ಕರೆಯದೆ ಬಂದುದ ಹೇಳದೆ ಹೋದುದನಾರೂ. ಅರಿಯರಲ್ಲಾ. ಅಂದಂದಿಂಗೆ ಬಂದ ಪ್ರಾಣಿಗಳು ಆರೂ ಅರಿಯರಲ್ಲಾ. ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!