ಒಂದೆ ಹೂ, ಒಂದೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಒಂದೆ ಹೂ
ಒಂದೆ ಅಗ್ಘವಣಿ
ಒಂದೆ ಓಗರ
ಒಂದೆ ಪ್ರಸಾದ
ಒಂದೆ ಮನ
ಒಂದೆ ಲಿಂಗ. ನಂದಾದೀವಿಗೆ
ಕುಂದದ ಬೆಳಗು; ಸ್ವತಂತ್ರ ಪೂಜೆ_ಒಂದೇ. ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ.