ಕಾಯದ ಕಳವಳವ ಕೆಡಿಸಿ,
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಕಾಯದ ಕಳವಳವ ಕೆಡಿಸಿ
ಮನದ ಮಾಯೆಯ ಮಾಣಿಸಿ
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯಾ. ಶಿವಶಿವಾ
ಎನ್ನ ಭವಬಂಧನವ ಬಿಡಿಸಿ
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯಾ. ಇರುಳೋಸರಿಸಿದ ಜಕ್ಕವಕ್ಕಿಯಂತೆ ನಾನಿಂದು ನಿಮ್ಮ ಶ್ರೀಪಾದವನಿಂಬುಗೊಂಡು ಸುಖದೊಳೋಲಾಡುವೆನಯ್ಯಾ
ಚೆನ್ನಮಲ್ಲಿಕಾರ್ಜುನಾ.