು ಕಟ್ಟ ಕಡೆಯದಾಯಿತು.

ಯಾವ ದಿವಸದಲ್ಲಿ ಶಿವಾಜಿಯು ಅವರಂಗಜೀಬನ ಸಂದರ್ಶನಾರ್ಥವಾಗಿ ಹೋಗಿದ್ದನೋ ಆ ದಿವಸವೇ ಶೈಲಿನಿಯು ಕೋಟೆಯೊಳಗೆ ರಾಜಸಿಂಹನಿಗೋಸ್ಕರ ಸಜ್ಜುಗೊಳಿಸಿದ್ದ ಮಂದಿರದ ಉಪ್ಪರಿಗೆಯನ್ನು ಏರಿದ್ದಳು. ಶಿವಾಜಿಯು ಶಿಬಿರವನ್ನು ಮುಟ್ಟಿದನು. ಬಾದಶಹನ ಆಜ್ಞಾನುಸಾರವಾಗಿ ರಾಜಸಿಂಹನು ಅರಮನೆಗೆ ಹಿಂದೆರಳಿದನು. ಆದರೂ ಶೈಲಿನಿಯು ಮಹಡಿಯಿಂದ ಕೆಳಕ್ಕೆ ಇಳಿಯಲಿಲ್ಲ. ರಾತ್ರಿದೇವಿಯು ತನ್ನ ಭಯಾನಕ ರೂಪವನ್ನು ಧರಿಸಿ ಬರುವಾಗ ಒಂದೆರಡು ನಕ್ಷತ್ರಗಳು ಆಕಾಶದಲ್ಲಿ ಕಣ್ಣು ಮಿಟುಕಿಸುತ್ತಿದ್ದುವು. ಆದರೂ ಶೈಲಿನಿಯು ಅಲ್ಲಿಯೇ ನಿಂತಿದ್ದಳು. ತಂದೆಯು ಬಾದಶಹನನ್ನು ಬೀಳ್ಕೊಂಡು ಮರಳಿ ಬಂದನು. ರಾಜಸಿಂಹನು ಮಗಳನ್ನು ನೋಡುವುದಕ್ಕೆ ಮಹಡಿಯನ್ನು ಹತ್ತಿದನು. ಶೈಲಿನಿಯು ಸುಮ್ಮನೆ ನಿಂತಿರುವುದನ್ನು ಕಂಡು, “ಮಗು! ಇನ್ನೂ ನಿದ್ದೆ ಹೋಗಲಿಲ್ಲವೇಕೆ?” ಎಂದು ರಾಜಸಿಂಹನು ಕೇಳಿದನು.

ಶೈಲಿನಿ:- “ಅಪ್ಪಾ ನೀನು ಬರಲಿಲ್ಲವೆಂದು ಕಾದಿದ್ದೆನು.”

ರಾಜಸಿಂಹ:- “ಮುಆಜಮನು ನನ್ನ ಸಂಗಡ ಬರುವನೆಂದು ನೀನು ತಿಳಿದೆಯಾ?"

ಶೈಲಿನಿ:- “ಮು- ಆಜಮನು ಈ ಮನೆಗೆ ಏಕೆ ತಾನೇ ಬರುವನು? ಇದು 'ಶರಾಬ್ ಖಾನೆ' ಅಲ್ಲವಲ್ಲಾ?”

ರಾಜಸಿಂಹನು ಹುಬ್ಬು ಗಂಟಿಕ್ಕಿ, “ಅಲ್ಲ! ಇದು ಶೈಲಿನಿ ಮಂದಿರ. ಇಲ್ಲಿಯೇ ಹೆಂಡತಿಯನ್ನು ನೋಡುವ ಹಾಗೆ ಅವನು ಬರಬೇಕೆಂದಿದ್ಧನು.”

ಶೈಲಿನಿ ಪ್ರತಿಯಾಗಿ, “ಅಪ್ಪಾ! ಕೆಂಡ ತಿಂದುನೋಡುವುದಕ್ಕೆ ಇದು 'ಶರಾಬ್ ಖಾನೆ' ಅಲ್ಲವೆಂದೇ ನಾನು ಹೇಳಿದೆನು.”

ರಾಜಸಿಂಹ:- “ಅಮ್ಮಾ! ಉದ್ದುರುಂಟು ಮಾತಾಡಬೇಡ! ಸುಮ್ಮನೆ ಹಟಹಿಡಿದು ಹುಚ್ಚಳಾಗಬೇಡ, ಕಂಡೆಯಾ?”

ಶೈಲಿನಿ:- “ಅಪ್ಪಾ! ಹಟ ಹಿಡಿಯುವವರೆಲ್ಲರೂ ಹುಚ್ಚರಾದರೆ, ಲೋಕದಲ್ಲಿ ಬುದ್ಧಿವಂತರು ಯಾರು ತಾನೇ ಇರುವರು?

ರಾಜಸಿಂಹ:- ಮಗು! ನಾನು ನಿನ್ನ ಅರ್ಥವನ್ನೆಲ್ಲಾ ತಿಳಿದಿರುವೆನು. ಆದರೆ ಒಂದು ಮಾತನ್ನು ಮರೆಯಬೇಡ- ಮರಾಟರು ಶೂದ್ರರು”.

ಶೈಲಿನಿ:- “ನಾನು ಅದಕ್ಕಿಂತಲೂ ಹೆಚ್ಚಾಗಿ ಬಲ್ಲೆನು. ಮುಸಲ್ಮಾನರು ಮ್ಲೇಚ್ಛರು”.

ರಾಜಸಿಂಹನು ಉಚ್ಚಸ್ವರದಿಂದ “ಮಗು, ಶೈಲಿನಿ! ನಾನು ನಿನ್ನನ್ನು ಯಾವಾಗ ಪ್ರತಾಪಗಡಕ್ಕೆ ಕೊಂಡು ಹೋದೆನೋ ಅಂದಿನಿಂದ ನೀನು ಹೀಗೆ ವರ್ತಿಸಲು ತೊಡಗಿದೆ. ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ನಿನ್ನ ಹಣೆಯಲ್ಲಿ ಬರೆದಂತಾಗುವುದು. ಈ ನಿನ್ನ ನಡತೆಯು ನಿನಗೆ ಹಿತಕರವಲ್ಲ. ನೀನು ಅನ್ಯರ ಹಸ್ತಗತಳಾಗಿ, ನಿನ್ನೊಡನೆ ನನ್ನನ್ನೂ ನಮ್ಮ ಕುಲವನ್ನೂ ಅಳಿಸಿ ಬಿಡುವುದಕ್ಕಿಂತಲೂ, ನಾನು ಹೇಳಿದಂತೆ ನಡೆದುಕೊಳ್ಳುವುದು ಒಳ್ಳೆಯದಲ್ಲವೇ? ಅವರಂಗಜೀಬನ ಬಂದಿಯಾದ ಶೂದ್ರ ಮರಾಟನ ಕಪಟಪ್ರೇಮಪಾಶದಲ್ಲಿ ನೀನು ಬಿದ್ದು ಸಾಯುವುದಕ್ಕಿಂತಲೂ ಸಾಕ್ಷಾತ್ ಭಾರತ ಬಾದಶಾಹಿಯ ಪುತ್ರನಾದ, ವಿಕ್ರಮಸಂಪನ್ನನಾದ ಮುಆಜಮನ ಯಥಾರ್ಥ ಪ್ರಣಯಭಾಜನೆಯಾಗಿ, ಭಾಗ್ಯಶಾಲಿನಿ ಎನಿಸಿಕೊಳ್ಳುವುದು ಲೇಸಲ್ಲವೇ! ತುಚ್ಛನಾದ ಆ ಮಾವಳಿಗನೆಲ್ಲಿ? ರಜಪೂತ ಕನ್ಯೆಯಾದ ಶೈಲಿನಿ ಎಲ್ಲಿ? ಕೆಲವು ದಿನಗಳಿಂದ ಈಚೆಗೆ ನಿನ್ನ ನಡತೆ ನನಗೆ ಅಸಹ್ಯವಾಗುತ್ತ ಬಂದಿದೆ. ಅನ್ನಾಹಾರಾದಿಗಳಲ್ಲಿ ಅಲಕ್ಷ್ಯ, ಮನೆಯವರ ಮೇಲೆ ಔದಾಸೀನ್ಯ, ನನ್ನೊಡನೆ ಅವಿಧೇಯತೆ, ಮುಆಜಮನ ವಿಷಯದಲ್ಲಿ ತಾತ್ಸಾರ, ನಿನ್ನ ಆತ್ಮಸಂಭಾಷಣೆ, ನಿನ್ನ ಅಂತರಂಗ ಪಲಾಯನ- ಇವೆಲ್ಲವು ವಿಪರೀತವನ್ನು ಸೂಚಿಸುತ್ತಿವೆ. ಬಾದಶಹರ ರಾಜಕಾರ್ಯಗೌರವ, ಶಿವಾಜಿಯ ಆಗಮನ ಮುಆಜಮನ ನಿರ್ಬಂಧ, ನಿನ್ನ ಹುಚ್ಚು ಹಟ- ಇವೆಲ್ಲವುಗಳಿಂದ ನನ್ನ ಬುದ್ದಿಯು ಮು೦ಗಾಣದು” ಎಂದು ಹೇಳಿದನು.

ಶೈಲಿನಿಯು ಈ ವಾಕ್ಯಪರಂಪರೆಯಿಂದ ಕದಲದೆ, “ಅಪ್ಪಾ! ಶಿವಾಜಿಯು ಅವರಂಗಜೀಬನ ಬಂಧಿ ಎಂದು ನೀನು ಹೇಳಿದೆ. ಅವಮಾನ ಮಾಡಿದ್ದು ಸಾಲದೆ ಅವನನ್ನು ಮೋಸದಿಂದ ಬಂದಿಯಾಗಿ ಮಾಡಿದೆನೇ ? ಎಂದು ಕೇಳಿದಳು.

ರಾಜಸಿಂಹನು ಮೈದೆಗೆದು, “ಶಿವಾಜಿ ಬ೦ದಿಯಾಗಿರುವೆನಂದು ನಾನು ಹೇಳಿದೆನೇ? ನನ್ನ ಮನಸ್ಸು ಸರಿಯಾಗಿಲ್ಲ. ನಿದ್ದೆ ಗಣ್ಣುಗಳಿಂದ ಏನು ಹೇಳಿರುವೆನೆಂದು ಅರಿಯೆನು” ಎಂದು ಹೇಳಿ ಉಪ್ಪರಿಗೆಯಿಂದ ಇಳಿದುಹೋದನು.

ಶೈಲಿನಿಯು ತಂದೆಯ ಮಾತುಗಳನ್ನು ಮನಸ್ಸಿನಲ್ಲಿ ಮಥಿಸುತ್ತ, ಕುಳಿತಲ್ಲಿಯೇ ಗೋಡೆಗೆ ಒರಗಿ ನಿದ್ದೆ ಹೋದಳು.

ರಾಜಸಿಂಹನು ಎಚ್ಚರ ತಪ್ಪಿ ಹೇಳಿದಂತೆ, ಶಿವಾಜಿಯು ಡಿಲ್ಲಿಯಲ್ಲಿ ಸೆರೆಯಾಗಿದ್ದನು. ಶಿವಾಜಿಯು ತಪ್ಪಿಸಿಕೊಳ್ಳದಂತೆಯೂ, ರಾಜಪುತ್ರರೊಡನೆ ಒಳಸಂಚು ನಡೆಸದಂತೆಯೂ, ಅವರಂಗಜೀಬನು ಅವನ ಮೇಲೆ ಹೊಂಚು ಹಾಕಿದ್ದನು. ಆದರೆ ಈ ಪಹರೆಯಲ್ಲಿ ಶಿವಾಜಿಯ ಬಂಧನವು ಸೂಚಿತವಾಗಿರಲಿಲ್ಲ. ಆದರೂ ಶಿವಾಜಿಯು ಕೋಟೆಯನ್ನು ದಾಟುವುದಾದರೆ, ಅವರಂಗಜೀಬನ ಸೈನಿಕರ ಕತ್ತಿಗಳು ಒರೆಯಿಂದ ಹಾರಲು ಸಿದ್ಧವಾಗಿದ್ದುವು. ಮರು ದಿನಗಳಿಂದ ಮೊಗಲ್ ಸೈನಿಕರು ಆಯುಧಪಾಣಿಗಳಾಗಿ ಹಗಲಿರುಳು ತನ್ನ ಶಿಬಿರವನ್ನು ಬಿಡದೆ ಕಾಡುವುದನ್ನು ಶಿವಾಜಿಯು ತಿಳಿದುಕೊಂಡನು. ಆ ಮೈಗಾವಲಿನ ಅರ್ಧವನ್ನು ಶಿವಾಜಿಯು ತಿಳಿಯ ಹೋಗಲಿಲ್ಲ. ಈ ಸಂಕಷ್ಟಕರವಾದ ಸಮಸ್ಯೆಯಿಂದ ರಕ್ತಪಾತವಿಲ್ಲದೆ ಹೇಗೆ ಪಾರಾಗಬೇಕೆಂದು ಅವನು ಒಂದೆರಡು ದಿನ ತಾನೆ ವಿಚಾರಮಾಡಿದನು. ರಹಸ್ಯದಲ್ಲಿ ಪಲಾಯನ ಮಾಡುವುದಕ್ಕೆ ಅವನ ಬಳಿಯ ದಳವು ಅಧಿಕವಾಗಿತ್ತು; ಅವರನ್ನೆಲ್ಲಾ ಕಟ್ಟಿಕೊಂಡರೆ, ಪಲಾಯನದಲ್ಲಿ ಗುಟ್ಟು ನಿಲ್ಲಲಾರದು. ಬಹಿರಂಗ ಯುದ್ಧವನ್ನು ಮಾಡುವುದಕ್ಕೆ ದಳವು ಅಲ್ಪವಾಗಿತ್ತು; ಅಲ್ಪ ಸೇನೆಯನ್ನು ನಂಬಿ ಯುದ್ಧ ಮಾಡುವುದು ಹುಚ್ಚುತ ತನವೆಂದು ಶಿವಾಜಿ ಎಣಿಸಿದನು.

