ಕಾಮದಿಂದ ಕರಗಿದೆನಯ್ಯ, ಕ್ರೋಧದಿಂದ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಾಮದಿಂದ ಕರಗಿದೆನಯ್ಯ
ಕ್ರೋಧದಿಂದ ಕೊರಗಿದೆನಯ್ಯ; ಲೋಭ ಮೋಹಂಗಳಿಂದ ಅತಿ ನೊಂದೆನಯ್ಯ; ಮದ ಮತ್ಸರಂಗಳಿಂದ ಬೆದಬೆದನೆ ಬೆಂದೆನಯ್ಯ; ಅಹಂಕಾರ ಮಮಕಾರದಿಂದ ಮತಿಮಂದನಾಗಿರ್ದೆನಯ್ಯ; ಇದು ಕಾರಣ
ಎನ್ನ ಕಾಮಾದಿ ಷಡುವರ್ಗಂಗಳ ಕಳದು
ಅಹಂಕಾರ ಮಮಕಾರಂಗಳ ಮಾಣಿಸಿ
ನಿರಹಂಕಾರಿಯೆಂದೆನಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.