ವಿಷಯಕ್ಕೆ ಹೋಗು

ಒಳಗೊಂದು ಬೆಳಗುವ ಜ್ಯೋತಿಯಂತಪ್ಪ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಒಳಗೊಂದು ಬೆಳಗುವ ಜ್ಯೋತಿಯಂತಪ್ಪ ವಿಚಾರವಿದೇನೊ ! ಅತ್ತ ಹೊದ್ದದು ತನ್ನ ತಾನು
ಇತ್ತ ಹೊದ್ದದು ಬಾಹ್ಯವಿಚಾರವ. ವಿಚಾರಿಸುವ ವಿಚಾರ ತಾನಾಗಿದ್ದುದನರಿಯದು. ಹೊದ್ದುವ ಕಾಳಿಕೆ ಇಲ್ಲಿ ಹೊದ್ದದು
ನಿಸ್ಸಂದೇಹ. ಇಲ್ಲಿ ಹೊದ್ದಿಯೂ ಹೊದ್ದದೆ ಇದ್ದಿತ್ತು ತುದಿಯಿಲ್ಲ ಮೊದಲಿಲ್ಲ ತುದಿ ಮೊದಲೆರಡೂ ಕೂಡಿಕೊಂಡು ನಡುವೆ ಅಂತರಾತ್ಮವಾಗಿದ್ದಿತ್ತು. ಜೀವಗುಣವಳಿದು
ಪರಮಾತ್ಮನ ಮುಂದೆ ಪ್ರತಿಬಿಂಬವಾಗಿದ್ದಲ್ಲಿ ಸಂಧಾನವನರಸುತ್ತಿದ್ದೆ ಕಾಣಾ
ಕೂಡಲಚೆನ್ನಸಂಗಮದೇವಾ.