ವಿಷಯಕ್ಕೆ ಹೋಗು

ಕಾಯದ ಕಳವಳಕ್ಕಂಜಿ, `ಕಾಯಯ್ಯಾ'

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಕಾಯದ ಕಳವಳಕ್ಕಂಜಿ
`ಕಾಯಯ್ಯಾ' ಎನ್ನೆನು
ಜೀವನೋಪಾಯಕ್ಕೆ `ಈಯಯ್ಯಾ' ಎನ್ನೆನು. `ಯದ್ ಭಾವಂ ತದ್ ಭವತಿ' ಉರಿ ಬರಲಿ
ಸಿರಿ ಬರಲಿ ಬೇಕು ಬೇಡೆನ್ನೆನಯ್ಯಾ. ಆ ನಿಮ್ಮ ಹಾರೆನು
ಮಾನವರ ಬೇಡೆನು. ಆಣೆ ನಿಮ್ಮಾಣೆ
ಕೂಡಲಸಂಗಮದೇವಾ.