ನಾಲ್ಕು ದಿನಗಳು ಕಳೆದುಹೋದುವು. ರಾಜಸಿಂಹನು ದಿನಕ್ಕೆ ಅನೇಕಾವರ್ತಿ ಮರಾಟರ ಪಾಳೆಯಕ್ಕೆ ಬಂದು ಹೋಗಿ, ಶಿವಾಜಿಗೆ ಬೇಕು ಬೇಕಾದುದನ್ನು ಒದಗಿಸುತ್ತ, ಆತನು ಉಳುಕೊಂಡ ಮಂದಿರದ ವಿಷಯವಾಗಿ ಬಹಳ ಶ್ರಮಗೊಳ್ಳುತ್ತ, ಶಿವಾಜಿಯ ಮಹಾ ಹಿತಚಿಂತಕನೆಂದು ನಟಿಸುತ್ತ ಇರುವುದನ್ನು ಶಿವಾಜಿಯು ತಿಳಿದುಕೊಂಡನು. ಆದಕ್ಕೆ ತಕ್ಕುದಾದ ಪ್ರತಿಕಾರವನ್ನು ಮಾಡಲು ಉದ್ಯೋಗಿಸಿದನು ಅವನ ಸರ್ವ ವ್ಯಾಪಕ ಬುದ್ಧಿಯ ಮುಂದೆ ಅವರಂಗಜೇಬನ ಪ್ರಯತ್ನಗಳೂ ರಾಜಸಿಂಹನ ಕಾರ್ಯಗಳೂ ಕುಂಠಿತವಾದುವ. ಈ ಸಂದರ್ಭದಲ್ಲಿ ಶಿವಾಜಿಯ ಕುಲದೇವತೆಯಾದ ಭವಾನಿಯು ಅವನ ಮೈಮೇಲೆ ಬಂದು, “ಶಿವಾ! ಹೆದರ ಬೇಡ! ಯಾವಾತನು ಜನನೀಜನ್ಮಭೂಮಿಯನ್ನು ಪ್ರೀತಿಸಿ, ಅದನ್ನು ಉದ್ಧಾರಮಾಡಲು ಪ್ರಯತ್ನಿಸುವನೋ, ಅವನು ನನ್ನ ಭಕ್ತನು, ಭಕ್ತರಲ್ಲಿ ಭಕ್ತನು. ಅವನಿಗೆ ಯಾವುದೊ೦ದು ಆಪತ್ತು ತಗಲಲಾರದು. ಅಂತಹನನ್ನು ಹಾಳುಮಾಡಲು ಬಗೆದವರು ಆ ದೇಶವತ್ಸಲನ ವೈಭವ ಪ್ರಾಭವವನ್ನು ನೋಡುವುದಕ್ಕೆ ಉಳಿಯದೆ, ನರಕಕ್ಕೆ ಇಳಿದು ಹೋಗುವರು. ನೀನು ಭಯಪಡಬೇಡ! ನಿನ್ನ ಕೋರಿಕೆಗಳೆಲ್ಲವು ಸಿದ್ಧಿಸುವು” ಎಂದು ಹೇಳಿದಳು. ಇದಾದ ಎರಡು ದಿನಗಳ ಬಳಿಕ ಶಿವಾಜಿಯು ರಾಜಸಿಂಹನನ್ನು ಕರೆಯಿಸಿ “ನಮ್ಮ ಸೈನಿಕರೆಲ್ಲರು ಮಾರ್ಗಾಯಾಸದಿಂದ ಮೊದಲೇ ಬಳಲಿದ್ದರು. ಇಲ್ಲಿನ ಹವೆಯು ನಮಗೆ ಹಿತಕರವಾಗುವುದಿಲ್ಲ. ಹಾಗೂ ನೀರೂ ಗಾಳಿಯೂ ನಮ್ಮೆಲ್ಲರ ಆರೋಗ್ಯವನ್ನು ಕೆಡಿಸಿರುವುವು. ಏನಾದರೂ ಪ್ರಮಾದ ಸಂಭವಿಸಿದರೆ, ನಾವು ಡಿಲ್ಲಿಗೆ ಬಂದುದೇ ಅಯೋಗ್ಯವಾಯಿತು ಎಂದು ತಿಳಿಯಬೇಕಾಗುವುದು. ನಮ್ಮ ಸೈನಿಕರೆಲ್ಲರು ನಮ್ಮ ದೇಹವನ್ನು ನೆರಳಿನಂತೆ ಹಿಂಬಾಲಿಸುವರು. ಆದರೂ ಅವರನ್ನೆಲ್ಲ ಊರಿಗೆ ಕಳುಹಿಸದೆ ನಿರ್ವಾಹವಿಲ್ಲ. ನಾವು ಅವರನ್ನೆಲ್ಲ ಹಿಂದಕ್ಕೆ ಕಳುಹಿಸಬೇಕೆಂದು ನಿಶ್ಚೈಸಿರುವೆವು. ಅವರಿಗೆ ಬಾದಶಹರ ಹೆಸರಿನಲ್ಲಿ 'ರಹದಾರಿಗಳನ್ನು' ಕೊಡಿಸಬೇಕಾಗಿ ಅಪೇಕ್ಷಿಸುತ್ತೇವೆ" ಎಂದು ಹೇಳಿದನು. ರಾಜಸಿಂಹನು ಬಾದಶಹನಿಗೆ ಶಿವಾಜಿಯ ಪ್ರಾರ್ಥನೆಯನ್ನು ಅರಿಕೆ ಮಾಡಿದನು. ಅವರಂಗಜೀಬನು ಆ ಪ್ರಾಸ್ತಾಪಕ್ಕೆ ಒಪ್ಪಿದನು. ಶಿವಾಜಿಯ ಆಪ್ತ ಅನುಚರರಲ್ಲದೆ ಮಿಕ್ಕವರೆಲ್ಲರು ಯಜಮಾನನ ನಿರ್ಬಂಧದಿಂದ ಊರಿಗೆ ಮರಳಿದರು.

ಸೈನಿಕರೆಲ್ಲರು ಹಿ೦ದೆರಳಿದ ಬಳಿಕ ಶಿವಾಜಿಯು ಮೈಯಲ್ಲಿ ಸ್ವಸ್ಥವಿಲ್ಲ ಎಂದು ಹಾಸಿಗೆ ಹಿಡಿದು ಮಲಗಿದನು. ಶಿವಾಜಿಯ ಅಸುಸ್ಥತೆಯ ಸುದ್ದಿಯು ಏನಾಗುವುಲ್ಲಿಯಲ್ಲೆಲ್ಲಾ ಹಬ್ಬಿತು ಜನರು ಶಿವಾಜಿಯನ್ನು ನೋಡುವುದಕ್ಕೆ ಗುಂಪು ಗುಂಪಾಗಿ ಶಿಬಿರಕ್ಕೆ ಬಂದರು. ಯಾರನ್ನೂ ಮನೆಯೊಳಕ್ಕೆ ಬಿಡದಂತೆ ಶಿವಾಜಿಯು ಆಜ್ಞೆ ಮಾಡಿದ್ದನು. ರಾಜಸಿಂಹನಿಗೂ ಮುಅಜಮನಿಗೂ ಹೊರತು ಮಿಕ್ಕವರಿಗೆ ಶಿವಾಜಿಯನ್ನು ನೋಡುವುದಕ್ಕೆ ಅಪ್ಪಣೆಯಿರಲಿಲ್ಲ. ಇವರಿಬ್ಬರು ಸಹ ಶಿವಾಜಿಯು ನಿಜವಾಗಿ ಅಸ್ವಸ್ಥನಾಗಿರುವನೋ ಇಲ್ಲವೊ ಎಂದು ಸರಿಯಾಗಿ ತಿಳಿಯದೆಹೋದರು. ಶಿವಾಜಿಯ ಆಸ್ವಸ್ಥದಿಂದ ಎಲ್ಲರೂ ದುಃಖಿತರಾದರು. ಶಿವಾಜಿಯ ಕ್ಷೇಮವನ್ನು ಎಲ್ಲರೂ ವಿಚಾರಿಸುತ್ತಿದ್ದರು. ಶೈಲಿನಿಯು ತನ್ನ ತಂದೆಯು ಮನೆಗೆ ಬಂದ ಕೂಡಲೇ ಅದೇ ಪ್ರಶ್ನೆಯನ್ನು ಮಾಡುವಳು. ಶಿವಾಜಿಯು ಹೇಗಿರುವನೆಂದು ನೋಡುವುದಕ್ಕೆ ಅವಳ ಪ್ರಾಣವು ತುಡಿದುಕೊಳ್ಳುತ್ತಲಿತ್ತು. ಗುಪ್ತವೇಷದಿಂದ ಅವನಿದ್ದಲ್ಲಿಗೆ ಹೋಗುವೆನೆಂದು ಒಂದು ಸಲ ಯೋಚಿಸಿದಳು. ಒಡನೆ ತನ್ನನ್ನು ಯಾರಾದರೂ ಗುರುತಿಸಿದರೆ, ತನ್ನ ಅವಸ್ಥೆಯೂ ಅನ್ಯರ ಅವಸ್ಥೆಯೂ ಏನಾಗುವುದೆಂದು ಚಿಂತಿಸಿದಳು. ಅಸ್ವಸ್ಥವು ಸ್ವಲ್ಪ ಗುಣವಾದಂತೆ ಸುದ್ದಿ ಎದ್ದಿತು. ತಾನು ಕ್ಷೇಮವನ್ನು ಹೊಂದಿದುದಕ್ಕೆ, ಶಿವಾಜಿಯು ಪ್ರತಿ ಬೃಹಸ್ಪತಿವಾರ ಗುರುಪೂಜೆಯನ್ನು ಮಾಡಲಾರಂಭಿಸಿದನು. ಪ್ರತಿ ಗುರುವಾರ ಹಗಲು ಮಹೋತ್ಸವದಿಂದ ಪೂಜೆಯನ್ನೂ ರಾತ್ರಿ ಭಗವನ್ನಾಮ ಸಂಕೀರ್ತನವನ್ನೂ ಮಾಡಿ, ದೇವರಿಗೆ ನಿವೇದನ ಮಾಡಿದ ಭಕ್ಷ್ಯಾದಿಗಳನ್ನು ದೊಡ್ಡ ದೊಡ್ಡ ಬಿದಿರ ಬುಟ್ಟಿಗಳಲ್ಲಿ ತುಂಬಿ, ಬ್ರಾಹ್ಮಣರಿಗೂ, ಮುಖ್ಯಮುಖ್ಯರಾದ ಅಧಿಕಾರಿಗಳಿಗೂ ಬೈರಾಗಿಗಳಿಗೂ, ಫಕೀರರಿಗೂ ಹಂಚುವಂತೆ ಆಜ್ಞೆ ಮಾಡಿದನು. ಮೊದಲು ಮೊದಲು ಕಾವಲುಗಾರರು ಬುಟ್ಟಿಗಳನ್ನು ಶೋಧಿಸದೆ ಬಿಡುತ್ತಿರಲಿಲ್ಲ. ಪ್ರತಿ ಗುರುವಾರವೂ ಈ ರೀತಿಯಾಗಿ ಭಕ್ಷದ ಬುಟ್ಟಿಗಳು ಹೋಗಲಾರಂಭಿಸಿದಂತೆ, ಮೊಗಲ್ ಕಾವಲುಗಾರರು ತಮ್ಮ ತಮ್ಮ ಕಾರ್ಯದಲ್ಲಿ ಉದಾಸೀನರಾಗಿ, ಪರೀಕ್ಷೆ ಮಾಡದೆಯೇ ಬುಟ್ಟಿಗಳನ್ನು ಬಿಡುತ್ತ ಬಂದರು, ಶಿವಾಜಿಯು ಗುಣಹೊಂದುತ್ತ ಬರುವಷ್ಟಕ್ಕೆ ಈ ಪೂಜೆಯು ಮಹಾವೈಭವದಿಂದ ನಡೆಯ ತೊಡಗಿತು. ಈ ವೈಭವವು ಹೆಚ್ಚಿದಷ್ಟಕ್ಕೆ ಕಾವಲುಗಾರರ ಕಾರ್ಯಗಳು ಸಡಿಲವಾಗುತ್ತ ಬಂದವು. ಶಿವಾಜಿಯು ಯಾವ ಉಪಾಯಗಳಿಂದ ತನ್ನ ಉದ್ದೇಶವನ್ನು ಕೊನೆಗಾಣಿಸಬೇಕೆಂದಿದ್ದನೋ ಅವೇ ಉಪಾಯಗಳು ಫಲಿಸುವುದಕ್ಕೆ ಅನುಕೂಲವಾಗಿ ಸಮಯವು ಬಂದೊದಗಿತು.

ಅವರಂಗಜೀಬನು ಶಿವಾಜಿಯ ಪೂಜಾಕೃತ್ಯಗಳನ್ನು ನೋಡಿ ಮಾಯಾವಿಯಾದ ಶಿವಾಜಿಯು ಅವುಗಳನ್ನು ಏಕೆ ನಡೆಯಿಸುವನೆಂದು ರಾಜಸಿಂಹನೊಡನೆ ವಿಚಾರಿಸಿದನು. ರಾಜಸಿಂಹನು ಅವುಗಳಿಂದ ಮೋಸವೇನೂ ನಡೆಯಲಾರದೆಂದು ಬಾದಶಹನಿಗೆ ಭರವಸೆಯಿತ್ತನು. ಸಂದೇಹಗ್ರಸ್ತನಾದ ಬಾದಶಹನಿಗೆ ಈ ಉತ್ತರವು ಸಮರ್ಪಕವಾಗಲಿಲ್ಲ. ಶಿವಾಜಿಯ ಮೇಲಿನ ಕಾವಲನ್ನು ಬಿಗಿಮಾಡುವಂತೆ, ಅವನು ತನ್ನ ಸೈನಿಕರಿಗೆ ಆಜ್ಞೆ ಮಾಡಿದನು. ಹಾಗೂ ತಾವು ಯೋಚಿಸಿದ ಕಾರ್ಯವನ್ನು ಬೇಗನೆ ನೆರವೇರಿಸಬೇಕೆಂದು ರಾಜಸಿಂಹನಿಗೆ ಸೂಚಿಸಿದನು. ಎಂದಿನಂತೆ ಬೃಹಸ್ಪತಿ ವಾರವು ಬಂದಿತು. ಪೂಜೆಯು ಸ್ವಲ್ಪ ವಿಳಂಬವಾಗಿ ನಡೆಯಿತು. ರಾತ್ರಿ ೪ ಗಳಿಗೆಯಾಯಿತು. ಭಿಕ್ಷುಕರೂ, ಬಡವರ, 'ಪೀರರೂ', ಫಕೀರರೂ ಶಿವಾಜಿಯ ಶಿಬಿರವನ್ನು ಮುತ್ತಿಕೊಂಡಿದ್ದರು. ಎಂದಿನಂತೆ ಭಕ್ಷ್ಯಭೋಜ್ಯಗಳನ್ನು ಎಲ್ಲರಿಗೂ ಹಂಚಿದರು. ಬ್ರಾಹ್ಮಣರು ದಕ್ಷಿಣೆಗಳಿಂದ ಸಂತೃಪ್ತರಾಗಿ ಶಿವಾಜಿಯನ್ನು ಹರಸಿ ಹೋದರು. ನೂರಾರು ಬುಟ್ಟಿಗಳನ್ನು ಧರಿಸಿ ಅನಾಥರೂ ಆಶನಾರ್ಥಿಗಳೂ ಕೋಟೆಯ ಮಾರ್ಗವಾಗಿ ನಡೆದರು. ಇವರ ನಡುವಿನಲ್ಲಿ “ಭೀಮಕಾಯರಾದ ಇಬ್ಬರು ಮಾವಾಳಿಗಳು ಎರಡು ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಮನೆಯಿಂದ ಹೊರಟು, ಡಿಲ್ಲಿಯಿಂದಾಚೆಗೆ” ನುಸುಳಿ ಬಿಟ್ಟರು. ಮುಸಲ್ಮಾನ್ ಕಾವಲುಗಾರರು ತಮಗೆ ಸಿಕ್ಕಿದ ಖಾದ್ಯಪದಾರ್ಥಗಳ ವಿಚಾರದಲ್ಲಿ ಮಗ್ನರಾಗಿದ್ದುದರಿಂದ, ಬರುವವರ ಹೋಗುವವರ ಬುಟ್ಟಿಗಳನ್ನು ಪರೀಕ್ಷಿಸಿ ನೋಡದೆ, ತಲೆಯ ಮೇಲೆ ಬುಟ್ಟಿ ಹೊತ್ತವರನ್ನು ಹೊರಕ್ಕೆ ಹೋಗಬಿಟ್ಟರು. ಕತ್ತಲು ಬಲವಾಗುತ್ತ ಬಂದಿತು. ಕೋಟೆಯ ಹೊರಕ್ಕೆ ಹೋಗುವವರೆಲ್ಲರೂ ಅವಸರಗೊಂಡರು. ಪಹರೇಯವರು ರಾತ್ರಿಯಾಯಿತೆಂದು ಕೋಟೆಯ ಹೆಬ್ಬಾಗಿಲನ್ನು ಮುಚ್ಚಿ ಬಿಟ್ಟರು. ಇದುವರೆಗೆ ಅ೦ಬೋಧಿಯಂತೆ ಕಲಕಲಮಯವಾವ ಶಿಬಿರವು ನಿರ್ಜನವಾದ ಕಾಂತಾರದಂತೆ ನಿಶ್ಯಬ್ದವಾಯಿತು.

