ಕಂಡ ಚಿತ್ತ ವಸ್ತುವಿನಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ ಸಂಸಾರ ವಿಷಯಕ್ಕೆ ಮತ್ತನಪ್ಪುದೆ ? ಮತ್ತೆ ಭಕ್ತರ ಗೃಹ
ರಾಜದ್ವಾರದ ತಪ್ಪಲ ಕಾಯ್ವುದೆ ? ಆ ಚಿತ್ತ ತೊಟ್ಟು ಬಿಟ್ಟ ಹಣ್ಣು
ಕೆಟ್ಟುಸತ್ತ ಬಿದಿರು ದೃಷ್ಟನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ
ಪುನರಪಿಯಾಗಿ ? ಇದು ನಿಶ್ಚಯ ನಿಜಲಿಂಗಾಂಗ ನಿರ್ಲೇಪನ ಹೊಲಬು. ಜಗದ ಮೊತ್ತದವನಲ್ಲ ನಿಷ್ಕಳಂಕ
ಕೂಡಲಚೆನ್ನಸಂಗಮದೇವ ತಾನಾದ ಶರಣ.