ಕಂಗಳ ನೋಟ ಹೃದಯದ ಜ್ಞಾನ ಮನದೊಳಗೆ ಮಾತನಾಡುತಿರ್ದೆನಯ್ಯಾ ! ಜೇನ ಮಳೆಗಳು ಕರೆದವು ಅಮೃತದ ಬಿಂದುಗಳು ಸುರಿದವು ಕೂಡಲಚೆನ್ನಸಂಗನೆಂಬ ರಸಸಾಗರದೊಳಗೋಲಾಡುತಿರ್ದೆನಯ್ಯಾ !