Library-logo-blue-outline.png
View-refresh.svg
Transclusion_Status_Detection_Tool

ಕಣ್ಣು ಕಂಡಲ್ಲದೆ ಮನ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಣ್ಣು ಕಂಡಲ್ಲದೆ ಮನ ನೆನೆಯದು. ಆ ಮನ ನೆನೆದಲ್ಲಿಗೆ ಕಾಲು ನಡೆವುದು. ಕಾಲು ನಡೆದಲ್ಲದೆ ಕಾರ್ಯವಾಗದು. ಕಾಲೆಂದಡೆ ನೀ ಚರಿಸುವ ವರ್ತನೆ. ಆ ವರ್ತನಾಚಾರವೆಲ್ಲವು ಲಿಂಗವು. ಇದು ಕಾರಣ_ಲಿಂಗವ ಹಿಂಗಿದ ಮಾಟ ಮೀಸಲಿಲ್ಲದ ಮನೆದೇವರ ಹಬ್ಬದಂತೆ ! ನಮ್ಮ ಗುಹೇಶ್ವರಲಿಂಗಕ್ಕೆ
ಇದೇ ಬೇಹ ಶೌಚ ಕೇಳಾ ಚಂದಯ್ಯಾ.