ಒಡನೆ ಹುಟ್ಟಿದುದಲ್ಲ, ಒಡನೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಡನೆ ಹುಟ್ಟಿದುದಲ್ಲ
ಒಡನೆ ಬೆಳೆದುದಲ್ಲ
ಎಡೆಯಲಾದ ಒಂದು ಉಡುಗೆಯನುಟ್ಟು ಸಡಿಲಿದಡೆ ಲಜ್ಜೆ ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ. ಹಡೆದ ಗುರುಕರುಣವ
ಒಡನೆ ಹುಟ್ಟಿದ ನೇಮವನು ಬಿಡದಿರೆಲವೊ. ಬಿಟ್ಟಡೆ ಕಷ್ಟ
ಕೂಡಲಸಂಗಮದೇವನಡಸಿ ಕೆಡಹುವ ನಾಯಕನರಕದಲ್ಲಿ.