ಕೃಷ್ಣ ಪಕ್ಷದ ಕಾಳಿಮೆಯ ರಾತ್ರಿ. ಆಕಾಶದಿಂದ ಸುಳ್ಳಿನ ತಿಮಿರ ಧಾರೆಯಲ್ಲಿ ಡಿಲ್ಲಿ ನಗರವು ನನೆದು ಹೋಗಿ ಮಸುಕಾಗಿ ತೋರುತ್ತಲಿತ್ತು. ಬಾದಶಹನ ಅರಮನೆಯಿಂದ ಒಬ್ಬ ಯುವಕನು ಹೊರಕ್ಕೆ ಬಂದನು. ಪಹರೇಯವನು ಕೈಯಲ್ಲಿದ್ದ ಆಯುಧವನ್ನು ಎತ್ತಿ ತೋರಿಸಿ, ರಾಜದ್ವಾರವನ್ನು ತೆರೆದುಬಿಟ್ಟನು. ಯುವಕನು ರಾಜಮಾರ್ಗಕ್ಕೆ ಇಳಿದನು. ಅವನ ಹಿಂದುಗಡೆಯಲ್ಲಿಯೇ ರಾಜದ್ವಾರವು ಕಣಕಣ ಶಬ್ದದಿಂದ ಮುಚ್ಚಲ್ಪಟ್ಟಿತು. ಯುವಕನು ಬಾದಶಹನ ಜೇಷ್ಠ ಪುತ್ರನಾದ ಮುಆಜಮ್ ಆಗಿದ್ದನು. ಶಿವಾಜಿಯ ಪೂಜೆಯ ನೆವದಿಂದ ಹಂಚುತ್ತಲಿದ್ದ ಬುಟ್ಟಿಗಳನ್ನು ಪುನಃ ಪರೀಕ್ಷಿಸಬೇಕೆಂದು ಮುಆಜಮನು ಸಾಯಂಕಾಲದಲ್ಲಿಯೇ ಆಜ್ಞಪ್ತನಾಗಿದ್ದನು. ತಂದೆಯ ಈ ಆಜ್ಞೆಯನ್ನು ಶಿರಸಾವಹಿಸುವುದು ಯುವಕನಿಗೆ ಅಸಾಧ್ಯವಾಗಿತ್ತು. ಅದಕ್ಕೆ ಕಾರಣವೊಂದಿತ್ತು. ಸುರಾದೇವಿಯು ಈತನ ಶಿರಸ್ಸಿನಲ್ಲಿ ಆವಿರ್ಭವಿಸಿದ್ದುದರಿಂದ, ಪಿತೃವಿನ ಆಜ್ಞೆಗೆ ಅಲ್ಲಿ ಸ್ಥಳವಿರಲಿಲ್ಲ. ಬಾದಶಹನ ಆಜ್ಞೆಯನ್ನು ಮನಃಪೂರ್ವಕವಾಗಿ ಈ ಸತ್ಪುತ್ರನು ಪಾಲಿಸಿದ್ದರೆ, ಭಾರತವರ್ಷದ ಇತಿಹಾಸವು ಬೇರೊಂದು ರೂಪವನ್ನು ಹೊಂದುತಿತ್ತು. ಮುಆಜಮನು ನೆಟ್ಟನೆ ಶಿವಾಜಿಯ ಶಿಬಿರದ ಕಡೆಗೆ ನಡೆಯುವ ಬದಲಾಗಿ-ತೆರೆಮಸಗಿದ ಕಡಲಿನಲ್ಲಿ ಚುಕ್ಕಾಣಿ ಇಲ್ಲದ ನಾವೆಯಂತೆ-~ಕಂಡಕಡೆಗೆ ಅಳೆದನು. ಕೊನೆಗೆ ಈ ನಾವೆಯು ರಾಜಸಿಂಹನ ಮಂದಿರದ ಬಳಿಯಲ್ಲಿ ಬಂದು ನಿಂತಿತು. ರಾಜಸಿಂಹನನ್ನು ಈಗ ತಾನೇ ಅರಮನೆಯಲ್ಲಿ ಸ್ವತಃ ನೋಡಿದ್ದರೂ, ಮುಆಜಮನು ಅವನನ್ನು ಕುರಿತು ಮನೆಯೊಳಕ್ಕೆ ವಿಚಾರಿಸಿದನು. ರಾಜಸಿಂಹನು ಮನೆಯಲ್ಲಿ ಇಲ್ಲದಿದ್ದರೂ ಒಳಹೋಗುವುದಕ್ಕೂ, ಶೈಲಿನಿಯೊಡನೆ ಮಾತುಕಥೆಯಾಡುವುದಕ್ಕೂ, ಮುಆಜಮನು ಸಂಪೂರ್ಣ ಅಧಿಕಾರವನ್ನು ಪಡೆದಿದ್ದನು. ಮುಂಜಮನು ಅನೇಕ ಸಲ ಶೈಲಿನಿಯ ಚಿಕ್ಕ ಮನೆಗೆ ಬಂದು ಹೋಗುತ್ತಿದ್ದನು. ಜೈಲಿನಿಯ ಪ್ರಣಯವನ್ನು ಸಾಧಿಸುವುದಕ್ಕೆ ನಾನಾ ಉಪಾಯಗಳನ್ನು ಮಾಡಿದ್ದನು. ಒಂದು ಸಲ ನೂರಾರು ಸುರಪೂರಿತ ಸೀಸೆಗಳನ್ನು ತರಿಸಿಕೊಂಡು ಬಂದನು. ಜೈಲಿನಿಯು ಪ್ರಸನ್ನಳಾಗದೆ ಸುರೆಯನ್ನು ತಂದವನೊಡನೆ, ಇವುಗಳು ನಮ್ಮಲ್ಲಿ ಬಿಕರಿಯಾಗವು, ಅವಕ್ಕೆ ಬಾದಶಹನ ಅಂತಃಪುರದಲ್ಲಿ ಬೆಲೆ ಬರುವುದು” ಎಂದು ಮುಂಜಮನು ಕೇಳುವಂತೆ ಹೇಳಿ ನಡೆದುಬಿಟ್ಟಳು. ಮು೦ಜಮನು ಸಿಟ್ಟು ಕೊಂಡು ತನ್ನ ಪರಾಕ್ರಮವನ್ನು ತೋರಿಸುವುದಕ್ಕೆ ಮತ್ತಾವುದನ್ನೂ ಕಾಣದ ಸೀಸೆಗಳ ಕೊರಲುಗಳನ್ನು ಮುರಿದು, ಕೆನ್ನೀರನ್ನು ಪಾನಮಾಡಿಬಿಟ್ಟನು. ಇನ್ನೊಮ್ಮೆ ಮು೦ಜಮನು ಸ್ವತಃ ಹೋಗದೆ ತನ್ನ ಮೊಂದು ತಸಬೀರನ್ನೂ ಪ್ರಣಯ ಪತ್ರಿಕೆಯನ್ನೂ ಕಳುಹಿಸಿದನು. ಜೈಲಿನಿಯು ಪ್ರತಿಯಾಗಿ “ನಿನ್ನ ಪ್ರಣಯ ಪಾತ್ರಳ ತಸಬೀರು ಇಲ್ಲದೆ ಇದ್ದುದರಿಂದ, ಅದರ ಮಾತೃಕೆಯನ್ನು (original copy) ಕಳುಹಿಸಿರುವೆನು” ಎಂದು ಪತ್ರ ಬರೆದು ಸಿಪಾಯಿಯ ಒಡನೆ ಒಂದು ದೊಡ್ಡ ನಾನರಿಯನ್ನು ಕಳುಹಿಸಿದಳು. ಮತ್ತೊಮ್ಮೆ ಮುಜಮನು ಶಿವಾಜಿಯ ವೇಷವನ್ನು ಅಳವಡಿಸಿಕೊಂಡು, ಶೈಲಿನಿಯ ಮಂದಿರಕ್ಕೆ ಹೋದನು. ಶೈಲಿನಿಯು ಬಂದವನನ್ನು ಕುಳ್ಳಿರಿಸಿ, “ಸಿಂಹ- ಚರ್ಮದಲ್ಲಿ ಕತ್ತೆ” ಎಂಬ ಪಾರಸೀ ಕಥೆಯನ್ನು ಅವನಿಗೆ ಓದಲು ಕೊಟ್ಟು, ನನ್ನ ದಾಸಿಯನ್ನು ಕರೆದು, ಬಂದವನನ್ನು ಸತ್ಕರಿಸೆಂದು ಹೇಳಿ ಹೋಗಿ ಬಿಟ್ಟಳು. ಜೈಲಿನಿಯ ತಿರಸ್ಕಾರವನ್ನು ಮುಆಜಮನು ರಾಜಸಿಂಹನಿಗೆ ತಿಳಿಸಿದ್ದನು. ಹಾಗೂ ಶಿವಾಜಿಯನ್ನು ಪ್ರೀತಿಸಿ, ಗುಪ್ತವೇಷದಿಂದ ಮರಾಟರ ಶಿಬಿರಕ್ಕೆ ಹೋಗುತ್ತಿದ್ದಳೆಂದು ಹೇಳಿದ್ದನು. ರಾಜಸಿಂಹನು ಕೋಪಾವಿಷ್ಟನಾಗಿ ಮಗಳನ್ನು ಅವಳ ಚಿಕ್ಕಮನೆಯಲ್ಲಿ ಮುಚ್ಚಿಟ್ಟನು. ಮಹಡಿಯ ಬಳಿಯಲ್ಲಿ ಬೆಳೆದಿದ್ದ ಮರವನ್ನು ಕಡಿದು ಹಾಕಿಸಿದನು. ಶೈಲಿನಿಯ ಸೆರೆಮನೆಯನ್ನು ಒಳಹೋಗಲು ಮುಜಮನಿಗಲ್ಲದೆ ಮತ್ತಾರಿಗಾದರೂ ಅಪ್ಪಣೆಯಿರಲಿಲ್ಲ. ಶೈಲಿನಿಯು ಇದುವರೆಗೆ ತನಗೆ ತೋರಿಸಿದ ಅಲಕ್ಷ್ಯಭಾವಕ್ಕೂ ಹಾಸ್ಯಕರವಾದ ಆಚರಣೆಗೂ ತಕ್ಕದಾದ ಶಾಸ್ತ್ರಿಯನ್ನು ಮಾಡಬೇಕೆಂದು, ಮುಆಜಮನು ಈ ರಾತ್ರಿ ಶೈಲಿನಿ ಇದ್ದಲ್ಲಿಗೆ ಬಂದಿದ್ದನು.

ಮುಆಜಮನು ಉಪ್ಪರಿಗೆಯನ್ನು ಹತ್ಯೆ, ಶೈಲಿನಿಯ ಮಂದಿರದ ಬಾಗಿಲನ್ನು ತೆರೆದು, ಒಳಕ್ಕೆ ಕಾಲಿಟ್ಟನು. ಅಚ್ಚರಿಗೊಂಡ ಕಣ್ಣುಗಳಿಂದ ಬಾಯಿಬಿಟ್ಟು ಅಪ್ರತಿಭನಾಗಿ ಅಲ್ಲಿಯೇ ನಿಂತು ನೋಡಿದನು. ಶೈಲಿನಿಯು ಓಡಿ ಹೋಗಿದ್ದಳು. ದುರ್ಜನರ ಅಶುದ್ಧಾಚರಣೆಯಿಂದ ಹಾಳಾದ ಊರಿಂದ ಪುರದೇವತೆಯು ತೊಲಗುವಂತೆ ಶೈಲಿನಿಯು ತನ್ನ ಮನೆಯಿಂದ ಓಡಿಹೋಗಿದ್ದಳು. ಕಣ್ಣೆರೆದು ಎಲ್ಲಾ ಕಡೆಗಳಲ್ಲಿ ನೋಡಿದನು. ದೀಪವನ್ನು ಕೈಯಲ್ಲಿ ಕೊಂಡು ಕೊಟ್ಟಡಿಯನ್ನೆಲ್ಲಾ ಹುಡುಕಿದನು- ಶೈಲಿನಿಯು ಅಲ್ಲಿಂದ ಮಾಯವಾಗಿದ್ದಳು. ಉನ್ನತವಾದ ಉಪ್ಪರಿಗೆಯಲ್ಲಿ ಬಂಧಿತಳಾದಳು ಅಲ್ಲಿಂದ ಹೇಗೆ ಜಾರಿಹೊದಳೆಂದು ನೋಡುವುದಕ್ಕೆ ಮುಆಜಮನು ಪ್ರಯಾಸಪಟ್ಟನು. ಶೈಲಿನಿಯು ಎರಡು ಪಟ್ಟೆಯ ಸೀರೆಗಳನ್ನು ಜೋಡಾಗಿ ಬಿಗಿದು, ಒಂದು ಕೊನೆಯನ್ನು ಕೊಟ್ಟಡಿಯ ತೊಲೆಗೆ ಸುತ್ತಿ, ಮತ್ತೊಂದನ್ನು ಕಿಟಕಿಯಿಂದ ಕೆಳಗೆ ಇಳಿಬಿಟ್ಟು, ಅದರ ಸಹಾಯದಿಂದ ಕೆಳಕ್ಕೆ ಇಳಿದು, ಎಲ್ಲಿಯೋ ಪಲಾಯನ ಮಾಡಿದಳು ಎಂದು ಮುಂಜಮನು ನಿಶ್ಚಯ ಮಾಡಿದನು. ಇನ್ನೂ ಕಾಲ ಕಳೆದರೆ ಕಾರ್ಯವು ಕೆಟ್ಟು ಹೋಗುವುದೆಂದು ತಿಳಿದು, ಅವಳನ್ನು ಹುಡುಕುವುದಕ್ಕೆ ಯೋಚಿಸಿದನು. ಶೈಲಿನಿಯು ಮರಾಟರ ಶಿಬಿರಕ್ಕೆ ಓಡಿ ಹೋಗಿರಬಹುದೆಂದು ಅವನು ನಿಶ್ಚಿಸಲಿಕ್ಕೆ ಕಾರಣವಿದ್ದಿತು. ಆದುದರಿಂದ ಅವಳನ್ನು ಹಿಡಿದು ತಂದು, ಅವಳ ತಂದೆಯ ವಶದಲ್ಲಿ ಕೊಟ್ಟು ಅವಳು ಮಾಡಿದ ದುಷ್ಕಾರ್ಯವನ್ನು ಅವಳ ಮುಖಕ್ಕೆ ಇಟ್ಟು, ತನ್ನ ಪರಾಕ್ರಮವನ್ನು ತೋರಿಸಬೇಕೆಂದು ನಿರ್ಧರಿಸಿ ಕೆಳಕ್ಕೆ ಇಳಿದನು. “ಅಂದು ನಾನು ಕಾಲಿಗೆ ಎರಗಿದಾಗ ನನ್ನನ್ನು ಎಡವಿ ಒಡೆದುಬಿಟ್ಟಳು, ತಾಯಿತಂದೆಗಳಿಗೆ ನಮಸ್ಕರಿಸದ ನನ್ನ ಪವಿತ್ರ ಮಸ್ತಕವನ್ನು ಈ ಮಳಿಯು ಚಂಡಾಡಿದಂತೆ ಒದೆದುಬಿಟ್ಟಳು. 'ಹರಾನ್ ಖೋರಿಯನ್ನು' ಮೂಗುದಾರ ಹಿಡಿದು, ಹಟ್ಟಿಗೆ ಒಯ್ಯದೆ ಬಿಡೆನು.” ಎಂದು ಮನಸ್ಸಿನಲ್ಲಿಯ ಅನ್ನು ತೆ, ಮುಜಮನು ಮಾರ್ಗಕ್ಕೆ ಬಂದನು.

