Library-logo-blue-outline.png
View-refresh.svg
Transclusion_Status_Detection_Tool

ಕಾಯದ ಸಂಚರಿಸಿ, ಕಳವಳದಲ್ಲಿ

ವಿಕಿಸೋರ್ಸ್ದಿಂದ
Jump to navigation Jump to searchPages   (key to Page Status)   


ಕಾಯದ ಕಳವಳದಲ್ಲಿ ಕಂಗೆಟ್ಟು
ಜೀವನುಪಾಧಿಯಲ್ಲಿ ಸುಳಿದು
ಪಂಚೇಂದ್ರಿಯಂಗಳಲ್ಲಿ ಸಂಚರಿಸಿ
ಅರಿಷಡ್‍ವರ್ಗಂಗಳಲ್ಲಿ ಹರಿದಾಡಿ
ಅಷ್ಟಮದಂಗಳಲ್ಲಿ ಕಟ್ಟುವಡೆದು
ಇಂತೀ ಅಂಗಪ್ರಕೃತಿಯ ಅಜ್ಞಾನದಲ್ಲಿ ಮಗ್ನವಾಗಿರ್ದು ಮಹಾಘನಲಿಂಗದೊಡನೆ ಸಹಭೋಜನವ ಮಾಡುವ ಮರವೆಯ ಹೀನಮಾನವರೆಲ್ಲರು ಕಲ್ಪಕಲ್ಪಾಂತರ ನರಕಸಮುದ್ರದಲ್ಲಿ ಮುಳುಗಾಡುತಿರ್ಪರು ನೋಡಾ ಅಖಂಡೇಶ್ವರಾ.