ವಿಷಯಕ್ಕೆ ಹೋಗು

ಕಾಯವೆ ಕಡವಸವಾಗಿ, ಮನವೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಕಾಯವೆ ಕಡವಸವಾಗಿ
ಮನವೆ ಯೋಗವಟ್ಟಿಗೆಯಾಗಿ; ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ ! ಏನೆಂದೆನಬಹುದು ? ಎಂತೆಂದೆನಬಹುದು ? ಸುಖದ ಸೋಂಕಿನಲಾದ ಸಮಾಧಿಯಯ್ಯಾ ! ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ
ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ.