ಕಾರ್ಯನಲ್ಲ, ಕಾರಣನಲ್ಲ, ಕಲ್ಪಿತನಲ್ಲ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾರ್ಯನಲ್ಲ
ಕಾರಣನಲ್ಲ
ಕಲ್ಪಿತನಲ್ಲ
ನಿರ್ವಿಕಲ್ಪಿತನಲ್ಲ
ನೆನಹುಮಾತ್ರದಿಂದ ಜಗವ ಸೃಷ್ಟಿಸಿದೆನೆಂಬ ಭಾವ ಬಣಿತೆಯವಲ್ಲ
ಇದಿರಿಂಗೆ ತಾನಿಲ್ಲ
ತನಗೆ ಇದಿರಾಗಿ ಒಂದು ವಸ್ತುವಿಲ್ಲ
ಪ್ರತಿಯಿಲ್ಲದ ಪ್ರತಿಮ
ಅನುಪಮಮಹಿಮ
ನಿನ್ನ ನಿಃಕಲನೆಂದೆಂಬರಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.