ಕಾಮನ ತಲೆಯ ಕೊರೆದು ಕಾಲನ ಕಣ್ಣ ಕಳೆದು ಸೋಮ ಸೂರ್ಯರ ಹುರಿದು ಹುಡಿಮಾಡಿ ತಿಂಬವಳಿಂಗೆ ನಾಮವನಿಡಬಲ್ಲವರಾರು ಹೇಳಿರೆ! ನೀ ಮದವಳಿಗನಾಗೆ ನಾ ಮದವಳಿಗಿತ್ತಿಯಾಗೆ ಯಮನ ಕೂಡುವ ಮರುತನಂತೆ ನೋಡಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ.