ಕಾಯದ ಕಳವಳವ ಗೆಲಿದಡೇನೊ,
ಗೋಚರ
ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಕಾಯದ ಕಳವಳವ ಗೆಲಿದಡೇನೊ
ಮಾಯದ ತಲೆಯನರಿಯದನ್ನಕ್ಕರ ? ಮಾಯೆಯ ತಲೆಯನರಿದಡೇನೊ
ಜ್ಞಾನದ ನೆಲೆಯನರಿಯದನ್ನಕ್ಕರ ? ಜ್ಞಾನದ ನೆಲೆಯನರಿದಡೇನೊ
ತಾನು ತಾನಾಗದನ್ನಕ್ಕರ ? ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?