ವಿಷಯಕ್ಕೆ ಹೋಗು

ಕಣ್ಣಿನಲ್ಲಿ ಕಂಡು ಮನದಲ್ಲಿ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಣ್ಣಿನಲ್ಲಿ ಕಂಡು ಮನದಲ್ಲಿ ಬಯಸಿ ಬಣ್ಣಗುಂದಿ ಬಳಲುವರಯ್ಯ. ಬಂದರೆ ಹೆಚ್ಚಿ
ಬಾರದಿದ್ದರೆ ಕುಂದಲೇತಕೆ? ಕುಂದಿದರೆ ಬಪ್ಪುದೆ? ಹಿರಿದು ಜರಿದು ಹೇಡಿಗೊಂಡು ಕರಗಿ ಕೊರಗಿ ಕೋಡಿವರಿದು[ದೆಂದು] ನಿಂದುರಿದು ಕಡುನೊಂದು ಭವಬಡುತ್ತಿಪ್ಪರಯ್ಯ. ಒಂದು ನಿಮಿಷ ನಿಮಿಷಾರ್ಧ ನಿಮ್ಮ ನೆನಹಿಲ್ಲ ನೋಡಾ! ಆಶೆಯೆಂಬ ಮಾಯಾಪಾಶದೊಳಗೆ ಸಿಕ್ಕಿ ದೋಷ ದುರ್ಗುಣದಿಂದ ಬಿದ್ದುರುಳುವ ಪಾಶಬದ್ಧರ ಈಶ ಲಾಂಛನಧಾರಿಗಳೆಂತೆಂಬೆನಯ್ಯಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.