ಕಳಾಮುಖಿ ಬಿಂದುವನೊಗೆದನು, ಅಣುವಿನಾಧಾರವನೊಗೆದನು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಳಾಮುಖಿ ಬಿಂದುವನೊಗೆದನು
ಅಣುವಿನಾಧಾರವನೊಗೆದನು
ಪ್ರಣವದಾಧಾರದಲ್ಲಿ ಮಹೀತಳವನೊಗೆದನು
ಮಧ್ಯನಾದದಲ್ಲಿ ಮರೀಚಕನನೊಗೆದನು. (ಸುನಾದದಲ್ಲಿ ಬಸವಣ್ಣನನೊಗೆದನು) ನನ್ನನೇಕೆ ಬಿಳಿದು ಮಾಡನಯ್ಯಾ ತನ್ನ ಬಿಳಿದಿನೊಳಯಿಂಕೆ ? ಎನ್ನ ಕರೆದುಕೊಂಡು ತನ್ನಂತೆ ಮಾಡನು. ನಾನು ಪ್ರಸಾದಿಬಸವಣ್ಣನ ಪದಾರ್ಥ ಪ್ರಸಾದ-ಪದಾರ್ಥವೆಂಬೆರಡರ ಸಂದಿನಲ್ಲಿ ಕೂಡಲಚೆನ್ನಸಂಗನ ಶರಣನು ಮಡಿವಾಳಮಾಚಯ್ಯ.