ಕಂಗಳ ತುರೀಯುವ ಕರಸ್ಥಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಗಳ ತುರೀಯುವ ಕರಸ್ಥಲ ನುಂಗಿ
ಕರಸ್ಥಲದ ದೃಷ್ಟವ ಕಂಗಳು ನುಂಗಿ
ಇಂತೀ ಉಭಯಕುಳವಳಿದು ಅದ್ವೈತವಾದ ಶರಣಂಗೆ ಆಹ್ವಾನವಿಲ್ಲ ವಿಸರ್ಜನವಿಲ್ಲ ಹಿಂದೆಂಬುದಿಲ್ಲ ಮುಂದೆಂಬುದಿಲ್ಲ; ಒಳಗೆಂಬುದಿಲ್ಲ
ಹೊರಗೆಂಬುದಿಲ್ಲ
ಕೀಳೆಂಬುದಿಲ್ಲ
ಮೇಲೆಂಬುದಿಲ್ಲ. ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣನೆತ್ತತ್ತ ನೋಡಿದಡತ್ತತ್ತ ನೀವೆ ಕಂಡಯ್ಯಾ !