ವಿಷಯಕ್ಕೆ ಹೋಗು

ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ ಹೇಳುವಿರಿ? ಇಬ್ಬರ ಸಂಗದಿಂದಾನೆಂಬುದು ಅಜ್ಞಾನವಲ್ಲದೆ ಅರುಹಲ್ಲ ನೋಡಾ. ಒಬ್ಬರ ಸಂಗದಿಂದಾದ ಸ್ವಸಂಗಿಗೆ ತಂದೆಯೆಂದು ಕಲ್ಪಿಸಿ ತಾಯೆಂದು ಹೇಳಲಿಲ್ಲ. ತಂದೆ ತಾಯಿಗಳಿಲ್ಲದಾತಂಗೆ ಬಂಧುಗಳೆಂದೇನೋ ಭ್ರಾಂತರಿರಾ? ಅಯೋನಿಸಂಭವನಾಗಿ ಶರಣನು ಸ್ವಯಂಭು ತಾನಾದನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.