ಕಾಯ ಲಿಂಗಾರ್ಪಿತವಾದ ಬಳಿಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯ ಲಿಂಗಾರ್ಪಿತವಾದ ಬಳಿಕ ಕರ್ಮತ್ರಯಗಳು ಇರಲಾಗದು ನೋಡಾ. ಜೀವ ಲಿಂಗಾರ್ಪಿತವಾದ ಬಳಿಕ ಸಂಸಾರವ್ಯಾಪ್ತಿಯಹಂಥಾ ಜೀವನಗುಣವಿರಲಾಗದು. ಅದು ಅರ್ಪಿತವಲ್ಲ ನೋಡಾ. ಕರಣಂಗಳು ಲಿಂಗಾರ್ಪಿತವಾದ ಬಳಿಕ ಆ ಕರಣಂಗಳೆಲ್ಲವು ಲಿಂಗಕಿರಣಂಗಳಾಗಿ ಆ ಲಿಂಗಕಿರಣವೆ ಹರಣವಾಗಿರಬೇಕು ನೋಡಾ. ಕಾಯದ ಜೀವದ ಕರಣದ ಗುಣವ ಕಳೆಯದ ಲಿಂಗಾರ್ಪಿತ ಪ್ರಸಾದಿಗಳೆಂಬ ಪ್ರಪಂಚಿಗಳ ಮಚ್ಚನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.