ರಾತ್ರಿ ೧೦ ಗಳಿಗೆ ಕಳೆಯಿತು. ಪೃಥ್ವಿಗೆ ಗಾಢಾಂಧಕಾರದ ಅವರಣವು ಸುತ್ತಿ ತು. ಶ್ರಾಂತವಾದ ಡಿಲ್ಲಿ ನಗರವು ಪ್ರಕೃತಿಯ ಸುಷುಪ್ತಿಯಲ್ಲಿ ಸ್ವಪ್ನ ಮಯವಾಗಿತ್ತು. ಮಾರ್ಗಗಳಲ್ಲೆಲ್ಲಾ ನಿರ್ಜನ, ನಿಶ್ಯಬ್ದ, ಭೂ ಗಗನಗಳ ಆಂತರವು ಉಜ್ವಲವಾದ ನಕ್ಷತ್ರಗಳಿಂದ ಅಲ್ಲದೆ ತಿಳಿಯಲು ಅಸಾಧ್ಯ. ನೀಲವಾದ ಆಕಾಶದಲ್ಲಿ ಪ್ರಭಾಪುಂಜದಂತಿರುವ ಸಾವಿರಾರು ನಕ್ಷತ್ರಗಳು-- ಕರಿಕಂಬಳಿಯಲ್ಲಿ ದಟ್ಟವಾಗಿ ಚಿಮಿಕಿಸಿದ ವಜ್ರದ ಗೊಂಚಲುಗಳಂತಿರುವ ನಕ್ಷತ್ರಗಳು, ಈ ನಿಶಿಯಲ್ಲಿ ಶೈಲಿನಿಯು ಒಬ್ಬಳೇ ಹೋಗುತ್ತಿದ್ದಳು. ಎಲ್ಲಿಗೆ ಹೋಗುತ್ತಿದ್ದಳೆಂಬುದು ವಾಚಕರಿಗೆ ತಿಳಿದಿದೆ ರಾಜಮಾರ್ಗದಿಂದ ಕವಲಾಗಿ ಹೋದ, ಅಳಿಸಿದ ಕಾಲುಹಾದಿಯನ್ನು ಹಿಡಿದು ಹೋಗುತ್ತಿದ್ದಳು. ಶೈಲಿನಿಯ ಗುರುತು ಯಾರಿಗೂ ಹತ್ತದು. ಹಾದಿಯಲ್ಲಿ ಜನಸಂಚಾರವಿಲ್ಲ; ಅದರಮೇಲೂ ಅಂಧಕಾರ; ಅದೂ ಅಲ್ಲದೆ ಗಂಡು ಉಡುಪನ್ನು ಉಟ್ಟುಕೊಂಡಿದ್ದಳು. ಆ ಕಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಹೋಗುವ "ಹಕೀಮರು” ಯಾವ ಉಡುಪನ್ನು ಧರಿಸಿಕೊಳ್ಳುತ್ತಿದ್ದರೋ, ಆ ವೇಷವನ್ನು ಶೈಲಿನಿಯು ಇಂದು ಅಳವಡಿಸಿದ್ದಳು. ಇದೇ ವೇಷದಲ್ಲಿ ಅವಳು ಒಂದೆರಡು ಸಲ ಮರಾಟರ ಶಿಬಿರಕ್ಕೆ ಹೋಗಿದ್ದಳು. ಅವಳ ಇಚ್ಛಿತ ವರ'ನು ಸಂಕೇತ ಮಾಡಿದ ರಾತ್ರಿಯಲ್ಲಿ ರೈಲಿನಿಯು ಅವನ ಆಶಾನುಬದ್ಧಳಾಗಿ ಒಂದು ಗುರುವಾರ ಹೋದಳು. ಆದರೆ ಆ ದಿನ ಶಿವಾಜಿಯು ತನ್ನ ಪರಿಜನರೊಡನೆ ಯಾವುದೋ ಒಂದು ರಾಜ್ಯಾಲೋಚನೆಯನ್ನು ಕುರಿತು ವಿಚಾರಮಗ್ನನಾಗಿದ್ದುದರಿಂದ, ಶೈಲಿನಿಯು ಕೃತಕಾರ್ಯಳಾಗಲಿಲ್ಲ. ಶಿವಾಜಿಯ ಅಸ್ವಸ್ಥವು ಶೈಲಿನಿಯ ಪುನರಾಗಮನಕ್ಕೆ ಕಾರಣವಾಯಿತು. ಶಿವಾಜಿಗೆ ಮೂಲಿಕೆಯನ್ನು ತಂದುಕೊಡುವ ನಿಮಿತ್ತವಾಗಿ ಜೈಲಿನಿಯು "ಹಕೀಮ" ವೇಷದಲ್ಲಿ ಬಂದು ಹೋಗುತ್ತಿದ್ದಳು. ಇದೆಲ್ಲವನ್ನು ಶಿವಾಜಿಯು ಅರಿತಿದ್ದನೋ ? ಇಲ್ಲವೋ ನಮಗೆ ಗೊತ್ತಿಲ್ಲ. "ಹಕೀಮನನ್ನು* ಮರಾಟರ ಶಿಬಿರದಲ್ಲಿ ಪ್ರವೇಶ ಮಾಡು ವುದಕ್ಕೆ ಯಾರೂ ಅಡ್ಡಿ ಮಾಡುತ್ತಿರಲಿಲ್ಲ. ಅವಳು ಒಳಹೋಗಿ ಯಾರೋ ಒಬ್ಬನ ಕೂಡೆ ಮಾತನಾಡಿ ಮರಳಿ ಹೋಗುತ್ತಿದ್ದಳು. ಈ ಕಥಾಪ್ರಾರಂಭದಲ್ಲಿ, ಯಾರು ರಹಸ್ಯವಾಗಿ ಶೈಲಿನಿಯ ಮಂದಿರದ ಮರಹತ್ತಿ, ಅವಳ ಪಾಣಿಗ್ರಹಣ ಮಾಡಿದನೋ, ಆ ಮಹಾಶಯನೊಡನೆ ಮಾತನಾಡಿ ಶೈಲಿನಿಯು ಮನೆಗೆ ಹಿಂದೆರಳುತ್ತಿದ್ದಳು. ಈ ರಾಯನು ಎರಡು ದಿವಸಗಳ ಹಿಂದೆ ಇವರಿಬ್ಬರು ಮರಾಟರ ಶಿಬಿರದ ಬಳಿಯಲ್ಲಿರುವ ಏಕಾಂತವಾಗಿ ಪ್ರಣಯ ಸಲ್ಲಾಪ ಮಾಡುತ್ತಿದ್ದಾಗ, ಮುಆಜಮನು ಶೈಲಿನಿಯ ಗುರುತು ಹಿಡಿದನು; ಮುಆಜಮನು ಅವರ ಸಂಭಾಷಣೆಗೆ ವಿಘ್ನವಾಗಿ ಬಂದುದು ಮಾತ್ರವಲ್ಲ; ಅದಕ್ಕಿಂತಲೂ ಸ್ವಲ್ಪ ದೂರಕ್ಕೆ ಹೋದನು. ಅವನು ಕೋಪಗೊಂಡು ತನ್ನ ಕೈ ಬಿಟ್ಟದ್ದು ಒಂದು; ಅನ್ಯರಿಗೆ ಕೈ ಕೊಟ್ಟದ್ದು ಒಂದು- ಇವೆರಡರಿಂದ ಮುಆಜಮನು ರೋಷಾವೇಶಗೊಂಡನು. ಅವನು ಶೈಲಿಸಿಯ ವಿಷಯವಾಗಿ ರಾಜಸಿಂಹನ ಕಿವಿಯಲ್ಲಿ ದೂರು ಸುರಿದನು, “ಶಿವಾಜಿಯು ನಿನ್ನ ಮಗಳನ್ನು ಎತ್ತಿಕೊಳ್ಳುವನು” ಎಂದು ಗದ್ದಲ ಹಚ್ಚಿದನು. ಮೊದಲೇ ಶಿವಾಜಿಯ ಮೇಲೆ ರಾಜಸಿಂಹನಿಗೆ ಇದ್ದ ಅಲಕ್ಷ್ಮಭಾವವು ಮುಆ ಜಮನ ಮಾತಿನಿಂದ ದ್ವೇಷವಾಗಿ ಪರಿಣಮಿಸಿತು, ಮಗಳು ಜಾರಿಹೋಗದಂತೆ ರಾಜಸಿಂಹನು ಅವಳನ್ನು ಕೊಟ್ಟಡಿಯಲ್ಲಿ ಮುಚ್ಚಿಟ್ಟನು. ದಿನಕ್ಕೆ ಎರಡು ಬಾರಿ ರಾಜ ಸಿಂಹನು ಅವಳನ್ನು ನೋಡುವನು; ಆದರೆ ಪೂರ್ವದಂತೆ ಮಾತನಾಡುತ್ತಿರಲಿಲ್ಲ. ರಾಜಸಿಂಹನ ದರ್ಶನವಾಗುತ್ತಲೇ ಬಂಧಿತಳಾದ ಶೈಲಿನಿಯು “ಶಿವಾಜಿ ಮಹಾರಾಜರು ಹೇಗಿರುವರು?” ಎಂದು ಕೇಳುವಳು. ತಂದೆಯ ಮಾತಿಲ್ಲದವನಾಗಿ, ಶಿವಾಜಿಯ ಪೂರ್ವಜರ ನಾಮಸ್ಮರಣೆ ಮಾಡುತ್ತ, ಮಹಡಿಯಿಂದ ಕೆಳಕ್ಕೆ ಇಳಿದು ಹೋಗುವನು. ಈ ದಿನ ರಾಜಸಿಂಹನು ಕಾರ್ಯಗೌರವದಿಂದ ಅರಮನೆಯಲ್ಲಿ ಹಗಲೆಲ್ಲಾ ತಳುವಿದ್ದನು, ಯಾವ ಕಾರ್ಯವಿಶೇಷದಿಂದ ಅವನು ಏಳಂಬಿಸಿದ್ದನೋ ಅದನ್ನು ಶೈಲಿನಿಯ ತಿಳಿದಿದ್ದಳು, ರಾಜಸಿಂಹನು ಹಿಂದಿನ ರಾತ್ರಿ ಮುಜಮನೊಡನೆ ಬಾದಶಹನ ಯಾವ ಆಜ್ಞೆಯನ್ನು ತಾವು ಮನ್ನಿಸಬೇಕೆಂಬ ವಿಷಯದಲ್ಲಿ ಮಾತುಕಥೆ ಯನ್ನು ನಡೆಯಿಸುತ್ತಲಿದ್ದನೋ, ಆ ಮಾತುಗಳನ್ನೆಲ್ಲಾ ಶೈಲಿನಿಯು ಮಹಡಿಯ ಕೊಟಡಿಯಲ್ಲಿ ಇದ್ದು ಕೇಳಿದ್ದಳು. ಅದಕ್ಕೋಸ್ಕರವೇ ಅವಳ ಹೃದಯವು ಮರಾಟರ ಶಿಬಿರಕ್ಕೆ ಹಾರಿಹೋಗುವುದಕ್ಕೆ ಸಂಕಷ್ಟಗೊಳ್ಳುತ್ತಲಿತ್ತು.

