ವಿಷಯಕ್ಕೆ ಹೋಗು

ಕನಸಿನ ಕಾಮಿನಿಯರ ರೂಪು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಕನಸಿನ ಕಾಮಿನಿಯರ ರೂಪು ಮನಸಿಗೆ ರಮ್ಯವಾಗಿ ಕಾಣುವದು. ಅದು ಮನಸಿನ ಮಾಯ ಕಾಣಿಭೋ. ಮನಸಿನ ಮಾಯವನಳಿಯಲು ಕನಸಿನ ಕಾಮಿನಿಯರ ರೂಪು ಮನಸಿನಲ್ಲಿಲ್ಲ ನೋಡಾ. ಆ ಭ್ರಾಂತು ಭ್ರಮೆಗಳನಳಿದಾತನಲ್ಲದೆ ಪ್ರಾಣಲಿಂಗ ಸಂಬಂಧಿಯಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