ಕಂದದ ಹೂವನೆ ಕೊಯ್ದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂದದ ಹೂವನೆ ಕೊಯ್ದು
ನಂದದಾರತಿಯನೆ ಬೆಳಗಿ
ಅಂದವಳಿಯದೆ
ಬಿಂದು ತುಳುಕದೆ
ನಂದಿ ಮುಂದುಗೆಡದೆ
ಅಂದಂದಿನ ಹೊಸ ಪೂಜೆಯ ಮಾಡಿ ಆ ಲಿಂಗಮಧ್ಯವನೆ ತಿಳಿದು ನೋಡಿ ಮೇರುಗಿರಿಯಾಕಳನೆ ಕರೆದು
ಕ್ಷೀರದಲ್ಲಿ ಅಡಿಗೆಯ ಮಾಡಿ
ಕೂಡಲಚೆನ್ನಸಂಗಯ್ಯನೆಂಬ ಲಿಂಗಕ್ಕೆ ಆರೋಗಣೆಯ ಸಮಯ