ಕಂಗಳ ಕಳೆದು ಕರುಳ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಂಗಳ ಕಳೆದು ಕರುಳ ಕಿತ್ತು ಕಾಮನ ಮೂಗ ಕೊಯ್ದು ಭಂಗದ ಬಟ್ಟೆಯ ಭವ ಗೆಲಿದವಳಿಗಂಗವೆಲ್ಲಿಯದು ಹೇಳಾ ? ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದಡೇನುಂಟು ? ಅಂಗವೆ ಲಿಂಗವಹ ಪರಿಯನೆನಗೆ ಹೇಳಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ ?