ಕಲ್ಲದೇವರ ಪೂಜೆಯ ಮಾಡಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಲ್ಲದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರಯ್ಯಾ. ಮಣ್ಣದೇವರ ಪೂಜೆಯ ಮಾಡಿ ಮಣ್ಣಾಗಿ ಹುಟ್ಟಿದರಯ್ಯಾ. ಮರನದೇವರ ಪೂಜೆಯ ಮಾಡಿ (ಎಗ್ಗ)ಗಳಾದರಯ್ಯ. ಜಂಗಮದೇವರ ಪೂಜೆಯ ಮಾಡಿ ಪ್ರಾಣಲಿಂಗಿ ಪ್ರಸಾದಿಗಳಾದರಯ್ಯ. ಅದೆಂತೆಂದಡೆ : ಜಂಗಮದೇವರು ನಡೆಸಿದರೆ ನಡೆವರು
ನುಡಿಸಿದರೆ ನುಡಿವರು
ಒಡನೆ ಮಾತಾಡುವರು
ತಪ್ಪಿದರೆ ಬುದ್ಧಿಯ ಹೇಳುವರು. ಜಂಗಮದೇವರ ಪೂಜೆಯ ಮಾಡಿ ಕೈಲಾಸಕ್ಕೆ ಯೋಗ್ಯರಾದರಯ್ಯಾ. ಕೂಡಲಚೆನ್ನಸಂಗಮದೇವಯ್ಯಾ.