ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ. ಕರಣಕ್ಕಾಧಾರ ಭಕ್ತ. ಲಿಂಗಕ್ಕಾಧಾರ ಭಕ್ತ. ಜಂಗಮಕ್ಕಾಧಾರ ಭಕ್ತ. ಪ್ರಸಾದಕ್ಕಾಧಾರ ಭಕ್ತ. ಶಕ್ತಿಗಾಧಾರ ಭಕ್ತ. ಭಕ್ತಿಗಾಧಾರ ಭಕ್ತ. ಎನಗಾಧಾರ ಭಕ್ತ. ನಿನಗಾಧಾರ ಭಕ್ತ. ನಾನು ನೀನೆನ್ನದೆ ನಿರವಯ ನಿರ್ಮಾಯನಯ್ಯ ಭಕ್ತನು. ಇಂತಪ್ಪ ಭಕ್ತ ಸಂಗನಬಸವಣ್ಣನ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.