ಒಡಲುಗೊಂಡ ಮಾನವರೆಲ್ಲರು ನೀವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ
ಬಿಡದೆ ಕಾಡುವುದು ವಿಧಿ ಮೂರುಲೋಕವನೆಲ್ಲ. ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ ತೊಡರನಿಕ್ಕಿತ್ತು ಮಾಯೆ. ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ ತೊಡರನಿಕ್ಕಿತ್ತು ಮಾಯೆ. ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು ಕೋಡಗದಾಟವ ಆಡಿಸಿತ್ತು
ಗುಹೇಶ್ವರಾ ನಿಮ್ಮ ಮಾಯೆ