ಶೈಲಿನಿಯು ಕಾಲುನಡೆ ಯಾಗಿ ಹೋಗುತ್ತಿದ್ದಳು. ಹಾದಿಯಲ್ಲಿ ತಾನೇ ಆತ್ಮಗತವಿಚಾರ ಮಾಡಿಕೊಳ್ಳುತಿದ್ದಳು. ಅವಳ ಇದಿರಿಗೆ ಆಕಾಶದಲ್ಲಿ ಚಂದ್ರನು ಉದಯವಾಗುತ್ತಲಿದ್ದನು. ರೋಹಿಣಿ ನಕ್ಷತ್ರವು ಚಂದ್ರನ ಸಮಾಸಕ್ಕೆ ಬರುವಂತೆ ಅವಸರಗೊಳ್ಳುತಲಿತ್ತು, ಶೈಲಿನಿಯು ನಿಶಾನಾಥನನ್ನು ನೋಡಿ ಏನೇನೋ ಹೇಳತೊಡಗಿದ್ದಳು. “ಚಂದ್ರನೇ! ನೀನು ವಿರಹಿಗಳ ವೈರಿ ಎಂಬುದು ನಿಜವೇ? ನೀನು ಕಾಮುಕರ ತಾಪಕಾರಕನೆಂಬುದು ಸತ್ಯವೇ? ಹಾಗಿದ್ದರೆ ಈ ಕತ್ತಲಾದ, ಕಂಗಾಣದ ಹಾದಿಯಲ್ಲಿ ನನ್ನ ಮಾರ್ಗ ಪ್ರದರ್ಶಕನಾಗಿ ಏಕೆ ಉದಯಿಸುತ್ತಲಿರುವೆ? ನಿನ್ನ ರೋಹಿಣಿಯು ನಿನ್ನ ಸಮೀಪಕ್ಕೆ ಬರುತ್ತಿರುವಳು. ನೀನು ದೂರದೂರಕ್ಕೆ ಹೋಗುತ್ತಿರುವುದೇಕೆ? ನನ್ನ ಜೀವಿತೇಶನು ನಿನ್ನಂತೆ ಗಗನದಲ್ಲಿ ಚಲಿಸುತ್ತಿದ್ದರೆ, ನಾನು ರೋಹಿಣಿಯಂತೆ ಅವನನ್ನು ಅನುವರ್ತಿಸುತ್ತಿದ್ದೆನು. ನನ್ನ ಪ್ರಿಯನು ನಿನ್ನಂತೆಯೇ ಇರುವನು; ನಿನ್ನಂತೆಯೇ ಸೌಂದರ್ಯಮಯನು; ಸುಧಾಮಯನು; ಶಾಂತನು. ಛೀ! ಛೀ! ಈ ಸಾಮ್ಯವು ಸರಿಹೋಗದು. ಅವನ ಪ್ರೀತಿಯು ನಿನ್ನಂತೆ ದಿನೇ ದಿನೇ ಕುಂದಬಹುದೇ? ನೀನು ರೋಹಿಣಿಯಿಂದ ದೂರಕ್ಕೆ ಮನಸ್ವಿಯಾಗಿ ಸಾರುವಂತೆ, ಅವನ ಪ್ರೀತಿಯು ಗಳಿತವಾಗಬಹುದೇ? ಹಾಗೆ ಪ್ರೇಮವು ಕುಂದದಿದ್ದರೆ ಮೊನ್ನೆ ನನ್ನೊಡನೆ ಏತಕ್ಕೆ ಅಷ್ಟು ಉದಾಸೀನನಾದನು? ನಾವು ಏಕಾಂತದಲ್ಲಿದ್ದರೂ ನನ್ನನ್ನು ಸರಿಯಾಗಿ ಆದರಿಸಲಿಲ್ಲವೇಕೆ? ನನ್ನ ಪ್ರೇಮಸಲ್ಲಾಪವನ್ನು ಕಳ್ಳುನುಡಿಗಳಿಂದ ಜಗುಳಿಸಿದನೇಕೆ? “ನನ್ನ ಪ್ರೇಮಪಾಶದಲ್ಲಿ ಸಿಕ್ಕಿ ಮೋಸಹೋದೆ” ಎಂದು ಮೈಮರೆದಂತೆ ಹೇಳಿದನೇತಕ್ಕೆ? ನನ್ನನ್ನು ಮಧುರವಾದ ಮಾತುಗಳಿಂದ ಕಳುಹಿಸಿ ಕೊಡಲಿಲ್ಲವೇಕೆ? ಛ! ಮನವೇ ಕೊಂಚ ತಡೆ! ತಡೆ! ಸುಮ್ಮನೆ ಬಹಳ ದೂರಕ್ಕೆ ಯೋಚಿಸುತ್ತಿರುವೆ. ನೀನೂ ಅವನ ಪಕ್ಷ ವಾಗಿ ಹೇಳಲಾರೆಯಾ? ಶಿವಾಜಿಯು ಕಾರ್ಯಾ೦ತರದಲ್ಲಿರಬಹುದು. ದುಷ್ಟ ಅವರಂಗಜೇಬನ ಬಂದಿಯಿಂದ ತಪ್ಪಿಸಿಕೊಳ್ಳುವ ವಿಚಾರದಲ್ಲಿ ಅವನ ಮನಸ್ಸು ಮಗ್ನ ಹಾಗೆ ಮಗ್ನವಾಗಿತ್ತು ಎಂದು ತಿಳಿಯಲೆ? ಆದರೂ ಈ ಹತಭಾಗಿನಿಗೆ ಆ ಹೃದಯದಲ್ಲಿ ಒಂದು ಎಡೆಯಿಲ್ಲವೇ? ರಾಜ್ಯ ಕಾರ್ಯವು ವಿಶೇಷವಾದ ಮಾತ್ರಕ್ಕೆ ಅರಸರು ತಮ್ಮ ಪ್ರಾಣವಲ್ಲಭೆಯರನ್ನು ತ್ಯಜಿಸಿಬಿಡುವರೇ? ಬಿಡುವಂತಹರು ಬಿಡುವರು. ಶ್ರೀರಾಮನು ತನ್ನ ಪತ್ನಿಯನ್ನು ತೊರೆದನು. ದೂ ಬಾಯನ್ನು ಮುಚ್ಚುವುದಕ್ಕೆ ರಾಮನು ಜಾನಕಿಯನ್ನು ಕೈಬಿಟ್ಟನು. ನನ್ನಲ್ಲಿ ದೋಷವೇನು? ಹಗಲೆಲ್ಲಾ ಪತಿದೇವತೆಯು ಧ್ಯಾನಮಾಡುತ್ತ, ಎಂದಿಗೆ ಸುಖಿಯಾಗುವೆನು ಎಂದು ಚಿಂತಿಸುತ್ತ ಇರುವುದು ದೋಷವೇ? ಇರುಳೆಲ್ಲಾ ನಿದ್ದೆಯಿಲ್ಲದೆ ನೆಲದ ಮೇಲೆ ಹೊರಳುತ್ತ, ಕನಸುಕಂಡ ಮಾತ್ರಕ್ಕೆ ಸುಖಿಯಂದು ತಿಳಿದು, ಎಚ್ಚರವಾಗಿ ನೋಡುವುದು ದೊಷವೇ? ತಂದೆಯ ಮಾತನ್ನು ಮೂಾರಿ, ಅನೇಕ ನೃಪಕುಮಾರರನ್ನು ತ್ಯಜಿಸಿ, ನೀನೆ ಗತಿಯಂದು ನಂಬಿದುದು ದೋಷವೇ? ನಾನು ಮರ್ಖಳು, ಸುಮ್ಮನೆ ಹುಚ್ಚಳಂತೆ ಮಾತಾಡುವೆನು. ನನ್ನ ಮನಸ್ಸಿನ ಭ್ರಮೆ; ನನ್ನ ಹುಚ್ಚು ಭ್ರಾಂತಿ. ಪತಿಯ ಪ್ರೇಮದಲ್ಲಿ ಸಂಶಯಪಡುವವಳು ಮೂರ್ಖಳಲ್ಲದೆ ಮತ್ತೇನು? ನನ್ನ ವಲ್ಲಭನ ಪ್ರೀತಿಯ ಅಚಲವಾದುದು; ಪರ್ವತದಂತೆವಾದುದು. ನಕ್ಷತ್ರವು ಸ್ಥಿರವಾದುದು; ಅದು ಅಸ್ಥಿರವೆಂಬುದು ಚಲಿಸುತ್ತಿರುವವನ ಸುಳ್ಳು, ಭಾವನೆಯಾಗಿದೆ. ಪತಿಯ ಪ್ರಣಯಮುಕುರದಲ್ಲಿ ನಮ್ಮ ಮನೋಭಾವವೇ ಪ್ರತಿಬಿಂಬಿಸುವುದಲ್ಲದೆ, ಅದು ತಾನೇ ವರ್ಣರಹಿತವಾದುದು. ನಾನು ಇದನ್ನೆಲ್ಲಾ ಚಿಂತಿಸುವಷ್ಟಕ್ಕೆ ನನ್ನ ನಡೆಯು ಹಿಂಚುವುದು. ನನ್ನ ಏಳcಬವು ಘೋರ ಪ್ರಮಾದಕ್ಕೆ ಕಾರಣವಾಗುವುದು. ಇಕೋ! ಶಿಬಿರವು ನನ್ನ ಮುಂದೆ ತೋರುತ್ತಿರುವುದು. ಇಲ್ಲಿಯೇ! ನಿನಗೆ ನಮಸ್ಕಾರವು! ನಿನ್ನ ಧರ್ಮಾಂಧತೆಗೆ, ನಿನ್ನ ಕುಹಕೋಪಾಯಗಳಿಗೆ, ನಿನ್ನ ರಾಜತಂತ್ರಗಳಿಗೆ, ನಿನ್ನ ದುಷ್ಕಾರ್ಯಕೌಶಲಕ್ಕೆ ತ್ರಾಹಿ ಎನ್ನು ವನು! ನಮ್ಮ ಸ್ವಾತಂತ್ರಾಪಹಾರಿಯಾದ ನಗರವೇ! ನಾನು ಇನ್ನೂ ನಿನ್ನ ಮುಖವನ್ನು ನೋಡಲಾರೆನು. ರಾಜಪುತ್ರರ ಸುವರ್ಣ ಕಾರಾಗೃಹವೇ! ಯಾವಾತನನ್ನು ನಿನ್ನ ಮೊಗದ ಕೈಗಳಿಂದ ಬಂಧಿಸಬೇಕೆಂದು ನೀನು ಉಪಾಯವನ್ನು ಮಾಡುತ್ತಿರುವೆಯೋ, ಆತನ ಸಹಾಯದಿಂದಲೇ ನಾನು ನಿನ್ನ ಅಪವಿತ್ರ ಸ್ಥಳದಿಂದ ಮುಕ್ತಳಾಗುವೆನು ನಿನ್ನ ಅಧೀಶ್ವರಿಯಾಗಿ ನಿನ್ನ ಸಾಮ್ರಾಜ್ಯ ರಥವನ್ನು ನಾನು ನಡಿಸುವುದಕ್ಕೆ ಧಿಕ್ಕಾರವಿರಲಿ! ನಾನು ಶಿವಾಜಿಯ ದಾಸಿಯಾಗಿ ಅವನ ರಾಜ್ಯವೆಂಬ ಮಂದಿರದ ಬಳಿಯಣ ಕಸವನ್ನು ಗುಡಿಸಿ ಈ ಜೀವಕಾಲವನ್ನು ಕಳೆಯುವೆನು.”

ಅರಮನೆಯ 'ಘುಸಾಲಿಖಾನೆಯಲ್ಲಿ' ಅವರಂಗಜೇಬನು ಈ ರಾತ್ರಿ ಏಕಾಂತದಲ್ಲಿ ರಾಜ್ಯ ಕಾರ್ಯವನ್ನು ಕುರಿತು ಆಲೋಚಿಸುತ್ತಲಿದ್ದನು. ಮಂತ್ರಿಗಳು ಯಾರೂ ಅವನ ಬಳಿಯಲ್ಲಿ ಇರಲಿಲ್ಲ. ಬಾದಶಹನ ಬಲಗಡೆಯಲ್ಲಿ ರಾಜಸಿಂಹನು ನಿಂತಿದ್ದನು. ಸ್ವಲ್ಪ ದೂರದಲ್ಲಿ ಇಬ್ಬರು ಸಿಪಾಯರು ಕಾವಲಾಗಿದ್ದರು, ಬಾದಶಹನು ಹಣೆಯನ್ನು ನಿರಿಗೊಳಿಸಿ “ನಮ್ಮ ಮನಸ್ಸು ಸ್ವಸ್ಥವಾಗಿಲ್ಲ. ಮರಾಟನ ಶಿಬಿರದಿಂದ ಏನೊಂದೂ ವರ್ತಮಾನ ಬರಲಿಲ್ಲ, ಹೋದ ಮುಂಜಮನು ಇನ್ನೂ ಬರಲಿಲ್ಲ. ನಮಗೆ ಯೋಚನೆ ಹತ್ತಿದೆ" ಎಂದು ಹೇಳಿದನು.

ರಾಜಸಿಂಹ:- “ ಅಂತಹ ಯೋಚನೆಗೆ ಆಸ್ಪದವಿಲ್ಲ. ಈ ದೂತನು ಈಗ ತಾನೇ ಪಾಳೆಯದಿಂದ ಬಂದಿರುವನು. ಅವನು ಶಿವಾಜಿಯನ್ನು ಕಣ್ಣಾರೆ ನೋಡಿ ಬಂದಿರುವನು.”

ಬಾದಶಹನು ಕೈಯಿಂದ ತಲೆಯನ್ನು ಸವರುತ್ತ, “ನೀವೆಲ್ಲರು ಹೇಗೆ ಹೇಳಿದರೂ, ನಮ್ಮ ಮನಸ್ಸಿಗೆ ಸಮಾಧಾನವಿಲ್ಲ. ಬೋನಿನಲ್ಲಿ ಬಿದ್ದ ಬೆಟ್ಟದ ಇಲಿಯು ತಪ್ಪಿಸಿಕೊಂಡಿರಬಹುದು ಎಂದು ನಮಗೆ ಶಂಕೆ ಉಂಟು. ನಮ್ಮ ಶಂಕೆ ಸುಳ್ಳಾಗಲಾರದು” ಎಂದನು.

ರಾಜಸಿಂಹನು ಸ್ವಲ್ಪ ಹತ್ತಿರಕ್ಕೆ ಬಂದು, “ಹುಜುರ್! ಅಂತಹ ಸಮಯ ಒದಗಿದರೆ ಈ ಸೇವಕನು ಯಾವ ರ್ಯ ಸಿದ್ಧನಾಗಿರುವನು. ಬೋನು ಬಿಗಿಯಾದುದರಿಂದ, ಇಲಿಯು ತಪ್ಪಿಸಿಕೊಳ್ಳಲಾರದು” ಎಂದು ಸಮಾಧಾನಗೊಳಿಸಿದನು.

ಬಾದಶಹನು ಸ್ವಲ್ಪ ಆಲೋಚಿಸುತ್ತ, ಮುಜವನು ಬರುವ ತನಕ ನೀನು ಇಲ್ಲಿಯೇ ಇರುವೆಯಾ? ಅವನು ವಿಲಾಸಪ್ರಿಯನು; ವಿಲಾಸದಲ್ಲಿ ಮಗ್ನನಾಗಿ ಇರುಳೆಲ್ಲ ಕಳೆದರೆ, ಕಾರ್ಯವು ಕೆಟ್ಟು ಹೋಗುವುದು” ಎಂದನು.

ರಾಜಸಿಂಹ:-“ಅಪ್ಪಣೆಯಾದರೆ ನಾನೇ ಹೋಗುವೆನು.”

ಬಾದಶಹನು ಸ್ವಲ್ಪ ಶಾಂತನಾದನು. ರಾಜಸಿಂಹನ ಕಡೆಯ ಮಾತುಗಳಿಂದ ಅವನ ಶಿರಸ್ಸಿನ ಭಾರವು ಕೊಂಚ ಇಳಿದಂತಾಯಿತು. ಒಡನೆ ಅವರಂಗಜೇಬನು ರಾಜಸಿಂಹನನ್ನು ತನ್ನ ಬಳಿಗೆ ಕರೆದು, ಅವನ ಕಿವಿಯಲ್ಲಿ ಏನನ್ನೋ ಉಸುರಿದನು. ರಾಜಸಿಂಹನು ಇನ್ನೂ ಅಲ್ಲಿ ತಡೆಯಲಿಲ್ಲ. ಅವನು ಬಾದಶಹನಿಗೆ ಪ್ರಣಾಮವನ್ನು ಮಾಡಿ, ಅರಮನೆ ಕಂದ ಹೊರಟುಹೋದನು.

