ಕಣ್ಣ ಮಚ್ಚಿ ಕನ್ನಡಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಣ್ಣ ಮಚ್ಚಿ ಕನ್ನಡಿಯ ತೋರುವಂತೆ
ಇರುಳು ಹಗಲಿನ ನಿದ್ರೆ ಸಾಲದೆ ಬೆರಳನೆಣಿಸಿ ಪರಮಾರ್ಥವ ಹಡೆವಡೆ ಚೋದ್ಯವಲ್ಲವೆ ಹೇಳಾ. ಮೂಗ ಮುಚ್ಚಿ ಮುಕ್ತಿಯ ಬಯಸುವ ನಾಚಿಕೆಯಿಲ್ಲದವರ ನಾನೇನೆಂಬೆ
ಕೂಡಲಸಂಗಮದೇವಾ