ಒಡಲಿಲ್ಲದಾತ ಜಂಗಮ ಪ್ರಾಣವಿಲ್ಲದಾತ ಭಕ್ತನಯ್ಯಾ. ಆಚಾರವೆ ಜಂಗಮ ವಿಚಾರವೆ ಭಕ್ತನಯ್ಯಾ. ಆಚಾರ-ವಿಚಾರವೆಂಬುದು ಸ್ವಾನುಭಾವ ಸಂಭಾಷಣೆ ಕೂಡಲಚೆನ್ನಸಂಗಮದೇವಾ