ಮಧುರವಾದ ಚಂದ್ರೋದಯ. ಬೆಳದಿಂಗಳಲ್ಲಿ ನನೆದ ಮರಾಟಕ ಶಿಬರ. ಶಿಬಿರವು ಸುತ್ತಲೆಲ್ಲಾ ರಜತಮಯವಾದಂತಿತ್ತು. ಚಂದ್ರನು ಮೆಲ್ಲಮೆಲ್ಲನೆ ಇಳಿವಷ್ಟಕ್ಕೆ ಚಂದ್ರಿಕೆಯು ಮಂದಿರದ ತೆರೆದ ಕಿಟಕಿ ಗಳಿ೦ದ ಹಾಯ್ದು, ಒಳಗಡೆಯ ಕತ್ತಲನ್ನು ತೊಲಗಿಸುತ್ತಲಿತ್ತು. ಮಂದಿರದ “ ಹೋಲ್' ಒಂದು ಚಂದ್ರಿಕೆಯಿಂದ ಉಜ್ವಲವಾಗಿತ್ತು, (ಹೋಲ್' ಪರಿಷ್ಕಾರವಾಗಿತ್ತು, ಆದರೆ ಎರಡೂ ದ್ವಾರಗಳಿಗೂ ರೇಷ್ಮೆಯ ಪರದೆ; ಪರದೆಯಲ್ಲಿ ಚಿತ್ರಿತವಾದ ಹೂಗಳು. ಕಿಟಿಕಿಗೆ ಇದ್ದ ಪರದೆಯು ತೆರೆದಿತ್ತು. ಚಂದ್ರನ ಕಿರಣವು ಈ ಕಿಟಕಿಯಿಂದ ನುಸುಳಿ ಬಂದು, ಗೋಡೆಯ ಸಟ್ಟೆ ತೂಗುಗಳ (Silk hangings) ಮೇಲೆ ಕುಣಿಯುತ್ತಲಿತ್ತು. ಗೋಡೆಗೆ ಸಮೀಪವಾಗಿ ಪರ್ಯಂಕ; ಬೆಳ್ಳಿಯ ಕಾಲುಗಳುಳ್ಳ ಪರ್ಯ೦ಕ. ಮಂಚದ ನಾಲ್ಕು ಕಂಬಗಳಿಗೂ ಬೆಳ್ಳಿ; ಇವುಗಳ ಮೇಲೆ ಚಿನ್ನದ ಹುಲಿಯ ಮುಖಗಳು. ಮಂಚದ ಕೆಳಗೆ ಮೆತ್ತಗಾದ, ದಪ್ಪಗಾದ ರತ್ನ ಗಂಬಳಿಯು ಹಾಸಿತ್ತು. ಗೋಡೆಗಳಲ್ಲಿ ಚಿತ್ರಗಳು ಇದ್ದಂತೆಯೇ ರತ್ನ ಗಂಬಳಿಯ ಮೇಲೂ ಚಿತ್ರಗಳು. ಮಂಚದ ಮೇಲೆ ಹಂಸತೂಲಿಕಾಕಲ್ಪ. ಕಿನ್‌ಕಾಬಿನಿಂದ ರಚಿತವಾದ ಮೃದುವಾದ ಹಾಸಿಗೆ, ಹಾಸಿಗೆಯ ಮೇಲೆ, ಡಾಕ್ಕಾ ಮಲ್‌ಮಲಿನ ಹೊದಿಕೆ. ಹಾಸಿಗೆಯ ಇಕ್ಕಡೆಗಳಲ್ಲಿಯೂ ತುಪ್ಪುಳಿನ ತಲೆದಿಂಬುಗಳು. ಹಾಸಿಗೆಯ ಮೇಲೆ ಯಾರೂ ಮಲಗಿ ದಂತೆ ತೋರಲಿಲ್ಲ. ಹೊದಿಕೆಯು ಸುರ್ಕುಗೊಂಡಿರಲಿಲ್ಲ. ಅಂತಸ್ತಿನಿಂದ ಬೆಳ್ಳಿಯ ತೂಗುದೀಪವೊಂದು ಮಿಣಮಿಣನೆ ಉರಿಯುತ್ತಲಿತ್ತು. ದೀಪಕ್ಕೆ ಚಿನ್ನದ ಸರಪಣಿ; ಗಂಧದ ಎಣ್ಣೆ, ದೀಪದ ಕೆಳಗೆ ಆಜಾನುಬಾಹುವಾದ ಯುವಕನೊಬ್ಬನು ಏನನ್ನೋ ಯೋಚಿಸುತ್ತ ಕುಳಿತಿದ್ದನು. ಯುವಕರು ಒಂದು ತಡವೆ ಕಣ್ಮರಸುತ್ತ, ಮತ್ತೊಂದು ತಡವೆ ಚಂದ್ರನನ್ನು ನೋಡುತ್ತಲಿದ್ದನು. ನಡುನಡುವೆ “ನಾನೇಕೆ ಹೀಗೆ ಮಾಡಿದನು?” ಎನ್ನುವನು. ದೀಪವು ನಂದಿಹೋಗುವಂತಿತ್ತು. ಯುವಕನು ಅದನ್ನು ಸರಿಮಾಡವುದಕ್ಕೆ ಎದ್ದನು. ಅಷ್ಟರಲ್ಲಿ ಹೊರಕ್ಕೆ ಯಾರೋ ಬಂದಂತೆ ಸದ್ದಾಯಿತು. ಬಂದವನಿಗೆ ಯುವಕನಿದ್ದ ಕೊಟ್ಟಡಿಯನ್ನು ಪ್ರವೇಶಿಸುವುದಕ್ಕೆ ಯಾರೂ ಅಡ್ಡಿ ಮಾಡಲಿಲ್ಲ. ಬಂದವಳು “ಹಕೀಮನ" ವೇಷದಲ್ಲಿದ್ದಯಿತು.

ಯುವಕ:-“ಕೈಲಿನಿ! ನೀನು ಈ ಗಂಭೀರವಾದ ರಾತ್ರಿ ಇಲ್ಲಿ ಬಂದೆ ಏತಕ್ಕೆ?”

ಶೈಲಿನಿಯು ಈ ಮಾತಿನಿಂದ ನೀರಾವಳಾದಳು. ಸಲ್ಲಾಪದ ಪ್ರಾರಂಭದಲ್ಲೇ ಕೇಳಿದ ವಿಪರೀತವಾದ ಪ್ರಶ್ನೆಗೆ ಶೈಲಿನಿಯ ತುಟಿಗಳು ಉತ್ತರವಿಲ್ಲದೆ ಅಲುಗಿದುವು.

ಯುವಕನು “ಏಕೆ ಬಂದೆ? ಏಕೆ ಪ್ರಯಾಸಪಟ್ಟಿ?” ಎಂದು ಮತ್ತೂ ಕೇಳಿದನು.

ಶೈಲಿನಿಯು ಸ್ವಲ್ಪ ಧೈರ್ಯಗೊಂಡ “ನಿನ್ನ ಕ್ಷೇಮವನ್ನು ವಿಚಾರಿಸುವುದಕ್ಕೆ; ಅವರಂಗಜೇಬನ ಕೃತ್ರಿಮವನ್ನು ತಿಳಿಸುವುದಕ್ಕೆ” ಎಂದಳು.

ಯುವಕನು ಸಿಟ್ಟುಸಿರಿಡುತ್ತ “ಎಲ್ಲವೂ ಕೃತ್ರಿಮ ಎಂದು ಹೇಳಿ ಪುನಃ ಉಸಿರು ಬಿಟ್ಟನು.

ಶೈಲಿನಿಯ ಹೃದಯವು ದಡದಡಿಸತೊಡಗಿತು. ಆದರೂ ಅವಳು ಮನಸ್ಸನ್ನು ಸ್ಥಿರಗೊಳಿಸಿ, ತನ್ನ ಪ್ರಿಯನ ಮಾತನ್ನು ಲಕ್ಷಿಸದಂತೆ ಮಾಡಿ, “ನನ್ನ ತಂದೆಯು ವಿಚಾರವಿಲ್ಲದೆ ಮಾಡಿದ ಕೃತ್ಯಕ್ಕೆ ನೀನು ಇಷ್ಟು—?” ಯುವಕನು ಕಣ್ಣೀರನ್ನು ಕಾಣಿಸದೆ ಒರಸುತ್ತ “ಎಲ್ಲರೂ ವಿಚಾರವಿಲ್ಲದೆ ಕೆಲಸಮಾಡುವರು, ನಾನೂ ಹಾಗೆಯೇ, ನೀನೂ ಹಾಗೆಯೇ, ಎಲ್ಲರೂ ಹಾಗೆಯೇ” ಎಂದು ಸ್ತಬ್ಬನಾದನು.

ಯುವಕನ ಮಾತುಗಳು ಶಲ್ಯದಂತೆ ಶೈಲಿನಿಯ ಮನಸ್ಸನ್ನು ಚುಚ್ಚಿದುವು. ಶೈಲಿನಿಯ ಹತ್ತಿರ ಬಂದು, “ನಾನು ವಿಚಾರವಿಲ್ಲದೆ ಮಾಡಿದ ಕಾರ್ಯವು ಯಾವುದು?” ಎಂದು ಕೇಳಿದಳು.

ಯುವಕನು ತಲೆಯನ್ನು ಕೈಯಿಂದ ಆಚರಿಸುತ್ತ “ನ-ನನ್ನನ್ನು-- ಪ್ರೀ- ಪ್ರೀತಿಸಿದುದು” ಎಂದು ಹೇಳಿ, ಮುಖವನ್ನು ತಗ್ಗಿಸಿದನು.

ಶೈಲಿನಿಯ ಹೃದಯವು ಐದೀರ್ಣವಾಗುವಂತಿತ್ತು. ಅವಳು ಕಿಟಕಿಯ ಕಡೆಗೆ ಕಣ್ಣೆತ್ತಿ ನೋಡಿದಳು. ಚಂದ್ರನು ಇದಿರಿಗೆ ತೋರುತ್ತಿರಲಿಲ್ಲ, ಶೈಲಿನಿಯು ಕಾತರಸ್ವರದಿಂದ, “ನನ್ನ ಕೃತ್ಯಗಳಲ್ಲಿ ವಿಚಾರವಿಲ್ಲ. ಅದನ್ನು ನಾನು ತಿಳಿದಿರುವೆ. ನನ್ನ ಪ್ರೀತಿಯಲ್ಲಿ ಆವಿಚಾರವು ಯಾವುದು? ತುಂಬಿಯು ಕಮಲದ ಬಳಿಗೈದುವುದರಲ್ಲಿ ಯಾವ ವಿಚಾರ ಮಾಡುವುದು?”

ಯುವಕ:- “ಕಮಲ ಪುಷ್ಪವೊ, ಕಿಂಶುಕಪುಪ್ಪವೋ ಎಂದು ನೋಡದೆ ಇರುವುದೇ??

ಶೈಲಿನಿಯ ಬಾಯಲ್ಲಿ ಮಾತಿಲ್ಲದೆ ಯುವಕನನ್ನೇ ನೋಡುತ್ತ ನಿಂತಳು. ಯುವಕನು ರುದ್ಧಕಂಠನಾದನು. ಹೊರಕ್ಕೆ ಯಾರೋ ಬಂದಂತೆ ಸದ್ದು ಕೇಳಿಸಿತು.

ಒಡನೆ ಶೈಲಿನಿಯ ಕೈಯನ್ನು ಯುವಕನು ತನ್ನ ಕೈಯಿಂದ ಬಿಗಿ ಹಿಡಿದು “ಜೈಲಿನಿ! ನನ್ನನ್ನು ಮನ್ನಿಸು! ಶೈಲಿನಿ! ನನ್ನನ್ನು ಕ್ಷಮಿಸು!” ಎಂದು ಹೇಳಿ ಅಳತೊಡಗಿದನು.

ಅಷ್ಟರಲ್ಲಿ ಹೊರಗಿನ ಗದ್ದಲವು ಹೆಚ್ಚಾಯಿತು. ಶೈಲಿನಿಯು ಅವಾಕ್ಕಾದಳು. ಆದರೂ ಚಿತ್ತಸ್ಥೆರ್ಯದಿಂದ, “ರಾಜಾಧಿರಾಜ! ಈ ದಾಸಿಯು ಯಾವುದನ್ನು ಮನ್ನಿಸಬೇಕು? ನಾನು ಕ್ಷಮಿಸುವುದಕ್ಕೆ ಅಪರಾಧವೇನಿದೆ?” ಎಂದು ವಿಸ್ಮಿತನಯನಗಳಿಂದ ಕೇಳಿದಳು. “ಒಳಗೆ ಹೋಗುವುದಕ್ಕೆ ಯಾರ ಅಪ್ಪಣೆಯೂ ಇಲ್ಲ' ಎಂದು ಹೊರಗಿಂದ ಮಾತುಗಳು ಕೇಳಿಸಿದುವು.

ಯುವಕನು ಒಮ್ಮೆ ಮಾತನಾಡಲಿಲ್ಲ. ಬಳಿಕ ಶೈಲಿನಿಯ ಮುಖವನ್ನು ತುಂಬಾ ನೋಡುತ್ತ, “ಶೈಲಿಸಿ! ನೀನು ನನ್ನಿಂದ ವಂಚಿತಳಾದೆ. ವಂಚಿತಳಾದೆ. ನೀನು ಹೇಗೆ ವಂಚಿತ ಇವೆ ಎಂದು ನಾನೇ ಬಾಯಿಟ್ಟು ಹೇಳುವ ಬದಲಾಗಿ ಈ ಪತ್ರವೇ ತಿಳಿಸುವುದು; ಇದನ್ನು ಓದಿ ನೋಡಿ, ನನ್ನ ಅಪರಾಧವನ್ನು ಕ್ಷಮಿ: ಸು!” ಎಂದು ಹೇಳಿ, ಅಲ್ಲಿಯೇ ಕೈಗಳಿ೦ದ ಕಣ್ಣು ಮುಚ್ಚಿ ನಿಂತುಬಿಟ್ಟನು.

ಹೊರಕ್ಕೆ ಮುಆಜಮನು ಪಸರೇಯವನನ್ನು ಗದರಿಸಿ, ಬಂದನು. ಅವನು ಕೊಟ್ಟಡಿಗೆ ಇದಿರಾಗಿ ಬರುವುದನ್ನು ಕೈಬಿಸಿಯು ಕಂಡು “ರಾಜಾಧಿರಾಜ! ನನ್ನನ್ನ ರಕ್ಷಿಸು! ರಕ್ಷಿಸು !!” ಎಂದು ಕೂಗಿದಳು.

