ಕಾಮದ ಶರಣ. ಕಳವಳದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಮದ
ಕಳವಳದಲ್ಲಿ
ಕಂಗೆಡುವನಲ್ಲ
ಶರಣ.
ಜೀವನುಪಾದ್ಥಿಕೆಯ
ಹೊದ್ದವನಲ್ಲ
ಶರಣ.
ಭಾವದ
ಭ್ರಮೆಯಲ್ಲಿ
ಸುಳಿವನಲ್ಲ
ಶರಣ.
ಮನದ
ಮರವೆಯಲ್ಲಿ
ಮಗ್ನನಲ್ಲ
ಶರಣ.
ಕರಣಂಗಳ
ಕತ್ತಲೆಯಲ್ಲಿ
ಸುತ್ತಿ
ಬೀಳುವನಲ್ಲ
ಶರಣ.
ಇಂದ್ರಿಯಂಗಳ
ವಿಕಾರದಲ್ಲಿ
ಹರಿದಾಡುವನಲ್ಲ
ಶರಣ.
ಪರತರಲಿಂಗದ
ಬೆಳಗಿನೊಳಗೆ
ಬೆರೆದು
ತೆರಹಿಲ್ಲದೆ
ಬೆಳಗುವ
ಪರಮಗಂಬ್ಥೀರ
ಶರಣನ
ನಿಲವಿಂಗೆ
ನಮೋ
ನಮೋ
ಎಂಬೆನಯ್ಯಾ
ಅಖಂಡೇಶ್ವರಾ.