Library-logo-blue-outline.png
View-refresh.svg
Transclusion_Status_Detection_Tool

ಒಮ್ಮೆ ಹೇಳಯ್ಯಾ ಜ್ಞಾನಿಯೆನಿಸಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಒಮ್ಮೆ ಜ್ಞಾನಿಯೆನಿಸಿ ಮತ್ತೊಮ್ಮೆ ಅಜ್ಞಾನಿಯೆನಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ಒಮ್ಮೆ ಸಂತೋಷದಲ್ಲಿರಿಸಿ ಮತ್ತೊಮ್ಮೆ ಚಿಂತೆಯಲ್ಲಿರಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ಮರ್ಕಟನಂತೆ ಎನ್ನ ಮನವ ವ್ಯಾಕುಲದಲ್ಲಿ ಹುಚ್ಚುಗೊಳಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ನಿಮಗೆ ಹೊತ್ತು ಹೋಗದೆ
ಮತ್ತೊಂದು ವ್ಯಾಪಾರವಿಲ್ಲದೆ ಎನ್ನ ಕೂಡೆ ಹದರು ಚದುರಿನಿಂದೆ ವೇಳೆಯವ ಕಳೆವರೆ ಹೇಳಾ ಅಖಂಡೇಶ್ವರಾ.