ಕವುಳುಗೋಲ ಹಿಡಿದು ಶ್ರವವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ ಕಳನೇರಿ ಕಾದುವುದರಿದು ನೋಡಾ. ಬಣ್ಣವಿಟ್ಟು ನುಡಿದಲ್ಲಿ ಫಲವೇನು ಚಿನ್ನಗೆಯ್ಕವನ್ನಾಡುವವನಂತೆ. ಬಂದ ಸಮಯವನರಿತು
ಇದ್ದುದ ವಂಚಿಸದಿದ್ದಡೆ ಕೂಡಸಂಗಮದೇವನೊಲಿದು ಸಲಹುವ. 215