ಒಲೆಯಡಿಯನುರುಹಿದಡೆ ಗೋಳಕನಾಥನ ಕೊರಳ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಲೆಯಡಿಯನುರುಹಿದಡೆ ಗೋಳಕನಾಥನ ಕೊರಳ ಸುತ್ತಿತ್ತು
ಮಹೀತಳನ ಜಡೆ ಸೀಯಿತ್ತು
ಮರೀಚಿಕನ ಶಿರ ಬೆಂದಿತ್ತು
ರುದ್ರನ ಹಾವುಗೆ ಉರಿಯಿತ್ತು
ದೇವಗಣಂಗಳು ನಿವಾಟವಾದರು
ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು
ಕೂಡಲಸಂಗಮದೇವ ಭಸ್ಮಧಾರಿಯಾದ.