Library-logo-blue-outline.png
View-refresh.svg
Transclusion_Status_Detection_Tool

ಕಬ್ಬನಗಿದ ಗಾಣ ಬಲ್ಲುದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಬ್ಬನಗಿದ
ಗಾಣ
ಬಲ್ಲುದೆ
ಹಾಲ
ಸವಿಯ
?
ಗಗನದಲಾಡುವ
ಪಕ್ಷಿ
ಬಲ್ಲುದೆ
ರವಿಯ
ನಿಲವ
?
ಹಗರಣಕ್ಕೆ
ಪೂಜಿಸುವರು
ಬಲ್ಲರೆ
ನಮ್ಮ
ಶರಣರ
ಸುಳುಹ
?
ನಡುಮುರಿದು
ಗುಡುಗೂರಿದಡೇನು
ಲಿಂಗದ
ನಿಜವನರಿಯದನ್ನಕ್ಕ
?
ಸಾವನ್ನಕ್ಕ
ಜಪವ
ಮಾಡಿದಡೇನು
ಲಿಂಗದ
ಪ್ರಾಣ
ತನ್ನ
ಪ್ರಾಣ
ಒಡಗೂಡದನ್ನಕ್ಕ
?
ಇಂತಿವರೆಲ್ಲರು
ಅಭ್ಯಾಸಶಕ್ತಿಗರುಹಿಗರು
!
ನಮ್ಮ
ಕೂಡಲಚೆನ್ನಸಂಗಯ್ಯನಲ್ಲಿ
ಮಾಯಾಕೋಳಾಹಳ
ಸಿದ್ಧರಾಮಯ್ಯದೇವರಿಗೆ
ಅಹೋರಾತ್ರಿಯಲ್ಲಿ
ನಮೋ
ನಮೋ
ಎಂದು
ಬದುಕಿದೆನು
ಕಾಣಾ
ಪ್ರಭುವೆ.