Library-logo-blue-outline.png
View-refresh.svg
Transclusion_Status_Detection_Tool

ಕಾಯ ವಿಕಾರವಳಿದಲ್ಲದೆ ಮಾಯವಿಕಾರವಳಿಯದು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಯ
ವಿಕಾರವಳಿದಲ್ಲದೆ
ಮಾಯವಿಕಾರವಳಿಯದು
ಮಾಯವಿಕಾರವಳಿದಲ್ಲದೆ
ಭವನಾಶವಾಗದು.
ಭವನಾಶವಾದಲ್ಲದೆ
ಲಿಂಗಸಂಬಂಧವಳವಡದು
ಲಿಂಗಸಂಬಂಧವಳವಟ್ಟಲ್ಲದೆ
ಸುಖವು
ಸಾಧ್ಯವಾಗದು.
ಪರಮಸುಖಪರಿಣಾಮಕ್ಕೆ
ಮಹಾನುಭಾವಿನಗಳ
ಸಂಗವೆ
ಬೇಕು.
ಮಹಾನುಭಾವಿಗಳ
ಸಂಗದಿಂದಲ್ಲದೆ
ವಿಶ್ರಾಮವಿಲ್ಲಫ
ಮಹಾನುಭಾವಸ್ವಾಯತವಿಲ್ಲದ
ಸಮಾಧಾನಸಂಬಂಧವನೆನ್ನದೆನ್ನಬಹುದೆ
?
ಘನಮನವೇಧಿಸಿ
ಆದಿಯನಾದಿಯನೊಳಕೊಂಡು
ಆಧಾರವಿಲ್ಲದ
ನಿಲವು
ಸಾಧ್ಯವಾಯಿತ್ತು
ನೋಡಾ.
ಕೂಡಲಚೆನ್ನಸಂಗನಶರಣ
ಪ್ರಭುದೇವರು
ಅಜಾತನೆಂಬ
ಭೇದವೆನಗಿಂದು
ಕಾಣಬಂದಿತ್ತು.