ವಿಷಯಕ್ಕೆ ಹೋಗು

ಕಲ್ಲ ತಾಗಿದ ಮಿಟ್ಟೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ಕಲ್ಲ ತಾಗಿದ ಮಿಟ್ಟೆ ಕೆಲಕ್ಕೆ ಸಾರುವಂತೆ ಆನು ಬಲ್ಲೆನೆಂಬ ನುಡಿ ಸಲ್ಲದು. ಲಿಂಗದಲ್ಲಿ ಮರೆದು ಮಚ್ಚಿರ್ದ ಮನವು ಹೊರಗೆ ಬೀಸರವೋಗದೆ ? ಉರೆ ತಾಗಿದ ಕೋಲು ಗರಿ ತೋರುವುದೆ ? ಮೊರೆದು ಬೀಸುವ ಗಾಳಿ ಪರಿಮಳವನುಂಡಂತೆ ಬೆರಸಬೇಕು ಚೆನ್ನಮಲ್ಲಿಕಾರ್ಜುನಯ್ಯನ.