ಕಾಯವಿಲ್ಲಾಗಿ ಮಾಯವಿಲ್ಲ ಮಾಯವಿಲ್ಲಾಗಿ ಮಥನವಿಲ್ಲ ಮಥನವಿಲ್ಲಾಗಿ ಭಾವವಿಲ್ಲ ಭಾವವಿಲ್ಲಾಗಿ ಬಯಕೆಯಿಲ್ಲ ಬಯಕೆಯಿಲ್ಲಾಗಿ ನಿರ್ಭಾವ ನಿಜವನೈದಿ ನಿಜಗುರು ಶಂಕರದೇವರೆಂಬುದು ತಾನಿಲ್ಲ.