ವಿಷಯಕ್ಕೆ ಹೋಗು

ಒಬ್ಬನ ಮನೆಯಲುಂಡು, ಒಬ್ಬನ

ವಿಕಿಸೋರ್ಸ್ದಿಂದ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಒಬ್ಬನ ಮನೆಯಲುಂಡು
ಒಬ್ಬನ ಮನೆಯಲುಟ್ಟು
ಒಬ್ಬನ ಬಾಗಿಲ ಕಾದಡೆ ನಮಗೇನಯ್ಯಾ ? ನೀನಾರಿಗೊಲಿದಡೂ ನಮಗೇನಯ್ಯಾ ? ಚೆನ್ನಮಲ್ಲಿಕಾರ್ಜುನಯ್ಯಾ
ಭಕ್ತಿಯ ಬೇಡಿ ಬಾಯಿ ಬೂತಾಯಿತ್ತು.