ಮುಆಜಮನು ಶೈಲಿನಿಯನ್ನು ಸ್ವರದಿಂದ ಗುರುತಿಸಿದನು. ಅವನು ಒಳಕೊಟ್ಟಡಿಯ ಸವಿಾಪಸ್ಥನಾಗಿ “ಶಿವಾಜಿರಾಜ! ಇದೇನು ಅಕೃತ್ಯವನ್ನು ಮಾಡುವೆ?” ಎಂದು ಕೇಳಿದನು.

ಶೈಲಿನಿಯ ಪ್ರಾಣವಲ್ಲಭನು ಮುಂದೆ ಬಂದು, ಶೈಲಿನಿಯನ್ನು ತನ್ನ ಬೆನ್ನ ಹಿಂದೆ ಇರಿಸಿ, “ನನ್ನ ಏಕಾಂತದ ಕೊಟ್ಟಡಿಗೆ ನೀನು ಯಾರ ಅನುಮತಿಯಿಂದ ಪ್ರವೇಶಮಾಡಿದೆ?” ಎಂದು ಕೇಳಿದನು, “ಎಲ್ಲವೂ ನಮ್ಮದಾದಲ್ಲಿ ನಾವು ಯಾರೊಡನೆ ಕೇಳಬೇಕು?" ನಿಂದು ನುಜಮನು ಉತ್ತರ ಕೊಟ್ಟನು. ಪುನಃ ನಮ್ಮ ನಗರದಲ್ಲಿ ಹೆಣ್ಣು ಕಳವು ಆಗದಂತೆ ನಾವು ಸಾಗರೂಕರಾಗಿರಬೇಕು.” ಎಂದು ಮುಂದರಿಸಿದನು,

ಅವನ ಪ್ರತಿದ್ವಂದ್ವಿಯು ಉದ್ರೇಕಗೊಂಡನು. ಇಬ್ಬರಿಗೂ ಮಾತಿಗೆ ಮಾತು ಬಂದಿತು. ಮುಸಲ್ಮಾನನು ಕತ್ತಿಯನ್ನು ತೋರಿಸಿದನು, ಒಡನೆ ಹಿಂದುವು ಖಡ್ಗವನ್ನು ಕೈಯಲ್ಲಿ ಹಿಡಿದು, ಕೊಟ್ಟ ಡಿಯ ಹೊರಕ್ಕೆ ಹೋದನು. ಮುಜ ಮನು ಮುಂದೆ ಓಡ ತೊಡಗಿದನು. ಮಂದಿರದ ಒಳಕ್ಕೆ ಒಂದು ಮನಲೆಯಿಂದ ಮತ್ತೊಂದು ಮೂಲೆಗೆ ಓಡಿಯೋಡಿ, ಮುಆಜಮನು ಹೊರಕ್ಕೆ ಬಂದು, ಪಹರೆಯವನಿಗೆ “ಬಾಗಿಲನ್ನು ಬಿಗಿಮಾಡು” ಎಂದು ಆಜ್ಞೆ ಕೊಟ್ಟನು.

ಮರಾಟಿನು ಹೊರಕ್ಕೆ ಬಾರದಂತೆ, ಪಹರೆಯವನು ಬಾಗಿಲನ್ನು ಬಿಗಿದುಬಿಟ್ಟನು. ಮರಾಟನು ಉಚ್ಚಸ್ವರದಿಂದ, “ಶೈಲಿನಿ! ಶೈಲಿನಿ! ಪ್ರವಾದ ಸಂಭವಿಸುವಂತಿದೆ. ಬೇಗನೆ ಓಡಿಬಿಡು! ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳು!” ಎಂದು ಹೇಳುತ್ತ ಮತ್ತೊಂದು ಕೊಟಡಿಗೆ ಹೋಗಿ, ತೆರೆದಿದ್ದ ಕಿಟಕಿಯನ್ನು ಹತ್ತುತ್ತಿದ್ದನು. ಅದನ್ನು ನೋಡಿ ಮಂದಿರದ ಜಗುಲಿಯ ಮೇಲಿದ್ದ ಮಆಜಮನು ಓಡತೊಡಗಿದನು. ಶಿಬಿರದ ಸುತ್ತಲಿದ್ದ ಸೈನಿಕರೆಲ್ಲರು ಗದ್ದಲದಿಂದ ಸಂಭ್ರಾಂತರಾದರು. ಅಷ್ಟರಲ್ಲಿ ರಾಜಸಿಂಹನು ಮಂದಿರದ ಬಳಿಯಲ್ಲಿ ಇಬ್ಬರು ಸಿಪಾಯರೊಡನೆ ಬಂದು ಇಳಿದನು. ಮರಾಟನು ಕಿಟಕಿಯನ್ನು ಹತ್ತಿ, ಕೈಯಲ್ಲಿದ್ದ ಖಡ್ಗವನ್ನು ಜಳಪಿಸುತ್ತ ಕೆಳಗೆ ದುಮುಕುವುದಕ್ಕೆ ಸಿದ್ಧನಾಗಿದ್ದನು. ಮುಅಜವನು ರಾಜಸಿಂಹನನ್ನು ನೋಡಿ, “ಅಯ್ಯಾ ! ಶಿವಾಜಿಯು ನನ್ನನ್ನು ಅಟ್ಟ ಕೊಂಡು ಬರುವನು. ಇಕೋ! ನನ್ನನ್ನು ರಕ್ಷಿಸು~ " ಎಂದು ಚೀರುತ್ತ ಹತ್ತಿರಕ್ಕೆ ಬಂದನು. ರಾಜಸಿಂಹನು ಮರಾಟನನ್ನು ನೋಡಿದನೋ ಇಲ್ಲವೋ, ಉಪ್ಪರಿಗೆಯ ಮೇಲೆ ಕಾವಲಿದ್ದ ಸೈನಿಕರಿಗೆ ಕೈಸನ್ನೆ ಮಾಡಿ, “ಕಳಚಿಬಿಡು!” ಎಂದು ಒದರಿದನು. ನೂರಾರು ಬcಡಿಗಳ ಗಡಗಡ ಶಬ್ದದ ಚೀತ್ಕಾರವೊಂದು ಮಹಡಿಯಿಂದ ಕೇಳಿಸಿತು. ಮರಾಟನು ಕಿಟಕಿಯಿಂದ ಕೆಳಕ್ಕೆ ಹಾರಿದನು. ಕಣ್ಣು ಮುಚ್ಚುವಷ್ಟರಲ್ಲಿ ಮಂದಿರದ ಉಪ್ಪರಿಗೆಯು ಮಾಡಿನೊಡನೆ ಜರಿದು ಜಾರಿ ಬರುವಂತಿತ್ತು, ಸಾವಿರಾರು ಬೀಳಲು ಗಳಿಂದ ಆದರಿಸಿದ್ದ ಉನ್ನತವಾದ ಮಹತ್ತಾದ ಆಲದ ಮರವು ಸಿಡಿಲಘಾತದಿಂದ ಬುಡದೊಡನೆ ನೆಲಕ್ಕೆ ಒರಗುವಂತೆ, ಸೈನಿಕರು ಶೀಘ್ರವಾಗಿ ಗೊಣಸುಗಳನ್ನು ಕಳಚಿ ಬಿಡುತ್ತಲೇ, ಆ ಕೃತ್ರಿಮಭವನವು ಓರ್ಗುಡಿಸಿ ಬೀಳತೊಡಗಿತು.

ಮುಆಜಮನು ಕಳವಳದಿಂದ “ಅಯ್ಯೋ! ಅಯ್ಯೋ! ಶೈಲಿನಿಯು ಒಳಕ್ಕೆ ಇರುವಳು--ನಿನ್ನ ಮಗಳನ್ನು ರಕ್ಷಿಸು!” ಎಂದು ಚೀರಿದನು. ಅದೇ ಸಮಯದಲ್ಲಿ ಶಿಬಿರದ ಅಂತಸ್ತು ಮರಾಟನ ತಲೆಯನ್ನು ಹಳಚಿತು. ಮರಾಟನು ಭಾರದಿಂದ ಮು೦ದರಿಸಲಾರದೆ 'ಜೈಲಿನಿ-ಶೈ ಎನ್ನುತ್ತ ಅಡ್ಡಗೆಡಲಿಕ್ಕಾದನು.

'ಶೈಲಿನಿ' ಎಂಬ ಮಾತು ಕಿವಿಗೆ ಬಿದ್ದಿತೊ ಇಲ್ಲವೊ ರಾಜಸಿಂಹನು ಉನ್ಮತ್ತನಾದನು. ಕೆಲಸವು ಕೈಮೀರಿ ಹೋಯಿತು. ಯಾರನ್ನೂ ಬದ ಕಿಸುವುದಕ್ಕೂ ಉಪಾಯವಿರಲಿಲ್ಲ. ( ಅಮ್ಮಾ! ಜೈಲಿನಿ! ನೀನು ಎಲ್ಲಿ ಇರುವೆ??? ಎಂದು ಹೇಳಿ ರಾಜಸಿಂಹನು ಜೀವದಾಸೆಯಿಲ್ಲದೆ ಒಳಕ್ಕೆ ಹಾರಿದನು. ಸಿಪಾಯನೊಬ್ಬನು ಅವನನ್ನು ತಡಿಸುವುದಕ್ಕೆ ಹೋದನು. ಅವನು ಕೃತಕೃತ್ಯನಾಗಲಿಲ್ಲ. ಎತ್ತರವಾದ ಮಾಡು ಮಹಾಶಬ್ದದೊಡನೆ ನೆಲವನ್ನು ಚುಂಬಿಸಿಬಿಟ್ಟಿತು. ಆ ಭಯಂಕರ ಧ್ವನಿಯು ಆ ಗಂಭೀರವಾದ ರಾತ್ರಿಯಲ್ಲಿ ಅರಣ್ಯ ಮಧ್ಯದಲ್ಲಿ ಉಂಟಾದ ಗುಡುಗಿನಂತೆ ಕೇಳಿಸಿತು.

ಮುಆಜಮನು ಆರಮನೆಗೆ ಓಡಿದನು. ಬಾದಶಹನು (ಘುನಾಲ್ ಖಾನೆ'ಯಲ್ಲಿ ನಿದ್ದೆ ಹೋಗದೆ, ರಾಜಸಿಂಹನಿಂದ ಸಮಾಚಾರವನ್ನು ನಿರೀಕ್ಷಿಸಿದ್ದನು. ಮುಆಜಮನ ಬಾದಶಹನ ಬಳಿಗೆ ಬಂದು ಘೋರ ಪ್ರಮಾದವಾಯಿತು” ಎಂದನು.

ಅವರಂಗಜೇಬನು 'ಶಿವಾಜಿಯು ತಪ್ಪಿಸಿಕೊಂಡು ಹೋದನೆ?' ಎಂದು ಕಾಂಕ್ಷಿತಸ್ವರದಿಂದ ಕೇಳಿದನು.

ಮುಆಜಮ್:- ರಾಜಸಿಂಹನು ಶಿಬಿರವನ್ನು ಬಿಚ್ಚುವಂತೆ ಆಜ್ಞೆ ಮಾಡಿದನು.

ಬಾದಶಹ:-“ಶಿವಾಜಿಯು ಒಳಗೆ ಇರಲಿಲ್ಲವೇ?'

ಮುಆಜಮ್: - 'ಶಿವಾಜಿಯೂ ಇದ್ದನು. ಅವನೊಡನೆ ಶೈಲಿನಿಯ ಇದ್ದಳು' ಎಂದನು.

ಬಾದಶಹ:-'ರಾಜಸಿಂಹನು ಮಗಳನ್ನು ರಕ್ಷಿಸಲಿಲ್ಲವೇ?

ಮುಅಜಮ್:— ಮಗಳನ್ನು ಲಕ್ಷ್ಮಿ ಸುವುದು ಅಸಾಧ್ಯವಾಗಿದ್ದಿತು. ಮಗಳು ಒಳಗೆ ಇರುವಳೆಂದು ಕೇಳುತ್ತಲೇ ರಾಜಸಿಂಹನು ತಾನೂ ಬಲಿಬಿದ್ದನು'. ಅವರಂಗಜೇಬನು ಇದನ್ನು ಕೇಳುತ್ತಲೇ ಶಿಬಿರದ ಕಡೆಗೆ ಹೊರಟನು. ಸೈನಿಕರಿಗೆ ಆಜ್ಞೆ ಮಾಡಿ ಹಾಳು ಕೊಂಪೆಯನ್ನೆಲ್ಲಾ ಬೆಳಗಾಗುವಷ್ಟರಲ್ಲಿ ತೊಡಿಸಿ ತೆಗೆದನು. ನಾಲ್ಕು ಮಂದಿ ರಜಪೂತ ಸೈನಿಕರು ಮರಾಟನ ಶವವನ್ನು ಅವರಂಗಜೇಬನ ಕಾಲಡಿಯಲ್ಲಿ ತಂದಿಟ್ಟರು. ಅವರಂಗಜೇಬನು ಮುಖದಲ್ಲಿ ಸಂತೋಷವನ್ನಾಗಲಿ ದುಃಖವನ್ನಾಗಲಿ ಸ್ಪುಟವಾಡಲಿಲ್ಲ. ಶಿವಾಜಿಯು ಸತ್ತು ತನ್ನ ಪಾದಾಕ್ರಾಂತನಾದನೆಂದು ಮನಸ್ಸಿನಲ್ಲಿ ತಿಳಿದರೂ, ಬಾದಶಹನು ಶಾಂತನಾಗಿದ್ದನು. ಬಳಿಕ ರಾಜಸಿಂಹ ಶೈಲಿನಿಯರ ಶವಗಳು ತೆಗೆಯಲ್ಪಟ್ಟುವು. ಚಂದ್ರಕಾಂತಪುತ್ಥಳಿಯು ಚಂದ್ರಕಿರಣದಲ್ಲಿ ನೆನೆದು ಹೋದಂತೆ, ಶೈಲಿನಿಯ ದೇಹವು ತಣ್ಣಗಾಗಿದ್ದಿತು. ಬಾದಶಹನು ಶೈಲಿನಿಯ ದೇಹವನ್ನು ನೋಡುತ್ತ ನಿಂತನು. ಅವಳ ಹಸ್ತದಲ್ಲಿ ಬಿಗಿ ಹಿಡಿದ ಪತ್ರವೊಂದಿತ್ತು. ಬಾದಶಹನು ಕಾಗದವನ್ನು ಓದಿಸಿದನು. ಕಾಗದವು ಈ ಪರಿಯಾಗಿ ಬರೆದಿತ್ತು:-

