ಓಡಲಾರದ ಮೃಗವು ಸೊಣಗಂಗೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ ಮಾಡಲಾಗದು ಭಕ್ತನು
ಕೊಳಲಾಗದು ಜಂಗಮ
ಹಿರಿಯರು ನರಮಾಂಸವ ಭುಂಜಿಸುವರೆ ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು
ಮಾಡಿಸಿಕೊಳ್ಳಬೇಕು ಜಂಗಮ
ಕೂಡಲಸಂಗಮದೇವಾ. 230