ಕರಿಯ ಕರದಲ್ಲಿ ಅರಿಯಾರು
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕರಿಯ ಕರದಲ್ಲಿ ಅರಿಯಾರು ಹುಟ್ಟಿ ಸಿರಿದೇವಿಯ ಸೇವಿಸಿ ಮತಿವಂತರ ಮರುಳು ಮಾಡಿ ಗತಿ ಸತ್ಪಥಕೆ ವೈರಿಗಳಾದವು ನೋಡಾ. ಕರಿಯ ಕರವ ಮುರಿದು ಹರಿಯ ಮುಖದಲ್ಲಿ ಹಾಲು ಕುಡಿಯಬಲ್ಲರೆ ಸಿರಿದೇವಿ ಮಡಿದಳು. ಅರಿಗಳಾರು ನಮಗಾಧಾರವಿಲ್ಲೆನುತ ತೆಗೆದೋಡಿದುದ ಕಂಡೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.