ಕಾಯದ ಮೇಲೆ ಲಿಂಗವಧರಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯದ ಮೇಲೆ ಲಿಂಗವಧರಿಸಿ ದೇವಪೂಜೆಯ ಮಾಡಿ ಕಾಯವಳಿದು ದೇವತಾಭೋಗವನೆಯಿದಿಹೆನೆಂಬ ಗಾವಿಲರ ಎನಗೊಮ್ಮೆ ತೋರದಿರಯ್ಯ. ಕಾಯವನು ಜೀವವನು ಲಿಂಗದಲ್ಲಿರಿಸಬಲ್ಲರೆ ಮಹಾದೇವನೆಂದು ಬೇರುಂಟೇ? ಆ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.