ಒಂಬತ್ತುನಾಳದೊಳಗೆ ಶಂಕಿನಿನಾಳವನಡರಿ, ತುಂಬಿಸೂಸುವ

ವಿಕಿಸೋರ್ಸ್ದಿಂದ



Pages   (key to Page Status)   


ಒಂಬತ್ತುನಾಳದೊಳಗೆ ತುಂಬಿಸೂಸುವ ಮನಪವನಂಗಳ ಒಂದೇ ಮಾರ್ಗದಲ್ಲಿ ನಡೆಸಿ
ಶಂಕಿನಿನಾಳವನಡರಿ
ಪಶ್ಚಿಮದ್ವಾರವ ಪೊಕ್ಕು
ಆ ಬ್ರಹ್ಮರಂಧ್ರವ ನುಸುಳಿ
ಶಿಖಾಗ್ರಂಥಿಯನೊಡೆದು ಆ ನಿರಂಜನಪೀಠವ ಮೆಟ್ಟಿ
ಮಹಾಬೆಳಗಿನ ಪ್ರಭಾಪುಂಜದಿಂದೆ ರಂಜಿಸುವ ನಿರಂಜನಸಮಾಧಿಯೊಳಗೆ ನಿರಂತರ ಬೆಳಗುತಿರ್ದೆನಯ್ಯಾ ಅಖಂಡೇಶ್ವರಾ.