ಒಳಗೆ ನೋಡಿದರೆ ಒಳಗೆ ಬಯಲು. ಹೊರಗೆ ನೋಡಿದರೆ ಹೊರಗೆ ಬಯಲು ನೋಡಾ. ನೆನೆದಿಹೆನೆಂದರೆ ಮನ ಬಯಲು
ನೆನೆಸಿಕೊಂಡೆನೆಂದರೆ ನೀನಿಲ್ಲವಾಗಿ ನಾನೂ ಬಯಲು
ನೀನೂ ಬಯಲು ನೋಡಾ. ಭಾವಿಸಿಕೊಂಬ ವಸ್ತುವಿಲ್ಲವಾಗಿ ಭಾವ ಬಯಲೆಂದೆನು ನೋಡಾ. ಮರಹು ನಷ್ಟವಾಯಿತ್ತಾಗಿ ಅರುಹು ಶೂನ್ಯವಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.