ಐದೂರ ಹೊಲದಲಿ ಕೆಟ್ಟ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಐದೂರ
ಹೊಲದಲಿ
ಕೆಟ್ಟ
ಪಶುವನು
ಆರೂರ
ಹೊಕ್ಕು
ಅರಿಸಿಹೆನೆಂದು
ಹೋದರೆ
ಮೂರೇ
ಮನೆಯಲ್ಲಿ
ಈರುಗಾರಾಗಲಾಗಿ
ಅರಸಬಂದಯ್ಯಗಳು
ಆಸತ್ತು
ಹೋದರಲ್ಲ.
ಅರಸುವ
ಅರುಹೆ
ತಾನೆಂದು
ತಿಳಿಯಲು
ಮೂರಾರಕ್ಷರವಾಗಿ
ತೋರುವ
ಮೂಲಾಕ್ಷರಾತ್ಮಕ
ತಾನೆ
ತಪ್ಪದೆಂಬೆನಯ್ಯಾ
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.