ಕಾಯದ ಕಳವಳದಲ್ಲಿ ಹುಟ್ಟಿ,

ವಿಕಿಸೋರ್ಸ್ದಿಂದ



Pages   (key to Page Status)   


ಕಾಯದ ಕಳವಳದಲ್ಲಿ ಹುಟ್ಟಿ
ಸಂಸಾರವನೆ ವೇಧಿಸಿ
ವಿಷಯಂಗಳ ಕೊಂಡಾಡುವರಂತಿರಲಿ. ಬ್ರಹ್ಮಜ್ಞಾನವನೆ ಪೂರಯಿಸಿ ಭಾವವಂತರೆನಿಸಿ
ಲಿಂಗ ಮುಖವರಿಯದವರಂತಿರಲಿ. ತನುವ ತೊರೆದು [ಮನೋಮಧ್ಯದೊಳಗೆ] ಕಾಲವಂಚಕರಾದವರಂತಿರಲಿ
ಕೂಡಲಚೆನ್ನಸಂಗಯ್ಯನ ನಿಲವನರಿಯದ ಅಂಗರುಚಿಗಳವರಂತಿರಲಿ.