ಶೈಲಿನಿ,
ನಿನ್ನನ್ನು ಹೇಗೆ ಸಂಬೋಧಿಸಬೇಕೆಂದು ಇದುವರೆಗೆ ನಿಶ್ಚಯಮಾಡಲಾರದವ ನಾಗಿದ್ದೇನೆ. ಒಂದೆರಡು ಬಾರಿ ನಿನ್ನನ್ನು ಪ್ರಿಯೆ, ಪ್ರಯ' ಎಂದು ಕರೆದಿದ್ದೇನೆ. ಹಾಗೆ ಏಕೆ ಕರೆದೆನೆಂದು ಈಗ ದುಃಖಪಡುತ್ತೇನೆ. ನಾನು ಹತಭಾಗ್ಯನು; ಪಾಪಿಯು. ನನ್ನ ಪಾಪದಿಂದ ನಿನ್ನ ದೇಹವನ್ನು ಪಾಪಮಯವಾಗಿ ಮಾಡಲು ನಾನು ಆಶಿಸು ಯಾವ ಕಾಲದಲ್ಲಿ ನೀನು ನಿನ್ನ ತಂದೆಯೊಡನೆ ಪ್ರತಾಪಗಡಕ್ಕೆ ಬಂದೆಯೋ ಆ ಕಾಲದಲ್ಲಿ ಈ ಪಾಪದ ಬೀಜವು ನನ್ನ ಹೃದಯದಲ್ಲಿ ಉಂಟಾಯಿತು. ಒಂದು ಸಾಯಂಕಾಲ ಪ್ರತಾಪಗಡದ ಉಪವನದಲ್ಲಿ ಏಕಾಕಿಯಾಗಿ ಏನನ್ನೋ ಚಿಂತಿಸುತ್ತ ಕುಳಿತಿದ್ದೆ. ಬಳಿಕ ಚಿಂತನೆಯನ್ನು ಬಿಟ್ಟು ನಿನ್ನ ಪ್ರಾಣೇಶನ ಸ್ಮರಣೆ ಯನ್ನು ಮಾಡತೊಡಗಿದೆ. ನಿನ್ನ ದೀರ್ಘವಾದ ಕೇಶದಾನವು ಬೆನ್ನ ಮೇಲೆ ಗುಂಗುರು ಗುಂಗುರಾಗಿ ಹರಡಿತ್ತು. ಮುಖವು ಕೈ ದಳದ ಮೇಲೆ ಆಶ್ರಯಿಸಿತ್ತು. ಪ್ರಣಯಜನ್ಯವಾದ ಕಣ್ಣೀರುಗಳು ದರದರನೆ ಸುರಿಯುತ್ತಿದ್ದುವು. ಆಗ ನಾನು ಬಳಿಯಲ್ಲಿದ್ದ ನಿಕುಂಜದ ಮರೆಯಲ್ಲಿದ್ದೆನು. ಎರೆಹಿಣಿಯಾದ ವನದೇವತೆಯಂತೆ ಒಪ್ಪುತ್ತಲಿದ್ದ ನನ್ನ ಮೂರ್ತಿಯನ್ನು ನೋಡಿ ನಾನು ಮುಗ್ಧನಾದೆನು, ನಾನು ಯೋಚಿಸಿದ ಕೃತ್ಯವು ಆಕರ್ಯವೆಂದು ನಾನು ಆಗ ತಿಳಿದಿದ್ದರೂ, ನಿನ್ನ ಲಾವಣ್ಯಮಯವಾದ ಶರೀರದ ಕಡೆಯಿಂದ ನನ್ನ ಮನಸ್ಸು ಹಿಂದೆಳೆಯಲಾರದೆ ಹೋದೆನು ನಾನು ಮರೆಯಿಂದ ಹೊರಕ್ಕೆ ಬಂದೆನು, ನೀನು ನನ್ನನ್ನು ನೋಡಿ ಲಜ್ಜಿತಳಾದೆ. ನಾನು ಮಾತನಾಡುವಷ್ಟರಲ್ಲ ಕೋಟಿಯ ಘಂಟಾನಾದವಾದುದರಿಂದ, ಒಟ್ಟು ಹೋಗಬೇಕಾಯಿತು, ನೀನು ನನ್ನ ಹೃದಯವನ್ನು ಓದಿದ್ದೆ.

ಶೈಲಿನಿ! ನಿನ್ನೊಡನೆ ಮುಚ್ಚು ಮರಿ ಏಕೆ? ನಿನ್ನ ಪ್ರಣಯ ಸರ್ವಸ್ವವನ್ನು ನನಗೆ ಅರ್ಪಿಸಲಿಕ್ಕೆ ಇದ್ದ ನಿನ್ನೊಡನೆ ಮರೆ ಮೋಸವೇಕೆ? ನನ್ನನ್ನು ಶಿವಾಜಿ ಎಂದು ಭಾವಿಸಿ, ನೀನು ಮೋಸಹೋದೆ. ನಿನ್ನ ಹೃದಯವು ಶಿವಾಜಿ ಮಹಾರಾಜರು ತುರುವಲ್ಲಿ ಅಲ್ಲದೆ ಮತ್ತೆಲ್ಲಿ ಹೋಗುವುದು? ಕಮಲಿನಿಯು, ರಾಜಹಂಸನಿಗೆ ಆಶ್ರಯ ಕೊಡುವುದಲ್ಲದೆ ಕಪ್ಪೆಯನ್ನು ಬಯಸುವುದೇ? ನಾನು ಶಿವಾಜಿರಾಜರ ಸ್ವಾಮಿಭಕ್ತನಾಗಿದ್ದರೂ ಸ್ವಾಮಿದ್ರೋಹಿಯಾದನು. ಮಹಾರಾಜರ ಆಪತ್ತುಗಳಲ್ಲಿ ನಾನು ಅವರಿಗೆ ನೆರವಾಗುವಂತೆ ನನಗೆ ಅವರ ಬಳಿಯಲ್ಲಿ ಆಶ್ರಯ ಕೊಟ್ಟಿದ್ದರು. ನನ್ನ ರೂಪ, ದೇಹ, ಆಕಾಶ, ವರ್ಣ ಎಲ್ಲವು ಶಿವಾಜಿರಾಜರಂತೆಯೇ, ಅವಳಿಜವಳಿ ಕೂಸುಗಳಲ್ಲಾದರೂ ಸ್ವಲ್ಪ ಭೇದ ತೋರಬಹುದು, ನಮ್ಮಲ್ಲಿರಲಿಲ್ಲ. ಏನೊಂದು ಪ್ರಮಾದ ಸಂಭವಿಸುವ ಹಾಗಿದ್ದರೆ, ರಾಜರು ನನ್ನನ್ನು ತಮ್ಮ ಸ್ಥಾನದಲ್ಲಿ ಇಟ್ಟು ಪ್ರಾಣವನ್ನು ಉಳಿಸಿಕೊಳ್ಳುತಿದ್ದರು. ರಾಜರು ಒಂದು ದಿಲೇರಿಖಾನನ ಹಸ್ತಗತವಾಗುವಂತಿದ್ದರು. ಆಗ ರಾಜರ ಬದಲಿಗೆ ನಾನೇ ಬಹಿರಂಗದಲ್ಲಿ ಕಾರ್ಯವನ್ನು ವಿಚಾರಿಸುತ್ತಿದ್ದೆನು. ಯುದ್ದದಲ್ಲಿ ರಾಜರಿಗೆ ಏಟು ತಗಲುವ ಹಾಗಿದ್ದರೆ, ಸೈನ್ಯವು ಹಿಂಜಾರದಂತೆ ನಾನೇ ನಾಯಕನಾಗಬೇಕಾಗುತ್ತಿತ್ತು. ಅಷ್ಟೇಕೆ! ಪ್ರಕೃತದಲ್ಲಿ ಬಾದಶಹರ ಬದಿಯಲ್ಲಿದ್ದ ಶ್ರೀ ಶಿವಾಜಿ ಮಹಾರಾಜರು ತಾವು ತಪ್ಪಿಸಿಕೊಂಡುದು ಬಾದಶಹರಿಗೆ ತಿಳಿಯಲು ಸ್ವಲ್ಪ ವಿಳಂಬವಾಗುವಂತೆ, ನನ್ನನ್ನು ಅವರ ಹಾಸಿಗೆಯ ಮೇಲೆ ಮಲಗಬೇಕೆಂದು ಆಜ್ಞೆ ಮಾಡಿದ್ದರು.

ಶೈಲಿನಿ! ಬ್ರಹ್ಮಹತ್ಯಕಾಗಲಿ ಪತ್ನಿಹತ್ಯಕ್ಕಾಗಲಿ ಪ್ರಾಯಶ್ಚಿತ್ತವು ಉಂಟು. ಸ್ವಾಮಿದ್ರೋಹಕ್ಕೆ ಪ್ರಾಯಶ್ಚಿತ್ತವಿಲ್ಲ, ನಾನು ಶಿವಾಜಿರಾಜರ ಸೇವೆಯಲ್ಲಿ ಸೇರುವಾಗ ವಿವಾಹಮಾಡಿಕೊಳ್ಳುವುದಿಲ್ಲ ಎಂದು ರಾಜಚರಣಗಳನ್ನು ಹಿಡಿದು ಪ್ರಮಾಣ ಮಾಡಿದ್ದೆನು. ಆದಕ್ಕೊಸ್ಕರವೇ ನನ್ನ ಬಡ ತಾಯಿಯನ್ನೂ ತಮ್ಮಂದಿರನ್ನೂ ರಾಜ್ಯದ ವೆಚ್ಚದಿಂದ ಮಹಾರಾಜರು ಪೋಷಿಸುತ್ತಿರುವರು. ನಾನು ಈ ಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳುವುದು ಅನುಚಿತವಾಗಿತ್ತು. ನನ್ನ ವಿವಾಹದಿಂದ ರಾಜ್ಯ ಕಾರ್ಯ ಗಳಿಗೆ ತಡಕು ಉಂಟಾಗುವುದೆಂದು ನನಗೆ ಗೊತ್ತಿತ್ತು. ಅದರೆ ಅಂದು ನಿನ್ನ ರೂಪವನ್ನು ನೋಡಿ ನಾನು ಮರುಳಾದೆನು. ನನ್ನನ್ನು ಶಿವಾಜೆಯೆಂದು ಭ್ರಮಿಸಿ ನೀನೂ ಮರುಳಾದೆ. ನಾನು ಸ್ವಾಮಿದ್ರೋಹವನ್ನು ಮಾಡಿದುದು ಅಲ್ಲದೆ ನನ್ನ ಕಪಟವೇಶದಿಂದ ನಿನ್ನ ಹೃದಯವನ್ನೂ ಸೂರೆಗೊಳ್ಳಲಿಕ್ಕೆ ಇದ್ದೆನು. ನನ್ನ ಕಪಟಾಚರಣೆಯು ಮಹಾರಾಜರಿಗೆ ಪ್ರಕೃತದಲ್ಲಿ ತಿಳಿದಿತ್ತೋ ಇಲ್ಲವೊ ನಾನು ಖಂಡಿತವಾಗಿ ಹೇಳಲಾರೆನು, ಆದರೆ ದಿನೇ ದಿನೇ ನನ್ನ ದ್ರೋಹವು ನನ್ನನ್ನೇ ಚುಚ್ಚತೊಡಗಿತು, ಅಂದಿನಿಂದ ನಿನ್ನನ್ನು ಏಕೆ ಪ್ರೀತಿಸಿದೆ ಎಂದು ವಿಷಾದಗೊಂಡನು. ನೀನು ಆ ರಾತ್ರಿ ಗುಪ್ತವೇಷದಿಂದ ಶಿಬಿರಕ್ಕೆ ಬಂದಾಗ ನಿನ್ನ ಮೇಲೆ ಉದಾಸೀನಗೊಳ್ಳಲಿಕ್ಕೆ ಅದೇ ಕಾರಣ.

ಶೈಲಿನಿ! ನಾನು ಇನ್ನೂ ಹೇಳುವುದಕ್ಕಿಂತ ನನ್ನ ಶ್ವಾಸವು ನಿಂತು ಹೋದರೆ ಚೆನ್ನಾಗಿತ್ತಲ್ಲವೆ? ನಾನು ಇನ್ನೂ ಬರೆಯುವುದಕ್ಕಿಂತ ನನಗೆ ಕೈಗೆಟ್ಟರೆ ಒಳ್ಳೆಯ ದಾಗಿತ್ತಲ್ಲವೇ? ನಾನು ನಿನ್ನ ಪಾಣಿಗ್ರಹಣ ಮಾಡಿದ್ದು ಹೊರತು ನಿನ್ನ ಕುದ್ಧ ದೇಹವನ್ನು ನನ್ನ ಆಶುದ್ಧತಿಯಿಂದ ಹಾಳು ಮಾಡಲಿಲ್ಲ. ನಾನು ಸ್ವಾಮಿದ್ರೋಹಿ ಎನ್ನಿಸಿಕೊಳ್ಳುವು ದಕ್ಕಿಂತಲೂ ಕಪಟಪ್ರೇಮಿಯೆಂದಾದರೂ ಜನಗಳಿಂದ ಹೇಳಿಸಿಕೊಳ್ಳುವೆನು, ನೀನು ನನ್ನನ್ನು ಕ್ಷಮಿಸು ನನ್ನನ್ನು ಶುದ್ಧವಾಗಿ ಮಾಡಿಬಿಡು! ನೀನು ಯಾರನ್ನು ನೋಡಿ - ಶಿವಾಜಿಯಂದು ಬ್ಯಾಂಕಿಗೆಂಡೆಯೋ ಆ ಹಿರೋಜಿ ಘರ್ಜಂದ ಎಂಬ ಈ ಪಾಪಿ ಮರಾಟನನ್ನು ಇನ್ನು ಸಂಪೂರ್ಣವಾಗಿ ಮರೆತುಬಿಡು. ಬಿಡುವುದೆ ನನಗೆ ಕ್ಷಮಾಪಣೆಯೆಂದು ಭಾವಿಸುವೆನು,

ಹಿರೋಜಿ ಫರ್ಜಂದ್.

ಅವರಂಗಜೇಬ್ ಬಾದಶಹನು ಈ ಕಾಗದವನ್ನು ಕೇಳುತ್ತಲೇ ಕೋಪಗೊಂಡನು; ದುಃಖಗೊಂಡನು. ಶಿವಾಜೆ ತಪ್ಪಿಸಿಕೋcಡನು ಎಂದು ಕೊಪ; ರಾಜಸಿಂಹನು ಮಗಳೊಡನೆ ಸತ್ತನೆಂದು ದುಃಖ, ಬೆನ್ನ ಹಿಂದೆ ಜನಗಳನ್ನು ಕಳುಹಿಸಿದನು. ಶಿವಾಜಿಯ ಹೆಜ್ಜೆ ಹಿಡಿಯಲಿಕ್ಕೆ ಆಗದೆ ಹೋಯಿತು. ಬಾದಶಹನು ಮೂರು ಶವಗಳಿಗೂ ಹಿಂದೂ ದಹನ ಸಂಸ್ಕಾರಗಳನ್ನು ಮಾಡಿಸಿದನು, ಆದರೆ, ೧೫ ದಿನಗಳ ವರೆಗೆ ಅವನು “ಆವತ್ ಖಾಸ್ ಜಾನೆ”ಯಲ್ಲಿ ಕಾಲಿಡಲಿಲ್ಲವಂತೆ.


  1. *ಬಂದವನು.