ವಿಷಯಕ್ಕೆ ಹೋಗು

ಕಂಗಳನೋಟ, ಕರಸ್ಥಲದ ಲಿಂಗ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಕಂಗಳನೋಟ
ಕರಸ್ಥಲದ ಲಿಂಗ ಹೃದಯದ ಜ್ಞಾನ- ಲಿಂಗವೆಂಬ ಲಿಂಗಮುಖದಲ್ಲಿ ಮಾತನಾಡುತ್ತಿರಲಾಗಿ
ನಡೆವ ಕಾಲು ಕೆಟ್ಟು
ಹಿಡಿವ ಕೈಯ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ನೆನೆವ ಮನದ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ನೋಡುವ ಕಂಗಳ ಕತ್ತಲೆ ಹರಿದು ಬೆಳಗಾಯಿತ್ತಯ್ಯ. ಬೆಳಗಿನೊಳು ಬೆಳಗಾಗಿ
ಬೆಳಗು ಸಮರಸವಾಗಿ
ಇಂದು ಇಂದುವ ಕೂಡಿದಂತೆ
ರವಿ ರವಿಯ ಬೆರಸಿದಂತೆ
ಮಿಂಚು ಮಿಂಚನು ಕೂಡಿದಂತೆ
ಉಭಯದ ಸಂಚವಳಿದು ಸ್ವಯಂ ಜ್ಯೋತಿಯಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.