Library-logo-blue-outline.png
View-refresh.svg
Transclusion_Status_Detection_Tool

ಐದು ಮುಖದ ಅಂಗನೆಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ! ಆ ಅಂಗನೆಯ ಮನೆಯೊಳಗಿರ್ದು
ತಾವಾರೆಂಬುದನರಿಯದೆ; ಬಾಯ್ಗೆ ಬಂದಂತೆ ನುಡಿವರು
ಗುಹೇಶ್ವರಾ ನಿಮ್ಮನರಿಯದ ಜಡರುಗಳು.